ಮತ್ತೊಂದು ಮದುವೆಗೆ ರೆಡಿಯಾದ್ರಾ ವರ್ತೂರು ಸಂತೋಷ್; ತನಿಷಾ ಅಲ್ವಂತೆ, ಮತ್ಯಾರು ಸಂತು ಸಂಗಾತಿ...!?

By Shriram Bhat  |  First Published Jan 28, 2024, 5:35 PM IST

ಮೊದಲ ಹೆಂಡತಿಯಿಂದ ದೂರವಿರುವ ವರ್ತೂರು ಸಂತು ಈಗ ಬಿಗ್ ಬಾಸ್ ಸಹ-ಸ್ಪರ್ಧಿ ತನಿಷಾ ಜತೆಗೆ ಮರುಮದುವೆ ಆಗಬಹುದು ಎಂಬ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಆ ಸುದ್ದಿಯನ್ನು ಸ್ವತಃ ಸಂತೋಷ್ ಅಲ್ಲಗಳೆದಿದ್ದಾರೆ. 


ಬಿಗ್ ಬಾಸ್‌ ಕನ್ನಡ ಸೀಸನ್ 10ರ ಸ್ಪರ್ಧಿಗಳಲೊಬ್ಬರಾದ ವರ್ತೂರು ಸಂತೋಷ್ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 'ಎರಡನೇ ಮದುವೆಗೆ ರೆಡಿಯಾಗ್ತಿದಾರಾ ವರ್ತೂರು ಸಂತೋಷ್?' ಎಂಬುದೇ ಸದ್ಯದ ಸೆನ್ಸೇಷನಲ್ ನ್ಯೂಸ್. ಮೊದಲ ಮದುವೆಯ ಸಂಗಾತಿಯಿಂದ ಸದ್ಯಕ್ಕೆ ದೂರವಾಗಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಬಳಿಕ ಮತ್ತೊಂದು ಮದುವೆಗೆ ಸಜ್ಜಾಗಲಿದ್ದಾರೆ ಎನ್ನಲಾಗುತ್ತಿದೆ. 

ಮದುವೆಯಾಗಿ ಡಿವೋರ್ಸ್, ಲಿವ್ ಇನ್ ರಿಲೀಶನ್‌ಶಿಪ್ ಎಲ್ಲವೂ ಇಂದಿನ ಕಾಲಘಟ್ಟದಲ್ಲಿ ಸೆಲೆಬ್ರಿಟಿಗಳ ಜೀವನದಲ್ಲಿ ಕಾಮನ್ ಆಗುತ್ತಿದೆ ಎನ್ನಬಹುದೇನೋ!. ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ಒಮ್ಮೆ ಹೋಗಿರದಿದ್ದರೆ ಅವರಿಗೆ ಮದುವೆ ಆಗಿತ್ತು, ಗಂಡ-ಹೆಂಡತಿ ಒಟ್ಟಿಗಿಲ್ಲ ಎಂಬ ಯಾವ ಸಂಗತಿಯೂ ಹೊರಪ್ರಪಂಚಕ್ಕೆ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಆದರೆ ಈಗ ಬಿಗ್ ಬಾಸ್ ಫೈನಲ್ ಹಂತದ ಸ್ಪರ್ಧಿಯೂ ಆಗಿರುವ ವರ್ತೂರು ಸಂತೋಷ್ ಕರುನಾಡಿಗೆ ದೊಡ್ಡ ಸೆಲೆಬ್ರಟಿ ಆಗಿಬಿಟ್ಟಿದ್ದಾರೆ. 

