ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

Published : Feb 05, 2025, 01:45 PM IST
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

ಸಾರಾಂಶ

ಸೀರಿಯಲ್‌ನಲ್ಲಿ ಅತ್ತೆ-ಅಳಿಯನಾಗಿ ನಟಿಸಿದ್ದ ಇಂದ್ರನೀಲ್‌ ಹಾಗೂ ಮೇಘನಾ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 20 ವರ್ಷಗಳ ದಾಂಪತ್ಯದಲ್ಲೂ ಮಕ್ಕಳಿಲ್ಲದ ಚಿಂತೆ ಕಾಡುತ್ತಿದೆ. ವಯಸ್ಸಾದ ಮೇಲೆ ಮಕ್ಕಳು ಬೇಡ ಎಂದಿದ್ದಾರೆ.

ತ್ತೀಚೆಗೆ ಮದುವೆಯಾಗಿ 20 ವರ್ಷದ ಸಂಭ್ರಮ ಆಚರಿಸಿದ ಸೀರಿಯಲ್‌ ಕಲಾವಿದರಾದ ಇಂದ್ರನೀಲ್‌ ಹಾಗೂ ಮೇಘನಾ ಲವ್‌ ಸ್ಟೋರಿ ಸಖತ್‌ ಇಂಟ್ರಸ್ಟಿಂಗ್‌. ಜನಪ್ರಿಯ ಸೀರಿಯಲ್‌ವೊಂದರಲ್ಲಿ ಅತ್ತೆ-ಅಳಿಯನಾಗಿ ನಟಿಸಿದ್ದ ಈ ಜೋಡಿ ನಿಜ ಜೀವನದಲ್ಲಿ ಗಂಡ-ಹೆಂಡ್ತಿಯಾಗಿದ್ದಾರೆ. ಆದರೆ, ಮದುವೆಯಾಗಿ ಈ ಜೊಡಿಗೆ 20 ವರ್ಷವಾಗಿದ್ದರೂ ಮಕ್ಕಳಾಗಿಲ್ಲ ಅನ್ನೋ ಚಿಂತೆ ಇವರನ್ನು ಕಾಡಿದೆ. ತೆಲುಗುವಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಚಕ್ರವಾಕಂ ಸೀರಿಯಲ್‌ನಲ್ಲಿ ಇಂದ್ರನೀಲ್‌ ಅವರ ಅತ್ತೆಯ ಪಾತ್ರದಲ್ಲಿ ಮೇಘನಾ ರಾಮಿ ನಟಿಸಿದ್ದರು. ಚಕ್ರವಾಕಂ ಸೀರಿಯಲ್‌ ಎಷ್ಟು ಪ್ರಖ್ಯಾತವಾಗಿತ್ತೆಂದರೆ ಇದು ಪ್ರಸಾರವಾಗುವ ಹೊತ್ತಿಗೆ ಪ್ರೇಕ್ಷಕರು ಟಿವಿ ಮುಂದೆ ಕೂರುತ್ತಿದ್ದರು. ಸುಮಾರು ಕೆಲವು ವರ್ಷಗಳ ಕಾಲ ಓಡಿದ ಈ ಧಾರಾವಾಹಿಯ ಟಿಆರ್‌ಪಿಯೂ ಮೇಲ್ಮುಖವಾಗಿಯೇ ಇತ್ತು.

ಕೋವಿಡ್‌ ಸಮಯದಲ್ಲಿ ಇದನ್ನು ಮರುಪ್ರಸಾರ ಮಾಡಲಾಗಿತ್ತು. ಆದರೆ, ಮೊದಲ ಬಾರಿಗೆ ಪ್ರಸಾರವಾದಾಗ ಸೀರಿಯಲ್‌ನಲ್ಲಿ ಅತ್ತೆ-ಅಳಿಯನಾಗಿದ್ದ ಜೋಡಿ, 2ನೇ ಬಾರಿಗೆ ಮರು ಪ್ರಸಾರವಾಗುವ ಟೈಮ್‌ನಲ್ಲಿ ನಿಜ ಜೀವನದಲ್ಲಿ ಗಂಡ-ಹೆಂಡತಿ ಆಗಿ ಬಿಟ್ಟಿದ್ದರು. ಅತ್ತೆಯನ್ನು ಮದುವೆಯಾದ ಅಳಿಯ ಎಂದೂ ಆಗ ಟ್ರೋಲ್‌ ಮಾಡಲಾಗಿತ್ತು.

