
ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬುರ್ಲಿ ಸೀರಿಯಲ್ನಿಂದ ಹೊರಕ್ಕೆ ಹೋಗುವುದಾಗಿ ಹೇಳಿದ ಬಳಿಕ, ಆಕೆಯ ಪಾತ್ರವನ್ನೇ ಸಾಯಿಸಿ, ಕೊನೆಗೆ ಸ್ನೇಹಾ ಎನ್ನುವ ಇನ್ನೊಂದು ಪಾತ್ರ ಸೃಷ್ಟಿಸಲಾಗಿತ್ತು. ಒಳ್ಳೆಯ ರೀತಿಯಲ್ಲಿ ಸಾಗುತ್ತಿದ್ದ ಸೀರಿಯಲ್ನ ಕಥೆಯನ್ನೇ ಬದಲಿಸಲಾಯಿತು. ಸ್ನೇಹಾ ಮತ್ತು ಕಂಠಿಯ ನಡುವಿನ ವೈಮನಸ್ಸು, ನಂತರ ಅದು ಪ್ರೀತಿಗೆ ಬದಲಾಗಿದ್ದು, ಪುಟ್ಟಕ್ಕನ ಮಗಳಾದ ಸ್ನೇಹಾ ಡಿಸಿಯಾಗಿದ್ದು ಎಲ್ಲವನ್ನೂ ತಮ್ಮ ಬದುಕಿನ ಭಾಗವೆಂದೇ ಅಂದುಕೊಂಡು ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಸ್ನೇಹಾಳನ್ನು ಸಾಯಿಸಿದ್ದು ಅಸಂಬದ್ಧ ಎನ್ನಿಸಿಬಿಟ್ಟಿತು. ಆಕೆಯಿಂದ ಇನ್ನೇನೋ ನಿರೀಕ್ಷೆ ಮಾಡಿ, ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವಂತೆ ಮಾಡಬೇಕು ಎಂದುಕೊಂಡಿದ್ದ ವೀಕ್ಷಕರಿಗೆ ನಿರಾಸೆಯಾಯಿತು. ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು, ಸೀರಿಯಲ್ ಮಧ್ಯೆ ಬಿಟ್ಟ ಕಾರಣದಿಂದ ಆಕೆಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ಸಾಯಿಸಿ, ಕಥೆಯನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗಬೇಕಾಯಿತು ಎಂದು ಇದಾಗಲೇ ನಿರ್ದೇಶಕ ಆರೂರು ಜಗದೀಶ್ ಅವರು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೂ ಈ ಸೀರಿಯಲ್ ಈಗ ಕಳಾಹೀನವಾಗುತ್ತಾ ಸಾಗಿದೆ ಎನ್ನುವುದು ಬಹುತೇಕ ವೀಕ್ಷಕರ ಅಭಿಮತ.
ಅದಾದ ಬಳಿಕ ಸ್ನೇಹಾ ಎಂಬಾಕೆಗೆ ಹೃದಯವನ್ನು ಅಳವಡಿಸಲಾಯಿತು. ಆಕೆಯನ್ನು ಕಂಡರೆ ಕಂಠಿ ಸಿಡಿಮಿಡಿ ಎನ್ನುತ್ತಲೇ ಇದ್ದಾನೆ. ತನ್ನ ಪತ್ನಿ ಸ್ನೇಹಾಳ ಹೃದಯವನ್ನು ಅಳವಡಿಸಿದ್ದು, ಇದೇ ಸ್ನೇಹಾಗೆ ಎನ್ನುವುದು ಆತನಿಗೆ ತಿಳಿದಿರಲಿಲ್ಲ. ಸ್ನೇಹಾ ಪಾತ್ರಕ್ಕೆ ಹೊಸಬಳನ್ನು ಹುಡುಕುವ ಸಲುವಾಗಿ ಜಾಹೀರಾತು ನೀಡಿ, ಕೊನೆಗೆ, ಹೊಸಬಳ ಪರಿಚಯ ಮಾಡಿಸಲಾಯಿತು. ಅಪೂರ್ವ ನಾಗರಾಜ್ ಅವರನ್ನು ಪರಿಚಯಿಸಲಾಯಿತು. ಪುಟ್ಟಕ್ಕನ ಮಗಳು ಸ್ನೇಹಾಳ ಪಾತ್ರಕ್ಕೆ ಈಕೆ ರೀಪ್ಲೇಸ್ ಅಲ್ಲದಿದ್ದರೂ, ಇದೇ ಬೇರೆ ಪಾತ್ರವಾಗಿದ್ದರೂ ವೀಕ್ಷಕರು ಯಾಕೋ ಈ ಸ್ನೇಹಾಳನ್ನು ಅಷ್ಟು ಇಷ್ಟಪಡಲಿಲ್ಲ. ಕಂಠಿಗೆ ಈ ಸ್ನೇಹಾ ಸೂಟ್ ಆಗಲ್ಲ ಎಂದೇ ಹೇಳುತ್ತಾ ಬಂದರು. ಆದರೂ ಹೊಸ ಪಾತ್ರಕ್ಕೆ ಒಗ್ಗಿಕೊಳ್ಳುವಷ್ಟರಲ್ಲಿಯೇ ಈಗ ಈ ಸ್ನೇಹಾ ಪಾತ್ರಧಾರಿಯನ್ನು ಮತ್ತೆ ಬದಲಾಯಿಸಲಾಗಿದೆ.
ಧಾರಾವಾಹಿಗಳಲ್ಲಿ ನಟಿಸೋ ಆಸೆ ಇದ್ರೆ ಎಂಟ್ರಿ ಆಗೋದು ಹೇಗೆ? 'ಸೀತಾರಾಮ' ಪ್ರಿಯಾ ಮಾತು ಕೇಳಿ...
ಹೃದಯ ಜೋಡಿಸಿದ್ದು ಒಬ್ಬಳು ಸ್ನೇಹಾಗೆ ಆದರೆ, ಈಗ ಹೃದಯ ಜೋಡಿಸಿದವರು ಅವಳೇ ಎಂದು ಕಂಠಿಗೆ ತಿಳಿದಾಗಿ ಬೇರೆ ಸ್ನೇಹಾ ಆಗಿಬಿಟ್ಟಿದ್ದಾಳೆ! ರಾಮಾಚಾರಿ ಸೀರಿಯಲ್ನಲ್ಲಿ ರುಕ್ಮಿಣಿ ಪಾತ್ರ ಮಾಡಿ, ಸೀರಿಯಲ್ ಅನ್ನು ಮಧ್ಯೆಯೇ ಬಿಟ್ಟಿದ್ದ ನಟಿ ದೇವಿಕಾ ಭಟ್ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿಕಾ ಭಟ್ ಬೆಂಗಳೂರಿನವರು. ಓದಿದ್ದು ಎಂಬಿಎ. ಮೊದಲಿನಿಂದಲೂ ಇವರಿಗೆ ಕಲೆ ಬಗ್ಗೆ ಆಸಕ್ತಿ. ಇವರು ಕಥಕ್ ಡ್ಯಾನ್ಸರ್ ಕೂಡ ಹೌದು.
ಇನ್ನು ಪುಟ್ಟಕ್ಕನ ಮಕ್ಕಳು ಕಥೆಗೆ ಬರುವುದಾದರೆ, ಈಗ ಕಂಠಿಗೆ ತನ್ನ ಪತ್ನಿ ಸ್ನೇಹಾಳ ಹೃದಯ ಯಾರಿಗೆ ಅಳವಡಿಸಲಾಗಿದೆ ಎನ್ನುವುದು ತಿಳಿದಿದೆ. ಅಲ್ಲಿಯವರೆಗೂ ತನ್ನ ಮನೆಯಲ್ಲಿಯೇ ಇದ್ದರೂ ಆತನಿಗೆ ಈ ವಿಷಯ ತಿಳಿದಿರಲಿಲ್ಲ. ಈಗ ತಿಳಿಯುತ್ತಲೇ ಆತ ಅಚ್ಚರಿಪಟ್ಟುಕೊಂಡಿದ್ದಾನೆ. ಅಷ್ಟರಲ್ಲಿ ವಿಷಯ ತಿಳಿದು ಮನೆಗೆ ಬಂದಿದ್ದಾನೆ. ಅಷ್ಟರಲ್ಲಿಯೇ ಸ್ನೇಹಾಳ ಜಾಗದಲ್ಲಿ ರಾಮಚಾರಿ ರುಕ್ಕು ಕಾಣಿಸಿಕೊಂಡಿದ್ದಾಳೆ. ಅರ್ಥಾತ್ ಸ್ನೇಹಾ ಪಾತ್ರವನ್ನು ಈಗ ದೇವಿಕಾ ಮಾಡುತ್ತಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಮೂರು ಮೂರು ಸ್ನೇಹಾಳನ್ನು ಕಟ್ಟಿಕೊಳ್ಳುವ ಕಂಠಿ ಗತಿ ಏನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಪದೇ ಪದೇ ಪಾತ್ರಗಳ ಬದಲಾವಣೆ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
'ಯಜಮಾನ' ಸೀರಿಯಲ್ ಮೊದಲರಾತ್ರಿ ಶೂಟಿಂಗ್ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.