ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್‌ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ; ಗೋಲ್ಡ್‌ ಸುರೇಶ್‌ ವಿರುದ್ಧ ಗೌತಮಿ ಗರಂ

By Vaishnavi Chandrashekar  |  First Published Nov 14, 2024, 3:25 PM IST

ಟಾಸ್ಕ್‌ ವೇಳೆ ಗೋಲ್ಡ್‌ ಸುರೇಶ್‌ ವಿರುದ್ಧ ಕೂಗಾಡಿದ ಗೌತಮಿ. ಭವ್ಯಾ ಗೌಡ ಮಾತ್ರವಲ್ಲ ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿರುವ ಗಟ್ಟಿಗಿತ್ತಿ....
 


ಬಿಗ್ ಬಾಸ್ ಸೀಸನ್ 11ರಲ್ಲಿ ಈ ವಾರ ಜೋಡಿ ಟಾಸ್ಕ್‌ ನಡೆಯುತ್ತಿದೆ. ಜೋಡಿಗಳು ಇಷ್ಟವಿರಲಿ ಇಲ್ಲದೆ ಇರಲಿ ಒಟ್ಟಿಗೆ ನಿಂತು ಕೆಲಸ ಮಾಡುವುದು ಅನಿವಾರ್ಯ ಏಕೆಂದರೆ ಈ ಜೋಡಿಗಳನ್ನು ಬಿಗ್ ಬಾಸ್ ಆಯ್ಕೆ ಮಾಡಿರುವುದು. ಇಷ್ಟದ ನಡುವೆಯೋ ಕಷ್ಟದ ನಡುವೆಯೋ ಟಾಸ್ಕ್‌ ಶುರು ಮಾಡಿಕೊಂಡಿದ್ದಾರೆ. ನಿನ್ನೆ ಬಿಗ್ ಬಾಸ್ ಮೂರು ಮೂರು ಜೋಡಿಗಳಿಗೆ ಸ್ಟ್ಯಾಚ್ಯೂ ಟಾಸ್ಕ್‌ ನೀಡಿದ್ದರು. ಪ್ರತಿಯೊಂದು ಜೋಡಿಯೋ ವಿಭಿನ್ನ ರೀತಿಯಲ್ಲಿ ಸ್ಟ್ಯಾಚ್ಯೂ ಆಗಬೇಕು, ಆಗ ಎದುರು ಇರುವ ಮೂರು ಸ್ಪರ್ಧಿಗಳು ಮುಟ್ಟದೆ ದಾಳಿ ಮಾಡಬೇಕು ಸಣ್ಣ ಪುಟ್ಟ ತಪ್ಪಾದರೂ ಅಂಕ ಕಳೆದುಕೊಳ್ಳುತ್ತಾರೆ.

ಉಗ್ರಂ ಮಂಜು ಮತ್ತು ಭವ್ಯಾ ಗೌಡ ಈ ವಾರದ ಜೋಡಿಯಾ ಟಾಸ್ಕ್ ಆರಂಭಿಸುತ್ತಾರೆ. ಇಬ್ಬರು ಸ್ಟ್ಯಾಚ್ಯೂ ಆಗಿ ಆಟ ಶುರು ಮಾಡಿದಾಗ ಎದುರಾಳಿ ತಂಡ ಗೋಲ್ಡ್‌ ಸುರೇಶ್‌ ಮತ್ತು ಅನುಷಾ ಜೋಡಿ ಅಟ್ಯಾಕ್ ಮಾಡಲು ಆರಂಭಿಸುತ್ತಾರೆ. ನೀರು, ಕೆಸರು, ಪೌಡರ್ ಸೇರಿದಂತೆ ಹಲವು ರೀತಿಯಲ್ಲಿ ಪ್ರಯತ್ನಗಳಿಂದ ಫೌಲ್ ಮಾಡಿಸಲು ಮುಂದಾಗುತ್ತಾರೆ. ಅತಿ  ಕಡಿಮೆ ಫೌಲ್ ಮಾಡಿದವರಿಗೆ 100 ಅಂಕ, ಎರಡನೇ ಸ್ಥಾನ ಪಡೆದವರಿಗೆ 50 ಅಂಕ ಮತ್ತು ತುಂಬಾ ಫೌಲ್ ಮಾಡಿದವರಿಗೆ 0 ಅಂಕ ಎನ್ನುತ್ತಾರೆ. ಯಾವುದೇ ಫೌಲ್ ಮಾಡದೆ ಧರ್ಮ ಕೀರ್ತಿರಾಜ್‌ ಮತ್ತು ಐಶ್ವರ್ಯ ಜೋಡಿ 100 ಅಂಕ ಪಡೆಯುತ್ತದೆ. 

