ಗಟ್ಟಿಮೇಳ ಹಾಗೂ ಪಾರು ಸೀರಿಯಲ್ ನಟರಾಗಿರುವ ಪ್ರಿಯಾ ಜೆ.ಆಚಾರ್ ಹಾಗೂ ಸಿದ್ದು ಮೂಲಿಮನಿ ದಂಪತಿ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಗಟ್ಟಿಮೇಳ (Gattimela) ಮತ್ತು ಪಾರು (Paaru) ಧಾರಾವಾಹಿ ಮನೆಮನೆಗಳನ್ನು ತಲುಪಿದೆ. ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರ ಹಾಗೂ ಪಾರು ಧಾರಾವಾಹಿಯ ಪ್ರೀತು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಕಳೆದ ಫೆಬ್ರುವರಿ 12ರಂದು ರಿಯಲ್ ಲೈಫ್ನಲ್ಲಿ ಈ ಎರಡು ಧಾರಾವಾಹಿಗಳ ಅದಿತಿ ಮತ್ತು ಪ್ರೀತು ಜೋಡಿ ಹಸೆಮಣೆಯೇರಿದ್ದಾರೆ. ಅದಿತಿ ಅರ್ಥಾತ್ ನಟಿ ಪ್ರಿಯಾ ಜೆ.ಆಚಾರ್ (Priya J Achar) ಹಾಗೂ ಪ್ರೀತು ಅರ್ಥಾತ್ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಬದುಕಿಗೆ ಕಾಲಿಟ್ಟು ಎಂಟು ತಿಂಗಳುಗಳು ಕಳೆದಿವೆ. ಅಂದಹಾಗೆ ನಟಿ ಪ್ರಿಯಾ ದಾವಣಗೆರೆಯವರು. ಪ್ರೀತು ಬೆಂಗಳೂರಿನವರು. ಡ್ಯಾನ್ಸ್ ಶೋ ಒಂದರಲ್ಲಿ ಪರಿಚಿತರಾದ ಸಿದ್ದು ಹಾಗೂ ಪ್ರಿಯಾ ಜೆ ಆಚಾರ್ ಅವರು ಆ ನಂತರ ʻಧಮಾಕ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಫೆ.12ರಂದು ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿದ್ದ ಜೋಡಿ, ಅದೇ 14ರಂದು ದಾವಣಗೆರೆಯಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿತ್ತು. 2-3 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಈಗ ಹೊಸ ಜೀವನ ಆರಂಭಿಸಿದ್ದು ಹೊಸ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
'ಧಮಾಕ' ಚಿತ್ರದ ಬಳಿಕ ಇವರಿಬ್ಬರು ಆಗಾಗ ಒಟ್ಟೊಟ್ಟಿಗೆ ರೀಲ್ಸ್ ಮಾಡುತ್ತಿದ್ದರು. ಆದರೆ, ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಡಲಾಗಿತ್ತು. ಇದು ಇವರ ನಿಶ್ಚಿತಾರ್ಥದ ದಿನ ಬಹಿರಂಗವಾಗಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರು ದಾಂಪತ್ಯ ಜೀವನವನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಇವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಪ್ರಿಯಾ ಅವರು ಯುಟ್ಯೂಬ್ ಒಂದನ್ನು ನಡೆಸುತ್ತಿದ್ದಾರೆ. ದಿನಚರಿ, ಹಬ್ಬ, ಫ್ಯಾಷನ್ ಅಡುಗೆ ಹೀಗೆ ವಿಭಿನ್ನ ಕಾನ್ಸೆಪ್ಟ್‌ಗಳನ್ನು ವೀಕ್ಷಕರ ಜತೆ ಹಂಚಿಕೊಳ್ಳುತ್ತಿರುತ್ತಾರೆ.
ಸೀತಾರಾಮ ಸೀರಿಯಲ್ ಸೀತಾ ರಾತ್ರಿ ಸ್ಕಿನ್ ಕೇರ್ ಹೇಗೆ ಮಾಡ್ತಾರೆ? ತ್ಚಚೆಗೆ ಟಿಪ್ಸ್ ನೀಡಿದ ನಟಿ
ಇದೀಗ ನಟಿ ಇನ್ಸ್ಟಾಗ್ರಾಮ್ನಲ್ಲಿ ಪತಿಯ ಜೊತೆ ರೀಲ್ಸ್ ಒಂದನ್ನು ಶೇರ್ ಮಾಡಿದ್ದಾರೆ. ಮಾಲ್ ಒಂದರಲ್ಲಿ ಇಬ್ಬರೂ ಸಕತ್ ಎಂಜಾಯ್ ಮಾಡುವುದನ್ನು ನೋಡಬಹುದು. ಕಣ್ಣಲ್ಲಿ ಸೇರಿಕೊಂಡೆ ಹಾಡಿಗೆ ಇಬ್ಬರೂ ಸಕತ್ ಸ್ಟೆಪ್ ಹಾಕಿದ್ದಾರೆ. ಮಾಲ್ ತುಂಬೆಲ್ಲಾ ಓಡಾಡಿ ರೀಲ್ಸ್ ಮಾಡಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಲವ್ ಇಮೋಜಿಗಳ ಸುರಿಮಳೆಯಾಗಿದೆ. ಕ್ಯೂಟ್ ಜೋಡಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ನಿಮ್ಮ ಜೋಡಿಗೆ ಕಣ್ಣು ಬೀಳುತ್ತದೆ, ಹುಷಾರ್ ಎಂದು ಹಲವರು ಹೇಳುತ್ತಿದ್ದಾರೆ.
ಇನ್ನು, ಪ್ರಿಯಾ ಅವರ ಕುರಿತು ಹೇಳುವುದಾದರೆ ಇವರು, ಪರಭಾಷೆ ಧಾರಾವಾಹಿಯಲ್ಲೂ ಬಿಜಿಯಾಗಿದ್ದಾರೆ. ಸಿದ್ದು ಮೂಲಿಮನಿ ಕೂಡ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ಮೊದಲ ಸಿನಿಮಾ ರಂಗಿತರಂಗ. ಈ ಸಿನಿಮಾಗೆ ಸಿದ್ದು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ತೆರೆಕಂಡ 'ಟೋರ ಟೋರ' ಚಿತ್ರದಲ್ಲಿ ಅಭಿನಯಿಸಿದ್ದರು. 2018ರಲ್ಲಿ ಇವರ 'ಲಂಬೋದರ' ಚಿತ್ರ ತೆರೆ ಕಂಡಿದೆ. ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಳಿಕ 'ವಿಕ್ರಾಂತ್ ರೋಣ', 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸೇರಿದಂತೆ ಈಚೆ ಬಿಡುಗಡೆಗೊಂಡ ಅಭಿರಾಮಚಂದ್ರ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.