Amruthadhaare Kannada Serial Today Episode: ‘ಅಮೃತಧಾರೆ’ ಧಾರಾವಾಹಿಯಲ್ಲಿ ಜಯದೇವ್ ಮಾತ್ರ ಬದಲಾಗೋದಿಲ್ಲ ಅಂತ ಕಾಣುತ್ತದೆ. ಈಗ ಜಯದೇವ್ ಮಾಡುವ ಅನಾಚಾರವನ್ನು ಭೂಮಿ ತಪ್ಪಿಸುತ್ತಾಳಾ?
‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದಲ್ಲ ಒಂದು ಅನಾಚಾರ ಮಾಡುವ ಜಯದೇವ್ ಈಗ ಮತ್ತೊಂದು ಮದುವೆ ಆಗೋಕೆ ರೆಡಿಯಾಗಿದ್ದಾನೆ. ಹೌದು, ನಿಶಾ ಪ್ರಚೋದನೆಯಿಂದ ಜಯದೇವ್ ಅವಳನ್ನು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಇದನ್ನು ಭೂಮಿ ತಡೆಯುತ್ತಾಳಾ?
ಹಠ ಹಿಡಿದು ಕೂತ ನಿಶಾ!
“ಜಯದೇವ್ ಅಂದ್ರೆ ನನಗೆ ಇಷ್ಟ. ನಾನು ನಿಮ್ಮನ್ನು ಬಿಟ್ಟು ಇರೋದಿಲ್ಲ, ನೀವು ನನಗೆ ಬೇಕು” ಅಂತ ಜಯದೇವ್ ಮುಂದೆ ನಿಶಾ ಹಠ ಮಾಡಿದ್ದಾನೆ. ಹೀಗಾಗಿ ನಿಶಾಳನ್ನು ಜಯದೇವ್ ಮದುವೆ ಆಗಲು ರೆಡಿಯಾಗಿದ್ದಾನೆ. ದೇವಸ್ಥಾನವೊಂದರಲ್ಲಿ ಜಯದೇವ್, ನಿಶಾ ಮದುವೆ ಆಗುತ್ತಿದ್ದಾರೆ. ಅದೇ ಸಮಯಕ್ಕೆ ಮಲ್ಲಿ, ಭೂಮಿಕಾ ಕೂಡ ಅಲ್ಲಿಗೆ ಬರುತ್ತಾರೆ. ಮಲ್ಲಿಗೆ ತನ್ನ ಗಂಡ ಇನ್ನೊಂದು ಮದುವೆ ಆಗುತ್ತಿರೋದು ಕಣ್ಣಿಗೆ ಬೀಳತ್ತೆ. ಆಗ ಅವಳು ಏನು ಮಾಡಲಿದ್ದಾಳೆ ಎಂದು ಕಾದು ನೋಡಬೇಕಿದೆ.
'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?
ಭೂಮಿಗೆ ಈ ವಿಷಯ ಗೊತ್ತಾಗತ್ತಾ?
ಜಯದೇವ್ ಸರಿ ಹೋಗಿಲ್ಲ, ಅವನಿಗೆ ಅಕ್ರಮ ಸಂಬಂಧ ಇರೋದು ಮಲ್ಲಿಗೆ ಗೊತ್ತಾಗಿದೆ. ಆದರೆ ಅವಳು ಇದನ್ನು ಯಾರಿಗೂ ಹೇಳಿರಲಿಲ್ಲ. ಬೇಸರ ಮಾಡಿಕೊಂಡು ಅವಳು ತವರಿಗೆ ಹೋಗಿದ್ದಳು. ಇತ್ತ ಭೂಮಿಕಾ ಪ್ರಗ್ನೆಂಟ್ ಅಂತ ಘೋಷಣೆ ಆದ್ಮೇಲೆ ಗೌತಮ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದನು. ಮಲ್ಲಿ ನೋಡಿ ಭೂಮಿಕಾ ಫುಲ್ ಖುಷಿ ಆಗಿದ್ದಾಳೆ. ಇನ್ನು ದೇವಸ್ಥಾನದಲ್ಲಿ ಭೂಮಿಕಾಗೆ ಈ ವಿಷಯ ಗೊತ್ತಾದರೆ ಅವಳು ಏನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ.
