ಸೌಮ್ಯ ರೂಪಿಣಿ ನಾರಿ ಕಾಳಿ ರೂಪ ತಾಳಿದರೆ ಏನಾಗುತ್ತದೆ? ಹೆಣ್ಣುಮಕ್ಕಳಿಗೆ ಮಾದರಿಯಾದ ಪುಟ್ಟಕ್ಕನ ಮಗಳು ಸಹನಾ. ಇಲ್ಲಿದೆ ನೋಡಿ ಫೈಟಿಂಗ್ ಸೀನ್.
ಹೆಣ್ಣು ಮಕ್ಕಳನ್ನು ವಿವಿಧ ಅವತಾರಗಳಿಗೆ ಹೋಲಿಸುತ್ತಾರೆ. ಶಕ್ತಿ ಸ್ವರೂಪಿಣಿಯಾಗಿಯೂ ಪೂಜಿಸುತ್ತಾರೆ. ಹಿಂದೂಗಳಲ್ಲಿ ಹೆಣ್ಣಿಗೆ ಸರ್ವಶ್ರೇಷ್ಠ ಸ್ಥಾನವನ್ನು ಕಲ್ಪಿಸಲಾಗಿದೆ. ಆದರೆ ಇಂದು ಸಮಾಜದಲ್ಲಿ ಬಹುತೇಕ ಕಡೆ ನಡೆಯುತ್ತಿರುವುದೇ ಬೇರೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರದ ವರದಿಗಳು ಒಂದಲ್ಲಾ... ಎರಡಲ್ಲಾ... ಇದೇ ಕಾರಣಕ್ಕೆ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ. ಹೆಣ್ಣು ಅಬಲೆಯಲ್ಲ, ಸಬಲೆ ಎನ್ನುವ ಮಾತಂತೂ ಭಾಷಣಗಳಲ್ಲಿ ಸಾಕಾಗುವಷ್ಟು ಕೇಳಿಯಾದರೂ ಪ್ರತಿಯೊಬ್ಬ ಹೆಣ್ಣು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿಲ್ಲ ಎಂದರೆ ಆಕೆಯ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ಮುಗಿಯದ ಕಥೆ. ಇದನ್ನೇ ಈಗ ಪುಟ್ಟಕ್ಕನ ಮಕ್ಕಳು ಪಾತ್ರಧಾರಿ ಸಹನಾ ತೋರಿಸಿಕೊಟ್ಟಿದ್ದು, ಅದರ ಪ್ರೊಮೋ ರಿಲೀಸ್ ಆಗಿದೆ.
ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಮಕ್ಕಳಲ್ಲಿ ಸಕತ್ ಸ್ಟ್ರಾಂಗ್, ಡೇರಿಂಗ್ ಪಾತ್ರಧಾರಿ ಸ್ನೇಹಾ ಎಂದಾದರೆ, ಅತ್ಯಂತ ಸೌಮ್ಯಳು ಎನಿಸಿಕೊಂಡಿರುವಾಕೆ, ಅಮ್ಮನ ಮಾತಿಗೆ ಎದುರಾಡದ, ಎಲ್ಲಿ ಹೋಗಬೇಕಾದರೂ ತಲೆ ತಗ್ಗಿಸಿ ಹೋಗುವಾಕೆ, ಯಾರಾದರೂ ಏನಾದರೂ ಹೇಳಿದರೂ ಎದುರು ಉತ್ತರ ಕೊಡಲು ಬರದ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾಳೆ ಹಿರಿಯ ಮಗಳು ಸಹನಾ. ಈಗ ಈಕೆಯ ಮದುವೆಯಾಗಿ ಅತ್ತೆಯ ಮನೆಯಲ್ಲಿಯೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಅದನ್ನು ಯಾರಿಗೂ ಹೇಳಿಕೊಳ್ಳದೇ ನುಂಗಿಕೊಂಡಿದ್ದಾಳೆ. ಇವಳ ಕಿರಿಯ ತಂಗಿ ಸುಮಾ ಓದುವುದಕ್ಕಾಗಿ ಇವಳ ಮನೆಯಲ್ಲಿಯೇ ಇದ್ದರೂ ಯಾರ ಮುಂದೆಯೂ ನೋವು ತೋಡಿಕೊಳ್ಳದಾಕೆ ಸಹನಾ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್ ಊರ್ಮಿಳಾ: ನಟಿಯ ಕುರಿತು ಇಂಟರೆಸ್ಟಿಂಗ್ ಮಾಹಿತಿ...
