ಸೀರೆ, ಮಿನಿ, ಷಾರ್ಟ್ಸ್​, ಚೆಡ್ಡಿ ಏನ್​ ಬೇಕ್​ ನಿಮ್ಗೆ? ಟ್ರೋಲಿಗರಿಗೆ ವಿಡಿಯೋ ಮೂಲಕ ಉತ್ರ ಕೊಟ್ಟ ನಿವೇದಿತಾ!

Published : Nov 20, 2023, 03:18 PM IST
ಸೀರೆ, ಮಿನಿ, ಷಾರ್ಟ್ಸ್​, ಚೆಡ್ಡಿ ಏನ್​ ಬೇಕ್​ ನಿಮ್ಗೆ? ಟ್ರೋಲಿಗರಿಗೆ ವಿಡಿಯೋ ಮೂಲಕ ಉತ್ರ ಕೊಟ್ಟ ನಿವೇದಿತಾ!

ಸಾರಾಂಶ

ಒಂದೇ ರೀಲ್ಸ್​ನಲ್ಲಿ ವಿವಿಧ ಡ್ರೆಸ್​ಗಳಲ್ಲಿ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮಿಂಚಿದ್ದಾರೆ. ಫ್ಯಾನ್ಸ್​ ಏನಂದ್ರು?  

  ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ, ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮೆ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಹೆಚ್ಚಾಗಿ ಚಿಕ್ಕ ಚಿಕ್ಕ ಬಟ್ಟೆ ತೊಟ್ಟು ಇವರು ಹಾಡಿಗೆ ಅದರಲ್ಲಿಯೂ ಇಂಗ್ಲಿಷ್​ ಹಾಡಿಗೆ ರೀಲ್ಸ್​ ಮಾಡುವುದೇ ಹೆಚ್ಚು. ಅದಕ್ಕಾಗಿಯೇ ಟ್ರೋಲ್​ ಆಗುವುದು ಸಾಮಾನ್ಯ. 25 ವರ್ಷದ ಬೆಡಗಿ,  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Vide​o), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ. ಹೀಗೆ ಕಾಯುವವರೇ ಸಕತ್​ ಟ್ರೋಲ್​ ಕೂಡ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಸುಂದರವಾಗಿ ಡ್ರೆಸ್​ ಮಾಡಿಕೊಂಡು ಅದಕ್ಕೆ ರೀಲ್ಸ್​ ಮಾಡಿದರೆ ತುಂಬಾ ಮಂದಿ ಮೆಚ್ಚಿಕೊಳ್ಳುವುದೂ ಇದೆ.

ಸೀರೆ ಉಟ್ರೂ ಶೋಕಿ ಬಿಟ್ಟಿಲ್ಲ, ನೀನೊಬ್ಳು ಹೆಣ್ಣಾ ಅಂತ ನಿವೇದಿತಾ ವಿರುದ್ಧ ಫ್ಯಾನ್ಸ್​ ತಿರುಗಿ ಬೀಳೋದಾ?

