ಬಿಗ್​ಬಾಸ್​ ಮಜಾ ಮಾಡ್ತಾವ್ರೆ ಬಾಸು.... 'ಸಮ್​ಥಿಂಗ್​ ಸ್ಪೆಷಲ್'​ ಎನ್ನುತ್ತಲೇ ಹೊಸ ಪ್ರೊಮೋ ಬಿಡುಗಡೆ!

By Suvarna News  |  First Published Nov 26, 2023, 11:45 AM IST

ಬಿಗ್​ಬಾಸ್​ ಹೊಸ ಪ್ರೊಮೋ ರಿಲೀಸ್​ ಮಾಡಿದ್ದು, ಅದರಲ್ಲಿ ಕೆಲವೊಂದು ಹಾಸ್ಯದ ತುಣುಕು ಸೇರಿಸಲಾಗಿದೆ. ಏನಿದೆ ಇದರಲ್ಲಿ? 
 


ಕಳೆದ ಅಕ್ಟೋಬರ್​ 8ರಿಂದ ಶುರುವಾಗಿರುವ ಬಿಗ್​ಬಾಸ್​ ಕನ್ನಡದ ಸೀಸನ್​ 10, ಕೆಲವೇ ದಿನಗಳಲ್ಲಿ ಎರಡು ತಿಂಗಳು ಪೂರೈಸಲಿದೆ. ಇದಾಗಲೇ ಬಿಗ್​ಬಾಸ್​​ ಮನೆಯೊಳಕ್ಕೆ ಜಟಾಪಟಿಗಳು ಹೆಚ್ಚಾಗಿವೆ. ಗ್ರೂಪಿಸಂ, ಮ್ಯಾನರಿಸಂ, ಜಗಳ, ಕಿತ್ತಾಟ, ಕಾದಾಟ, ಪ್ರೇಮ ಪ್ರಕರಣ... ಎಲ್ಲವೂ ಯಥೇಚ್ಛವಾಗಿ ನಡೆಯುತ್ತಲೇ ಇದ್ದು, ಪ್ರೇಕ್ಷಕರೂ ಇದರ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಸಲದ ವಿಜೇತರು  ಯಾರು ಆಗಬಹುದೆಂಬ ಕುತೂಹಲವೂ ಬಿಗ್​ಬಾಸ್​ ಪ್ರೇಮಿಗಳಲ್ಲಿದ್ದು, ತಮ್ಮ ನೆಚ್ಚಿನ ಸ್ಪರ್ಧಿಗಳಿಗಾಗಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ. ಅದೇ ಇನ್ನೊಂದೆಡೆ, ದಿನದಿಂದ ದಿನಕ್ಕೆ ಬಿಗ್​ಬಾಸ್​ ಕುತೂಹಲ ಹೆಚ್ಚಿಸಿಕೊಳ್ಳಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಇದೇ ಕಾರಣಕ್ಕೆ ಬಿಗ್​ಬಾಸ್​ನ ಟಿಆರ್​ಪಿ ಕೂಡ ಹೆಚ್ಚುತ್ತಲೇ ಇದೆ. 

ಇದೀಗ ಹೊಸ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ಬಿಗ್​ಬಾಸ್​ ಈವರೆಗೆ ಮಾಡಿರುವ ಹಾಸ್ಯದ ದೃಶ್ಯಗಳನ್ನು ನೋಡಬಹುದು. ಬಿಗ್​ಬಾಸ್​ ಮಜಾ ಮಾಡ್ತಾವ್ರೆ ಬಾಸು ಎನ್ನುವ ಶೀರ್ಷಿಕೆ ಜೊತೆ ಈ ಪ್ರೊಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಕೆಲವೊಂದು ಹಾಸ್ಯದ ತುಣಕನ್ನು ಶೇರ್​ ಮಾಡಲಾಗಿದೆ. ಅದರಲ್ಲಿ ಮೊದಲನೆಯದ್ದು ಬಿಗ್​ಬಾಸ್​ ಮನೆಯಲ್ಲಿ ಇರುವ ಇಬ್ಬರು ಸಂತೋಷ್​ಗೆ ಬೇರೆ ಬೇರೆ ಹೆಸರು ಕರೆಯುವ ಕುರಿತು ಬಿಗ್​ಬಾಸ್​ ಮಾಡಿದ ಹಾಸ್ಯ.   ಅಷ್ಟಕ್ಕೂ ಆಗಿರೋದು ಏನೆಂದರೆ, ಬಿಗ್​ಬಾಸ್​ ಮನೆಯಲ್ಲಿ ಇಬ್ಬಿಬ್ಬರು ಸಂತೋಷ್ ಇದ್ದರು.ಹಳ್ಳಿಕಾರ್ ಬ್ರೀಡ್‌ನ ಸಂತೋಷ್ ಕುಮಾರ್ ಮತ್ತು ಹಾಸ್ಯ ನಟ ಸಂತೋಷ್ ಕುಮಾರ್ ಬಿಗ್ ಬಾಸ್‌ ಮನೆಯೊಳಗೆ ಇದ್ದರು. ಯಾರನ್ನು ಹೇಗೆ ಕರೆಯುವುದು ಎಂಬ ಬಗ್ಗೆ ಚರ್ಚೆ ಶುರುವಾಗಿತ್ತು. ಇದೇ ಬಿಗ್​ಬಾಸ್​ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಸಮಸ್ಯೆ ಶುರುವಾಗಿದ್ದು ಎನ್ನುತ್ತಲೇ  ಬಿಗ್​ಬಾಸ್​ ಹಾಸ್ಯದ ರೂಪದಲ್ಲಿ ಪರಿಹಾರ ಕಂಡುಹಿಡಿದಿದ್ದರು.  ' ಸಂತೋಷ್ ಕುಮಾರ್ ಎನ್ನುವ ಹೆಸರು ಇಬ್ಬರು ಸ್ಪರ್ಧಿ ಇರುವುದರಿಂದ ಕನ್​ಫ್ಯೂಸ್​ ಆಗುತ್ತದೆ.  ನಿಮ್ಮನ್ನ ಬಿಗ್ ಬಾಸ್ ಏನಂತ ಕರಿಬೇಕು..' ಎಂದು ಬಿಗ್ ಬಾಸ್‌ ಕಡೆಯಿಂದಲೇ ಕೇಳಿಬಂತು.  ಆಗ ಹಳ್ಳಿಕಾರ್ ಬ್ರೀಡ್‌ನ ಸಂತೋಷ್ ಕುಮಾರ್ ಅವರು, ನನ್ನನ್ನು ವರ್ತೂರ್ ಸಂತೋಷ್ ಎಂದು ಕರೆಯಬಹುದು ಎಂದರೆ,  ಸಂತೋಷ್ ಕುಮಾರ್ ಅವರು, ನನ್ನನ್ನು  ತುಕಾಲಿ ಸ್ಟಾರ್ ಸಂತು ಎನ್ನಬಹುದು ಎಂದರು. ಆಗ ಬಿಗ್​ಬಾಸ್​, ವರ್ತೂರ್ ಸಂತೋಷ್ ಅವರಿಗೆ 'ಸಂತೋಷ್ ಕುಮಾರ್' ಎಂದು ಕರೆಯುವುದಾಗಿ ತಿಳಿಸಿದರು. ಆದರೆ ಇನ್ನೊಬ್ಬರಿಗೆ ತುಕಾಲಿ ಎಂದು ಕರೆಯಲ್ಲ, ಇದು ಚೆನ್ನಾಗಿರಲ್ಲ ಎನ್ನುತ್ತಲೇ,  ನಿಮ್ಮನ್ನು ಗೌರವದಿಂದ ತುಕಾಲಿಯವರೇ ಎಂದು ಕರೆಯಲಾಗುವುದು ಎಂದಾಗ ಎಲ್ಲರೂ ಮತ್ತೊಮ್ಮೆ ಜೋರಾಗಿ ನಕ್ಕಿದ್ದರು.

Tap to resize

Latest Videos

ಸ್ನಾನವಾದ್ರೂ ಬಾತ್​ರೂಮ್​ನಲ್ಲಿ ಸ್ನೇಹಿತ್​ಗೇನು ಕೆಲ್ಸ? ಸಿಡಿದೆದ್ದ ಪ್ರತಾಪ್- ನಮ್ರತಾ ಮಾತಿಗೆ ಫ್ಯಾನ್ಸ್​ ಫುಲ್​ ಖುಷ್​