Tap to resize

Latest Videos

undefined

ನಿಮ್ಮ ಮನೆ ಒಲೆ ಉರಿಸೋಕೆ ಇನ್ನೊಬ್ಬರ ಮನೆ ಒಲೆ ಆರಿಸಬೇಡಿ: ಶಿವರಾಜ್‌ಕುಮಾರ್

ಇಲ್ಲಿ ಸಖತ್ ಗಟ್ಟಿಯಾಗಿ ನಿಂತಿದ್ದ ಭವ್ಯಾ ಗೌಡ ಮೇಲೆ ಗೋಲ್ಡ್‌ ಸುರೇಶ್ ಅಟ್ಯಾಕ್ ಮಾಡಲು ಮುಂದಾಗುತ್ತಾರೆ. ಭವ್ಯಾ ಗೌಡ ಕಾಲಿನ ಭಾಗಕ್ಕೆ ಬಲವಾಗಿ ಒಂದು ಬಕೆಟ್‌ ನೀರು ಏರಚುತ್ತಾರೆ. ಆಗ ತುಂಬಾ ನೋವಾದರೂ ಫೌಲ್ ಮಾಡಬಾರದು ಎಂದು ಭವ್ಯಾ ಗೌಡ ನಿಂತಲೇ ಕಣ್ಣೀರು ಹಾಕಲು ಶುರು ಮಾಡುತ್ತಾರೆ. ಇದನ್ನು ಗಮನಿಸಿದ ಗೌತಮಿ ಸಿಟ್ಟು ಮಾಡಿಕೊಳ್ಳುತ್ತಾರೆ. 'ಸುರೇಶ್ ನೀವು ಮಾಡಿದ್ದು ತಪ್ಪು. ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಇರೋದಾ? ಹೆಣ್ಣು ಮಕ್ಕಳಿಗೂ ಇರುತ್ತದೆ. ನೀರು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು' ಎಂದು ಗೌತಮಿ ಹೇಳುತ್ತಾರೆ. 

ಅಬ್ಬಬ್ಬಾ! ಎಷ್ಟು ಗ್ರಾಂಡ್‌ ಆಗಿತ್ತು ನೋಡಿ ಮಂಜು ಪಾವಗಡ-ನಂದಿನಿ ರಿಸೆಪ್ಶನ್

ಹೆಣ್ಣು ಮಕ್ಕಳ ವಿಚಾರದಲ್ಲಿ ಸಾಕಷ್ಟು ಬಾರಿ ಗೌತಮಿ ಜಾದವ್ ಧ್ವನಿ ಎತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಲೆಕ್ಕಾಚಾರ ಮಾಡದೆ ಸರಿ ಅಂದರೆ ಸರಿ ತಪ್ಪು ಅಂದರೆ ತಪ್ಪು ಎಂದು ನೇರವಾಗಿ ಹೇಳುತ್ತಾರೆ. ಗೌತಮಿ ಈ ಮಾತುಗಳನ್ನು ಹೇಳಿದ್ದಾಗ ಸುರೇಶ್ ಮೌನವಾಗಿಬಿಟ್ಟರು ನಾನು ಸರಿಯಾಗಿ ಹಾಕುತ್ತಿದ್ದೀನಿ ಎಂದು ವಾದ ಮಾಡಲು ಶುರು ಮಾಡಿದ್ದರು. ಆದರೆ ಸುರೇಶ್ ಮಾಡಿದ್ದು ತಪ್ಪು ಎಂದು ನೆಟ್ಟಿಗರು ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

click me!