ಜಯದೇವ್ ಕಥೆ ಏನಾಗತ್ತೆ?
ನಿಜಕ್ಕೂ ಮಲ್ಲಿ ಈ ವಿಷಯವನ್ನು ಭೂಮಿಗೆ ಹೇಳಿದರೆ ಅವಳು ಮದುವೆ ನಿಲ್ಲಿಸುತ್ತಾಳೆ. ಇನ್ನು ಗೌತಮ್ ಅಂತೂ ಸುಮ್ಮನೆ ಇರೋದಿಲ್ಲ. ಜಯದೇವ್ ಸರಿ ಹೋದ ಅಂತ ಗೌತಮ್ ಅಂದುಕೊಂಡಿದ್ದನು. ಮಲ್ಲಿಗೆ ಅವನು ಮೋಸ ಮಾಡ್ತಿದ್ದಾನೆ ಅಂತ ಗೊತ್ತಾದರೆ ಮಾತ್ರ ಅವನು ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕುತ್ತಾನೆ. ಇದಂತೂ ಪಕ್ಕಾ.
ಬರ್ತ್ ಡೇ ಪಾರ್ಟಿಯಲ್ಲಿ ಅಮೃತಧಾರೆ ಪಾರ್ಥ... ಹುಡುಗಿ ಯಾರು ಕೇಳ್ತಿದ್ದಾರೆ ಜನ!
ಧಾರಾವಾಹಿ ಕಥೆ ಏನು?
ನಡು ವಯಸ್ಸಿನಲ್ಲಿ ಗೌತಮ್ ಹಾಗೂ ಭೂಮಿಕಾ ಮದುವೆಯಾಗಿದ್ದಾರೆ. ಮನೆಯವರ ಖುಷಿಗೋಸ್ಕರ ಇವರು ಮದುವೆ ಆಗುತ್ತಾರೆ. ಗೌತಮ್ ಮದುವೆಯಾಗಿ, ಅವನಿಗೆ ಮಕ್ಕಳಾಗೋದು ಮಲತಾಯಿ ಶಕುಂತಾಲಗೆ ಇಷ್ಟವೇ ಇರಲಿಲ್ಲ. ಏನೇ ಮಾಡಿದರೂ ಗೌತಮ್-ಭೂಮಿಯನ್ನು ಅವಳಿಂದ ದೂರ ಮಾಡೋಕೆ ಆಗಲಿಲ್ಲ. ಹೀಗಿರುವಾಗ ಶಕುಂತಲಾಳ ಮಗ ಜಯದೇವ್ ಮಾತ್ರ ಗೌತಮ್ ಆಸ್ತಿ ಹೊಡೆಯೋಕೆ ಒಂದಲ್ಲ ಒಂದು ಪ್ರಯತ್ನ ಮಾಡುತ್ತಿದ್ದಾನೆ. ಶಕುಂತಲಾ ನಿಜಕ್ಕೂ ಗೌತಮ್ ತಾಯಿಗೆ ಏನು ಮಾಡಿದ್ದಾಳೆ? ಅವಳ ಕುತಂತ್ರ ಏನು ಎನ್ನೋದು ರಿವೀಲ್ ಆಗಬೇಕಿದೆ.
ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಕ್ಷಕರು ಏನು ಹೇಳಿದ್ದಾರೆ?
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ನಟ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ನಟಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ಹಿರಿಯ ನಟಿ ವನಿತಾ ವಾಸು, ಮಲ್ಲಿ ಪಾತ್ರದಲ್ಲಿ ಅನ್ವಿತಾ ಸಾಗರ್, ಜಯದೇವ್ ಪಾತ್ರದಲ್ಲಿ ರಾಣವ್ ಅವರು ನಟಿಸುತ್ತಿದ್ದಾರೆ.