Puttakkana Makkalu: ಸ್ನೇಹಾಳಲ್ಲಿ ಕಂಠಿ ಬಗ್ಗೆ ಪ್ರೀತಿ ಚಿಗುರಿದೆ!

Published : Oct 05, 2022, 02:53 PM IST
Puttakkana Makkalu: ಸ್ನೇಹಾಳಲ್ಲಿ ಕಂಠಿ ಬಗ್ಗೆ ಪ್ರೀತಿ ಚಿಗುರಿದೆ!

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್‌ಪಿಯಲ್ಲಿ ಸದಾ ನಂಬರ್ ಒನ್ ಆಗಿಯೇ ಗುರುತಿಸಿಕೊಂಡಿದೆ. ಈ ಸೀರಿಯಲ್‌ನಲ್ಲೀಗ ಕಚಗುಳಿ ಇಡುವ ಎಪಿಸೋಡ್ ಶುರುವಾಗಿದೆ. ಅದು ಸ್ನೇಹಾಗೆ ಕಂಠಿ ಬಗ್ಗೆ ಚಿಗುರುತ್ತಿರುವ ಪ್ರೀತಿ. ಕಂಠಿ ಸ್ನೇಹ ಫ್ರೆಂಡ್‌ಶಿಪ್ಪೇ ಮುಗೀತೇನೋ ಅನ್ನೋ ಹಂತದಲ್ಲಿ ಹೀಗೊಂದು ಕಚಗುಳಿಯ ಎಪಿಸೋಡ್ ಗಳು ಮುದ ಹೆಚ್ಚಿಸುತ್ತಿವೆ.  

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನೋಡೋ ವೀಕ್ಷಕರಿಗೆ ಸ್ನೇಹ ಮತ್ತು ಕಂಠಿ ನಡುವಿನ ಪ್ರೇಮ ಅರಳುವ ಎಪಿಸೋಡ್‌ಗಳು ಕಚಗುಳಿ ಇಡುತ್ತಿವೆ. ಇನ್ನೇನು ಇವರಿಬ್ಬರ ನಡುವೆ ವಿರಸ ಹೆಚ್ಚಾಗ್ತಿದೆ. ಇವರಿಬ್ಬರೂ ದೂರ ಆಗ್ತಿದ್ದಾರೆ ಅನ್ನೋ ಹೊತ್ತಲ್ಲೇ ಪ್ರೇಮವೊಂದು ಅರಳಲು ಸಿದ್ಧವಾಗಿ ಕೂತಿದೆ. ಈ ಹಿಂದಿನ ಎಪಿಸೋಡ್‌ಗಳಲ್ಲಿ ಸ್ನೇಹಾ ಮತ್ತು ಮನೆಯವರು ಕಂಠಿ ಮತ್ತು ಆತನ ಗೆಳೆಯರ ಜೊತೆ ಗಣೇಶನ ವಿಸರ್ಜನೆಗೆ ಅಂತ ಹೊರಟಿದ್ದಾಗ ಒಂದು ಘಟನೆ ನಡೆದು ಇವರಿಬ್ಬರ ಫ್ರೆಂಡ್‌ಶಿಪ್ ಕಟ್ ಆಯ್ತು ಅಂತ ವೀಕ್ಷಕರು ಅಂದುಕೊಳ್ಳುವ ಘಟನೆ ನಡೆಯಿತು. ಪುಟ್ಟಕ್ಕನ ಮಗಳು ಸ್ನೇಹ ಮೊದಲಿನಿಂದಲೂ ಶಿಸ್ತಿಗೆ, ಬುದ್ಧಿವಂತಿಕೆಗೆ ಹೆಸರಾದ ಹುಡುಗಿ. ಅವಳ ಮೇಲೆ ಬಡ್ಡಿ ಬಂಗಾರಮ್ಮನ ಮಗ ಕಂಠಿಗೆ ಪ್ರೀತಿ. ಆತ ಮನಸ್ಸಲ್ಲೇ ಗುಟ್ಟಾಗಿ ಅವಳನ್ನು ಪ್ರೀತಿಸುತ್ತಿರುವ ವಿಚಾರ ಇನ್ನೂ ಸ್ನೇಹಾಗೆ ತಿಳಿದಿಲ್ಲ. ಆದರೆ ಯಾರೋ ಕಿಡಿಗೇಡಿಗಳು ಇವರಿಬ್ಬರ ಹೆಸರನ್ನು ಊರಲ್ಲಿಡೀ ಗೋಡೆ ಮೇಲೆ ಅಂಟಿಸಿಟ್ಟಿರುತ್ತಾರೆ. ಇದನ್ನು ನೋಡಿದ ಸ್ನೇಹಾಗೆ ಸಿಟ್ಟು, ನೋವು, ಅಸಹನೆ ಎಲ್ಲವೂ ಮನಸ್ಸಿಗೆ ಬರುತ್ತದೆ. ಆದರೆ ಅವಳ ಈ ಮನಸ್ಥಿತಿ ಕಂಠಿಯಿಂದ ಅವಳನ್ನು ದೂರ ಮಾಡುತ್ತೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಈ ಪ್ರಕರಣ ಸುಖಾಂತ್ಯವಾಗಿ ಕಂಠಿ ಸ್ನೇಹಾ ಮಾತಾಡೋದು ಮಾತ್ರ ಅಲ್ಲ ಇಬ್ಬರ ನಡುವೆ ಪ್ರೇಮವೂ ಚಿಗುರಿದೆ.

