
Kannada Serial Vadhu: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ವಧು' ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ. ಬಿಗ್‌ಬಾಸ್ ರಿಯಾಲಿಟಿ ಶೋ ಮುಕ್ತಾಯಗೊಂಡ ನಂತರ ವಧು ಸೀರಿಯಲ್ ಆರಂಭವಾಗಿದೆ. ಮದುವೆ ಆಗಬೇಕು ಅನ್ನೋ ಕನಸು ಹೊತ್ತಿರುವ ಡಿವೋರ್ಸ್ ಲಾಯರ್ ವಧು ಕಥೆ ಇದಾಗಿದೆ. ಮತ್ತೊಂದೆಡೆ ಗಂಡ ಸಾರ್ಥಕ್‌ನಿಂದ ದೂರವಾದ್ರೆ ಸಾಕು ಅನ್ನೋತ್ತಿರೋ ಹಠಮಾರಿ, ಅಹಂಕಾರಿ ಪ್ರಿಯಾಂಕಾ. ಇಡೀ ಧಾರಾವಾಹಿ ಈ ಮೂವರ ಸುತ್ತವೇ ಇರಲಿದೆ ಎಂಬುವುದು ಧಾರಾವಾಹಿ ವೀಕ್ಷಕರಿಗೆ ಗೊತ್ತಾಗಿದೆ. ವಧುವಿನ ಮುಗ್ದತೆಗೆ ಕರುನಾಡಿನ ಜನತೆ ಫಿದಾ ಆಗಿದ್ದು, ಮನೆ ಮಗಳನ್ನಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಸೀರಿಯಲ್ ಮೇಕಿಂಗ್ ವಿಡಿಯೋ ಹೊರ ಬಂದಿದೆ. ಈ ವಿಡಿಯೋದಲ್ಲಿ ನಟ ಸಾರ್ಥಕ್ ಹೇಗಿರುತ್ತಾರೆ ಎಂಬುದನ್ನು ತೋರಿಸಲಾಗಿದೆ.
ಧಾರಾವಾಹಿಯಲ್ಲಿ ಹಾವು - ಮುಂಗೂಸಿಯಂತೆ ಕಾಣಿಸಿಕೊಳ್ಳುವ ವಧು ಮತ್ತು ಪ್ರಿಯಾಂಕಾ ಜೊತೆಯಾಗಿ ಈ ರೀಲ್ಸ್ ಮಾಡಿದ್ದಾರೆ. ನಾವು ಸೆಟ್‌ಗೆ ಬಂದು ಎರಡೆರಡು ಸೀನ್ ಮಾಡಿದ್ದೇವೆ. ಆದ್ರೆ ಇಲ್ಲಿ ನಮ್ಮ ಹೀರೋ ಸಾರ್ಥಕ್ ನಿದ್ದೆ ಮಾಡುತ್ತಿದ್ದಾರೆ ನೋಡಿ ಎಂದು ತೋರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೇ ರೀತಿಯ ಮೇಕಿಂಗ್ ವಿಡಿಯೋಳನ್ನು ಹಂಚಿಕೊಳ್ಳಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಮನೆಯ ಮಗನಾಗಿ ದುಡಿಯುತ್ತಿರುವ ವಧುವವಿಗೆ ಕುಟುಂಬದ ಸದಸ್ಯರೆಲ್ಲರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ. ಡಿವೋರ್ಸ್ ಲಾಯರ್ ಎಂಬ ಕಾರಣಕ್ಕೆ ವಧು ಮದುವೆಗೆ ಅಡ್ಡಿಯಾಗಿರುತ್ತದೆ. ಮತ್ತೊಂದೆಡೆ ಆಗರ್ಭ ಶ್ರೀಮಂತ ಸಾರ್ಥಕ್ ವೈವಾಹಿಕ ಜೀವನ ಮಾತ್ರ ಚೆನ್ನಾಗಿರಲ್ಲ. ಡಿವೋರ್ಸ್ ಬೇಕು ಅಂತ ಹಠ ಹಿಡಿದಿರೋ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಆದರೆ ಮೊದಲ ಭೇಟಿಯಲ್ಲಿಯೇ ವಧು ಜೊತೆ ಪ್ರಿಯಾಂಕಾ ಜಗಳ ಮಾಡಿಕೊಂಡಿದ್ದಾಳೆ. ಇದರಿಂದ ಸಾರ್ಥಕ್-ಪ್ರಿಯಾಂಕಾ ಅವರ ಡಿವೋರ್ಸ್ ನಾನು ತೆಗೆದುಕೊಳ್ಳಲ್ಲ ಎಂದು ವಧು ಹೇಳಿದ್ದಾಳೆ. ಒಂದು ವೇಳೆ ಪ್ರಿಯಾಂಕಾ ನನ್ನ ಬಳಿಯಲ್ಲಿ ಕ್ಷಮೆ ಕೇಳಿದ್ರೆ ಕೇಸ್ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ. ಇತ್ತ ಸಾರ್ಥಕ್ ಸಹ ತಮ್ಮ ಕೇಸ್ ವಧು ಅವರೇ ಹ್ಯಾಂಡಲ್ ಮಾಡಲಿ ಅಂತ ಪತ್ನಿ ಪ್ರಿಯಾಂಕ ಮನವೊಲಿಸುತ್ತಿದ್ದಾನೆ. ಆದ್ರೆ ವಧು ನನ್ನ ಬಳಿ ಕ್ಷಮೆ ಕೇಳಿದ್ರೆ ಒಪ್ಪುವೆ ಎಂದು ಸಾರ್ಥಕ್‌ಗೆ ಪ್ರಿಯಾಂಕಾ ಕಂಡೀಷನ್ ಹಾಕಿದ್ದಾಳೆ. ಇದೀಗ ವಧು ಮತ್ತು ಪ್ರಿಯಾಂಕಾ ಮಧ್ಯೆ ಸಿಲುಕಿದ್ದಾನೆ. ಯಾರು? ಯಾರಿಗೆ ಕ್ಷಮೆ ಕೇಳುತ್ತಾರೆ ಎಂಬುವುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಸಿಎಸ್ಪಿ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ ಟಿ.ಎನ್ ಸೀತಾರಾಮ್
ಇನ್ನು ಈ ಸೀರಿಯಲ್‌ನಲ್ಲಿ ಸಾರ್ಥಕ್‌ಗೆ ತಾಯಿಯಾಗಿ ವಿನಯ ಪ್ರಸಾದ್ (Vinaya Prasad) ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಹಿರಿಯ ನಟ, ನಿರ್ದೇಶಕರಾಗಿರುವ ಟಿಎನ್ ಸೀತಾರಾಮ್ (TN Seetharam) ನಟಿಸಿದ್ದಾರೆ. ಧಾರಾವಾಹಿಯ ಮೊದಲ ಪ್ರೋಮೋದಲ್ಲಿಯೇ ಟಿಎನ್ ಸೀತಾರಾಮ್ ಅವರ ಪಾತ್ರವನ್ನು ಪರಿಚಯಿಸಲಾಗಿತ್ತು. ಎಂದಿನಂತೆ ಇಲ್ಲಿಯೂ ಟಿಎನ್ ಸೀತಾರಾಮ್ ವಕೀಲರಾಗಿ ನಟಿಸುತ್ತಿದ್ದರೆ. ವಧುಗೂ ಟಿಎನ್ ಸೀತಾರಾಮ್‌ಗೆ ಏನು ಸಂಬಂಧ ಎಂಬುದನ್ನು ಇದುವರೆಗೂ ರಿವೀಲ್ ಮಾಡಿಲ್ಲ. ಪ್ರೋಮೋ ಬಿಡುಗಡೆಯ ಸಂದರ್ಭದಲ್ಲಿ ತಮ್ಮಿಷ್ಟದ ಪಾತ್ರದ ಮೂಲಕ ಕಿರುತೆರೆಗೆ ಬರುತ್ತಿರುವ ವಿಷಯವನ್ನು ಟಿಎನ್ ಸೀತಾರಾಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಧಾರಾವಾಹಿಗೆ ಶುಭ ಹಾರೈಸಿದ್ದರು. ಇತ್ತ ಧಾರಾವಾಹಿ ಪ್ರೋಮೋಗಳಿಗೂ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: ವಧು ಧಾರಾವಾಹಿಯ ನಿರ್ದೇಶಕರ ಬಗ್ಗೆ FBಯಲ್ಲಿ ಬರೆದುಕೊಂಡ್ರು ಟಿಎನ್ ಸೀತಾರಾಮ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.