ಮಗುವಿನ ಫೋಟೋ ಹಾಕಿ ಚಿಲ್ಡ್ರನ್ಸ್ ಡೇ ಗಿಫ್ಟ್ ನೀಡಿದ ಗೊಂಬೆ ನೇಹಾ

Published : Nov 14, 2024, 12:44 PM ISTUpdated : Nov 14, 2024, 12:45 PM IST
ಮಗುವಿನ ಫೋಟೋ ಹಾಕಿ ಚಿಲ್ಡ್ರನ್ಸ್ ಡೇ ಗಿಫ್ಟ್ ನೀಡಿದ ಗೊಂಬೆ ನೇಹಾ

ಸಾರಾಂಶ

ಲಕ್ಷ್ಮಿ ಬಾರಮ್ಮ ಫೇಮ್ ನ ನೇಹಾ ತಮ್ಮ ಮಗುವಿನ ಮುಖವನ್ನು ಫ್ಯಾನ್ಸ್ಗೆ ತೋರಿಸಿದ್ದಾರೆ. ಸುಂದರ ಫೋಟೋ ಪೋಸ್ಟ್ ಮಾಡಿದ ಅವರು, ಅಭಿಮಾನಿಗಳಿಗೆ ಮಕ್ಕಳ ದಿನಾಚರಣೆ ಗಿಫ್ಟ್ ನೀಡಿದ್ದಾರೆ.   

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆ (Lakshmi Baramma serial Gombe)  ತಮ್ಮ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಮಕ್ಕಳ ದಿನಾಚರಣೆ (Childrens Day) ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ ನೇಹಾ ರಾಮಕೃಷ್ಣ (Neha Ramakrishna).  ಗೊಂಬೆ ಮಗುವಿನ ಫೋಟೋ ನೋಡ್ತಿದ್ದಂತೆ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಬಾಯಲ್ಲೂ ಕ್ಯೂಟ್ ಶಬ್ಧ ಹೊರಗೆ ಬರ್ತಿದೆ. 

ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, ಬೆಡ್ ಮೇಲೆ ನೇಹಾ ಮಗು ಮಲಗಿದ್ದು, ಒಂದ್ಕಡೆ ಅಮ್ಮ ನೇಹಾ ಹಾಗೂ ಇನ್ನೊಂದು ಕಡೆ ಚಂದನ್ ಮಗುವಿನ ಕೈ ಬೆರಳನ್ನು ಹಿಡಿದ್ದಾರೆ.  ನವೆಂಬರ್ 14 ರಂದು, ನಮ್ಮ ಪುಟ್ಟ ಮಗುವಿನ ನೋಟವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ!  ನಮ್ಮ ಜೀವನಕ್ಕೆ ಇವಳು ಬಂದಿರುವುದು ವಿಶೇಷ ಭಾವನೆ ನೀಡಿದೆ. ನಾವು ಎಂದೂ ಊಹಿಸಿರದ ರೀತಿಯಲ್ಲಿ ಅವಳು ನಮ್ಮ  ಹೃದಯದ ತುಂಬಾ ತುಂಬಿಕೊಂಡಿದ್ದಾಳೆ. ಎಲ್ಲ ಮಕ್ಕಳು ಪ್ರಕಾಶಮಾನವಾಗಿ ಹೊಳೆಯುತ್ತಿರಿ. ಮಕ್ಕಳ ದಿನಾಚರಣೆ ಶುಭಾಶಯ ಎಂದು ನೇಹಾ ರಾಮಕೃಷ್ಣನ್ ಶೀರ್ಷಿಕೆ ಹಾಕಿ, ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಆಕ್ಟರ್‌ಗಿದೆ ಅಮ್ಮನ ಜೊತೆ ಸಂಬಂಧ ! ಸತ್ಯ ಬಾಯ್ಬಿಟ್ಟ ನಟ

ನಟಿ ನಮೃತಾ, ಅನುಪಮಾ, ಸುಜಾತಾ, ರಾಕೇಶ್ ಅಡಿಗಾ ಸೇರಿದಂತೆ ಅನೇಕ ಕಲಾವಿದರು ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ತರಾನೇ ಇದೆ ಈ ಮುದ್ದು ಗೊಂಬೆ ಅಲ್ಲಲ್ಲ ಮಿನಿ ಗೊಂಬೆ ಎಂದು ತನ್ನ ಸ್ನೇಹಿತೆ ಮಗಳನ್ನು ನಿರೂಪಕಿ ಅನುಪಮಾ ಗೌಡ ಹೊಗಳಿದ್ದಾರೆ. ದೃಷ್ಟಿ ತಾಗದಿರಲಿ ಅಂತ ನಮೃತಾ ದೃಷ್ಟಿ ಎಮೋಜಿ ಹಾಕಿದ್ದಾರೆ. 

