ಕೆಂಡಸಂಪಿಗೆ: ಓಟಿಗಾಗಿ ಸುಮನಾಗೆ ತಾಳಿ ಕಟ್ಟಿದ ತೀರ್ಥಂಕರ್‌, ಎಲೆಕ್ಷನ್ ಮುಗಿದ ಮೇಲೆ ಡಿವೋರ್ಸ್!

By Suvarna NewsFirst Published Oct 6, 2022, 12:49 PM IST
Highlights

ಕೆಂಡಸಂಪಿಗೆ ಸೀರಿಯಲ್‌ನಲ್ಲಿ ನವರಾತ್ರಿ ಹೊತ್ತಲ್ಲಿ ಸುಮನಾ ಮದುವೆ ನಡೆದೇ ಹೋಗಿದೆ. ತೀರ್ಥಂಕರ್ ತನ್ನ ಎಲೆಕ್ಷನ್ ದಾಹಕ್ಕಾಗಿ ಸುಮನಾ ಬದುಕನ್ನೂ ಲೆಕ್ಕಿಸದೇ ತಾಳಿ ಕಟ್ಟಿದ್ದಾನೆ. ಮನೆಯವರ ಮುಂದೆ ಇದೊಂದು ಮದುವೆಯೇ ಅಲ್ಲ ಅಂದಿದ್ದಾನೆ. ಎಲೆಕ್ಷನ್ ಮುಗಿದ ನಂತರ ಡಿವೋರ್ಸ್ ಕೊಡ್ತಾನಂತೆ!

ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6.30ಕ್ಕೆ ಪ್ರಸಾರವಾಗುವ ಕೆಂಡಸಂಪಿಗೆ ಸೀರಿಯಲ್‌ ನಲ್ಲಿ ತಿರುವುಗಳು ಜೋರಾಗಿವೆ. ಒಂದು ಕಡೆ ಇನ್ನೊಂದು ವಾರದಲ್ಲಿ ನಡೆಯೋ ಎಲೆಕ್ಷನ್ ಗಲಾಟೆ, ಇನ್ನೊಂದು ಕಡೆ ಸುಮನಾ ಮದುವೆ. ತನ್ನ ತಮ್ಮ ತೀರಿಕೊಂಡು ಇನ್ನೂ ಕೆಲವೇ ದಿನಗಳಾಗಿರುವಾಗ ಅವಳ ಮದುವೆ ವಿಚಾರ ಮುನ್ನೆಲೆಗೆ ಬರುತ್ತದೆ. ಅವಳ ತಮ್ಮ ರಾಜೇಶನ ಆಸೆಯಂತೆ ಅವಳಿಗೆ ಅನುರೂಪನಾದ ಗಂಡನ್ನು ಸ್ವತಃ ಕಾರ್ಪೊರೇಟರ್ ತೀರ್ಥಂಕರ್ ನೇ ನೋಡುತ್ತಾನೆ. ತಾನೇ ಸ್ವತಃ ಮುಂದೆ ನಿಂತು ಮದುವೆಯ ವ್ಯವಸ್ಥೆ ಮಾಡುತ್ತಾನೆ. ಮದುವೆ ಆಗಲು ಸ್ವಲ್ಪವೂ ಮನಸ್ಸಿಲ್ಲದಿದ್ದರೂ ಎಲ್ಲರ ಒತ್ತಾಯಕ್ಕೆ ಮಣಿದು ಸುಮನಾ ಹಸೆಮಣೆ ಏರುತ್ತಾಳೆ. ಆದರೆ ಸುಮನಾಳನ್ನು ಮದುವೆ ಮಾಡಿಕೊಳ್ಳುವ ಗಂಡು ಮಾತ್ರ ಬರುತ್ತಿಲ್ಲ. ಇದೇ ಹೊತ್ತಿಗೆ ಸುಮನಾ ಕುಟುಂಬಕ್ಕೆ ಸಾಲ ನೀಡಿದ ವಿಜಯಮ್ಮನ ಮಗ ಕಾಳಿ ಅಲ್ಲಿ ಬರುತ್ತಾನೆ. ಆತನಿಗೆ ಸುಮನಾಳನ್ನು ಮದುವೆ ಆಗುವ ಕನಸು. ಆದರೆ ಸುಮನಾಗೆ ಆತನ ನೆರಳು ಕಂಡರೂ ಆಗೋದಿಲ್ಲ. ಇದೀಗ ಆತ ಸುಮನಾ ಮದುವೆ ನಡೆಯದ ಹಾಗೆ ಮಾಡುವ ಹುನ್ನಾರ ಮಾಡುತ್ತಿದ್ದಾನೆ. ಮದುವೆಯ ಗಂಡು ನಾಪತ್ತೆ ಆದಾಗ ಮತ್ತೆ ತೀರ್ಥಂಕರ್ ಮುಂದೆ ಸವಾಲೊಡ್ಡುತ್ತಾನೆ. ಸದ್ಯಕ್ಕೆ ಎಲ್ಲದಕ್ಕಿಂತ ಮುಂಬರುವ ಎಲೆಕ್ಷನ್ನೇ ಮುಖ್ಯವಾಗಿರುವ ಕಾರಣ ತೀರ್ಥಂಕರ್ ಎಲ್ಲರ ಎದುರು ಸುಮನಾಗೆ ತಾಳಿ ಕಟ್ಟೇ ಬಿಡುತ್ತಾನೆ.

