
ಬಿಗ್ ಬಾಸ್ ಕನ್ನಡ ಸೀಸನ್ 9 ಎರಡನೇ ವಾರ ರೋಚಕವಾಗಿದೆ. ಪ್ರತಿಯೊಬ್ಬರು ತಮ್ಮ ಅಸಲಿ ಆಟ ಪ್ರಾರಂಭ ಮಾಡದ್ದಾರೆ. ಟಾಸ್ಕ್ ಜೊತೆ ಅಳು, ನಗು, ಕಿತ್ತಾಟ, ವಾಗ್ವಾದ ಬಿಗ್ ಮನೆಯಲ್ಲಿ ನಡೆಯುತ್ತಿದೆ. ಬಿಗ್ ಮನೆ ಎಂದ್ಮೇಲೆ ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ಜೋರಾಗೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ಕೂಡ ಇದಕ್ಕೆ ಹೊರತಾಗಿಲ್ಲ. ಇಂದು (ಅಕ್ಟೋಬರ್ 7) ಬಿಗ್ ಬಾಸ್ ಮನೆಯಲ್ಲಿ ಪ್ರಾಂಕ್ ಗೇಮ್ ಕಿತ್ತಾಟ ತಾರಕಕ್ಕೇರಿದೆ. ಬಿಗ್ ಮನೆಯ ಕೆಲವು ಸ್ಪರ್ಧಿಗಳು ಪ್ರಾಂಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ವಜ್ರಕಾಯ ತಂಡದ ರಾಕೇಶ್ ಅಡಿಗ, ಅನುಪಮಾ ಗೌಡ ಮತ್ತು ಅಮೂಲ್ಯಾ ಮಾಡಿರುವ ಪ್ರಾಂಕ್ ಪ್ಲಾನ್ ಅನ್ನು ಬಿಗ್ ಬಾಸ್ ಗಂಭೀರವಾಗಿ ತೆಗೆದುಕೊಂಡಿದೆ. ಕ್ಯಾಪ್ಟನ್ ಆಯ್ಕೆಗೆ ಅಮೂಲ್ಯಾ, ದರ್ಶ್, ಮಯೂರಿ, ರಾಕೇಶ್ ಹೆಸರನ್ನು ನಾಮಿನೇಟ್ ಮಾಡಿ ಪ್ರಾಂಕ್ ಮಾಡಿದ್ದರು. ಬಳಿಕ ಇದು ಪ್ರಾಂಕ್ ಎಂದು ಹೇಳಿ ಕಾಮಿಡಿ ಮಾಡಿ ಎಲ್ಲರೂ ಎಂಜಾಯ್ ಮಾಡಿದ್ದರು. ಆದರೆ ಬಿಗ್ ಬಾಸ್ ಇದನ್ನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದು ಮುಂದಿನ ವಾರದ ಕ್ಯಾಪ್ಟನ್ಸಿ ಆಯ್ಕೆ ಟಾಸ್ಕ್‌ಗೆ ಈ ನಾಲ್ವರ ಹೆಸರನ್ನು ಸೂಚಿಸಿದೆ. ಬಿಗ್ ಬಾಸ್ ನಾಲ್ಕು ಮಂದಿಯ ಹೆಸರು ಹೇಳುತ್ತಿದ್ದಂತೆ ಸ್ಪರ್ಧಿಗಳು ಶಾಕ್ ಆದರು.
