ಬಿಗ್ ಬಾಸ್ ಶುರುವಾದಾಗಿನಿಂದಲೂ ನಟಿ ಹಾಗೂ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಮತ್ತು ತನಿಷಾ ಅವರಿಗೆ ಬೆಸ್ಟ್ ಫ್ರೆಂಡ್ ಎಂದೇ ಕಂಡುಬಂದಿದ್ದರು. ಆದರೆ, ತೀರಾ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ನೊಂದಿರುವ ಸಂಗೀತಾ, ಕಾರ್ತಿಕ್ ಮತ್ತು ತನಿಷಾ ಈ ಇಬ್ಬರಿಂದಲೂ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಗೇಮ್ ಶೋದಲ್ಲಿ ಹೊಸದೊಂದು ಟಾಸ್ಕ್ ನೀಡಲಾಗಿದೆ. 'ನಾಮಿನೇಷನ್ ಮಡಿಕೆ' ಹೆಸರಿನ ಈ ಆಟದಲ್ಲಿ ಪ್ರತಿಯೊಬ್ಬರೂ ತಾವು ಬಯಸುವ ಫೇಕ್ ಆಟಗಾರರ ಹೆಸರನ್ನು ಮಡಿಕೆ ಮೇಲೆ ಬರೆದು ಅದನ್ನು ಸ್ವಿಮ್ಮಿಂಗ್ ಫೂಲ್ ಒಳಕ್ಕೆ ಎಸೆಯಬೇಕು. ಅದರಂತೆ, ತುಕಾಲಿ ಸಂತು 'ನಮ್ರತಾ' ಹೆಸರನ್ನು ಬರೆದು ನೀರಿನ ಕೊಳಕ್ಕೆ ಎಸೆದಿದ್ದಾರೆ. ಅಚ್ಚರಿ ಎಂಬಂತೆ ನಮ್ರತಾ ಹಾಗೂ ಸಂಗೀತಾ ಇಬ್ಬರೂ ಮಡಿಕೆ ಮೇಲೆ ತನಿಷಾ ಹೆಸರನ್ನು ಬರೆದು ಕೊಳಕ್ಕೆ ಎಸೆದಿದ್ದಾರೆ. ಅಷ್ಟೇ ಅಲ್ಲ, ಎಸೆಯುವ ಮುಂಚೆ ನಮ್ರತಾ 'ನನಗೆ ತನಿಷಾ ತುಂಬಾ ಫೇಕ್ ಎನಿಸುತ್ತಾಳೆ' ಎಂದು ಹೇಳಿದ್ದಾರೆ.
ಇನ್ನು ಸಂಗೀತಾ ಶೃಂಗೇರಿ 'ತನಿಷಾ ವೀಕೆಂಡ್‌ನಲ್ಲಿ ಇರುವ ರೀತಿಗೂ ಬೇರೆ ದಿನಗಳಲ್ಲಿ ಇರುವ ರೀತಿಗೂ ತುಂಬಾ ವ್ಯತ್ಯಾಸವಿದೆ. ನನಗೆ ಇದು ಮುಖವಾಡ, ಫೇಕ್ ಎನಿಸುತ್ತಿದೆ' ಎಂದು ಹೇಳಿದ್ದಾರೆ. ಅದಕ್ಕೆ ಕೌಂಟರ್ ಕೊಟ್ಟಿರುವ ತನಿಷಾ 'ನನಗೂ ಅಷ್ಟೇ, ನೀವಿಬ್ಬರೂ ಫೇಕ್ ಎನಿಸುತ್ತದೆ' ಎಂದು ಹೇಳಿ ನಮ್ರತಾ ಹೆಸರನ್ನು ಮಾತ್ರ ಬರೆದು ಮಡಿಕೆಯನ್ನು ನೀರಿನ ಕೊಳಕ್ಕೆ ಎಸೆದಿದ್ದಾರೆ. ಅಲ್ಲಿಗೆ ಸಂಗೀತಾ ಸದ್ಯಕ್ಕೆ ವಿನಯ್ ಮತ್ತು ನಮ್ರತಾ ಜತೆ ಗುರುತಿಸಿಕೊಂಡು ಕಾರ್ತಿಕ್ ಟೀಮ್‌ನಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ ಎನ್ನಬಹುದು.
