ಬಿಗ್​ಬಾಸ್​ ಸಂಗೀತಾ ಶೃಂಗೇರಿ ಲುಕ್ಕೇ ಚೇಂಜು! ನಿಜಕ್ಕೂ ಈಕೆ ನಮ್​ ಸಂಗೂನಾ ಕೇಳಿದ ಫ್ಯಾನ್ಸ್​

Published : Mar 28, 2025, 05:45 PM ISTUpdated : Mar 28, 2025, 05:56 PM IST
ಬಿಗ್​ಬಾಸ್​ ಸಂಗೀತಾ ಶೃಂಗೇರಿ ಲುಕ್ಕೇ ಚೇಂಜು! ನಿಜಕ್ಕೂ ಈಕೆ ನಮ್​ ಸಂಗೂನಾ ಕೇಳಿದ ಫ್ಯಾನ್ಸ್​

ಸಾರಾಂಶ

ಸಂಗೀತಾ ಶೃಂಗೇರಿ ಬಿಗ್ ಬಾಸ್ ಸೀಸನ್ 10ರ ಜನಪ್ರಿಯ ಸ್ಪರ್ಧಿ. ಬಿಗ್ ಬಾಸ್ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಶೃಂಗೇರಿಯ ಕಾಫಿ ತೋಟದಲ್ಲಿನ ಅವರ ಫೋಟೋಗಳು ವೈರಲ್ ಆಗಿವೆ. ಅಲ್ಲಿ ಪ್ರಕೃತಿಯನ್ನು ಎಂಜಾಯ್​ ಮಾಡುತ್ತಿದ್ದಾರೆ. 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. '777 ಚಾರ್ಲಿ' ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಇತ್ತೀಚೆಗೆ ಡ್ರೋನ್ ಪ್ರತಾಪ್ ಜೊತೆ ಮೈಸೂರಿನ ಅಕ್ವೇರಿಯಂಗೆ ಭೇಟಿ ನೀಡಿದ್ದರು. ಬಿಗ್ ಬಾಸ್‌ನಲ್ಲಿ ತುಕಾಲಿ ಸಂತೋಷ್ ಜೊತೆಗಿನ ಅವರ ಜೋಡಿ ಪ್ರಸಿದ್ಧವಾಗಿತ್ತು.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಸಂಗೀತಾ ಶೃಂಗೇರಿ.  ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿವೆ. ಇದರಲ್ಲಿ ಸಂಗೀತಾ ಅವರ ಲುಕ್ಕೇ ಚೇಂಜ್ ಆಗಿದೆ. ಹೇಳಿಕೇಳಿ ಚಿಕ್ಕಮಗಳೂರು ಎಂದರೆ ಕಾಫಿಗೆ ಫೇಮಸ್ಸು. ಇದೀಗ ಸಂಗೀತಾ ಅವರು ಕಾಫೆ ತೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಪ್ರಕೃತಿಯನ್ನು ಸವಿಯುತ್ತಿದ್ದಾರೆ. ಇವರ ಬದಲಾದ ಲುಕ್​ ನೋಡಿ ಅಭಿಮಾನಿಗಳು ನಿಜಕ್ಕೂ ಈಕೆ ನಮ್​ ಸಂಗೀತಾನಾ ಎಂದು ಕೇಳ್ತಿದ್ದಾರೆ.  

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+  ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಬಳಿಕ  ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ.  

