
ಬಿಗ್‌ಬಾಸ್ ಸೀಸನ್ 10 ಮನೆಯಿಂದ ಹೊರಕ್ಕೆ ಹೋಗಿರುವ ನಮ್ರತಾ ಗೌಡ ಬಿಗ್‌ಬಾಸ್ ಮನೆಗೆ ಓಡಿ ಬಂದಿದ್ದಾರೆ. ಇವರ ಕೈಯಲ್ಲಿ ಕಿಚ್ಚ ಸುದೀಪ್ ಒಬ್ಬರ ಎಲಿಮಿನೇಷನ್ ಕಾರ್ಡ್ ಕೊಟ್ಟಿದ್ದಾರೆ. ಅದನ್ನು ನೋಡಿ ನಮ್ರತಾ ಕೂಡ ಪೆಚ್ಚಗಾಗಿದ್ದಾರೆ. ಒಹ್ ಎಂದಿದ್ದಾರೆ. ಹೆಸರು ಹೇಳುತ್ತಿದ್ದಂತೆಯೇ ಸಿರಿ ಶಾಕ್ ಆಗಿದ್ದರೆ, ತನಿಷಾ ಅತ್ತ ಸ್ವಲ್ಪ ಅಚ್ಚರಿಗೊಂಡರೂ ಖುಷಿಯ ಮೊಗ ತೋರಿದ್ದಾರೆ. ಹಾಗಿದ್ದರೆ ಕೊನೆಯ ಕ್ಷಣದಲ್ಲಿ ಬಿಗ್ಬಾಸ್ನಿಂದ ಔಟ್ ಆಗಿದ್ದು, ಈ ಪ್ರಬಲ ಸ್ಪರ್ಧಿಯೆ?
ಅಷ್ಟಕ್ಕೂ ನಿಮ್ಮ ಮನಸ್ಸಿನಲ್ಲಿ ಯಾರ ಹೆಸರು ಓಡುತ್ತಿದೆ? ಇದರ ಪ್ರೊಮೋ ರಿಲೀಸ್ ಆಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಷ್ಟಕ್ಕೂ, ನಿನ್ನೆ ಜನವರಿ 27ರಿಂದ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. ಇಂದು ಒಬ್ಬರ ಕೈಯನ್ನು ಕಿಚ್ಚ ಸುದೀಪ್ ಎತ್ತುವ ಮೂಲಕ ಬಿಗ್‌ಬಾಸ್ ವಿಜೇತರನ್ನು ಘೋಷಿಸಲಿದ್ದಾರೆ. ಈ ಮೂಲಕ ಬಿಗ್‌ಬಾಸ್ ಕನ್ನಡದ ಸೀಸನ್ 10ರ ಗ್ರ್ಯಾಂಡ್ ಫಿನಾಲೆಗೆ ತೆರೆ ಬೀಳಲಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ 6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದರು. ಇದಾಗಲೇ ತುಕಾಲಿ ಸಂತೋಷ್ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಅಂದರೆ ಈಗ ಉಳಿದಿರುವುದು ಐವರು. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇದಕ್ಕೂ ಮೊದಲು ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿತ್ತು. ಆದರೂ ಕೊನೆಯ ಕ್ಷಣದಲ್ಲಿ ಸುದೀಪ್ ಅವರನ್ನು ಬಚಾವ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್ ಲಿಸ್ಟ್‌ನಲ್ಲಿ ಇರ್ತಾರೆ ಎನ್ನಲಾಗಿತ್ತು. ಆದರೆ ತುಕಾಲಿ ಅವರನ್ನು ನಾಮಿನೇಟ್ ಮಾಡುವ ಮೂಲಕ ಐವರನ್ನೆ ಗ್ರ್ಯಾಂಡ್ ಫಿನಾಲೆಗೆ ಕಳುಹಿಸಲಾಗಿದೆ.
ಈ ಬಾರಿಯ ಕುತೂಹಲ: ಒಬ್ಬರಿಗಲ್ಲ, ಇಬ್ಬರಿಗೆ ಸಿಗಲಿದೆ ಬಿಗ್‌ಬಾಸ್ ಟ್ರೋಫಿ! ಏನಿದು ವಿಷ್ಯ?
ಇದರ ನಡುವೆಯೇ ಒಂದಾದ ಮೇಲೊಂದರಂತೆ ಕಲರ್ಸ್ ಕನ್ನಡ ವಾಹಿನಿ ಪ್ರೊಮೋ ಬಿಡುಗಡೆ ಮಾಡುತ್ತಿದೆ. ಆದರೆ ಈಗ ನಮ್ರತಾ ಗೌಡ ಹೇಳಿರುವ ಹೆಸರಿನ ಕುರಿತು ಬಿಡುಗಡೆಯಾಗಿರುವ ಪ್ರೊಮೋ ನೋಡಿ ಹಾಗೂ ಅದರಲ್ಲಿ ಸಿರಿ ಮತ್ತು ತನಿಷಾ ಎಕ್ಸ್ಪ್ರೆಷನ್ ನೋಡಿ ಹೆಚ್ಚಿನ ನೆಟ್ಟಿಗರು ಎಲಿಮಿನೇಟ್ ಆಗ್ತಿರೋದು ಸಂಗೀತಾ ಎನ್ನುವ ಊಹೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ಇಷ್ಟಪಡದ ಒಬ್ಬ ಸ್ಪರ್ಧಿ ಎಂದರೆ ಅವರು ಸಂಗೀತಾ ಶೃಂಗೇರಿ ಮಾತ್ರ. ಹಾಗಾಗಿ ಅವರು ಖುಷಿಯಿಂದ ಅಚ್ಚರಿ ಪಡಬೇಕಾಗಿದ್ದರೆ ಹೊರಗಡೆ ಹೋಗುವ ಸ್ಪರ್ಧಿ ಸಂಗೀತಾ ಶೃಂಗೇರಿ ಅವರೇ ಆಗಿರಲಿದ್ದಾರೆ ಎಂದೇ ಹಲವರು ಭಾವಿಸುತ್ತಿದ್ದಾರೆ. ಇದು ಸಾಧ್ಯವೇ ಇಲ್ಲ ಎಂದು ಸಂಗೀತಾ ಫ್ಯಾನ್ಸ್ ತರ್ಕಿಸುತ್ತಿದ್ದಾರೆ.
ಅಷ್ಟಕ್ಕೂ ನಮ್ರತಾ ಅವರು ಸಂಗೀತಾ ಅವರು ಟಾಪ್ 2-3 ಬರಬಹುದೆಂದು ನಿರೀಕ್ಷಿಸಿದ್ದರು. ಈ ಬಗ್ಗೆ ಅವರೇ ಈ ಹಿಂದೆ ಹೇಳಿದ್ದರು. ಆದರೆ ವಿನಯ್ ಅವರು ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು ಎನ್ನುವುದು ಅವರ ಇಚ್ಛೆಯಾಗಿದೆ. ಇದನ್ನು ಊಹಿಸಿ ಕೂಡ ನಾಮಿನೇಟ್ ಆಗಿರುವವರು ಸಂಗೀತಾ ಇರಬಹುದು ಎನ್ನಲಾಗುತ್ತಿದೆ. ಇದಾಗಲೇ ವಿನಯ್ ಅವರೂ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಬಿಗ್‌ಬಾಸ್ ಶಾಕ್! ಪ್ರಬಲ ಸ್ಪರ್ಧಿಯೇ ಔಟ್? ಯಾರ ಕೈ ಎತ್ತಲಿದ್ದಾರೆ ಸುದೀಪ್? ಪ್ರೊಮೋ ರಿಲೀಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.