
“ನಮಗೆ ಇಷ್ಟವಾಗುವ ಪಾತ್ರಗಳು ಸಿಗದಿದ್ದಾಗ ಕೆಲ ಕಲಾವಿದರು ಬೇಸರ ಮಾಡಿಕೊಳ್ತಾರೆ, ಡಿಪ್ರೆಶನ್‌ಗೂ ಹೋಗುತ್ತಾರೆ. ಇನ್ನೂ ಕೆಲವರು ದುಡುಕಿನ ನಿರ್ಧಾರ ತಗೊಂಡಿದ್ದೂ ಇದೆ. ಆದರೆ ʼಗಟ್ಟಿಮೇಳʼ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡಿದ್ದ ಅಶ್ವಿನಿ ಹೊಸ ಉದ್ಯಮ ಸೃಷ್ಟಿ ಮಾಡಿ ಗೆದ್ದಿದ್ದಾರೆ. ಇದೇ ಅಲ್ಲವೆ ಸ್ತ್ರೀ ಶಕ್ತಿ ಅಂದ್ರೆ?
ಮಾಲ್ಟ್ ಉದ್ಯಮ ಆರಂಭ!
ಯುಟ್ಯೂಬ್ ಚಾನೆಲ್ ಆರಂಭಿಸಿರುವ ಅಶ್ವಿನಿ ಅಲ್ಲಿ ತಮ್ಮ ದಿನನಿತ್ಯದ ದಿನಚರಿಗಳ ಬಗ್ಗೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಿದ್ದರು. ಆಗ ಅವರು ಸಿರಿಧಾನ್ಯಗಳ ಮಾಲ್ಟ್ ಬಗ್ಗೆ ಹೇಳಿದ್ದರು. ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಹೊಂದಿರುವ ಅಶ್ವಿನಿ ಅವರು ವಿವಿಧ ಕಾಳುಗಳನ್ನು ಬಳಸಿ ಮನೆಯಲ್ಲಿಯೇ ಹೇಗೆ ಮಾಲ್ಟ್ ಮಾಡುವುದು ಎನ್ನೋದರ ಬಗ್ಗೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯ್ತು. ನಮಗೂ ಈ ರೀತಿ ಮಾಲ್ಟ್ ಬೇಕು ಎಂದು ಅನೇಕರು ಹೇಳಲು ಆರಂಭಿಸಿದರು. ಅವರಲ್ಲಿ ಕೆಲವರಿಗೆ ಅಶ್ವಿನಿ ಮಾಲ್ಟ್ ನೀಡಿದ್ದರು.
ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಪತಿ ಜೊತೆಗಿನ ಫೋಟೋ ಹಂಚಿಕೊಂಡ Gattimela Serial ನಟಿ ಅಶ್ವಿನಿ!
ಸಿರಿಧಾನ್ಯಗಳ ಮಾಲ್ಟ್!
ಈ ಬೇಡಿಕೆ ಹೆಚ್ಚಾದಾಗ ಅವರು ಇದನ್ನೇ ಉದ್ಯಮವನ್ನಾಗಿ ಪರಿಗಣಿಸಿದರೆ, ಅನೇಕರಿಗೆ ಸಹಾಯ ಆಗುತ್ತದೆ ಎಂದು ಭಾವಿಸಿದರು. ಇದಕ್ಕೆ ಅವರ ಪತಿ ಅಜಯ್ ಕೂಡ ಬೆಂಬಲವಾಗಿ ನಿಂತರು. ಇಂದು ಅಶ್ವಿನಿ ಸಿರಿಧಾನ್ಯಗಳ ಮಾಲ್ಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅನೇಕರು ಈ ಮಾಲ್ಟ್ ಖರೀದಿಸಿದ್ದು, ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಅವರ ಮಾಲ್ಟ್‌ಗೆ ಕೇವಲ ಕರ್ನಾಟಕದಲ್ಲಿ ಒಂದೇ ಅಲ್ಲದೆ, ಬೇರೆ ರಾಜ್ಯದಲ್ಲಿಯೂ, ವಿದೇಶದಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಾಲ್ಟ್ ಕುಡಿಯೋದರಿಂದ ಅನೇಕರ ಆರೋಗ್ಯದಲ್ಲಿ ಬದಲಾವಣೆ ಆಗಿದೆಯಂತೆ. ಈ ಮಾಲ್ಟ್ ಸಾಕಷ್ಟು ಪೌಷ್ಠಿಕಾಂಶ ನೀಡಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಅನೇಕರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಉದ್ಯಮಿಯಾದ ಅಶ್ವಿನಿ!
