BBK10 ಸ್ಪರ್ಧಿ ಸ್ನೇಕ್ ಶ್ಯಾಮ್: ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ..

By Shriram Bhat  |  First Published Oct 16, 2023, 3:34 PM IST

ಮನುಷ್ಯರಿಗೆ ಹೋಲಿಸಿದರೆ ಪ್ರಾಣಿಗಳೇ ಎಷ್ಟೋ ಮೇಲು. ಅವು ಒಮ್ಮೆ ಪ್ರೀತಿ ತೋರಸಿದರೆ ಜೀವನ ಪರ್ಯಂತ ನಮ್ಮನ್ನು ಕಂಡರೆ ಓಡೋಡಿ ಬರುತ್ತವೆ. ಆದರೆ, ಮನುಷ್ಯ ಹಾಗಲ್ಲ, ತಮ್ಮ ಕೆಲಸ ಮುಗಿದ ತಕ್ಷಣ ನಮ್ಮನ್ನು ಪೇಪರ್‌ನಂತೆ ಹರಿದುಹಾಕುತ್ತಾನೆ (ಬಳಸಿ ಬೀಸಾಡುತ್ತಾರೆ).


ಬಿಗ್ ಬಾಸ್ ಕನ್ನಡ ಸೀಸನ್‌ 10ರ ಮೊದಲನೇ ವಾರದ ಎಲಿಮಿನೇ‍ನ್ ಮುಗಿದಿದೆ. ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ಗೊತ್ತೇ ಇದೆ. ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ನೇಕ್‌ ಶ್ಯಾಮ್ ಜತೆ ನಡೆಸಿದ ಸಂದರ್ಶನ ಇಲ್ಲಿದೆ.. ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವವನ್ನು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ ಸ್ನೇಕ್ ಶ್ಯಾಮ್.. ನಾವು ಈ ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ. ಟಿಕೆಟ್ ಕನ್ಫರ್ಮ್ ಆದ ತಕ್ಷಣ ಹೊರಡ್ತೀವಿ.. 

ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನಲ್ಲಿ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್. .. "ಬೇರೆಯವರನ್ನು ನೋಯಿಸಬಾರದು ಎಂಬ ನನ್ನ ಒಳ್ಳೆಯತನವೇ ನನಗೆ ಮುಳುವಾಯಿತು ಎನಿಸಿದೆ. ಬೇರೆಯವರನ್ನು ನಾನು ನಾಮಿನೇಟ್ ಮಾಡಿದರೆ ಅವರ ಮನಸ್ಸಿಗೆ ನೋವಾಗುತ್ತದೆ. ಆ ಕಾರಣಕ್ಕೆ ನನ್ನನ್ನೇ ನಾನು ನಾಮಿನೇಟ್ ಮಾಡಿಕೊಂಡೆ. ಆದರೆ, ಬಿಗ್ ಬಾಸ್‌ ಮನೆಯಲ್ಲಿ ಒಂದು ವಿಷಯ ಅರಿತುಕೊಂಡೆ. ಕಾಂಪಿಟೀಶನ್ ಅಂತ ಬಂದಾಗ, ಸ್ವತಃ ಅಣ್ಣತಮ್ಮಂದಿರೇ ಆಗಿದ್ದರೂ ಕಾಂಪಿಟೇಶನ್ ಮಾಡ್ಲೇಬೇಕು. 

Tap to resize

Latest Videos

ನಮಗೆ ಹೊರಗಡೆ ಬೇರೆಬೇರೆಯವರು ಬೇರೆ ಬೇರೆ ಟೈಮ್‌ನಲ್ಲಿ ಸಿಗುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಹಾಗಲ್ಲ, ಒಂದೇ ಮನೆಯಲ್ಲಿ 16 ಮನಸ್ಸಿನ ಬೇರೆ ಬೇರೆ ವ್ಯಕ್ತಿಗಳು ಸಿಗುತ್ತಾರೆ. ಅವರ ಜತೆ ಇದ್ದು ನಾನು ಸಾಕಷ್ಟು ವಿಷಯಗಳನ್ನು ಅರಿತಿದ್ದೇನೆ. ಜನರು ಹೊರಗೊಂದು ಒಳಗೊಂದು ತರಹ ಇರುತ್ತಾರೆ. ಇಲ್ಲಿ ಎಲ್ಲರೂ ಬಂದಿರೋದು ಗೆಲ್ಲಲು ಮಾತ್ರ. ಹೀಗಾಗಿ ಇಲ್ಲಿ ಕರುಣೆ, ಅನುಕಂಪ, ಮಾನವೀಯತೆಗೆ ಜಾಗವಿಲ್ಲ. ಎದುರುಗಡೆ ಒಂದು ರೀತಿ ಇದ್ದು, ಒಳಗಡೆ ಬೇರೆಯದೇ ಪ್ಲಾನ್ ಮಾಡುತ್ತಾರೆ. 