ಅದೇ ರೀತಿ ಇನ್ನೊಂದು ದೃಶ್ಯದಲ್ಲಿ, ನೀಡಿದ್ದ ಟಾಸ್ಕ್​ ಒಂದರಲ್ಲಿ ವರ್ತೂರು ಸಂತೋಷ್​ ಅವರ ಎರಡೂ ಕೈಗಳನ್ನು ಮೇಲಕ್ಕೆ ಇರಿಸಲಾಗಿತ್ತು. ಕೈ ಕೆಳಕ್ಕೆ ಮಾಡಿದರೆ ಅವರು ಸೋತಂತೆ. ಇದನ್ನೇ ಬಳಸಿಕೊಂಡಿದ್ದ ಬಿಗ್​ಬಾಸ್​ ಇನ್ನೊಂದು ತಮಾಷೆ ಮಾಡಲಾಗಿತ್ತು. ಎಷ್ಟು ಮಂದಿಗೆ ನಮೃತಾ ಗೆಲ್ಲುತ್ತಾರೆ ಅನಿಸತ್ತೆ ಎಂದಾಗ ಕೆಲವರು ಕೈ ಎತ್ತಿದ್ದರು. ವರ್ತೂರು ಸಂತೋಷ್​ಗೆ ನಮೃತಾ ಗೆಲ್ಲುವುದು ಬೇಕಿರಲಿಲ್ಲ. ಆದರೆ ಅವರ ಎರಡೂ ಕೈ ಮೇಲಕ್ಕೆ ಇದ್ದುದರಿಂದ ಬಿಗ್​ಬಾಸ್​ ನೀವು ಎರಡೂ ಕೈ ಮೇಲಕ್ಕೆ ಎತ್ತಿರುವಿರಿ. ಹಾಗಿದ್ದರೆ ನಿಮಗೂ ನಮೃತಾ ಗೆಲ್ಲಬೇಕು ಎನಿಸುತ್ತದೆ ಎಂದಾಗ ವರ್ತೂರು, ಅವಳು ಗೆಲ್ಲಬಾರದು ಎಂದರು. ಹಾಗಿದ್ದರೆ ನಿಮ್ಮ ಕೈಗಳನ್ನು ಕೆಳಕ್ಕೆ ಇಳಿಸಿ ಎಂದು ಬಿಗ್​ಬಾಸ್​ ತಮಾಷೆ ಮಾಡಿದಾಗ ಎಲ್ಲರೂ ಗೊಳ್ಳೆಂದು ನಕ್ಕರು. ಅದೇ ರೀತಿ, ಹಳ್ಳಿಯ ದೃಶ್ಯಗಳನ್ನು ಕ್ರಿಯೇಟ್​ ಮಾಡಿ ಸ್ಪರ್ಧಿಗಳ ಸಂತೋಷದಿಂದ ಇರುವ ಕ್ಷಣಗಳ ಕುರಿತು ಪ್ರೊಮೋದಲ್ಲಿ ತೋರಿಸಲಾಗಿದೆ. 
 
ಅದೇ ಬಿಗ್​ಬಾಸ್​ ನಾಮಿನೇಷನ್​ ವಿಷಯಕ್ಕೆ ಬರುವುದಾದರೆ, ಆರನೆಯ ವಾರದ ಮುಕ್ತಾಯ ಆಗುವವರೆಗೆ ಇಲ್ಲಿವರೆಗೆ ವರ್ತೂರು ಸಂತೋಷ್‌, ಮೈಕೆಲ್‌ ಮತ್ತು ಕಾರ್ತಿಕ್‌ ಹೊರತುಪಡಿಸಿ ಉಳಿದೆಲ್ಲ ಬಿಗ್‌ ಬಾಸ್‌ ಸ್ಪರ್ಧಿಗಳು ಸಹ ನಾಮಿನೇಟ್‌  ಆಗಿದ್ದರು. ಇದೀಗ,  ಈ ವಾರ ವೋಟಿಂಗ್‌ ಆಧಾರದ ಮೇಲೆ ಅತಿ ಹೆಚ್ಚು ಮತ ಪಡೆದವರಿಂದ ಕಡಿಮೆ ವೋಟ್‌ ಪಡೆದವರನ್ನು ಪರಿಗಣಿಸಿ ನಾಮಿನೇಟ್‌ ಆದವರನ್ನು ಬಚಾವು ಮಾಡುವುದಾಗಿ ಸುದೀಪ್​ ತಿಳಿಸಿದ್ದರು. ಅದರಂತೆಯೇ  ಬಚಾವಾದವರಲ್ಲಿ ಡ್ರೋನ್‌ ಪ್ರತಾಪ್‌ ಮೊದಲಿಗರಾಗಿದ್ದಾರೆ. ಏಕೆಂದರೆ, ಅವರು ಅತಿ ಹೆಚ್ಚು ಮತ ಪಡೆದಿದ್ದಾರೆ ಎನ್ನಲಾಗಿದೆ.  ಎರಡನೆಯ ಸ್ಪರ್ಧಿಯಾಗಿರುವವರು  ತನಿಷಾ ಕುಪ್ಪಂಡ, ಮೂರು ಮತ್ತು ನಾಲ್ಕನೆಯ ಸ್ಪರ್ಧಿಯಾಗಿ ಸೇವ್​ ಆದವರು ಕ್ರಮವಾಗಿ  ಸಂಗೀತಾ ಶೃಂಗೇರಿ ಹಾಗೂ  ವಿನಯ್‌. 

ತೋಟಕ್ಕೆ ಅಪ್ಪನ ಕೈಯಿಂದ್ಲೇ ಡ್ರೋನ್​ ಹಾರಿಸ್ತೀನಿ, ತಂಗಿ ಮದ್ವೆ ಮಾಡ್ತೀನಿ, ಅಮ್ಮಂಗೆ ಚಿನ್ನದ ಬಳೆ ಕೊಡಿಸ್ತೀನಿ...
 

click me!