ಬಿಗ್​ಬಾಸ್​ ವಿನ್ನರ್​ ಹನುಮಂತು 'ಫಸ್ಟ್​ ನೈಟ್​' ಹೀಗಿತ್ತು:​ ಸುಸ್ತಾಗೋದ್ರು ಕಿಚ್ಚ ಸುದೀಪ್​! ವಿಡಿಯೋ ವೈರಲ್​

Published : Feb 05, 2025, 01:54 PM ISTUpdated : Feb 05, 2025, 03:27 PM IST
ಬಿಗ್​ಬಾಸ್​ ವಿನ್ನರ್​ ಹನುಮಂತು 'ಫಸ್ಟ್​ ನೈಟ್​' ಹೀಗಿತ್ತು:​ ಸುಸ್ತಾಗೋದ್ರು ಕಿಚ್ಚ ಸುದೀಪ್​! ವಿಡಿಯೋ ವೈರಲ್​

ಸಾರಾಂಶ

ಬಿಗ್‌ಬಾಸ್ 11ರ ವಿಜೇತ ಹನುಮಂತ ಲಮಾಣಿ, ತಮ್ಮ ಮುಗ್ಧತೆ ಮತ್ತು ಹಾಸ್ಯಪ್ರಜ್ಞೆಯಿಂದ ಜನಮನ ಗೆದ್ದಿದ್ದಾರೆ. ಕುರಿಗಾಹಿ ಹನುಮಂತರಿಗೆ ಐದು ಕೋಟಿಗೂ ಅಧಿಕ ಮತಗಳು ಬಂದಿವೆ. ಮೊದಲ ರಾತ್ರಿಯ ಆಟದಲ್ಲಿ "ಅಹಃ" ಶಬ್ದದ ಮೂಲಕ ಫಸ್ಟ್ ನೈಟ್ ಎಂದು ಉತ್ತರಿಸಿ, ಸುದೀಪ್ ಮತ್ತು ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದ್ದರು. ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಳ್ಳಿ ಹೈದ ಎಂದೇ ಫೇಮಸ್​ ಆಗಿರೋ ಹನುಮಂತ  ಲಮಾಣಿ ಬಿಗ್​ಬಾಸ್​ ಸೀಸನ್​ 11ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೂ ಹಾಗೂ ಹೊರ ಬಂದ ಮೇಲೂ ಇವರು  ಬಹುತೇಕ ವೀಕ್ಷಕರ ಕ್ರಷ್ ಆಗಿದ್ದಾರೆ. ಅವರ ಮುಗ್ಧ ಮಾತು ಹಲವರಿಗೆ ಇಷ್ಟ. ಕುರಿ ಕಾಯುವ ಕಾರಣ, ತಾನೊಬ್ಬ ಅತಿ ಬಡವ ಎಂದು ಹೇಳುತ್ತಲೇ ಹನುಮಂತು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಮೊದಲಿನಿಂದಲೂ ಇವರೇ ಬಿಗ್​ಬಾಸ್​​ ವಿನ್ನರ್​ ಎಂದು ಹೇಳಿದವರೇ ಹಲವರು. ಅದಕ್ಕೆ ಸಾಕ್ಷಿಯಾದದ್ದು ಐದು ಕೋಟಿಗೂ ಮಿಗಿಲಾಗಿ ಅವರಿಗೆ ವೋಟ್​ ಬಂದದ್ದು.  ಇದೀಗ ಅವರ ಬಿಗ್​ಬಾಸ್​ ಪಯಣದ ಕೆಲವು ತುಣುಕುಗಳು ಮತ್ತೆ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಹೇಗೆ ಹನುಮಂತ ಅವರು ತನ್ನ ಹಾಸ್ಯದಿಂದ ಎಲ್ಲರನ್ನೂ ಜೊತೆಗೆ ಕಿಚ್ಚ ಸುದೀಪ್​ ಅವರನ್ನೂ ನಕ್ಕು ನಗಿಸಿದ್ದರು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಬಿಗ್​ಬಾಸ್​ ವೀಕ್ಷಕರು ಇದಾಗಲೇ ಈ ದೃಶ್ಯ ನೋಡಿದ್ದಿರಬಹುದು. ಅದರೆ ಹಲವರು ಇದನ್ನು ಮಿಸ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇಲ್ಲಿ ಇರುವುದು ಫಸ್ಟ್​ ನೈಟ್​ ದೃಶ್ಯ. ಅದನ್ನು ಹನುಮಂತು ಹೇಗೆ ನಿಭಾಯಿಸಿದ್ರು ಎನ್ನುವುದನ್ನು ನೋಡಬಹುದು. ಹನುಮಂತು ಮಾತು ಕೇಳಿ ಕಿಚ್ಚ ಸುದೀಪ್​ ಅವರು ಹೇಗೆ ನಕ್ಕೂ ನಕ್ಕೂ ಸುಸ್ತಾದರು ಎನ್ನುವುದನ್ನೂ ಇದರಲ್ಲಿ ನೋಡಬಹುದು.  ಈ ಒಂದು ಎಪಿಸೋಡ್​ನಲ್ಲಿ ಸುದೀಪ್​ ಅವರು  ಕೆಲವು ಹಾಸ್ಯ ಆಟಗಳನ್ನು ಆಡಿಸಿದ್ದರು. ಒಬ್ಬ ಸ್ಪರ್ಧಿಗೆ ಕಣ್ಣು ಕಟ್ಟಿ ಇಡುವುದು. ಕೊನೆಗೆ ಅಲ್ಲಿ ಇದ್ದವರು ಶಬ್ದದ ಮೂಲಕ ಆ ಬಗ್ಗೆ ತಿಳಿಸಬೇಕು. ಇದು ಕಾನ್ಸೆಪ್ಟ್​ ಇತ್ತು.