ಅಷ್ಟಕ್ಕೂ ಸ್ನೇಹಾ ಮನಸ್ಸಲ್ಲಿ ಕಂಠಿ ಬಗ್ಗೆ ಪ್ರೀತಿ ಹುಟ್ಟೋದಕ್ಕೆ ಕಾರಣ ಒಂದು ಘಟನೆ. ಆ ರಾತ್ರಿ ಪುಟ್ಟಕ್ಕ ಹಾಗೂ ಮಕ್ಕಳು ಊಟ ಮಾಡಲು ತಯಾರಿ ಮಾಡುತ್ತಿರುತ್ತಾರೆ. ಖೋ-ಖೋ ಆಟ ಆಟದ ಮೂಡಿನಲ್ಲಿರುವ ಸುಮಾಳೂ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಕೂರುತ್ತಾಳೆ ಈ ವೇಳೆಗೆ ಸರಿಯಾಇ ಕರೆಂಟ್ ಹೋಗುತ್ತದೆ. ಪುಟ್ಟಕ್ಕ ದೀಪ ತರಲು ಒಳ ಹೋಗಿ ಬರುವ ವೇಳೆ ಬಾಗಿಲು ತಟ್ಟಿದ ಶಬ್ದ ಕೇಳುತ್ತದೆ. ಆಗ ಪುಟ್ಟಕ್ಕ ಯಾರಿರಬಹುದು ಎಂದು ಯೋಚನೆ ಮಾಡುತ್ತಾ ಬಾಗಿಲು ತೆರೆಯಲು ಹೋದಾಗ ಅವ್ವ ನಾನೇ ಬಾಗಿಲು ತೆಗೆಯುತ್ತೇನೆ ಎಂದು ಸ್ನೇಹಾ ಹೇಳುತ್ತಾಳೆ. ಮೊಬೈಲ್‌ನಲ್ಲಿ ಟಾರ್ಚ್ ಬಿಟ್ಟುಕೊಂಡು ನೋಡುವ ಸ್ನೇಹಾಗೆ ಆಗ ಅಲ್ಲೊಬ್ಬ ಬಂಧಿಯಾಗಿರುವ ವ್ಯಕ್ತಿ ಕಂಡುಬರುತ್ತಾನೆ. ಆತನ ಬಾಯಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚುತ್ತಾರೆ. ಆ ಬಳಿಕ ಆತ ಕೆಂಪ ಎಂದು ಸ್ನೇಹಾಗೆ ತಿಳಿಯುತ್ತದೆ. ಆತನ ಮುಖದಲ್ಲಿ ರಕ್ತ ಒಸರುತ್ತಿರುತ್ತದೆ. ಸ್ನೇಹಾ ಅನುಮಾನದಲ್ಲೇ , 'ಏನು ಇಷ್ಟು ಹೊತ್ತಿಗೆ ಬಂದಿದ್ದೀರಾ ಯಾಕೆ ಏನಾಯಿತು?' ಎಂದು ಕೇಳುತ್ತಾಳೆ. ಆ ವೇಳೆ ಕೆಂಪ, 'ನನ್ನದು ತಪ್ಪಾಯಿತಕ್ಕ ಕ್ಷಮಿಸಿ ಬಿಡು ಅಕ್ಕ..' ಎಂದು ಸ್ನೇಹಾಳ ಕ್ಷಮೆ ಕೋರುತ್ತಾನೆ.

ಅರ್ಧಾಂಗಿ: ಬನಶಂಕರಿ ಪವಾಡ, ದೇವಿ ಅವತಾರದಲ್ಲಿ ರಾಧಿಕಾ ನಾರಾಯಣ್!