Tap to resize

Latest Videos

ವರ್ತೂರು ಸಂತೋಷ್ ಸೆಲೆಬ್ರಿಟಿ ಆಗಿರುವುದರ ಜತೆಗೆ, ಈಗ ಮರುಮದುವೆಯ ಸುದ್ದಯೂ ಅವರ ಬೆನ್ನುಬಿದ್ದಿದೆ. ಮೊದಲ ಹೆಂಡತಿಯಿಂದ ದೂರವಿರುವ ವರ್ತೂರು ಸಂತು ಈಗ ಬಿಗ್ ಬಾಸ್ ಸಹ-ಸ್ಪರ್ಧಿ ತನಿಷಾ ಜತೆಗೆ ಮರುಮದುವೆ ಆಗಬಹುದು ಎಂಬ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಆ ಸುದ್ದಿಯನ್ನು ಸ್ವತಃ ಸಂತೋಷ್ ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲ, ತನಿಷಾ ಕೂಡ ಖಡಾಖಂಡಿತವಾಗಿ 'ನಾವಿಬ್ಬರೂ ಬೆಸ್ಟ್ ಫ್ಂಡ್ಸ್ ಆಗಿದೀವಿ ಅಷ್ಟೇ, ಅಷ್ಟು ದೂರದವರೆಗೆ ಹೋಗಬೇಡಿ' ಎಂದುಬಿಟ್ಟಿದ್ದಾರೆ. 

ಅಮ್ರತಂ ಜತೆ ಮದ್ವೆಯಾಗಿದ್ದ ಮಂಜುಳಾ ಮೈಗೆ ಬೆಂಕಿ-ಸಾವು; ಚಾಮರಾಜನಗರ ಹುಡುಗ ಮರುಮದ್ವೆಗೆ ಒಪ್ಪಿರಲಿಲ್ವಾ?!

ಬಿಗ್ ಬಾಸ್ ಮನೆಯೊಳಗೆ ಸದ್ಯಕ್ಕೆ ಇರುವ 5 ಕಂಟೆಸ್ಟಂಟ್‌ಗಳಲ್ಲಿ ಟ್ರೋಫಿಯನ್ನು ಗೆಲ್ಲುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ನಿನ್ನೆ ತುಕಾಇ ಸಂತೋಷ್ ಔಟ್ ಆದ ಬಳಿಕ ಸಂಗೀತಾ ಶೃಂಗೇರಿ ಅಥವಾ ಕಾರ್ತಿಕ್ ಬಿಗ್ ಬಾಸ್ ಸೀಸನ್ 10ರ ಕಪ್ ಗೆದ್ದು ಬಹುಮಾನ ತಮ್ಮದಾಗಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೆ ಗೆಲ್ಲುವ ಫೇವರೆಟ್ ಆಗಿ ವರ್ತೂರು ಸಂತೋಷ್ ಹೆಸರು ಕೇಳಿಬರುತ್ತಿಲ್ಲ. ಆದರೆ, ಬಿಗ್ ಬಾಸ್ ಮನೆಯಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. 

ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

ಒಟ್ಟಿನಲ್ಲಿ, ಇಂದಿಗೂ ಮಿಕ್ಕ ಸ್ಪರ್ಧಿಗಳು ಹಾಗೂ ಭವಿಷ್ಯದ ಬಿಗ್ ಬಾಸ್ ವಿನ್ನರ್ ಜೊತೆ ವರ್ತೂರು ಸಂತೋಷ್ ಬಿಗ್ ಬಾಸ್ ಜರ್ನಿ ಕೂಡ ಇಂದಿಗೆ ಮುಕ್ತಾಯವಾಗಲಿದೆ. ಬಳಿಕ, ಸುತ್ತುತ್ತಿರುವ ಸುದ್ದಿಯಂತೆ ವರ್ತೂರು ಸಂತೋಷ್ ಎರಡನೇ ಮದುವೆ ಆಗುತ್ತಾರೋ, ಅಥವಾ ಅದು ಕೇವಲ ಗಾಳಿಸುದ್ದಿಯಾಗಿ ಹಾರಿಹೋಗಲದೆಯೋ ಎಂಬುದನ್ನು ಕಾದು ನೋಡಬೇಕಿದೆ!

ಅಂಬಿ ಲೈಫಲ್ಲಿ ಒಮ್ಮೆ ಮಾತ್ರ ಅತ್ತಿದ್ರು, ಕಣ್ಣೀರಿಗೆ ಅಸಲಿ ಕಾರಣ ನಂಗೊತ್ತು; ಗುಟ್ಟು ಬಿಚ್ಚಿಟ್ರು ಸುಮಲತಾ!

click me!