ಜನರ ವಿಶ್ವಾಸ ಗಳಿಸಲು ತಾಳಿ ಏನೋ ಕಟ್ಟಿದ ಆದರೆ ಸುಮನಾ ಜೊತೆಗೇ ಬದುಕುತ್ತಾನಾ ಅಂದರೆ ಅದಕ್ಕೆ ತೀರ್ಥಂಕರ್ ಸ್ಪಷ್ಟ ಉತ್ತರ ಇದೆ - 'ಇಲ್ಲ' ಅಂತ. ಏಕೆಂದರೆ ಆತನೇ ಹೇಳುವ ಹಾಗೆ ಆತ ಇದನ್ನೆಲ್ಲ ಮಾಡಿರೋದು ಎಲೆಕ್ಷನ್‌ಗಾಗಿ.

ಇದಕ್ಕೋಸ್ಕರ ಮದುವೆ ಆದರೂ ಸುಮನಾಳನ್ನು ಅವಳ ಮನೆಯನ್ನೇ ಬಿಟ್ಟು ತನ್ನ ಮನೆಗೆ ಒಬ್ಬನೇ ಬರುತ್ತಾನೆ ತೀರ್ಥಂಕರ್. ಅಲ್ಲಿ ತಾನು ಮದುವೆ ಆಗಲಿರುವ ನಿತ್ಯಾಳಿಗೆ ಮುಂದೆ ಆಕೆಯನ್ನೇ ಮದುವೆ ಆಗುವ ಮಾತು ಕೊಡುತ್ತಾನೆ. ತೀರ್ಥಂಕರ್ ಈ ಸ್ವಭಾವ ಮನೆಯವರಿಗೇ ಶಾಕ್ ತರುತ್ತಿದೆ. ಓಟಿಗಾಗಿ ಏನು ಮಾಡಲೂ ಹೇಸದ ರಾಜಕಾರಣಿಯನ್ನು ಈ ತೀರ್ಥಂಕರ್ ಪ್ರತಿನಿಧಿಸುವ ಹಾಗೆ ಕಂಡರೂ ಒಳಗಿನಿಂದ ಈತ ಒಳ್ಳೆಯವನಾಗಿರುವ ಕಾರಣ, ಈತನ ಈ ಸ್ವಭಾವವೂ ಮುಂದೊಂದು ದಿನ ಬದಲಾಗಬಹುದು ಅನ್ನೋ ನಿರೀಕ್ಷೆ ಇಟ್ಟುಕೊಳ್ಳಬಹುದು.

 