ನೇಹಾಗೆ ಅಭಿನಂದನೆ ಸಲ್ಲಿಸಿರುವ ಅಭಿಮಾನಿಗಳು, ಮಿನಿ ಗೊಂಬೆ, ಮರಿ ಗೊಂಬೆ ಹೀಗೆ ತಮ್ಮಿಷ್ಟದ ಹೆಸರಿನಲ್ಲಿ ಗೊಂಬೆ ಮಗುವನ್ನು ಕರೆದಿದ್ದಾರೆ. ಕ್ಯೂಟ್ ಮಗುವನ್ನು ನೋಡಲು ಎರಡು ಕಣ್ಣು ಸಾಲ್ತಿಲ್ಲ, ಮಗು ತುಂಬಾ ಮುದ್ದಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಅಪ್ಪನ ಮುದ್ದು ಮಗಳು, ಈಗ್ಲೇ ಅಪ್ಪನ ಕಡೆ ನೋಡ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಹೆಸರೇನಿಟ್ಟಿದ್ದೀರಿ ಎಂದು ಇನ್ನೊಬ್ಬರು ಕೇಳಿದ್ದಾರೆ.

ಅಕ್ಟೋಬರ್ 29ರಂದು ನೇಹಾ ಗೌಡ, ಚೊಚ್ಚಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ ಎಂಬ ಶೀರ್ಷಿಕೆಯನ್ನು ನೇಹಾ ಹಾಕಿದ್ದರು.   

ಹಾಲಿವುಡ್‌ನ 2 ಬ್ಲಾಕ್‌ ಬಸ್ಟರ್ ಮೂವಿಗಳ ಆಫರ್‌ ರಿಜೆಕ್ಟ್ ಮಾಡಿದ್ದ ಐಶ್ವರ್ಯಾ ರೈ

ಹೆರಿಗೆ ನಂತ್ರ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆದ್ರೆ ತಮ್ಮ ಮಗುವಿನ ಫೋಟೋವನ್ನು ಅವರು ಪೋಸ್ಟ್ ಮಾಡಿರಲಿಲ್ಲ. ಚಿಲ್ಡ್ರನ್ಸ್ ಡೇ ವಿಶೇಷ ದಿನದಂದು ಫ್ಯಾನ್ಸ್ ಗೆ ನೇಹಾ ಗಿಫ್ಟ್ ನೀಡಿದ್ದಾರೆ. ನೇಹಾ ಗೌಡ, ಗರ್ಭಿಣಿಯಾದಾಗ್ಲೂ ವಿಶ್ರಾಂತಿ ಪಡೆದಿರಲಿಲ್ಲ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಅವರ ಶಾಕುಂತಲೆ ಫೋಟೋ ಶೂಟ್ ಹಾಗೂ ಕುದುರೆ ಬಳಿ ನಿಂತ ಡಿಫರೆಂಟ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು. ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ನೇಹಾ ಗೌಡಗೆ ಕಲರ್ಸ್ ಕನ್ನಡ ವೇದಿಕೆ ಮೇಲೆ ಸೀಮಂತ ನಡೆದಿತ್ತು.  

ಈ ಬಾರಿ ಸ್ಯಾಂಡಲ್ವುಡ್ ಗೆ ಅನೇಕ ಸ್ಟಾರ್ ಕಿಡ್ಸ್ ಆಗಮನವಾಗಿದೆ. ಅನೇಕ ನಟಿಯರಿಗೆ ಅಮ್ಮನಾಗಿ ಪ್ರಮೋಷನ್ ಸಿಕ್ಕಿದೆ. ಆದ್ರೆ ಹೆರಿಗೆ ನಂತ್ರವೂ ವಿಶ್ರಾಂತಿ ಪಡೆಯದೆ ವೃತ್ತಿಯಲ್ಲಿ ಬ್ಯುಸಿಯಿರುವ ನಟಿಯರು ಫ್ಯಾನ್ಸ್ ಗೆ ಸ್ಪೂರ್ತಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?