ಇತ್ತ ಸುದೀಪ್​, ಅತ್ತ Bigg Boss ಮಲ್ಲಮ್ಮ! ಈ ಪುಟಾಣಿಯ ಡಬಲ್​ ರೋಲ್​ಗೆ ನಕ್ಕೂ ನಕ್ಕೂ ಸುಸ್ತಾಗುವಿರಿ!

Published : Oct 05, 2025, 07:04 PM IST
Bigg Boss Sudeep and Mallamma acting

ಸಾರಾಂಶ

ಬಿಗ್​ಬಾಸ್​ 12ರ ಸ್ಪರ್ಧಿ, ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಮುಗ್ಧತೆಯಿಂದ ಜನಪ್ರಿಯರಾಗಿದ್ದಾರೆ. ಇದೀಗ ಪುಟಾಣಿ ಸುದರ್ಶನ್ ಜೆ.ಕೆ., ಮಲ್ಲಮ್ಮ ಮತ್ತು ಸುದೀಪ್ ಅವರ ನಡುವಿನ ಸಂಭಾಷಣೆಯನ್ನು ಡಬಲ್ ರೋಲ್‌ನಲ್ಲಿ ನಟಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. 

ಸದ್ಯ ಬಿಗ್​ಬಾಸ್​ 12 (Bigg Boss 12) ಹವಾ ಸೃಷ್ಟಿಸ್ತಿರುವವರ ಪೈಕಿ ಮಲ್ಲಮ್ಮ ಅವರೂ ಒಬ್ಬರು. ಉತ್ತರ ಕರ್ನಾಟಕ 58 ವರ್ಷ ವಯಸ್ಸಿನ ಮಲ್ಲಮ್ಮ ಯಾವುದೇ ಟಾಸ್ಕ್​ ಕೊಟ್ಟರೂ ಸೈ ಎನ್ನುವಂತೆ ನಿಂತಿದ್ದಾರೆ. ಆದರೆ, ಭಾಷೆಯ ಸಮಸ್ಯೆಯಿಂದಾಗಿ ಕೆಲವು ನಿಯಮಗಳು ಅರಿಯದೇ ಟಾಸ್ಕ್‌ನಲ್ಲಿ ಎಡವಟ್ಟು ಮಾಡಿಕೊಳ್ತಿದ್ದಾರೆ. ಟಾಸ್ಕ್‌ ನಿಯಮಗಳು ಅರ್ಥವಾಗಲಿ ಎಂಬ ಕಾರಣಕ್ಕೆ ಮಲ್ಲಮ್ಮನಿಗೆ ‘ಬಿಗ್ ಬಾಸ್’ ಪದೇ ಪದೇ ರೂಲ್ಸ್ ಹೇಳಿದರು. ಕೆಲವೊಂದು ಪದಗಳನ್ನ ಬದಲಾಯಿಸಿ ಮಲ್ಲಮ್ಮನಿಗೆ ಅರ್ಥವಾಗುವ ಹಾಗೆ ನಿಯಮಗಳನ್ನ ‘ಬಿಗ್ ಬಾಸ್’ ವಿವರಿಸಿದರು. ಯಾವುದೇ ಸ್ಪರ್ಧಿಗೆ ‘ಬಿಗ್ ಬಾಸ್’ ಹೀಗೆ ಮಾಡಿರುವುದು ಇದೇ ಮೊದಲು ಎಂದೂ ಹೇಳಲಾಗುತ್ತಿದೆ.

ಮಲ್ಲಮ್ಮನವರದ್ದೇ ಹವಾ

ಇದೀಗ ಸೋಷಿಯಲ್​​ ಮೀಡಿಯಾದಲ್ಲಿಯೂ ಮಲ್ಲಮ್ಮನವರದ್ದೇ ಹವಾ. ಇವರಂತೆಯೇ ನಟಿಸಿ ಹಲವಾರು ಮಂದಿ ವಿಡಿಯೋ ಮಾಡುತ್ತಿದ್ದಾರೆ. ಇದು ಮಲ್ಲಮ್ಮ ಅವರನ್ನು ಅಣಕಿಸುವಂತಿದೆ ಎಂದು ಕೆಲವರು ಟೀಕಿಸುತ್ತಿದ್ದರೂ, ಮಲ್ಲಮ್ಮನವರ ಮುಗ್ಧ ರೂಪದ ಅನಾವರಣಗೊಳಿಸುವ ಮೂಲಕ ಕೆಲವು ಕಂಟೆಂಟ್​ ಕ್ರಿಯೇಟರ್ಸ್​ ಇದನ್ನು ತೋರಿಸುತ್ತಿದ್ದಾರೆ. ಇಂಥ ಟ್ಯಾಲೆಂಟ್​ಗಳನ್ನು ನೋಡಿಯೇ ಬಿಗ್​ಬಾಸ್​ ಇಂಥವರಿಗೆ ಆಹ್ವಾನ ಕೂಡ ಮಾಡಿದೆ. ತಮ್ಮ ಈ ಟ್ಯಾಲೆಂಟ್​ ವಿಡಿಯೋ ಅನ್ನು ತಮಗೆ ಕಳುಹಿಸುವಂತೆ ಬಿಗ್​ಬಾಸ್​ ಕೇಳಿದೆ. ಅದು ಇಷ್ಟವಾದರೆ ಅದನ್ನು ಪ್ರಸಾರ ಮಾಡುವುದಾಗಿಯೇ ಘೋಷಿಸಲಾಗಿದೆ. ಇದೇ ಕಾರಣಕ್ಕೆ ಕೆಲವರು ವಿಡಿಯೋ ಶೇರ್​ ಮಾಡುತ್ತಿದ್ದಾರೆ.

