ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿಗೆ ಬಿಗ್ಬಾಸ್ ನಿವೇದಿತಾ ರೀಲ್ಸ್ ಮಾಡಿದ್ದಾರೆ. ನೆಟ್ಟಿಗರು ಏನಂದ್ರು ನೋಡಿ...
ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ ಹಾಡು ಸಕತ್ ಫೇಮಸ್ ಆಗಿದೆ. ಈಗ ಅದೇ ಹಾಡಿಗೆ ಬಿಗ್ಬಾಸ್ ಗೊಂಬೆ ನಿವೇದಿತಾ ರೀಲ್ಸ್ ಮಾಡಿದ್ದಾರೆ. ಮೊದಲಿಗೆ ಷಾರ್ಟ್ಸ್ ಹಾಕಿ, ಅದಾದ ಬಳಿಕ ಸೀರೆ ತೊಟ್ಟು ಥೇಟ್ ಗೊಂಬೆಯಂತೆಯೇ ಕಾಣಿಸುತ್ತಿದ್ದಾರೆ ನಿವೇದಿತಾ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ನಿವೇದಿತಾ ಅವರಿಗೆ ಪ್ರೀತಿಯ ಜೊತೆ ಕಾಲೆಳೆಯುವವರೂ ಅಷ್ಟೇ ಜನ. ಟ್ರೋಲ್ಗಳಿಗೂ ಲೆಕ್ಕವೇ ಇಲ್ಲ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಈಚೆಗಷ್ಟೇ ರಶ್ಮಿಕಾ ಮಂದಣ್ಣನವರ ಹಾಡಿಗೆ ಸ್ಟೆಪ್ಹಾಕಿದ್ದರು. ಆದರೆ ಸದಾ ನಿವೇದಿತಾ ಬೇರೆ ಭಾಷೆಯ ಹಾಡುಗಳಿಗೆ ರೀಲ್ಸ್ ಮಾಡುವುದಕ್ಕೆ ಈಕೆಯ ಅಭಿಮಾನಿಗಳ ತಕರಾರು ಇದ್ದೇ ಇದೆ. ಇಂಗ್ಲಿಷ್ ಹಾಡುಗಳನ್ನೇ ಹೆಚ್ಚು ಆಯ್ದುಕೊಳ್ಳುವ ನಿವೇದಿತಾ ತಮಿಳಿನ ಹಾಡಿಗೆ ರೀಲ್ಸ್ ಕೂಡ ಮಾಡುತ್ತಾರೆ. ಆದರೆ ಕನ್ನಡ ಹಾಡಿಗೆ ಸ್ಟೆಪ್ ಮಾಡುವುದು ಕಡಿಮೆ.
ಆದರೆ ಇದೀಗ ನಿವೇದಿತಾ ಫ್ಯಾನ್ಸ್ ಸಕತ್ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ, ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ ಹಾಡಿಗೆ ನಿವೇದಿತಾ ರೀಲ್ಸ್ ಮಾಡಿದ್ದಾರೆ. ಅದಕ್ಕೆ ಹಲವರು ಕಾಲೆಳೆಯುತ್ತಲೇ ಪ್ರೀತಿಯನ್ನೂ ತೋರಿದ್ದಾರೆ. ನೀನು ಯಾರ ಮುಖ ಬೇಕಾದ್ರೂ ನೋಡಿಕೊ... ಕೊನೆಗೂ ಕನ್ನಡ ಹಾಡಿಗೆ ರೀಲ್ಸ್ ಮಾಡಿದ್ಯಲ್ಲಾ, ಅದೇ ಸಂತೋಷ ಎನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು ಕೆಲವರು ಪಕ್ಕದಲ್ಲಿ ಗಂಡ ಚಂದನ್ ಶೆಟ್ಟಿ ಇರುವಾಗಿ ಇನ್ಯಾರ ಮುಖ ನೋಡ್ತಿಯಮ್ಮಾ ಎಂದೂ ತಮಾಷೆ ಮಾಡಿದ್ದಾರೆ.