ʼರಾಧಾ ರಮಣʼ, ʼಗಟ್ಟಿಮೇಳʼ ಸೇರಿದಂತೆ ತೆಲುಗು ಧಾರಾವಾಹಿಯಲ್ಲಿಯೂ ಅಶ್ವಿನಿ ನಟಿಸಿದ್ದರು. ಕಾರಣಾಂತರಗಳಿಂದ ಅವರು ʼಗಟ್ಟಿಮೇಳʼ ಧಾರಾವಾಹಿಯಿಂದ ಹೊರಗಡೆ ಬಂದರು. ಅದಾದ ನಂತರದಲ್ಲಿ ಅವರು ಒಳ್ಳೆಯ ಪಾತ್ರಕ್ಕೋಸ್ಕರ ಕಾಯುತ್ತಿದ್ದರು. ಅಶ್ವಿನಿ ನಿರೀಕ್ಷೆ ಮಾಡಿದ ಪಾತ್ರಗಳು ಸಿಗುತ್ತಿರಲಿಲ್ಲ. ಈಗಾಗಲೇ ಮಾಡಿರುವ ಪಾತ್ರಗಳೇ ಅಶ್ವಿನಿಯನ್ನು ಹುಡುಕಿಕೊಂಡು ಬರುತ್ತಿತ್ತು. ಈ ಮಧ್ಯೆ ಅವರು ಉದ್ಯಮವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವಕಾಶ ಸಿಗದೇ ಇದ್ದ ಸಮಯದಲ್ಲಿ ಅಶ್ವಿನಿ ತಮ್ಮ ಪರಿಶ್ರಮದಿಂದ ಅನೇಕರಿಗೆ ಅವಕಾಶ ಕೊಡುವಷ್ಟರ ಮಟ್ಟಿಗೆ ಬೆಳೆದಿರೋದು ನಿಜಕ್ಕೂ ಖುಷಿಯ ವಿಷಯ.
60 ಕೆಜಿ ಇದ್ದ ಗಟ್ಟಿಮೇಳ ನಟಿ ಅಶ್ವಿನಿ; ಇದ್ದಕ್ಕಿದ್ದಂತೆ ಸಣ್ಣಗಾಗಲು ಬೆಳಗಿನ ಜಾವ 4 ಗಂಟೆ ಕಾರಣ!
ದಿನಚರಿ ಹೇಗಿರುತ್ತದೆ?
ಯುಟ್ಯೂಬ್ ಚಾನೆಲ್‌ನಲ್ಲಿ ಆಕ್ಟಿವ್ ಆಗಿರುವ ಅಶ್ವಿನಿ ಅವರು ನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ದಿನಚರಿ ಆರಂಭಿಸುತ್ತಾರೆ. ದೈವಭಕ್ತೆ ಅಶ್ವಿನಿ ಅವರು ನಿತ್ಯ ಭಗವದ್ಗೀತೆ ಸೇರಿ ಕೆಲ ದೇವರ ಪುಸ್ತಕಗಳನ್ನು ಓದುತ್ತಾರೆ. ಅಷ್ಟೇ ಅಲ್ಲದೆ ಆರೋಗ್ಯಕರ ಅಡುಗೆ ತಯಾರಿಸಿ, ಮಾಲ್ಟ್ ತಯಾರಿಕೆಯಲ್ಲಿ ಬ್ಯುಸಿ ಆಗುತ್ತಾರೆ.
ತೆರೆ ಮೇಲೆ ಕಾಣಿಸೋದು ಯಾವಾಗ? sa
ಅಶ್ವಿನಿ ಅವರನ್ನು ತೆರೆ ಮೇಲೆ ನೋಡಬೇಕು ಅಂತ ವೀಕ್ಷಕರು ಕಾಯುತ್ತಿದ್ದಾರೆ. ಅವರು ಒಳ್ಳೆಯ ಪಾತ್ರಕ್ಕೋಸ್ಕರ ಕಾಯುತ್ತಿದ್ದಾರೆ. ಅಶ್ವಿನಿ ಅವರು ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂದು ಹಾರೈಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.