
ಸೀರಿಯಲ್ಗಳಲ್ಲಿ ನಟಿಸುವ ಆಸೆಯನ್ನು ಹೊತ್ತವರು ಲಕ್ಷಾಂತರ ಮಂದಿ ಇದ್ದಾರೆ. ಕೆಲವು ವಾಹಿನಿಗಳಲ್ಲಿ ಆಡಿಷನ್ಗೆ ಕರೆದಾಗ ಬರುವ ಯುವಕ-ಯುವತಿಯರ ಸಂಖ್ಯೆ ನೋಡಿದರೆ ಎಷ್ಟು ಮಂದಿ ಈ ಆಸೆ ಹೊತ್ತುಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಆದರೆ ಎಲ್ಲರಿಗೂ ಈ ಅದೃಷ್ಟ ಸಿಗುವುದಿಲ್ಲ. ಸಿನಿಮಾ ಆಗಲೀ, ಕಿರುತೆರೆ ಆಗಲೀ, ಅಲ್ಲಿಗೆ ಹೋಗುವ ಕನಸು ಹೊತ್ತವರ ಪೈಕಿ ಅದೃಷ್ಟ ಇದ್ದವರಿಗೆ ಮಾತ್ರ ಅವಕಾಶ ಸಿಗುವುದು. ಕೆಲವೊಮ್ಮೆ ಸ್ಟಾರ್ ಕಿಡ್ ಆಗಿದ್ದರೂ ಅವಕಾಶ ಸಿಗದ ಘಟನೆಗಳೂ ಸಾಕಷ್ಟಿವೆ. ಇನ್ನು ಗಾಡ್ಫಾದರ್ಗಳು ಬೇಕು ಎನ್ನುವುದು ನಿಜವಾದರೂ, ಇನ್ಫ್ಲುಯೆನ್ಸ್ ಮಾಡಿ ಹೋದವರು ಒಂದೆರಡು ಸೀರಿಯಲ್ ಅಥವಾ ಸಿನಿಮಾಗಳಲ್ಲಿ ನಟಿಸಿ ಕೊನೆಗೆ ಕೆಲಸ ಕಳೆದುಕೊಳ್ಳುವವರೂ ಇದ್ದಾರೆ. ಮತ್ತೆ ಹಲವರಲ್ಲಿ ತುಂಬಾ ಟ್ಯಾಲೆಂಟ್ ಇದ್ದರೂ ಅವರಿಗೆ ಕಿರುತೆರೆಗೆ ಹೋಗುವ ದಾರಿ ಗೊತ್ತಿರುವುದಿಲ್ಲ.
ಮಹಾಕುಂಭದ ಕಮಾಲ್: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು- ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!
ಈ ಬಗ್ಗೆ ಮಾತನಾಡಿದ್ದಾರೆ ನಟಿ ಮೇಘನಾ ಶಂಕರಪ್ಪ. ಮೇಘನಾ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಸೀತಾರಾಮ ಸೀರಿಯಲ್ ಪ್ರಿಯಾ ಇವರು. ಈಚೆಗಷ್ಟೇ ಮದುವೆಯಾಗಿರುವ ನಟಿ ಮೇಘನಾ, ಮದುವೆ, ಹನಿಮೂನ್ ಎಲ್ಲಾ ಮುಗಿಸಿ ಮತ್ತೆ ಶೂಟಿಂಗ್ಗೆ ಬಂದಿದ್ದಾರೆ. ಇದೀಗ ಅವರು, ರೆಡ್ಎಫ್ಎಂ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡುತ್ತಾ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟನೆಯ ಬಗ್ಗೆ ತುಂಬಾ ಮಂದಿ ಕನಸು ಕಂಡಿರುತ್ತಾರೆ ನಿಜ. ಆದರೆ, ಕಿರುತೆರೆಗೆ ಪ್ರವೇಶಿಸುವ ಮೊದಲು ನಟನೆಯನ್ನು ಕಲಿತುಕೊಂಡು ಬನ್ನಿ, ಅಷ್ಟಕ್ಕೂ ನಟನೆ ಎನ್ನುವುದು ಒಳಗಿನಿಂದ ಬರಬೇಕು, ನಿಮಗೆ ಯಾರೂ ತರಬೇತಿ ಕೊಡುವುದು