ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಸೂಪರ್ ಸಂಡೆ ಇದ್ದರೂ ಸ್ನೇಕ್ ಶ್ಯಾಮ್ ಪಾಲಿಗೆ ಬಿಗ್ ಬಾಸ್ ಮನೆಯಲ್ಲಿ ಅದೇ ಕೊನೆಯ ಸಂಡೇ ಆಯ್ತು. ಮುಂದಿನ ವಾರೆ ಮತ್ತೊಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಕೊನೆಯ ಸೂಪರ್ ಸಂಡೇ ಆಗಲಿದೆ. ರಿಯಲ್ ಲೈಫ್ ಹೇಗೋ ಹಾಗೇ ಬಿಗ್ ಬಾಸ್ ಮನೆಯಲ್ಲಿ ಕೂಡ ಜೀವನ ನಡೆಯುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟ ಶೋ 2ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಮುಗಿದು ವೀಕೆಂಡ್ 'ಕಿಚ್ಚನ ಪಂಚಾಯಿತಿ' ಬಳಿಕ, ನಿನ್ನೆ 'ಸೂಪರ್ ಸಂಡೆ ವಿತ್ ಸುದೀಪ' ಕೂಡ ಮುಗಿದಿದೆ. 16 ಸ್ಪರ್ಧಿಗಳಲ್ಲಿ ಒಬ್ಬರ ಸ್ಪರ್ಧಿ 'ಸ್ನೇಕ್ ಶ್ಯಾಮ್ 'ಎಲಿಮಿನೇಶನ್ ಆಗಿ ಮನೆಯಿಂದ ಹೊರಗೆ ಹೋಗಿದ್ದೂ ಆಯ್ತು. ಇದೀಗ ಸೋಮವಾರ ಕಾಲಿಟ್ಟಿದ್ದು, ಹೊಸ ವಾರ ಒಬ್ಬರು ಸ್ಪರ್ಧಿ ಜತೆಗಿಲ್ಲದೇ ಮನೆಯವರು ಹೊಸ ಲೈಫ್ ಶುರು ಮಾಡಿದ್ದಾರೆ. ಹೊಸ ಬೆಳಗು, ಹೊಸ ಆಟ ಎಂಬಂತೆ ಎಲ್ಲವೂ ನಡೆಯುತ್ತಿದೆ.
ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್‌ನ ಎರಡನೇ ವಾರದ ಮೊದಲ ಬೆಳಗು ಶುರುವಾಗಿದೆ. ಚೆಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಂಡಿದ್ದಾರೆ. ಎರಡನೇ ವಾರ ಬಿಗ್ ಬಾಸ್ ಮನೆ ಹೇಗಿರುತ್ತದೆ? ಯಾವೆಲ್ಲ ಟ್ವಿಸ್ಟ್ ಗಳು ಇರುತ್ತವೆ? ಆಡುವವರಿಗೆ ಹೊಸ ಹೊಸ ಆಟಗಳು, ಕಲಿಯುವವರಿಗೆ ಹೊಸ ಹೊಸ ಪಾಠಗಳು 108 ದಿನವೂ ಬಿಗ್ ಬಾಸ್ ಮನೆಯಲ್ಲಿ ಇರುತ್ತವೆ. ಅವುಗಳ ಮಧ್ಯೆ ಎಲಿಮಿನೇಟ್ ಆಗಿ ವಾರಕ್ಕೊಬ್ಬರು ಸ್ಪರ್ಧಿಗಳಂತೆ ಮನೆಯಿಂದ ಹೊರಹೋಗುತ್ತಾರೆ. ಉಳಿದವರು ಗೆಲುವಿಗಾಗಿ ಆಟ ಮುಂದುವರಿಸುತ್ತಾರೆ. ಎರಡನೇ ವಾರದ ಆಟ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಲು ನೀವು 'JioCinema'ದಲ್ಲಿ 24 ಗಂಟೆ ಉಚಿತ ನೇರಪ್ರಸಾರವನ್ನು ವೀಕ್ಷಿಸಬಹುದು.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಸೂಪರ್ ಸಂಡೆ ಇದ್ದರೂ ಸ್ನೇಕ್ ಶ್ಯಾಮ್ ಪಾಲಿಗೆ ಬಿಗ್ ಬಾಸ್ ಮನೆಯಲ್ಲಿ ಅದೇ ಕೊನೆಯ ಸಂಡೇ ಆಯ್ತು. ಮುಂದಿನ ವಾರೆ ಮತ್ತೊಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಕೊನೆಯ ಸೂಪರ್ ಸಂಡೇ ಆಗಲಿದೆ. ರಿಯಲ್ ಲೈಫ್ ಹೇಗೋ ಹಾಗೇ ಬಿಗ್ ಬಾಸ್ ಮನೆಯಲ್ಲಿ ಕೂಡ ಜೀವನ ನಡೆಯುತ್ತದೆ. ಅದನ್ನು ಗಮನಿಸಿ ನೋಡಿದರೆ ಸ್ಪಷ್ಟವಾಗಿಯೇ ಗುರುತಿಸಬಹುದು. ಅವರವರ ಸ್ಟಾಪ್ ಬಂದಾಗ ಎಲ್ಲರೂ ಇಳಿದು ಹೋಗಲೇಬೇಕು. ಆದರೆ, ತಮ್ಮ ಸ್ಟಾಪ್ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲದ ಕಾರಣಕ್ಕೆ ಹಾರಾಟ-ಹೋರಾಟಗಳು ನಡೆಯುತ್ತ ಜೀವನ ಸಾಗುತ್ತದೆ.
ಸುದೀಪ್ ಸರ್ ಹೇಳ್ದಂಗೆ ನಡೆಯಲ್ವಾ?; ಕರೆದು ರಿಜೆಕ್ಟ್ ಮಾಡಿದ್ದಲ್ಲದೇ ಟೆಲಿಕಾಸ್ಟ್ ಮಾಡಿದ್ದರು: ಚಿತ್ರಾಲ್ ರಂಗಸ್ವಾಮಿ
ಇರಲಿ, ಮುಂದಿನ ವಾರದ ಬಿಗ್ ಬಾಸ್ ಆಟಕ್ಕೆ 'ಸ್ವಾಗತ' ಶುರುವಾಗಿದೆ, 'ಶುಭಂ' ಆಗುವ ತನಕ ಆಟ ಆಡುವುದನ್ನು, ಆಟ ನೋಡುವುದನ್ನು ಮುಂದುವರಿಸಬಹುದಲ್ಲವೇ? ಈ ವಾರದ ಆಟದ ರೋಚಕ ಘಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದಲ್ಲಿ ನೋಡಬಹುದು. ಶುಕ್ರವಾರದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ ಆ ದಿನದ ವಿಶೇಷತೆಗಳನ್ನು (https://jiocinema.onelink.me/fRhd/z17wt8x0) ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು.