ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ಭರ್ಜರಿ ಸ್ಟೆಪ್​ ಹಾಕಿದ್ದು, ಅದಕ್ಕೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
 


ಹಲವು ಹೆಣ್ಣುಮಕ್ಕಳಿಗೆ ಮಾದರಿ ಎಂದೇ ಬಿಂಬಿತವಾಗಿರೋ ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ   ಈಗ ಡೋಲಾಯಮಯ ಸ್ಥಿತಿಯಲ್ಲಿದ್ದಾಳೆ. ಎಷ್ಟೆಲ್ಲಾ ಸಾಧನೆ ಮಾಡಿದರೂ ಈಗ ಜೋಕರ್​ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದು ತಲುಪಿದ್ದಾಳೆ. ಅದೇ ಇನ್ನೊಂದೆಡೆ, ಆಕೆಯನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್​ ಶತ ಪ್ರಯತ್ನ ಮಾಡುತ್ತಿದ್ದಾನೆ. ಅಮ್ಮ ತನ್ನ ಫೀಸ್​ಗೋಸ್ಕರ ಇಷ್ಟೆಲ್ಲಾ  ಕೆಲಸ ಮಾಡುತ್ತಿದ್ದಾಳೆ ಎಂದು ಅರಿತಿರೋ ಗುಂಡ, ಈಗ ಶೂಸ್​ ಪಾಲಿಷ್​ ಮಾಡಲು ಹೋಗಿ ಅಪ್ಪನ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.  ಮೊದಲೇ ಭಾಗ್ಯಳನ್ನು ಹಂಗಿಸಲು ಏನು ಸಿಗುತ್ತದೆ ಎಂದು ಕಾಯುತ್ತಿರುವ ತಾಂಡವ್​ಗೆ ಈಗ ಇದು ಅಸ್ತ್ರವಾಗಿದೆ. ಒಟ್ಟಿನಲ್ಲಿ ಭಾಗ್ಯಳಿಗೆ ವಿಷಯ ಗೊತ್ತಾಗಿ ಇನ್ನೇನು ಆಗುತ್ತದೆಯೋ ನೋಡಬೇಕಿದೆ.

ಇದರ ನಡುವೆಯೇ ಭಾಗ್ಯ ಕ್ಯಾರೆಕ್ಟರ್​ ಸುಷ್ಮಾ ಕೆ.ರಾವ್​ ಮಾತ್ರ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್ ಆಗಿದ್ದಾರೆ. ಸೀರಿಯಲ್​ ಏನೇ ಇದ್ದರೂ  ಸುಷ್ಮಾ ಕೆ. ರಾವ್​ ಮಾತ್ರ ರಿಯಲ್​ ಲೈಫ್​ನಲ್ಲಿ ಬಿಂದಾಸ್​ ಮಹಿಳೆ.  ಸೀರಿಯಲ್​ ಮಕ್ಕಳ ಜೊತೆ ಸಕತ್​ ಸ್ಟೆಪ್​ ಹಾಕುತ್ತಾರೆ, ತಮಾಷೆ ಮಾಡುತ್ತಾರೆ, ರೀಲ್ಸ್​ ಮಾಡುತ್ತಾರೆ.   ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು  ಸುಷ್ಮಾ ಕೆ. ರಾವ್​ ಮತ್ತು ಅವರು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಹಾಗೂ ಮಗ ಗುಂಡ ಪಾತ್ರಧಾರಿ, ನಿಹಾರ್ ಗೌಡ ಜೊತೆ ಸಕತ್​ ರೀಲ್ಸ್​ ಮಾಡುತ್ತಲೇಇರುತ್ತಾರೆ. ಇದೀಗ ಒಬ್ಬರೇ ಭರ್ಜರಿ ಸೊಂಟ ಬಳುಕಿಸಿದ್ದಾರೆ. 

Latest Videos

ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್​: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!

ಇದಕ್ಕೆ ಸಕತ್​ ಕಮೆಂಟ್ಸ್ ಬಂದಿವೆ. ಕೆಲವರು ನಟಿಯ ಕಾಲೆಳೆದಿದ್ದಾರೆ. ಅಲ್ಲಿ ಜೋಕರ್​ ಪಾತ್ರ  ಮಾಡಿ, ಇಲ್ಲಿ ಹೀಗೆ ಸೊಂಟ ಬಳಕಿಸುತ್ತೀರಾ? ಹೀಗೆನೇ ಸೀರಿಯಲ್​ನಲ್ಲೂ ಮಾಡಿದ್ರೆ ಆರಾಮಾಗಿ ಸಂಪಾದನೆ ಮಾಡ್ಬೋದಿತ್ತು ಎನ್ನುತ್ತಿದ್ದಾರೆ! ಮತ್ತೆ ಕೆಲವರು ಸೊಂಟ ಉಳುಕಿ ಹೋದೀತು ಭಾಗ್ಯಕ್ಕೋ ಎನ್ನುತ್ತಿದ್ದಾರೆ. ಇನ್ನು ಸುಷ್ಮಾ ಕೆ. ರಾವ್‌  ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರುಲ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. 

ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 
 

ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್​

click me!