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

ಇತ್ತೀಚೆಗೆ ಸಂಗೀತಾ, ಬಿಗ್​ಬಾಸ್​ನ ಇವರ ತಮ್ಮ ಡ್ರೋನ್​ ಪ್ರತಾಪ್​ ಜೊತೆ ಮೈಸೂರಿಗೆ ಭೇಟಿ ಕೊಟ್ಟಿದ್ದರು. ಮೈಸೂರಿನ ಸಮೀಪ ಇರುವ ಬಸ್ತಿಪುರದಲ್ಲಿನ ಪ್ಲಾನೆಟ್‌ ಅರ್ತ್‌ ಅಕ್ವೇರಿಯಂಗೆ ಭೇಟಿ ನೀಡಿದ್ದರು. ಇಲ್ಲಿರುವ ಹೆಬ್ಬಾವು, ಇಗ್ವಾನ, ಅಂಬ್ರೆಲಾ ಕೊಕಟೊ   ಸೇರಿದಂತೆ ಹಲವು ಸರಿಸೃಪ, ಪ್ರಾಣಿಗಳ ಜೊತೆ ಸರಸ ಆಡಿದ್ದರು. ಅಬ್ಬಬ್ಬಾ ಎನ್ನುವಂಥ ಹಾವುಗಳನ್ನು ಲೀಲಾಜಾಲವಾಗಿ ಹಿಡಿದುಕೊಂಡಿದ್ದರು. ಅಲ್ಲಿರುವ ಸಿಬ್ಬಂದಿ ಇದನ್ನು ಸುಲಭವಾಗಿ ಹಿಡಿದುಕೊಳ್ಳಬಲ್ಲರು. ಆದರೆ ಸಾಮಾನ್ಯವಾಗಿ ಎಲ್ಲರೂ ಇದನ್ನು ನೋಡಿ ಭಯ ಪಟ್ಟುಕೊಳ್ಳುತ್ತಾರೆ. ಆದರೆ ಸಂಗೀತಾ ಎಲ್ಲವನ್ನೂ ಸಾಕು ಪ್ರಾಣಿಯಂತೆ ಹಿಡಿದುಕೊಂಡಿದ್ದರು, ಆದರೆ ಡ್ರೋನ್ ಪ್ರತಾಪ್​ ಮಾತ್ರ ಭಯದಿಂದ ಹಿಡಿದುಕೊಂಡಿರಲಿಲ್ಲ.

ಇನ್ನು ಬಿಗ್​ಬಾಸ್​ನಲ್ಲಿ  ತುಕಾಲಿ ಸಂತೋಷ್​  ಮತ್ತು ಸಂಗೀತಾ ಶೃಂಗೇರಿ ಅವರ ಜೋಡಿ ಫೇಮಸ್​ ಆಗಿತ್ತು. ಅವಾರ್ಡ್​ ಫಂಕ್ಷನ್​ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾಗ, ಅ್ಯಂಕರ್​  ಇಬ್ಬರ ಕಾಲೆಳೆದಿದ್ದರು. ಬಿಗ್​ಬಾಸ್​​ ಮುಗಿದ ಮೇಲೆ ಸಂಗೀತಾರನ್ನು ಎಷ್ಟು ಮಿಸ್​ ಮಾಡಿಕೊಂಡ್ರಿ ಎಂದು ಪ್ರಶ್ನಿಸಿದ್ದರು. . ಅದಕ್ಕೆ ತುಕಾಲಿ ಜೋರಾಗಿ ನಗುತ್ತಾ ಚೆನ್ನಾಗಿ ಹಾಕಿಕೊಟ್ರಿ ಎಂದಿದ್ದರು. ಆಗ ಸಂಗೀತಾ, ತುಕಾಲಿ ಅವ್ರೇ, ಮನೆಗೆ ಹೋದ ಮೇಲೆ ಎಲ್ಲಾ ಎಪಿಸೋಡ್​ ನೋಡಿದೆ ಎಂದರು. ಅದಕ್ಕೆ ತುಕಾಲಿ ತುಂಬಾ ಚೆನ್ನಾಗಿತ್ತು ಎಂದರು, ಅದಕ್ಕೆ ಸಂಗೀತಾ ಹೌದು. ತುಂಬಾನೇ ಚೆನ್ನಾಗಿತ್ತು, ನೋಡ್ಕೋತೀನಿ ಎಂದು ತಮಾಷೆ ಮಾಡಿದ್ದರು.   ಇದೀಗ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿದ್ದಾರೆ. 

ಹೇರ್​ ಕಲರ್​ ತಂದ ಫಜೀತಿ: ಏನೋ ಹೇಳಿದ್ರೆ, ಏನೋ ಮಾಡಿದ್ರು! ಬಿಗ್​ಬಾಸ್​ ಸಂಗೀತಾ ಶೃಂಗೇರಿ ಗರಂ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!