ಈ ಬಾರಿಯ ಕುತೂಹಲ: ಒಬ್ಬರಿಗಲ್ಲ, ಇಬ್ಬರಿಗೆ ಸಿಗಲಿದೆ ಬಿಗ್​ಬಾಸ್​ ಟ್ರೋಫಿ! ಏನಿದು ವಿಷ್ಯ?

Published : Jan 28, 2024, 03:59 PM IST
ಈ ಬಾರಿಯ ಕುತೂಹಲ:  ಒಬ್ಬರಿಗಲ್ಲ, ಇಬ್ಬರಿಗೆ ಸಿಗಲಿದೆ ಬಿಗ್​ಬಾಸ್​ ಟ್ರೋಫಿ! ಏನಿದು ವಿಷ್ಯ?

ಸಾರಾಂಶ

ಇಂದು ಬಿಗ್​ಬಾಸ್​ನಲ್ಲಿ ಇಬ್ಬರು ವಿಜೇತರು ಘೋಷಣೆಯಾಗಲಿದ್ದಾರೆ. ಇಬ್ಬರಿಗೆ ಬಿಗ್​ಬಾಸ್​ ಟ್ರೋಫಿಯ ಜೊತೆ ಭರ್ಜರಿ ಮೊದಲ ಬಹುಮಾನ ಸಿಗಲಿದೆ. ಏನಿದು ವಿಷಯ?    

ನಿನ್ನೆ ಜನವರಿ 27ರಿಂದ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ  ಶುರುವಾಗಿದೆ. ಇಂದು ಒಬ್ಬರ ಕೈಯನ್ನು ಕಿಚ್ಚ ಸುದೀಪ್​ ಎತ್ತುವ ಮೂಲಕ ಬಿಗ್​ಬಾಸ್​ ವಿಜೇತರನ್ನು ಘೋಷಿಸಲಿದ್ದಾರೆ.  ಈ ಮೂಲಕ  ಬಿಗ್​ಬಾಸ್​ ಕನ್ನಡದ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆಗೆ ತೆರೆ ಬೀಳಲಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದರು. ಇದಾಗಲೇ ತುಕಾಲಿ ಸಂತೋಷ್​ ಅವರನ್ನು ಎಲಿಮಿನೇಟ್​ ಮಾಡಲಾಗಿದೆ. ಅಂದರೆ ಈಗ ಉಳಿದಿರುವುದು ಐವರು. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇದಕ್ಕೂ ಮೊದಲು ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿತ್ತು. ಆದರೂ ಕೊನೆಯ ಕ್ಷಣದಲ್ಲಿ ಸುದೀಪ್​ ಅವರನ್ನು ಬಚಾವ್​ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ  ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್‌ ಲಿಸ್ಟ್‌ನಲ್ಲಿ ಇರ್ತಾರೆ ಎನ್ನಲಾಗಿತ್ತು. ಆದರೆ ತುಕಾಲಿ ಅವರನ್ನು ನಾಮಿನೇಟ್​ ಮಾಡುವ ಮೂಲಕ ಐವರನ್ನೆ ಗ್ರ್ಯಾಂಡ್​ ಫಿನಾಲೆಗೆ ಕಳುಹಿಸಲಾಗಿದೆ.  

ಸತತ 16 ವಾರಗಳು ಟಾಪ್​ ಟಿಆರ್​ಪಿಯಲ್ಲಿಯೇ  ಮುಂದುವರೆದಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ‘ಬಿಗ್ ಬಾಸ್‌ ಕನ್ನಡ 10’ ವಿಜೇತರಿಗೆ ಕಾನ್ಫಿಡೆಂಟ್‌ ಗ್ರೂಪ್‌ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇಷ್ಟೇ ಅಲ್ಲದೇ ಜೊತೆಗೆ ಹೊಸ ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಸಿಗಲಿದೆ. ‘ಬಿಗ್ ಬಾಸ್‌ ಕನ್ನಡ 10’ ರನ್ನರ್‌ ಆದವರಿಗೆ ಬೌನ್ಸ್‌ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಲಭಿಸಲಿದೆ.  

ಬ್ಲೌಸ್​ ಇಲ್ಲದ ಸೀರೆಗಳ ತೊಟ್ಟು ಜಾಹ್ನವಿ ವಿಡಿಯೋ ಶೂಟ್​: ಹಾಟ್​ನೆಸ್​ಗೆ ಫ್ಯಾನ್ಸ್ ಫಿದಾ!

ಆದರೆ ಇನ್ನೊಂದು ಕುತೂಹಲದ ವಿಷಯ ಏನೆಂದರೆ, ಇಂದು ಒಬ್ಬರಲ್ಲ, ಇಬ್ಬರು ಬಿಗ್​ಬಾಸ್​ ಟ್ರೋಫಿಯ ಜೊತೆಗೆ ಭರ್ಜರಿ ಮೊತ್ತ ಗೆಲ್ಲಲಿದ್ದಾರೆ! ಹೌದು. ಇತ್ತ ಕನ್ನಡದ ಬಿಗ್​ಬಾಸ್​ ಫಿನಾಲೆಯಾದರೆ, ಅತ್ತ ಹಿಂದಿಯ ಬಿಗ್​ಬಾಸ್​ ಫಿನಾಲೆಯೂ ಇಂದೇ ಇದೆ. ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಫಿನಾಲೆ ಕೂಡ ಇಂದೇ ಇದ್ದು, ಅಲ್ಲಿಯೂ ವಿಜೇತರು ಘೋಷಣೆಯಾಗಲಿದ್ದಾರೆ. ಬಿಗ್ ಬಾಸ್ 17ರ  ಮೂರು ತಿಂಗಳ ನಂತರ,  ಗ್ರ್ಯಾಂಡ್ ಫಿನಾಲೆ ಇಂದು ನಡೆಯುತ್ತಿದೆ. 21 ಸ್ಪರ್ಧಿಗಳ ಪೈಕಿ ಟಾಪ್ 5 ಫೈನಲಿಸ್ಟ್‌ಗಳು ಫಿನಾಲೆಯ ರೇಸ್‌ನಲ್ಲಿದ್ದಾರೆ.  ಇವರಲ್ಲಿ ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಿ ಸೇರಿದ್ದಾರೆ.ಈ ಸೀಸನ್‌ನ ವಿನ್ನರ್ ಯಾರು ಎಂಬುದು ಇಂದು ಘೋಷಣೆಯಾಗಲಿದೆ.  

ಕನ್ನಡ ಬಿಗ್​ಬಾಸ್​ ಸೀಸನ್​ 10ರ ಗ್ರ್ಯಾಂಡ್ ಫಿನಾಲೆ 7.30ರಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ನೋಡಬಹುದಾದರೆ, ಹಿಂದಿ 'ಬಿಗ್ ಬಾಸ್ 17' ರ ಗ್ರ್ಯಾಂಡ್ ಫಿನಾಲೆ  ಸಂಜೆ 6 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ ನೋಡಬಹುದಾಗಿದೆ.  ನೀವು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್‌ನ ನೇರ ಪ್ರಸಾರವನ್ನು ಸಹ ವೀಕ್ಷಿಸಬಹುದು.  

ನಟಿ ಬೆತ್ತಲಾದ ದೃಶ್ಯ ನೋಡಿದ್ದು ಸಾಕಾಗಿಲ್ವಂತೆ! ರಣಬೀರ್​-ಬಾಬಿ ಕಿಸ್ಸಿಂಗ್​ ನೋಡಲು ಸಿಗದೇ ಅನಿಮಲ್​ ಫ್ಯಾನ್ಸ್​ ಗರಂ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?