ಇದ್ದಕ್ಕಿದ್ದಂತೆ ಲವ್ ರಿವೀಲ್ ಮಾಡಿದ ನಿಶ್ಚಿತಾರ್ಥ ಮಾಡಿಕೊಂಡ ರಂಜಿತ್ ಈಗ ತಮ್ಮ ಪ್ರಪೋಸಲ್ ದಿನವನ್ನು ನೆನಪಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ಕಲಾವಿದ ರಂಜಿತ್. ಇದ್ದಿದ್ದು ಮೂರ್ನಾಲ್ಕು ವಾರಗಳು ಆದರೆ ದೊಡ್ಡ ಮಟ್ಟದಲ್ಲಿ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿಬಿಟ್ಟರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ರಂಜಿತ್ ನೇಮ್ ಆಂಡ್ ಫೇಮ್ ದೊಡ್ಡದಾಗಿತ್ತು. ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳನ್ನು ಮಡಿಲಿಗೆ ಬಂದಿತ್ತು.ಅದಕ್ಕಿಂತ ಹೆಚ್ಚು ಸೌಂಡ್ ಮಾಡಿದ್ದು ನಿಶ್ಚಿತಾರ್ಥ. ಸೈಲೆಂಟ್ ಆಗಿ ಪ್ರೀತಿಸುತ್ತಿದ್ದ ರಂಜಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮಾನಸಾ ಎಂಬುವವರ ಜೊತೆಯಲಿ. ಹೇಗೆ ಲವ್ ಆಯ್ತು ಯಾರು ಪ್ರಪೋಸ್ ಮಾಡಿದು ಎಂದು ಪ್ರಶ್ನಿಸಿದಾಗ ಸಿಕ್ಕ ಉತ್ತರವಿದು.
ಆರಂಭದಲ್ಲಿ ತಾನು ಇಷ್ಟ ಪಡುವ ಹುಡುಗಿ ಹೇಗ್ ಇರಬೇಕು ಎಂದು ಹೇಳುತ್ತಿದ್ದರು ಅದು ಎಲ್ಲೋ ನನ್ನ ಗುಣಗಳಿಗೆ ಲಿಂಕ್ ಆಗುತ್ತಿತ್ತು.ಹೀಗೆ ಒಮ್ಮೆ ನನ್ನ ಅಂಗಡಿ ಬಳಿ ಭೇಟಿ ಮಾಡಿದ್ದು ಆಗ ಅವರು ಕಾರಿನಲ್ಲಿ ಕುಳಿತುಕೊಂಡು ಮಾತನಾಡುವಾಗ ಗೋಧೂಳಿ ಲಗ್ನಕ್ಕೆ (ಬೆಳಗ್ಗೆ 6.30 ಮತ್ತು ಸಂಜೆ 6.30 ಸಮಯ) ಕಾಯುತ್ತಿದ್ದರು. ಆಗ ಇಬ್ಬರು ಕಾಯುತ್ತಿದ್ದರಂತೆ ಏನಕ್ಕೆ ಎಂದು ಮಾನಸಾ ಗೌಡ ಪ್ರಶ್ನೆ ಮಾಡಿದಾಗ ಗೋಧೂಳಿ ಲಗ್ನ ಸಮಯದಕ್ಕೆ ಐ ಲವ್ ಯು ಹೇಳುವುದಕ್ಕೆ ಅಂತ ಹೇಳಿಬಿಟ್ಟೆ ಎಂದು ಕನ್ನಡ ಖಾಸಗಿ ಟಿವಿ ಯೂಟ್ಯೂಬ್ ಸಂದರ್ಶನದಲ್ಲಿ ರಂಜಿತ್ ಮತ್ತು ಮಾನಸಾ ಮಾತನಾಡಿದ್ದಾರೆ.
ಈ ಒಂದು ಕಾರಣಕ್ಕೆ ಶಾರದ ಎಂದು ಹೆಸರಿಟ್ಟಿದ್ದು; ನಟಿ ನೇಹಾ ಗೌಡ ತಂದೆ ಕೊಟ್ಟ ಸ್ಪಷ್ಟನೆ
ಆರಂಭದಲ್ಲಿ ಮಾನಸಾ ಕೊಂಚ ಶಾಕ್ ಆಗಿಬಿಟ್ಟರು ಆದರೆ ರಂಜಿತ್ ಪ್ರಪೋಸಲ್ ಒಪ್ಪಿಕೊಂಡಿದ್ದು ಒಂದು ವಾರ ಕಳೆದ ಮೇಲೆ. ಒಮ್ಮೆ ಭೇಟಿ ಮಾಡಿದಾಗ ಯಾಕೆ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು ಆಗ ನನಗೂ ಇಷ್ಟ ಅಂತ ಹೇಳಿ ಮನೆಗೆ ಹೋಗಿಬಿಟ್ಟೆ. ಇವರ ರಿಲೇಷನ್‌ಶಿಪ್‌ನಲ್ಲಿ ಇದುವರೆಗೂ ರಂಜಿತ್ ರೋಸ್ ಕೊಟ್ಟ ಪ್ರಪೋಸ್ ಮಾಡಿಲ್ಲವಂತೆ ಮಾನಸಾನೇ ಕೊಟ್ಟಿರುವುದು ಎನ್ನುತ್ತಾರೆ. ಇಬ್ಬರು ಪಬ್ಲಿಕ್‌ನಲ್ಲಿ ಕೈ ಹಿಡಿದು ಕೂಡ ನಡೆದಾಡಿಲ್ಲವಂತೆ. ನಿಶ್ಚಿತಾರ್ಥದ ದಿನವೇ ರಂಜಿತ್ ತಮ್ಮ ಗರ್ಲ್‌ಫ್ರೆಂಡ್ ಹಣೆಗೆ ಮುತ್ತು ಇಟ್ಟಿದ್ದಂತೆ. ಇಷ್ಟು ದಿನಗಳ ಕಾಲ ಇವರಿಬ್ಬರು ಹಬ್ಬಿಕೊಂಡಿದ್ದು ಅದು ಬಿಟ್ಟು ಒಮ್ಮೆನೂ ಮುತ್ತು ಕೊಟ್ಟಿಲ್ಲವಂತೆ. ಕಾರಿನಲ್ಲಿ ಕುಳಿತುಕೊಂಡಾಗಲೂ ಕೂಡ ಆಕೆ ನನ್ನನ್ನೇ ನೋಡುತ್ತಿರುತ್ತಾರೆ. ನಾವಿಬ್ಬರು ಕೈ ಹಿಡಿದುಕೊಂಡು ಓಡಾಡುವುದು ಅಷ್ಟೇ ಎಂದು ಜೋಡಿ ಹಕ್ಕಿಗಳು ಹೇಳಿದ್ದಾರೆ.
ಬಟ್ಟೆ ಜಾರಿ ಬೀಳ್ತಿದ್ರೂ ಪೋಸ್ ಕೊಡ್ತೀರೋದ್ ನೋಡಿ; ನಟಿ ನಿಶ್ವಿಕಾ ಕಾಲೆಳೆದ ನೆಟ್ಟಿಗರು