ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸುವರ್ಣ ಸ್ಪೆಷಲ್ ಸಂಡೇ' ಮನರಂಜನೆ ಮಹಾಪೂರ!

Published : Feb 01, 2024, 03:44 PM ISTUpdated : Feb 01, 2024, 04:23 PM IST
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸುವರ್ಣ ಸ್ಪೆಷಲ್ ಸಂಡೇ' ಮನರಂಜನೆ ಮಹಾಪೂರ!

ಸಾರಾಂಶ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೊಂಬಾಟ್  ಭೋಜನ' ಶೋ ಬರೋಬ್ಬರಿ 1000 ಸಂಚಿಕೆಗಳನ್ನು ದಾಟಿಯೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆದಿದೆ. ಸಿಹಿ ಕಹಿ ಚಂದ್ರು ನೇತೃತ್ವದ ಬೊಂಬಾಟ್ ಭೋಜನ ಶೋಗೆ ಕಿರುತೆರೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 

ಈ ಭಾನುವಾರ, ಅಂದರೆ 04 ಫೆಬ್ರವರಿ 2024ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮನರಂಜನೆಗಳ ಮಹಾಪೂರ ಸಿಗಲಿದೆ. ಸುವರ್ಣ ಸ್ಪೆಷಲ್ ಭಾನುವಾರದಲ್ಲಿ ಮಧ್ಯಾಹ್ನ 12.00 ಗಂಟೆಗೆ ಬೊಂಬಾಟ್ ಭೋಜನ, ಸಂಜೆ 5.00 ಕ್ಕೆ 'ಸುವರ್ಣ ಸೂಪರ್ ಸ್ಟಾರ್ 2', 6.30ಕ್ಕೆ 'ಕಥೆಯೊಂದು ಶುರುವಾಗಿದೆ', ರಾತ್ರಿ 7.00ಕ್ಕೆ 'ಸುವರ್ಣ JACKPOT', ರಾತ್ರಿ 8.00 ರಿಂದ 9.00 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', ರಾತ್ರಿ 9.00 ರಿಂದ 10.00 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಮಹಾಸಂಚಿಕೆಗಳು ಪ್ರಸಾರವಾಗಲಿವೆ. 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೊಂಬಾಟ್ ಭೋಜನ' ಶೋ ಬರೋಬ್ಬರಿ 1000 ಸಂಚಿಕೆಗಳನ್ನು ದಾಟಿಯೂ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಮುನ್ನಡೆದಿದೆ. ಸಿಹಿ ಕಹಿ ಚಂದ್ರು ನೇತೃತ್ವದ ಬೊಂಬಾಟ್ ಭೋಜನ ಶೋಗೆ ಕಿರುತೆರೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು, ಸದ್ಯ ಬೊಂಬಾಟ್ ಭೋಜನ ಭಾರೀ ಜನಪ್ರಿಯತೆ ಪಡೆದಿದೆ. ಈ ಶೋನಲ್ಲಿ ಹಲವು ಜನಪ್ರಿಯ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳು ಭಾಗವಹಿಸಿ ಸಿಹಿ ಕಹಿ ಚಂದ್ರು ಅವರೊಂದಿಗೆ ಹರಟೆ, ಚರ್ಚೆ ನಡೆಸುತ್ತಾರೆ.

ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಹಲವು ಧಾರಾವಾಹಿಗಳು ಜನಪ್ರಿಯತೆ ಗಳಿಸಿದ್ದು ಉತ್ತಮ ಟಿಆರ್‌ಪಿ ಪಡೆದುಕೊಂಡಿವೆ. ಮಾಳಿಕಪುರಂ, ಆಸೆ, ಹೊಂಗನಸು, ನಾಗಪಂಚಮಿ, ಅನುಪಮ, ನೀನಾದೆನಾ, ಅವನು ಮತ್ತೆ ಶ್ರಾವಣಿ, ಲಚ್ಚಿ, ಗೌರಿಶಂಕರ,  ಕಥೆಯೊಂದು ಶುರುವಾಗಿದೆ, ಅರಗಿಣಿ-2, ಜತೆಗೆ ಸುವರ್ಣ ಸಂಕಲ್ಪ ಹೀಗೆ ಹಲವು ಧಾರಾವಾಹಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಿನವಿಡೀ ಪ್ರಸಾರ ಕಾಣುತ್ತವೆ. ಹಲವು ಸೀರಿಯಲ್‌ಗಳು ಭಾರೀ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿವೆ.  

ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್‌ ಭಟ್‌..!?

ಈಗ ಭಾನುವಾರ ಭರಪೂರ ಮನರಂಜನೆ ನೀಡುವ ಉದ್ದೇಶಕ್ಕೆ ಬದ್ಧವಾಗಿರುವ ಸುವರ್ಣ ವಾಹಿನಿ, ಈ ಭಾನುವಾರ 'ಸುವರ್ಣ ಸ್ಪೆಷಲ್ ಭಾನುವಾರ' ಪ್ರಸಾರ ಹಮ್ಮಿಕೊಂಡಿದೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುವ ಸುವರ್ಣ ವಾಹಿನಿಯ ಈ ಗುರಿ ಬರುವ ಭಾನುವಾರ ಈಡೇರಲಿದೆ. ಸುವರ್ಣ ವಾಹಿನಿಯ ಅಭಿಮಾನಿಗಳು ಈ ಸುದ್ದಿ ಕೇಳಿ ಸಖತ್ ಥ್ರಿಲ್ ಆಗಿದ್ದು ಭಾನುವಾರ ಬರುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗಿದೆ.  

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?