  ಅಂದಹಾಗೆ ನಿವೇದಿತಾ ಷಾರ್ಟ್ಸ್​ನಲ್ಲೇ ರೀಲ್ಸ್​ ಮಾಡುವುದು ಹೆಚ್ಚು. ಚಂದನ್​ ಶೆಟ್ಟಿ ಜೊತೆ ಮದ್ವೆಯಾಗಿ ಮೂರು ವರ್ಷವಾದ್ರೂ ಇನ್ನೂ ಚಿಕ್ಕ ಹುಡುಗಿ ರೀತಿಯಲ್ಲಿ ವರ್ತಿಸುವುದನ್ನು ಬಿಡಿ ಎಂದು ಹಲವರು ನಟಿಯ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ. ಇತ್ತೀಚಿಗೆ ಬಲೂನ್​ ಹಿಡಿದು ಕ್ಯೂಟ್​ ವಿಡಿಯೋ ಶೇರ್​ ಮಾಡಿದಾಗಲೂ ಮೊದಲು ಮಕ್ಳು ಮಾಡಿಕೋ, ಸರಿಯಾಗತ್ತೆ ಎಂದಿದ್ರು. ಇನ್ನು ಸೀರೆ ಉಟ್ಟರೆ ಬಿಡುತ್ತಾರೆಯೆ? ಅದಕ್ಕೂ ಟ್ರೋಲ್​ ಮಾಡುತ್ತಾರೆ. ಯಾವಾಗಲೂ ಮಿನಿ, ಚೆಡ್ಡಿ, ಷಾರ್ಟ್ಸ್ ಹಾಕಿಕೊಂಡು ರೀಲ್ಸ್​ ಮಾಡುತ್ತಿದ್ದ ನಟಿ ಈಗ ಹಸಿರು ಸೀರೆಯಲ್ಲಿ ಕಂಗೊಸಿದ್ದರು.  ಇಷ್ಟಾದರೂ ಫ್ಯಾನ್ಸ್​ ಗರಂ ಆಗಿದ್ದರು, ಇದಕ್ಕೆ ಕಾರಣ ಅವರು ಮಂಗಳಸೂತ್ರ ಹಾಕಲಿಲ್ಲ ಎಂದು. ಸೀರೆ ಉಟ್ರೂ ಶೋಕಿ ಬಿಟ್ಟಿಲ್ಲ, ನೀನೊಬ್ಳು ಹೆಣ್ಣಾ ಅಂತ ನಿವೇದಿತಾ ವಿರುದ್ಧ ಫ್ಯಾನ್ಸ್​ ತಿರುಗಿ ಬಿದ್ದಿದ್ದರು.

ಅದ್ಯಾವುಕ್ಕೂ ಕ್ಯಾರೇ ಅನ್ನದ ನಿವೇದಿತಾ ಈಗ ಒಂದೇ ರೀಲ್ಸ್​ನಲ್ಲಿ ಸೀರೆ, ಮಿನಿ, ಮಿಡಿ, ಚೆಡ್ಡಿ ಎಲ್ಲವನ್ನೂ ಧರಿಸಿ ವಿಡಿಯೋ ಶೂಟ್​ ಮಾಡಿಸಿದ್ದಾರೆ. ತಾವು ಏನು ಹಾಕಿದರೂ ಕಮೆಂಟ್​ ಮಾಡುವವರಿಗೆ ಉತ್ತರವಾಗಿ ಒಂದೇ ರೀಲ್ಸ್​ನಲ್ಲಿ ಎಲ್ಲವನ್ನೂ ಹಾಕಿ ತೋರಿಸಿ, ಏನ್​ ಬೇಕಾದ್ರೂ ಮಾಡ್ಕೊಳ್ಳಿ ಅಂದಿದ್ದಾರೆ. ಇದಕ್ಕೆ ಹಲವರು ಹಾರ್ಟ್​ ಇಮೋಜಿ ಹಾಕಿದ್ದಾರೆ. ಎಲ್ಲದರಲ್ಲಿಯೂ ನೀವು ಸೂಪರ್​ ಆಗಿ ಕಾಣಿಸುವಿರಿ ಎಂದಿದ್ದಾರೆ. ಇನ್ನು ಕೆಲವರು ಮತ್ತೆ, ಮದುವೆ, ಮಕ್ಕಳು, ಮಂಗಳಸೂತ್ರ ಎಂದೆಲ್ಲಾ ಕ್ಯಾತೆಯನ್ನೂ ತೆರೆದಿದ್ದಾರೆ. 

ದೀಪಾವಳಿ ಹಬ್ಬಕ್ಕೆ ಬಿಗ್​ಬಾಸ್​ ಬೆಡಗಿ ನಿವೇದಿತಾ ಗೌಡ ಶೃಂಗಾರ ನೋಡಿ ಮನಸೋತ ಫ್ಯಾನ್ಸ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?