ಪುಟಾಣಿ ಡಬಲ್​ ರೋಲ್​​

ಇದೀಗ ಮಲ್ಲಮ್ಮನವರ ಆ್ಯಕ್ಟಿಂಗ್​ ಅನ್ನು ಪುಟಾಣಿ ಡಬಲ್​ ರೋಲ್​​ ಮೂಲಕ ಮಾಡಿದ್ದಾನೆ ಪುಟಾಣಿ ಸುದರ್ಶನ್​ ಜೆ.ಕೆ. ಬಿಗ್​ಬಾಸ್​ಗೆ ಹೋಗುವ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಸುದೀಪ್​​ ಅವರು ಮಲ್ಲಮ್ಮನ ಬಳಿ ಕೇಳಿದ ಪ್ರಶ್ನೋತ್ತರದ ಬಗ್ಗೆ ಈತ ಡಬ್​ಸ್ಮ್ಯಾಷ್​ ಮಾಡಿದ್ದಾನೆ. ನೀವು ಯಾವ ಸಿನಿಮಾ ನೋಡಿದ್ದೀರಿ ಎಂದು ಸುದೀಪ್​ ಪ್ರಶ್ನಿಸಿದ್ದಾಗ ಮಲ್ಲಮ್ಮನವರು, ಮುಗ್ಧರಾಗಿ ಹೇಳಿದ್ದನ್ನೇ ಈ ಬಾಲಕ ಮಾಡಿ ತೋರಿಸಿದ್ದಾನೆ. ತಾವು ನೋಡಿದ್ದು ಹುಚ್ಚ ಮತ್ತು ಕಾಶಿ ಚಿತ್ರ ಮಾತ್ರ ಎಂದಾಗ ಖುದ್ದು ಸುದೀಪ್​ ಗಲಿಬಿಲಿಗೆ ಒಳಗಾದರು. ಕೊನೆಗೆ, ಮಲ್ಲಮ್ಮ ಅವರಿಗೆ ಮನೆಯೊಳಗೆ ಹೋಗಿ ಏನ್ ಮಾಡ್ತೀರಿ ಅಂತ ಕೇಳಿದ್ದಕ್ಕೆ ಜಗಳ ಮಾಡೋದು ಅಂತ ಮುಗ್ಧರಾಗಿ ಉತ್ತರಿಸಿದ್ದರು. ನಿಮ್ಮಿಂದ ಮನೆಗೆ.. ಮನೆಯಿಂದ ನಿಮಗೆ ಒಳ್ಳೆಯದಾಗಲಿ ಎಂದು ಮಲ್ಲಮ್ಮ ಅವರಿಗೆ ಮನಸಾರೆ ಶುಭ ಕೋರಿ ಮನೆಯೊಳಗಡೆ ಕಳುಹಿಸಿದ್ದರು.

ಕಾಶಿ ಮತ್ತು ಹುಚ್ಚ ಸಿನಿಮಾ

ಇದೇ ಕಾಶಿ ಮತ್ತು ಹುಚ್ಚ ಸಿನಿಮಾ ಬಗ್ಗೆ ಮಲ್ಲಮ್ಮ ಹೇಳಿದ್ದು, ಹಾಗೂ ಅದಕ್ಕೆ ಸುದೀಪ್​ ರಿಯಾಕ್ಟ್​ ಮಾಡಿದ್ದನ್ನು ಬಾಲಕ ಡಬಲ್​ ರೋಲ್​ನಲ್ಲಿ ತೋರಿಸಿದ್ದಾನೆ. ಇನ್ನು ಮಲ್ಲಮ್ಮ ಕುರಿತು ಹೇಳುವುದಾದರೆ, ಯಮ್ಮ ಮಾತುಗಾರಿಕೆಯಿಂದ ಎಲ್ಲರನ್ನು ಆಯಸ್ಕಾಂತದಂತೆ ಸೆಳೆಯಲು ಶುರು ಮಾಡಿದ್ದಾರೆ ಇವರು. ತಾವು ಕೆಲಸ ಮಾಡುತ್ತಿದ್ದ ಫ್ಯಾಷನ್ ಬೋಟಿಕ್‌ನ ಯಜಮಾನಿಯ ಸಹಕಾರ ಸಹಾಯ ಮತ್ತು ಬೆಂಬಲದಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲ ವರ್ಷದ ಹಿಂದೆ ವೈರಲ್ ಆಗಿದ್ದರು. ಸದ್ಯ ಇನ್ಸ್ಟಾಗ್ರಾಮ್‌ನಲ್ಲಿ 1.74 ಲಕ್ಷಕ್ಕೂ ಅಧಿಕ ಹಾಗೂ ಯೂಟ್ಯೂಬ್‌ನಲ್ಲಿ 16.4 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ ಅನ್ನು ಇವರು ಹೊಂದಿದ್ದಾರೆ. ಇನ್ನು ಬಾಲಕ ಸುದರ್ಶನ್​ ಜೆ.ಕೆ ಹಲವಾರು ವಿಡಿಯೋಗಳನ್ನು ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದಾನೆ.

ಇದನ್ನೂ ಓದಿ: ಕಂಟೆಂಟ್​ ಕ್ರಿಯೇಟರ್ಸ್​ಗೆ Bigg Boss ಭರ್ಜರಿ ಆಫರ್​! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ

ಲಿಂಕ್​ ಇಲ್ಲಿದೆ:

https://www.instagram.com/reel/DPOgmzbEzWc/?utm_source=ig_web_copy_link

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?