ಸತ್ರೂ ಇನ್ನೊಮ್ಮೆ ವಿಮಾನದಲ್ಲಿ ಹೋಗಂಗಿಲ್ಲ... ನರಕದ ಅನುಭವ ತೆರೆದಿಟ್ಟ ಬಿಗ್‌ಬಾಸ್ ಹನುಮಂತು!

 ಸ್ಪರ್ಧಿಯಾಗಿದ್ದ ಶೋಭಾ ಅವರ ಕಣ್ಣನ್ನು ಕಟ್ಟಲಾಗಿತ್ತು.   ಫಸ್ಟ್​ನೈಟ್​ ದೃಶ್ಯವನ್ನು ತೋರಿಸಲಾಗಿತ್ತು. ಫಸ್ಟ್‌ ನೈಟ್‌ ಬೆಡ್‌‌ ರೂಮ್‌ ಫೋಟೋವನ್ನು ಟಿವಿ ಪರದೆ ಮೇಲೆ ಬಂದಾಗ ತೋರಿಸಿದಾಗ ಸೌಂಡ್​ ಮೂಲಕ ಇದನ್ನು ತೋರಿಸಲು ಅಲ್ಲಿರುವ ಸ್ಪರ್ಧಿಗಳಿಗೆ ಸಾಧ್ಯವಾಗಲಿಲ್ಲ. ಆಗ ಹನುಮಂತು ಬಂದರು. ಆಗ ಸುದೀಪ್​ ಅವರು ನೀವೇನೋ ತೋರಿಸ್ತೇನೆ ಅಂದ್ರಲ್ಲ, ತೋರಿಸಿ ಎಂದಾಗ ಹನುಮಂತು ನಾನು ತೋರಿಸಲ್ಲ. ಹೇಳ್ತೇನೆ ಎಂದಾಗ ಸುದೀಪ್​ ಬಿದ್ದೂ ಬಿದ್ದೂ ನಕ್ಕರು. ಜೊತೆಗೆ ಅಲ್ಲಿದ್ದವರು ಕೂಡ.   ಶೋಭಾ ಶೆಟ್ಟಿ ಅವರು ಕಣ್ಪಟ್ಟಿ ಕಟ್ಟಿಕೊಂಡಿದ್ದರು. 

ಹನುಮಂತು ಅ, ಆ ಹೇಳುತ್ತಲೇ ಅಂ, ಅಹಃ ಎಂದರು. ಅಹಃ ಎಂದು ಅವರು ರೊಮ್ಯಾಂಟಿಕ್​ ಆಗಿ ಹೇಳಿದ್ದನ್ನು ಕೇಳಿದ ಕೂಡಲೇ ಶೋಭಾ ಅವರಿಗೆ ಉತ್ತರ ಗೊತ್ತಾಗಿ ಹೋಯ್ತು. ಇದು ಫಸ್ಟ್​ ನೈಟ್​ ಎಂದರು. ಆಗ ಎಲ್ಲರೂ ಬಿದ್ದೂ ಬಿದ್ದೂ ನಗುವ ಜೊತೆಗೆ ಜೋರಾಗಿ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಬಿಗ್​ಬಾಸ್​ ಮನೆಯಲ್ಲಿ ಹನುಮಂತು ಫಸ್ಟ್​ನೈಟ್​ ಸಕ್ಸಸ್​ ಕಂಡಿತ್ತು! ರಜತ್, ಶಿಶಿರ್ ಹಾಗೂ ತ್ರಿವಿಕ್ರಂ ಬಳಿ ಸಾಧ್ಯವಾಗದೇ ಇದ್ದಿದ್ದನ್ನು ಹನುಮಂತ ಅವರು ಮಾಡಿ ತೋರಿಸಿದರು. 
 

ಬಿಗ್​ಬಾಸ್​ ಹನುಮಂತುಗೆ ಸಿನಿಮಾ ಆಫರ್​! ಸ್ಯಾಂಡಲ್​ವುಡ್​ಗೆ ಎಂಟ್ರಿ ಯಾವಾಗ, ಯಾವ ಚಿತ್ರ? ಇಲ್ಲಿದೆ ಡಿಟೇಲ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!