ಇದು ಪ್ರಾಂಕ್ ಮಾಡಿರುವುದು ಎಂದು ಹೇಳಿದರು ಸಹ ಗಣನೆಗೆ ತೆಗೆದಿಕೊಳ್ಳದೆ ತನ್ನ ನಿರ್ಧಾರ ತಿಳಿಸಿದೆ. ಇದರಿಂದ ಬಿಗ್ ಮನೆಯ ಕೆಲವು ಸ್ಪರ್ಧಿಗಳು ರೊಚ್ಚಿಗೆದಿದ್ದಾರೆ. ಕ್ಯಾಪ್ಟನ್ ಆದರೂ ಸಹ ಅವರಿಗೆ ಮರ್ಯಾದೆ ಸಿಗುತ್ತಾ ಎಂದು ನೇಹಾ ಗೌಡ ತೇಳಿಸಿದ್ದಾರೆ. ಸೀನಿಯರ್ಸ್ ಆದವರು ಮೊದಲೇ ತಿಳಿಸಬೇಕಿತ್ತು ಎಂದು ದರ್ಶ್ ಜೋರಾಗಿ ಹೇಳಿದರು. ಇದರಿಂದ ಸಿಡಿದೆದ್ದ ಸಂಬರಗಿ ಇಲ್ಲಿ ಸೀನಿಯರ್ ಆದವರು ಮಾಡಿದ ಕೆಲಸವಲ್ಲ ಎಂದು ಕೂತವರು ಜೋರಾಗಿ ಕೂಗಾಡುತ್ತ ಎದ್ದು ಬಂದರು.
ಸಾನ್ಯ ಕೂಡ ಮೊದಲೇ ಹೇಳಬೇಕು, ಇವಾಗ ಎಲ್ಲಾ ತಪ್ಪು ಅಂತ ಹೇಳುತ್ತಿದ್ದಾರೆ. ನಿನ್ನೆ ಎಲ್ಲರೂ ಏನ್ ಮಾಡ್ತಿದ್ರು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅರುಣ್ ಸಾಗರ್ ನಿನ್ನ ಕಾಲಬುಡಕ್ಕೆ ಕೊಚ್ಚೆ ಬಂದಾಗ ಹೀಗೆಲ್ಲ ಮಾತನಾಡಬಾರದು ಎಂದು ಖಡಕ್ ಆಗಿ ಹೇಳಿದರು. ಪ್ರಾಂಕ್ ಮಾಡಿ ಸ್ಪರ್ಧಿಗಳು ಸಂಕಷ್ಟಕ್ಕೆ ಸಿಲುಕ್ದಿದ್ದಾರೆ. ಬಿಗ್ ಬಾಸ್ ಕೂಡ ಸ್ಪರ್ಧಿಗಳಿಗೆ ಪ್ರಾಂಕ್ ಮಾಡಿ ಚಮಕ್ ಕೊಟ್ಟಿದಿಯಾ ಅಥವಾ ಸೀರಿಯಸ್ ಆಗಿಯೇ ಹೇಳಿದ್ಯಾ ಎನ್ನುವುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
BBK9: ಎರಡನೇ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್
ಸದ್ಯ ಇವತ್ತಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಇದು ತಪ್ಪು ಅವರೆಲ್ಲಾ ಎಂಟಟೇನ್ ಮಾಡಲು ಹೀಗೆ ಮಾಡಿದ್ದು, ಕಷ್ಟಪಟ್ಟವರಿಗೆ ಬೆಲೆನೇ ಇಲ್ಲ ಎನ್ನುವ ಹಾಗೆ ಆಗುತ್ತೆ. ಹೀಗೆ ಮಾಡಬೇಡಿ ಬಿಗ್ ಬಾಸ್' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಇದು ರಾಕೇಶ್ ನಿಂದನೇ ಆಗಿದ್ದು ಎಂದು ಹೇಳಿದರು.
ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
BBK9; ಅನ್ನ ಹಾಕೋಕೆ ಯೋಗ್ಯತೆ ಇಲ್ಲ, ಪುರಾಣ ಮಾತಾಡ್ತಾರೆ, ಸ್ಪರ್ಧಿಗಳ ವಿರುದ್ಧ ಸಿಡಿದೆದ್ದ ಆರ್ಯವರ್ಧನ್
ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದು ಸದ್ಯ 17 ಮಂದಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಎರಡನೇ ವಾರ ಯಾರ ಹೊರಹೋಗುತ್ತಾರೆ ಎಂದು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.