ಕಷ್ಟ. ಕ್ಯಾಮೆರಾ ಹೇಗೆ ಫೇಸ್ ಮಾಡಬೇಕು ಎನ್ನುವ ಟ್ರೇನಿಂಗ್ ಕೊಡಬಹುದು. ಆದರೆ ಬೇಸಿಕ್ ನಟನೆಯೇ ಗೊತ್ತಿಲ್ಲದಿದ್ದರೆ ಕಲಿಸುವುದು ತುಂಬಾ ಕಷ್ಟವಾಗುತ್ತದೆ, ಅದು ಒಳಗಿನಿಂದ ಬರುವ ಫೀಲ್ ಆಗಿರಬೇಕು ಎಂದಿದ್ದಾರೆಕಿರುತೆರೆಗೆ ಪ್ರವೇಶ ಪಡೆಯುವುದು ಕಷ್ಟವಲ್ಲವಾದರೂ ಸುಲಭವಲ್ಲ. ಹೇಗೆ ಎಂಟ್ರಿ ಕೊಡಬೇಕು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ. ಆದರೆ ಈಗ ಹಿಂದಿನ ಹಾಗಲ್ಲ. ವಾಹಿನಿಗಳೇ ಇಲ್ಲವೇ ಪ್ರೊಡಕ್ಷನ್ ಹೌಸ್ಗಳವರೇ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡುತ್ತಾರೆ. ಇದಾಗಲೇ ಕೆಲವು ವಾಹಿನಿಗಳು ಈ ರೀತಿ ಜಾಹೀರಾತು ನೀಡಿವೆ. ಆಡಿಷನ್ಗೆ ಕರೆಯುತ್ತಾರೆ. ಆಗ ಬಂದು ಆಡಿಷನ್ ಮಾಡಿದರೆ ಅರ್ಹರು ಕೆಲಸ ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.
ಇದೇ ವೇಳೆ ನಟಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಪ್ರೊಡಕ್ಷನ್ ಹೌಸ್ಗಳು ಜಾಹೀರಾತು ಕೊಟ್ಟಾಗ ಮೈಯೆಲ್ಲಾ ಕಣ್ಣಾಗಿರಿ. ಎಷ್ಟೋ ಮಂದಿ ಮೋಸ ಮಾಡುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳು ಹಿಂದೆ ಮುಂದೆ ಯೋಚನೆ ಮಾಡದೇ ಅಲ್ಲಿ ಹೋಗಬೇಡಿ. ಸರಿಯಾದ ಜಾಹೀರಾತು ಹೌದೋ ಅಲ್ಲವೋ ನೋಡಿಕೊಳ್ಳಿ ಎಂದಿದ್ದಾರೆ. ವಾಹಿನಿಗಳಾಗಲೀ, ನಿಜವಾದ ಪ್ರೊಡಕ್ಷನ್ ಹೌಸ್ಗಳಾಗಲೀ ಆಡಿಷನ್ಗೆ ಕರೆದಾಗ ದುಡ್ಡು ಕೇಳುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಯಾರಾದರೂ ನಟಿ ಮಾಡ್ತೇನೆ, ಇಷ್ಟು ದುಡ್ಡು ಕೊಡಿ ಎಂದು ಯಾವುದಾದರೂ ವಾಹಿನಿ ಅಥವಾ ಪ್ರೊಡಕ್ಷನ್ ಹೌಸ್ ಹೆಸರಿನಲ್ಲಿ ಜಾಹೀರಾತು ಕೊಟ್ಟರೆ ಅದನ್ನು ನಂಬಬೇಡಿ. ಅದರ ಸುಳಿಯಲ್ಲಿ ಸಿಲುಕಿ ಮೋಸ ಹೋಗಬೇಡಿ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ ಮೇಘನಾ.
'ಯಜಮಾನ' ಸೀರಿಯಲ್ ಮೊದಲರಾತ್ರಿ ಶೂಟಿಂಗ್ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.