ಬಿಗ್ ಬಾಸ್ ಮನೆಯೊಳಗಡೆ ಹುಟ್ಟಿಕೊಂಡ ಪ್ರೀತಿ ಇಂದು ಮುಂದುವರೆಯುತ್ತಿರುವ ಉದಾಹರಣೆಯೂ ಇದೆ, ಅಲ್ಲಿ ಪ್ರೀತಿ ಹುಟ್ಟಿ, ಅಲ್ಲೇ ಬ್ರೇಕಪ್ ಆದ ಉದಾಹರಣೆಯೂ ಇದೆ. ಇನ್ನು ಕೆಲವೊಮ್ಮೆ ಆ ಮನೆಯಲ್ಲಿ ಲವ್ ಆದರೂ ಹೊರಗಡೆ ಬಂದ್ಮೇಲೆ ಬ್ರೇಕಪ್ ಆಗಿದ್ದೂ ಇದೆ. ಈಗ ಇನ್ನೊಂದು ಜೋಡಿ ಬ್ರೇಕಪ್ ಮಾಡಿಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ.
ಕಿರುತೆರೆಯ ಖ್ಯಾತ ಜೋಡಿ ಪ್ರಿಯಾಂಕಾ ಚಾಹರ್ ಚೌಧರಿ ಹಾಗೂ ಅಂಕಿತ್ ಗುಪ್ತಾ ಅವರು ಬ್ರೇಕಪ್ ಮಾಡಿಕೊಂಡರಾ ಎಂಬ ಅನುಮಾನ ಶುರುವಾಗಿದೆ. ಈ ಹಿಂದೆ ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಇನ್ನೊಬ್ಬರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ತಿದ್ದರು. ಈಗ ಅದ್ಯಾವುದು ಇಲ್ಲವಾದಂತಿದೆ.
ಅನುಮಾನ ಮೂಡಿಸಿದ ನಡೆ
ನಾವಿಬ್ಬರೂ ಪ್ರೀತಿ ಮಾಡ್ತಿದ್ದೇವೆ ಅಂತ ಈ ಜೋಡಿ ಎಂದಿಗೂ ಹೇಳಿಲ್ಲ. ಅಷ್ಟೇ ಅಲ್ಲದೆ ಹೋದಲ್ಲಿ ಬಂದಲ್ಲಿ ನಾವಿಬ್ಬರು ಸ್ನೇಹಿತರು ಅಂತ ಹೇಳಿಕೊಂಡು ಓಡಾಡಿತ್ತು. ಈಗ ಇವರಿಬ್ಬರು ದೂರ ಆಗಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
ಒಟ್ಟಿಗೆ ಬಾಳಬೇಕು ಅಂತ ಫಿಕ್ಸ್ ಆದ್ರು; ನಿಶ್ಚಿತಾರ್ಥ ಮುರ್ಕೊಂಡ್ರು! ಸೆಲೆಬ್ರಿಟಿಗಳ ಈ ನಿರ್ಧಾರವಾದ್ರೂ ಯಾಕೆ?
ಅನ್‌ಫಾಲೋ ಮಾಡಿಕೊಂಡ ಕಲಾವಿದರು!
ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ, ಇದಕ್ಕೆ ಕಾರಣ ಏನು ಎಂದು ತಿಳಿಸಿಲ್ಲ. ಈ ಹಿಂದೆ ಹಬ್ಬಗಳಿದ್ದಾಗ ಇಬ್ಬರೂ ಸೇರಿಕೊಂಡು ಆಚರಿಸುತ್ತಿದ್ದರು, ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಇವರನ್ನು Priyankit ಎಂಬ ಹೆಸರಿನಿಂದ ಕರೆಯುತ್ತಿದ್ದರು.
ʼಬಿಗ್ ಬಾಸ್ʼ ಮನೆಯಲ್ಲಿ ಅರಳಿದ ಪ್ರೀತಿ!
ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ದೊಡ್ಡ ಮಟ್ಟದಲ್ಲಿ ಗಾಸಿಪ್ ಇತ್ತು. ʼudaariyaanʼ ಧಾರಾವಾಹಿ ಕಲಾವಿದರು ಬಿಗ್‌ಬಾಸ್ 16 ಮನೆಗೆ ಹೋದಬಳಿಕ ಇನ್ನಷ್ಟು ಹತ್ತಿರ ಆಗಿದ್ದರು. ದೊಡ್ಮನೆಯಲ್ಲಿ ಈ ಜೋಡಿ ಮಾನಸಿಕವಾಗಿ ಬೆಂಬಲ ಕೊಟ್ಟಿದ್ದು, ಕಾಳಜಿ ಮಾಡಿದ್ದು ಅನೇಕರಿಗೆ ಇಷ್ಟ ಆಗಿತ್ತು. ಈ ಜೋಡಿ ತಮ್ಮ ಸಂಬಂಧವನ್ನು ಈ ವರ್ಷ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗ್ತಾರೆ, ಮದುವೆ ಆಗ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಹೀಗಿರುವಾಗ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎನ್ನಲಾಗಿದೆ.
ʼಶಾರದೆʼ ಧಾರಾವಾಹಿ: ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ Bigg Boss ದಿವ್ಯಾ ಸುರೇಶ್!
ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ!
ಎಷ್ಟೇ ಬಾರಿ ನೀವು ಪ್ರೀತಿ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಈ ಜೋಡಿ "ನಾವು ಸ್ನೇಹಿತರು" ಎಂದು ಹೇಳಿಕೊಂಡು ಯಾಮಾರಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರು ಈಗ ಬ್ರೇಕಪ್ ಬಗ್ಗೆ ಅಥವಾ ಸ್ನೇಹ ನಾಶ ಆಗಿರೋದರ ಬಗ್ಗೆ ಮೌನ ಮುರಿಯಬೇಕಿದೆ. ಧಾರಾವಾಹಿ, ಬಿಗ್ ಬಾಸ್ ಹೊರತುಪಡಿಸಿ ಸಾಕಷ್ಟು ಮ್ಯೂಸಿಕ್ ವಿಡಿಯೋಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದೆ.
ಡಿವೋರ್ಸ್ ಆಗಿ 9 ತಿಂಗಳು, ಮತ್ತೆ ಒಂದಾಗೋ ಚಾನ್ಸ್ ಇದ್ಯಾ? ಉತ್ತರ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಗೌಡ!
ಅಭಿಮಾನಿಗಳ ಪ್ರಶ್ನೆ!
ಈ ರೀತಿ ಅನ್‌ಫಾಲೋ ಮಾಡಿರೋದು ನೋಡಿ ಕೆಲ ಅಭಿಮಾನಿಗಳು, “ನಿಮ್ಮ ಇಗೋವನ್ನು ಪಕ್ಕಕ್ಕೆ ಇಟ್ಟು ಒಂದಾಗಿ, ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಿ. ನಿಮ್ಮ ಸಂಬಂಧದ ಬಗ್ಗೆ ಹಾಕಿದ ಶಾಪ ಎಲ್ಲವೂ ಆಶೀರ್ವಾದವಾಗಲಿ, ನೀವಿಬ್ಬರೂ ಒಂದಾಗಿ. ನೀವು ಯಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡ್ತಿದ್ದೀರಿ?” ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಅನೇಕರು ಈ ಜೋಡಿ ಮತ್ತೆ ಒಂದಾಗಲಿ ಎಂದು ಬಯಸುತ್ತಿದೆ. ಕೆಲವೇ ಕೆಲವರು ಇವರಿಬ್ಬರ ವಿರುದ್ಧವಾಗಿ ಮಾತನಾಡಿದ್ದರು, ಈ ಸಂಬಂಧ ಹಾಳಾಗಲಿ ಎಂದು ಶಪಿಸಿದ್ದರು.