ಮತ್ತೆ 'ನಾನು ಫೇಕ್ ಅಲ್ಲ'ವೆಂದ ಭಾಗ್ಯಶ್ರೀ ರಾವ್, ಹೊರಬಂದಾಯ್ತಲ್ಲ ಬಿಡಿ ಮೇಡಮ್ ಎಂದು ಕಾಲೆಳೆದ ನೆಟ್ಟಿಗರು!
ಬಿಗ್ ಬಾಸ್ ಶುರುವಾದಾಗಿನಿಂದಲೂ ನಟಿ ಹಾಗೂ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಮತ್ತು ತನಿಷಾ ಅವರಿಗೆ ಬೆಸ್ಟ್ ಫ್ರೆಂಡ್ ಎಂದೇ ಕಂಡುಬಂದಿದ್ದರು. ಆದರೆ, ತೀರಾ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ನೊಂದಿರುವ ಸಂಗೀತಾ, ಕಾರ್ತಿಕ್ ಮತ್ತು ತನಿಷಾ ಈ ಇಬ್ಬರಿಂದಲೂ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ತನಿಷಾ-ಕಾರ್ತಿಕ್ ತನ್ನನ್ನು ಸೇವ್ ಮಾಡಿಲ್ಲ ಎಂದು ಕೋಪಗೊಂಡಿರುವ ಸಂಗೀತಾ, ಇತ್ತೀಚೆಗೆ ಹೆಚ್ಚುಕಡಿಮೆ ವಿನಯ್ ಹಾಗೂ ನಮ್ರತಾ ಪರವಾಗಿಯೇ ಮಾತನಾಡುತ್ತಿದ್ದು, ಅವರನ್ನೇ ಸಪೋರ್ಟ್ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ.
ನಟ ಮೈ ತೋರಿಸಿದರೆ ನಿಮಗೆ ಓಕೆ, ನಟಿ ಮೈ ಕಂಡರೆ ಮಾತ್ರ 'ದೇಹ ಪ್ರದರ್ಶನ'ವೇ; ತನಿಷಾ ಮಾತು ಭಾರೀ ವೈರಲ್!
ಒಟ್ಟನಲ್ಲಿ, ಬಿಗ್ ಬಾಸ್ ಮನೆಯ ವಾತಾವರಣ ಬರಬರುತ್ತಾ ಹೆಚ್ಚು ಹಾಟ್ ಎನಿಸುತ್ತಿದೆ. ಮೊದಲಿದ್ದ ಸಂಬಂಧಗಳು ಮಾಯವಾಗಿ ಆ ಜಾಗದಲ್ಲಿ ಹೊಸ ಸಂಬಂಧಗಳು ಏರ್ಪಡುತ್ತಿವೆಯಾ ಎಂಬ ಸಂಶಯ ಮೂಡತೊಡಗಿದೆ. ಗೆಲುವಿಗಾಗಿ ಹೋರಾಡುತ್ತರಿವ ಅಲ್ಲಿನ ಯೋಧರ ಮಧ್ಯೆ ಹೀಗೇ ಎಂದು ಗೆರೆ ಎಳೆದಂತೆ ಹೇಳುವುದು ಕಷ್ಟವೇ. ಆದರೆ, ಇಲ್ಲಿ ಎಲ್ಲವೂ ಸಾಧ್ಯ ಎಂದು ಮಾತ್ರ ಹೇಳಬಹುದು. ಅಂದಹಾಗೆ, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರದ ಎಪಿಸೋಡ್‌ಗಳನ್ನು ರಾತ್ರಿ 9.00ಕ್ಕೇ ವೀಕ್ಷಿಸಬಹುದು.