ಆದರೆ ಈಗ ಸಹನಾ ಉಗ್ರ ಸ್ವರೂಪ ತೋರಿದ್ದಾಳೆ. ಒಮ್ಮೆ ತಂಗಿ ಸುಮಾ ಹೆಣ್ಣುಮಕ್ಕಳು ಫೈಟಿಂಗ್ ಮಾಡುವ ವಿಡಿಯೋ ಒಂದನ್ನು ಅಕ್ಕನಿಗೆ ತೋರಿಸಿ ಈಗಿನ ಹೆಣ್ಣುಮಕ್ಕಳು ಹೇಗೆ ಇರಬೇಕು ಎಂದು ಹೇಳಿದ್ದಳು. ಹೆಣ್ಣಾದವಳು ಎಲ್ಲ ದೌರ್ಜನ್ಯವನ್ನೂ ಸಹಿಸಿಕೊಂಡು ಇರಬೇಕೆಂದೇನೂ ಇಲ್ಲ. ತನ್ನನ್ನು ಪ್ರೀತಿ ಮಾಡುವವರಿಗೆ ಪ್ರೀತಿಯ ಧಾರೆ ಎರೆದು, ತನ್ನನ್ನು ನಿಷ್ಠೂರವಾಗಿ ಕಾಣುವವರಿಗೆ ಇಲ್ಲವೇ ಕೆಟ್ಟ ದೃಷ್ಟಿಯನ್ನು ಬೀರುವವರಿಗೆ ಹೇಗೆ ಪಾಠ ಕಲಿಸಬೇಕು ಎಂಬ ಬಗ್ಗೆ ತಿಳಿಸಿದ್ದಳು. ಅದನ್ನೇ ಈಗ ಸಹನಾ ಪ್ರಾಕ್ಟಿಕಲ್ ರೂಪದಲ್ಲಿ ತೋರಿಸಿದ್ದಾಳೆ. ಈಕೆಯ ಪತಿಯ ಸಂಬಂಧಿ ಸುಕುಮಾರನಿಗೆ ಸಹನಾಳ ರೂಪದ ಮೇಲೆ ಕಣ್ಣು. ಅವಳನ್ನು ಹೇಗಾದರೂ ಪಡೆಯುವ ಹಂಬಲ. ಇದೇ ಕಾರಣಕ್ಕೆ ಆತ ಆಕೆಯ ತಂಗಿಗೆ ಜ್ಯೂಸ್ನಲ್ಲಿ ನಿದ್ದೆ ಬರುವ ಮಾತ್ರೆ ಬೆರೆಸಿ ಅವಳ ಮೇಲೆ ಅತ್ಯಾಚಾರ ಎಸಗಲು ಹೋಗುತ್ತಾನೆ.
ಅದೇ ಸಮಯದಲ್ಲಿ ಸಹನಾ ಅಲ್ಲಿಗೆ ಬರುತ್ತಾಳೆ. ಆಗ ಆತ ನನಗೆ ಕಣ್ಣು ಇರುವುದು ನಿನ್ನೆ ಮೇಲೆ, ನಿನ್ನ ತಂಗಿಯ ಮೇಲಲ್ಲ ಎಂದು ಆಕೆಯ ಮೈಮೇಲೆ ಕೈ ಹಾಕಲು ಬಂದಾಗ ಕಾಳಿ ಸ್ವರೂಪಿಣಿಯಾಗುವ ಸಹನಾ, ಸುಕುಮಾರನನ್ನು ಹಿಗ್ಗಾಮುಗ್ಗಾ ಥಳಿಸಿ ಜಜ್ಜಿ ಹಾಕುತ್ತಾಳೆ. ಇದರ ಪ್ರೊಮೋ ನೋಡಿ ಪ್ರತಿಯೊಬ್ಬ ಹೆಣ್ಣೂ ಹೀಗೆಯೇ ಇರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಕಾಟ ಕೊಡುವ ಅತ್ತೆಗೂ ಹೀಗೆಯೇ ಪಾಠ ಕಲಿಸುವಂತೆ ಸಹನಾಳಿಗೆ ಕೆಲವರು ಬುದ್ಧಿ ಹೇಳುತ್ತಿದ್ದಾರೆ. ಸೌಮ್ಯ ರೂಪಿಸಿ ಸಹನಾ ಕಾಳಿ ಅವತಾರ ತಾಳಿದ್ದನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದು ಭೇಷ್ ಭೇಷ್ ಎನ್ನುತ್ತಿದ್ದಾರೆ. ಇದು ಕೇವಲ ಧಾರಾವಾಹಿಯ ಪಾತ್ರವಲ್ಲದೇ, ನಿಜ ಜೀವನಕ್ಕೂ ಅಳವಡಿಸಿಕೊಳ್ಳಬೇಕು ಪ್ರತಿ ಹೆಣ್ಣು ಎನ್ನುತ್ತಿದ್ದಾರೆ.
ಸೀರೆ, ಮಿನಿ, ಷಾರ್ಟ್ಸ್, ಚೆಡ್ಡಿ ಏನ್ ಬೇಕ್ ನಿಮ್ಗೆ? ಟ್ರೋಲಿಗರಿಗೆ ವಿಡಿಯೋ ಮೂಲಕ ಉತ್ರ ಕೊಟ್ಟ ನಿವೇದಿತಾ!