
ಕಲರ್ಸ್ ಕನ್ನಡ ವಾಹಿನಿಯ ನಿನಗಾಗಿ ಧಾರಾವಾಹಿಯು ( Ninagagi Serial ) ಅಂತ್ಯ ಆಗುತ್ತಿದೆ. ಹೌದು, ಇಂದು ಈ ಸೀರಿಯಲ್‌ನ ಕೊನೆಯ ಸಂಚಿಕೆ ಪ್ರಸಾರ ಆಗಲಿದೆ. 413 ಎಪಿಸೋಡ್‌ಗೆ ಈ ಸೀರಿಯಲ್ ಮುಕ್ತಾಯ ಆಗಲಿದೆ.
ಜೀವ ಒಂದು ಫುಡ್ ಟ್ರಕ್ ನಡೆಸುತ್ತಿದ್ದನು. ರಚನಾ ಲೇಡಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಳು. ರಚನಾಗೆ ಸಿಂಪಲ್ ಆಗಿರೋದು, ಮನೆಯಲ್ಲಿ ಗೃಹಿಣಿಯಾಗಿರೋಕೆ ಇಷ್ಟವೇ ಇಲ್ಲ. ಆದರೆ ಅವಳ ತಾಯಿ ಎಂದು ಮುಖವಾಡ ಹಾಕಿಕೊಂಡೋಳು, ಮಗಳ ಕೈಯಲ್ಲಿ ನಟನೆ ಮಾಡಿಸಿ, ದುಡ್ಡು ಮಾಡುತ್ತಿದ್ದಳು. ಇದು ಅವಳಿಗೆ ಇಷ್ಟವೇ ಇರಲಿಲ್ಲ. ಜೀವನಿಗೆ ಕೃಷ್ಣಾ ಎನ್ನುವ ಮಗಳಿದ್ದಳು. ಕೃಷ್ಣಾಗೂ, ರಚನಾಗೂ ಒಂದು ನಂಟು ಬೆಳೆಯುವುದು.
ಹೀಗಿರುವಾಗ ರಚನಾಗೆ ಮದುವೆ ಮಾಡಬೇಕು ಎಂದು ತಾಯಿ ವಜ್ರೇಶ್ವರಿ ರೆಡಿ ಆಗುತ್ತಾಳೆ. ರಚನಾಗೆ ಈ ಮದುವೆ ಇಷ್ಟವಿರೋದಿಲ್ಲ. ವಿಧಿಯು ಜೀವ ಹಾಗೂ ರಚನಾಳನ್ನು ಒಂದು ಮಾಡಿ ಮದುವೆ ಮಾಡಿಸುವುದು. ರಚನಾಗೆ ಜೀವನನ್ನು ಕಂಡರೆ ಇಷ್ಟ ಇರೋದಿಲ್ಲ, ಜೀವನಿಗೂ ರಚನಾ ಕಂಡರೆ ಇಷ್ಟವಿರೋದಿಲ್ಲ. ಇವರಿಬ್ಬರು ಹಾವು ಮುಂಗುಸಿ ಥರ ಕಿತ್ತಾಡುತ್ತಿರುತ್ತಾರೆ. ಆಮೇಲೆ ಈ ಜೋಡಿಗೆ ಲವ್ ಆಗುವುದು.
ಅದಾದ ಬಳಿಕ ಜೀವ ಇತಿಹಾಸ ತೆರೆದುಕೊಳ್ಳುವುದು. ಜೀವ ದೊಡ್ಡ ಮನೆತನಕ್ಕೆ ಸೇರಿದವನು, ಮೊದಲ ಪತ್ನಿ ಮಾಧುರಿಯ ಕೊಲೆ ರಹಸ್ಯದ ಬಗ್ಗೆ ಎಪಿಸೋಡ್ ಪ್ರಸಾರ ಆಗುವುದು. ರಚನಾ ತಾನೇ ಮಾಧುರಿಗೆ ಅಪಘಾತ ಮಾಡಿ ಸಾಯಿಸಿದ್ದೀನಿ ಅಂತ ಅಂದುಕೊಂಡಿರುತ್ತಾಳೆ. ಆದರೆ ವಾಸ್ತವದಲ್ಲಿ ಕೊಲೆಗಾರ ಯಾರು ಎನ್ನೋದು ರಿವೀಲ್ ಆಗಬೇಕು.
ಜೀವ ತಮ್ಮ ಕೂಡ ಆಸ್ತಿಗಾಗಿ ಮಾಡಬಾರದ ಕೆಲಸವನ್ನು ಮಾಡುತ್ತಾನೆ. ಇನ್ನೊಂದು ಕಡೆ ಜೀವ ದೊಡ್ಡಮ್ಮನ ಮಗಳು ದೇವಿ ಕೂಡ ಈ ಮನೆ ಹಾಳಾಗಲು ಪ್ರಯತ್ನಪಟ್ಟಿರುತ್ತಾಳೆ. ಇನ್ನು ಜೀವ ತಾಯಿ ಕೂಡ ಮನೆಯಲ್ಲಿ ಸೆರೆಯಾಳಾಗಿರುತ್ತಾಳೆ, ಅವಳ ಮಾನಸಿಕ ಆರೋಗ್ಯ ಹಾಳಾಗಲು ದೇವಿ ಇಲ್ಲಸಲ್ಲದ ಮೆಡಿಸಿನ್ ಕೊಡುತ್ತಿರುತ್ತಾಳೆ.
ಮಾಧುರಿಯನ್ನು ಕೊಂದಿದ್ದು ದೇವಿ ಎನ್ನೋದು ರಿವೀಲ್ ಆಗುವುದು. ಇನ್ನು ಜೀವ ತಮ್ಮಂದಿರು ಕೂಡ ಒಳ್ಳೆಯವರಾಗುತ್ತಾರೆ. ಜೀವ ತಾಯಿ ಕೂಡ ರೂಮ್‌ನಿಂದ ಹೊರಗಡೆ ಬಂದು ಆರಾಮಾಗಿ ಇರುತ್ತಾಳೆ. ಒಟ್ಟಾರೆಯಾಗಿ ರಚನಾಳಿಂದ ಇಡೀ ಮನೆ ಮತ್ತೆ ಮೊದಲಿನ ಹಾಗೆ ಆಗುವುದು. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು. ಒಟ್ಟಿನಲ್ಲಿ ಜೀವ ತಂದೆ ಕನಸು ಕಂಡಂತೆ ಎಲ್ಲರೂ ಖುಷಿಯಿಂದ ಒಟ್ಟಾಗಿ ಬಾಳುತ್ತಾರೆ.
ರಚನಾ ಪಾತ್ರದಲ್ಲಿ ನಟಿ ದಿವ್ಯಾ ಉರುಡುಗ ನಟಿಸಿದ್ದಾರೆ. ಈ ಹಿಂದೆ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸಿ, ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ಭಾಗವಹಿಸಿದ್ದರು. ಅದಾದಮೇಲೆ ಅವರು ಸಿನಿಮಾಗಳತ್ತ ಹೆಚ್ಚು ಮುಖ ಮಾಡಿದ್ದರು. ನಟ ರಿತ್ವಿಕ್ ಮಠದ್ ಕೂಡ ‘ಅನುರೂಪ’, ‘ಗಿಣಿರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ‘ಮಾರ್ನಮಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.