ತೀರ್ಥಂಕರ್ ತಾನು ಆಯೋಜಿಸಿದ್ದ ಸಾಮೂಹಿಕ ವಿವಾಹದ ಜಾಗದಲ್ಲೇ ಸುಮನಾ ಮದುವೆಯನ್ನು ತಾನೇ ನೋಡಿದ ಹುಡುಗನ ಜೊತೆ ಮಾಡಲು ಸಿದ್ಧತೆ ಮಾಡಿರುತ್ತಾನೆ. ಆದರೆ ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿರುವುದಿಲ್ಲ. ಕಾಳಿ ಸಾಮೂಹಿಕ ವಿವಾಹ ನಡೆಯುವ ಜಾಗಕ್ಕೆ ಬಂದು, ನೆರೆದಿರುವ ಜನರ ಮುಂದೆ ಕಾರ್ಪೊರೇಟರ್ ತೀಥರ್ಂಕರ್ ಮತ್ತು ಸುಮನಾ ಮಧ್ಯೆ ಸಂಬಂಧ ಕಲ್ಪಿಸುತ್ತಾನೆ. ನಮ್ಮ ಏರಿಯಾ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಅವಳನ್ನು ಬೇರೆಯವರಿಗೆ ಆಕೆಯನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾನೆ. ಆದ್ರೆ ಈಗ ಆ ಹುಡುಗ ಪರಾರಿ ಆಗಿದ್ದಾನೆ. ಈಗ ಸುಮನಾ ಬದುಕಿನ(Life) ಕಥೆ ಏನು ಅಂತ ಎಲ್ಲರ ಮುಂದೆ ಪ್ರಶ್ನೆ ಮಾಡ್ತಾನೆ. ತಾಕತ್ತಿದ್ರೆ ನೀನು ತಾಳಿ ಕಟ್ಟು ಎಂದು ಕಾರ್ಪೊರೇಟರ್ ತೀರ್ಥಂಕರ್ ಗೆ ಸವಾಲ್ ಹಾಕ್ತಾನೆ. ಕಾಳಿ ಹಾಕಿದ ಸವಾಲಿನಲ್ಲಿ ಎಲ್ಲಿ ಶ್ರೀದೇವಿ ಕಾಲನಿಯ ಜನರ ವಿಶ್ವಾಸ ಕಳೆದುಕೊಂಡು ಬಿಡುತ್ತೇನೋ ಅನ್ನೋ ಭಯದಲ್ಲಿ ತೀರ್ಥಂಕರ್ ತಾಳಿ ಕಟ್ಟಲೂ ಮುಂದಾಗ್ತಾನೆ. ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗ್ತಾರೆ. ಆದರೆ ತೀರ್ಥಂಕರ್ ಮಾತಿನಂತೆಯೇ ಸುಮನಾಗೆ ತಾಳಿ ಕಟ್ಟುತ್ತಾನೆ.

Puttakkana Makkalu: ಸ್ನೇಹಾಳಲ್ಲಿ ಕಂಠಿ ಬಗ್ಗೆ ಪ್ರೀತಿ ಚಿಗುರಿದೆ!

ಮದುವೆಯಾದ ಮೇಲೆ ಸುಮನಾಳನ್ನು ಅವಳ ಮನೆಯನ್ನೇ ಬಿಟ್ಟಿದ್ದಾನೆ. ತನ್ನ ರಾಜಕೀಯ(Political)ದ ಜೀವನದ ಬಗ್ಗೆ ಅವಳಿಗೆ ವಿವರಿಸಿ ಹೇಳಿದ್ದಾನೆ. ಅದಕ್ಕೆ ಸುಮನಾ ಕೂಡ ಒಪ್ಪಿಕೊಂಡು ನೀವು ಹೇಳಿದಂತೆ ಮಾಡುವೆ ಎಂದು ತನ್ನ ಮನೆಯಲ್ಲಿ ಇದ್ದಾಳೆ.

ಇತ್ತ ಮದುವೆ(Wedding) ಮುಗಿಸಿಕೊಂಡು ಮನೆಗೆ ಬಂದ ತೀರ್ಥಂಕರ್ ಗೆ ಆತನ ತಂದೆ ಕಪಾಳಕ್ಕೆ ಹೊಡೆದಿದ್ದಾರೆ. ಮನೆಯವರೆಲ್ಲಾ ಅವನನ್ನು ಬೈದಿದ್ದಾರೆ. ಆದ್ರೆ ಆ ಮದುವೆಯನ್ನು ತೀರ್ಥಂಕರ್ ಸಮರ್ಥನೆ ಮಾಡಿಕೊಳ್ತಿದ್ದಾರೆ. ತಾನು ಮದುವೆ ಆಗದಿದ್ದಿದ್ದರೆ ತನ್ನ ಇಷ್ಟು ದಿನದ ಕನಸು(Dream) ಹಾಳಾಗುತ್ತಿತ್ತು ಎಂದು ಹೇಳ್ತಾನೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ(Engage)ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ.

ಬಿಗ್‌ ಬಾಸಲ್ಲೂ ಇಲ್ಲ, ಶನಿ ಖ್ಯಾತಿಯ ಸುನೀಲ್‌ ಏಕಾಏಕಿ ಎಲ್ಲಿ ನಾಪತ್ತೆ ಆದ್ರು?

ಅತ್ತ ತಮ್ಮನನ್ನು ಕಳೆದುಕೊಂಡು ದಿಕ್ಕೆಟ್ಟಿರುವ ಸುಮನಾಗೆ ಇತ್ತ ತೀರ್ಥಂಕರನೂ ತನ್ನ ರಾಜಕೀಯ ದಾಹಕ್ಕಾಗಿ ಅನ್ಯಾಯ ಮಾಡಿದ್ದಾನೆ. ಮುಂದೆ ಅವಳ ಬದುಕು ಹೇಗಿರುತ್ತೆ ಅನ್ನೋದೇ ಕುತೂಹಲ ಹೆಚ್ಚಿಸುವ ಅಂಶ.

click me!