ನಿಜಜೀವನದಲ್ಲೂ ಮೇಘನಾ ರಾಮಿ, ಇಂದ್ರನೀಲ್‌ಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರು. ಇವರ ಮದುವೆಗೆ ಎರಡೂ ಕುಟುಂಬದವರು ಒಪ್ಪಿರಲಿಲ್ಲ. ಇಂದ್ರನೀಲ್‌ಗಿಂತ ಮೇಘನಾ ಆರು ತಿಂಗಳು ದೊಡ್ಡವರಾಗಿದ್ದರು. ಧಾರಾವಾಹಿಯ ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದ ಇವರಿಬ್ಬರು ಮದುವೆ ಮಾಡಿಕೊಳ್ಳಲು ಬಹಳ ಸಮಯ ಹಿಡಿಯಿತು. ಕೊನೆಗೆ ಹಿರಿಯನ್ನು ಒಪ್ಪಿಸಿ ಮದುವೆಯಾದರೂ, ಈವರೆಗೂ ಇವರಿಗೆ ಮಕ್ಕಳಾಗಿಲ್ಲ.

'ನಿಮ್ಮ ಮಗುನ ಯಾವಾಗ ಹೀಗೆ ಆಟ ಆಡಿಸೋದು..' ಆಂಕರ್‌ ಅನುಶ್ರೀಗೆ ಕೇಳಿದ ಫ್ಯಾನ್ಸ್‌!

ಮೇಘನಾ ಹಾಗೂ ಇಂದ್ರನೀಲ್‌ ಇಬ್ಬರಿಗೂ ಈಗ 40 ವರ್ಷ ದಾಟಿದೆ. 'ಈಗ ನಾವು ಮಕ್ಕಳನ್ನು ಮಾಡಿಕೊಂಡು ಅವರಿಗೆ ತೊಂದರೆ ಕೊಡುವುದಿಲ್ಲ.. ನಮಗೆ ಈಗಾಗಲೇ ವಯಸ್ಸಾಗಿದೆ.. ಹಣವನ್ನ ಅವರಿಗಾಗಿ ಸಂಪಾದಿಸಬಹುದು ಆದರೆ ಎಲ್ಲದರಲ್ಲೂ ಅವರ ಜೊತೆ ಇರಲು ಸಾಧ್ಯವಾಗುವುದಿಲ್ಲ. ನಮಗೆ ಈಗ ಮಕ್ಕಳು ಹುಟ್ಟಿದರೂ ಅವರು ಬೆಳೆದು ನಿಲ್ಲುವಷ್ಟರಲ್ಲಿ ನಮಗೆ 60 ವರ್ಷ. ಆ ಸಮಯದಲ್ಲಿ ಏನಾದ್ರೂ ನಡೆದರೆ ಯಾರು ನೋಡಿಕೊಳ್ಳುತ್ತಾರೆ. ಮಕ್ಕಳು ರಸ್ತೆಗೆ ಬೀಳುತ್ತಾರೆ.. ಹೀಗಾಗಿ ವಯಸ್ಸಿನಲ್ಲಿ ನಮಗೆ ಮಕ್ಕಳು ಬೇಕು ಎಂದೆನಿಸಿಲ್ಲ' ಎಂದು ಮೇಘನಾ ಹೇಳಿದ್ದಾರೆ.

ಸೀರಿಯಲ್ ಸೆಟ್‌ನಲ್ಲಿ ಸಾರ್ಥಕ್ ಏನ್ ಮಾಡ್ತಾರೆ ಅನ್ನೋದನ್ನು ತೋರಿಸಿಧ ವಧು, ಪ್ರಿಯಾಂಕಾ

ಚಕ್ರವಾಕಂ ಸೀರಿಯಲ್‌ಗೂ ಮುನ್ನ ಇವರಿಬ್ಬರೂ ಕಾಲಚಕ್ರಂ ಸೀರಿಯಲ್‌ನಲ್ಲಿ ನಟಿಸಿದ್ದರು. ಈ ಸೀರಿಯಲ್ಲಿ ಇಂದ್ರನೀಲ್‌ಗೆ ಮಲತಾಯಿಯಾಯಿ ಮೇಘನಾ ನಟಿಸಿದ್ದರು. ಈ ವೇಳೆಯಲ್ಲೇ ಮೇಘನಾ ಪ್ರೀತಿಗೆ ಬಿದ್ದದ್ದ ಇಂದ್ರನೀಲ್‌ ಪ್ರಪೋಸ್‌ ಮಾಡಿದ್ದರಂತೆ. ಈ ವೇಳೆ ಪ್ರಪೋಸಲ್‌ಅನ್ನು ಮೇಘನಾ ರಿಜೆಕ್ಟ್‌ ಮಾಡಿದ್ದರು. ತಮಗೆ ಮದುವೆ ಆಗುವ ಇಂಗಿತವೇ ಇಲ್ಲ ಎಂದು ಇಂದ್ರನೀಲ್‌ಗೆ ತಿಳಿಸಿದ್ದರು. ಆ ಬಳಿಕ ಇಂದ್ರನೀಲ್‌ ಬರೋಬ್ಬರಿ 9 ಬಾರಿ ನನಗೆ ಪ್ರಪೋಸ್‌ ಮಾಡಿದ್ದರು ಎಂದು ಮೇಘನಾ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!
'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!