ಮನುಷ್ಯರಿಗೆ ಹೋಲಿಸಿದರೆ ಪ್ರಾಣಿಗಳೇ ಎಷ್ಟೋ ಮೇಲು. ಅವು ಒಮ್ಮೆ ಪ್ರೀತಿ ತೋರಸಿದರೆ ಜೀವನ ಪರ್ಯಂತ ನಮ್ಮನ್ನು ಕಂಡರೆ ಓಡೋಡಿ ಬರುತ್ತವೆ. ಆದರೆ, ಮನುಷ್ಯ ಹಾಗಲ್ಲ, ತಮ್ಮ ಕೆಲಸ ಮುಗಿದ ತಕ್ಷಣ ನಮ್ಮನ್ನು ಪೇಪರ್‌ನಂತೆ ಹರಿದುಹಾಕುತ್ತಾನೆ (ಬಳಸಿ ಬೀಸಾಡುತ್ತಾರೆ). ಮನುಷ್ಯನಿಗೆ ಮನುಷ್ಯತ್ವ ತುಂಬಾ ಕಮ್ಮಿ. ನಾನು ಬಿಗ್ ಬಾಸ್ ಮನೆಯಲ್ಲಿ ನೋಡಿದ ಏಕೈಕ ಒಳ್ಳೆಯ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ನನಗೆ ಆತನ ಮುಗ್ಧತೆ ಹಾಗೂ ಜಾಣತನ ಎರಡೂ ತುಂಬಾ ಇಷ್ಟವಾಯ್ತು. ಅವನು ಮುಗ್ಧತೆ ಪ್ರದರ್ಶಿಸುತ್ತಾನೆ, ಆದರೆ ಆತ ಕ್ಲೆವರ್, ಜಾಣತನ ಹೊಂದಿದ್ದಾನೆ.

BBK10 ಹೊಸ ವಾರ ಶುರು: ಸಾಯುತ್ತೇವೆ ಎಂದು ಗೊತ್ತಿದ್ದರೂ ಬದುಕುವ ಹಾಗೆ ಮತ್ತೆ ಹೊಸ ಆಟ ಶುರು!

ನನಗೆ ಅಚ್ಚರಿ ತಂದ ಸಂಗತಿ ಎಂದರೆ, ನಾನು ಹೋದ 2ನೇ ದಿನದಿಂದಲೇ ಆಲ್ಮೋಸ್ಟ್ 10 ಜನರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನನ್ನೇ ನಾಮಿನೇಟ್ ಮಾಡಿದ್ದಾರೆ. ಯಾಕೆ ಅಂತ ಗೊತ್ತಿಲ್ಲ, ಹೆಚ್ಚುಕಡಿಮೆ ಎಲ್ಲರೂ ನನ್ನನ್ನು ಮನೆಯಿಂದ ಹೊರಗೆ ಕಳಿಸುವುದಕ್ಕಾಗಿ ಸಖತ್ ಪ್ಲಾನ್ ಮಾಡಿದ್ದಾರೆ. ನನಗೂ ಅಷ್ಟೇ, ನನ್ನ ಪರ್ಪಾರ್ಮೆನ್ಸ್ ತೋರಿಸಲು ಸರಿಯಾದ ಟಾಸ್ಕ್ ಸಿಗಲಿಲ್ಲ. ಒಟ್ಟಿನಲ್ಲಿ ಹೋದ ಒಂದೇ ವಾರಕ್ಕೆ ಮನೆಯಿಂದ ಹೊರಗೆ ಬಂದೆ. 

ರಾಮಾಚಾರಿಯ ತಾಯಿ ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ನಟಿ!

ಆದರೆ, ಒಂದೇ ವಾರ ನಾನು ಬಿಗ್ ಬಾಸ್ ಮನೆಯಲ್ಲಿದ್ದರೂ ನನಗೆ ಆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಆ ಮನೆಯ ಒಳಗಿನ ವೈಭವ, ಅದರೊಳಗೆ ನಾನು ಕಲಿತ ಪಾಠ ಎಲ್ಲವೂ ಚಿರಸ್ಮರಣೀಯ. ನಾನು ಚೆನ್ನಾಗಿ ಆಡಬಹುದು ಎಂಬನಿರೀಕ್ಷೆಯೊಂದಿಗೆ ಬಿಗ್ ಬಾಸ್ ನನ್ನನ್ನು ಮನೆಯೊಳಗೆ ಕಳಿಸಿದ್ದರು. ಆದರೆ ನಾನು ಅವರ ನಿರೀಕ್ಷೆಯನ್ನು ಈಡೇರಿಸಲಿಲ್ಲ, ಸಾರಿ ಬಿಗ್ ಬಾಸ್" ಎಂದಿದ್ದಾರೆ ಸ್ನೇಕ್ ಶ್ಯಾಮ್. ಅಂದಹಾಗೆ, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿ ರಾತ್ರಿ 9.30, ಶನಿವಾರ ಮತ್ತು ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

click me!