ಈ ಕೆಂಪ ಕಾಳಿ ಜೊತೆಗೆ ಸುತ್ತುತ್ತಿದ್ದವನು. ಕಾಳಿಯ ಚಿತಾವಣೆಯಿಂದ ಈತನೇ ಊರ ತುಂಬ ಸ್ನೇಹಾ ಮತ್ತು ಕಂಠಿಯ ಪೋಸ್ಟರ್ ಅಂಟಿಸಿರುತ್ತಾನೆ. ಈ ವಿಚಾರವನ್ನು ಸ್ನೇಹಾ ಹಾಗೂ ಮನೆಯವರಿಗೆ ತಿಳಿಸುವ ಕೆಂಪ ಸ್ನೇಹಾಳ ಕಾಲಿಗೆ ಬೀಳಲು ಮುಂದಾಗುತ್ತಾನೆ. ಆಗ ಸುಮಾ ಕೋಪದಿಂದ ಕೆಂಪನಿಗೆ ಹೊಡೆಯಲು ಮುಂದಾಗುತ್ತಾಳೆ. ಆಗ ಸುಮಾಳನ್ನು ತಡೆದ ಪುಟ್ಟಕ್ಕ ಬಳಿಕ ಹೇಳುತ್ತಾಳೆ ಏನಪ್ಪ ಯಾಕೆ ಈ ರೀತಿ ಮಾಡಲು ಹೋದೆ. ಹೀಗೆ ಮಾಡುವುದರಿಂದ ನಿನಗೇನು ಸಿಗುತ್ತದೆ, ಹೆಣ್ಣು ಮಕ್ಕಳ ಮೇಲೆ ಹೀಗೆ ತಪ್ಪಾಗಿ ಪ್ರಚಾರ ಮಾಡುವುದು ನ್ಯಾಯವೇ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕೆಂಪ, ಅದಕ್ಕೆ ಶಿಕ್ಷೆ(Punishment) ಆಗಿದೆ ಕಣವ್ವ ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹಾ ಶಿಕ್ಷೇನಾ ಎಂದು ಆಶ್ಚರ್ಯದಿಂದ ಹೇಳುತ್ತಾಳೆ. ಅದಕ್ಕೆ ಕಂಠಿ ಹೌದು ಅಣ್ಣ ಶಿಕ್ಷೆ ಕೊಟ್ಟರು ಅಂದಾಗ ಸ್ನೇಹಾಗೆ ಶಾಕ್ (Shock)ಆಗುತ್ತದೆ. ಆಗ ಸ್ನೇಹಾಗೆ ನಂಬಿಕೆ ಬಾರದೆ ದೊರೆ ನಿನ್ನ ಹೆದರಿಸಿ ಕರೆದುಕೊಂಡು ಬಂದ ಅಲ್ವಾ ಎಂದಾಗ ಕೆಂಪ ನೋವಿನಿಂದ ಇಲ್ಲ ಅಕ್ಕ ಬೇಕಾದರೆ ಈ ವಿಡಿಯೋ(Vedio) ನೋಡು ಎಂದು ಹೇಳಿ ತಾನು ಪೋಸ್ಟರ್ ಅಂಟಿಸುತ್ತಿದ್ದ ವಿಡಿಯೋ ತೋರಿಸುತ್ತಾನೆ.

ಈ ಘಟನೆಯಿಂದ ಸ್ನೇಹಾ ಮತ್ತು ಕಂಠಿಯ ನಡುವಿನ ಸಮಸ್ಯೆ(Problem) ಬಗೆಹರಿದಿದೆ. ಈ ಇಬ್ಬರಲ್ಲೂ ಹಳೆಯ ಸ್ನೇಹ ಮೂಡಿದೆ. ಅಷ್ಟೇ ಅಲ್ಲ. ಸ್ನೇಹಾಗೆ ಕನಸಲ್ಲಿ ಕಂಠಿ ಬಂದಿದ್ದಾನೆ. ಅದು ಪ್ರೀತಿ(Love)ಯೇ ಅನ್ನೋದು ಸ್ನೇಹಾಗೆ ಗೊತ್ತಾಗಿದೆ. ಅವಳ ತುಟಿಗಳಲ್ಲಿ ನಗು ಮೂಡಿದೆ. ಕಂಠಿ ಮತ್ತು ಸ್ನೇಹಾ ನಡುವೆ ಚಿಗುರುತ್ತಿರುವ ಪ್ರೀತಿ ವೀಕ್ಷಕರಿಗೂ ಇಷ್ಟವಾಗಿದೆ. ಇವರಿಬ್ಬರ ರೊಮ್ಯಾಂಟಿಕ್ (Romantic) ದೃಶ್ಯ ನೋಡಲು ಅವರೂ ಕಾಯುತ್ತಿದ್ದಾರೆ.

Adipurush; ಪ್ರಭಾಸ್‌ಗೆ ಬೆವರು ಒರೆಸಲು ತನ್ನದೇ ದುಪಟ್ಟಾ ನೀಡಿದ ಕೃತಿ, ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?