ಏನ್ಮಾಡಿದ್ರೂ ನೀನು ರಶ್ಮಿಕಾ ಆಗಲ್ಲ, ಈಗ್ಲಾದ್ರೂ ರಾಮ ನಾಮ ಜಪಿಸ್ಬಾರ್ದಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್
ನಿವೇದಿತಾ ಅವರ ಈ ರೀಲ್ಸ್ಗೂ ಸಕತ್ ಕಮೆಂಟ್ಗಳ ಸುರಿಮಳೆಯಾಗಿದೆ. ಕೆಲ ದಿನಗಳ ಹಿಂದೆ ನಿವೇದಿತಾ ಅವರು ಹಾಡೊಂದನ್ನು ಹಾಡಿ ಎಲ್ಲರ ಮನ ಗೆದ್ದಿದ್ದರು. ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ ಸಹೋದರನ ಜೊತೆ ಸೇರಿ ಹಾಡಿದ ಹಾಡು ಕೇಳಿ ಫ್ಯಾನ್ಸ್ ಖುಷಿಯಾಗಿದ್ದರು. ಯಾವುದೇ ಡ್ರೆಸ್ ಹಾಕಿದರೂ ಸಕತ್ ಕ್ಯೂಟ್ ಆಗಿ ಕಾಣಿಸೋ ನಿವೇದಿತಾ ಅವರು ಹಾಡು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿತ್ತು. ತಮಿಳಿನ ಹಾಡಿಗೆ ಸಕತ್ ಧ್ವನಿ ನೀಡಿದ್ದಾರೆ ನಿವೇದಿತಾ. ಸಹೋದರ ಮತ್ತು ನಾನು ಸಿಂಗರ್ ಅಲ್ಲ, ಸುಮ್ಮನೇ ಈ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಇವರ ಮಧುರ ಕಂಠಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದಕ್ಕೂ ಮುನ್ನ ನಿವೇದಿತಾ, 1981ರಲ್ಲಿ ತೆರೆ ಕಂಡ ಶಂಕರ್ನಾಗ್ ಅಭಿನಯದ ಗೀತಾ ಚಿತ್ರದ ಜೊತೆಯಲಿ ಜೊತೆಜೊತೆಯಲಿ ಹಾಡಿಗೆ ರೀಲ್ಸ್ ಮಾಡಿದ್ದರು. ಈ ಹಾಡಿನಲ್ಲಿ ಬರುವ ಪ್ರೀತಿ ಎಂದರೇನು ಎಂದು ಈಗ ಅರಿತೆ ನಾ... ಎನ್ನುತ್ತಿದ್ದಂತೆಯೇ ನಿವೇದಿತಾ ಫ್ಯಾನ್ಸ್ ಓಹೊ ಈಗ ಪ್ರೀತಿಯ ಅರ್ಥ ಆಯ್ತಾ? ಮದ್ವೆಯಾಗಿ ಮೂರು ವರ್ಷ ಆದ್ಮೇಲೆ ಈಗ ಗೊತ್ತಾಯ್ತಾ ಎಂದು ಕಾಲೆಳೆದಿದ್ದರು. ಈ ರೀಲ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈಗಲೂ ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿದೆ. ಇದರಲ್ಲಿ ಮಾಮೂಲಿನಮತೆ ನಿವೇದಿತಾ ಮುದ್ದಾಗಿ ಕಾಣಿಸುವ ಕಾರಣ, ಅನೇಕ ಮಂದಿ ಇದೇ ರೀತಿ ಸದಾ ಕಾಣಿಸುತ್ತಿರಿ ಎಂದಿದ್ದರೆ, ಮಿನಿ, ಮಿಡಿ, ಷಾರ್ಟ್ಸ್ ಎಲ್ಲಾ ಬಿಟ್ಟು ಹೀಗೆ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವರು ಹೇಳಿದ್ದಾರೆ.
'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್: ಕಾರ್ತಿಕ್ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