ರಚಿತಾರಾಮ್‌ಗೆ ಮದ್ವೆ ಪ್ರಪೋಸ್ ಮಾಡಿದ ಕಂಟೆಸ್ಟಂಟ್: ತರಾಟೆ ತೆಗೆದುಕೊಂಡ ರವಿಚಂದ್ರನ್!

By Sathish Kumar KH  |  First Published Nov 25, 2023, 6:58 PM IST

ಝೀ ಕನ್ನಡದ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‌ ವೇದಿಕೆಯಲ್ಲಿಯೇ ಸ್ಯಾಂಡಲ್‌ವುಡ್‌ ಕ್ವೀನ್‌ ರಚಿತಾ ರಾಮ್‌ಗೆ ಕಂಟೆಸ್ಟಂಟ್‌ ಒಬ್ಬ ನೇರವಾಗಿ ಮದುವೆ ಪ್ರಪೋಸ್‌ ಮಾಡಿದ್ದಾನೆ.


ಬೆಂಗಳೂರು (ನ.25): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋನ ವೇದಿಕೆ ಮೇಲೆ ನಿಂತು ಜಡ್ಜ್ ರಚಿತಾ ರಾಮ್‌ ಅವರಿಗೆ ನಿಮ್ಮನ್ನು ಮದ್ವೆ ಮಾಡ್ಕೋತೀನಿ ಎಂದು ಕಂಟೆಸ್ಟಂಟ್‌ ನೇರವಾಗು ಪ್ರಪೋಸ್‌ ಮಾಡಿದ್ದಾನೆ. ಇದಕ್ಕೆ ರಚಿತಾರಾಮ್ ಶಾಕ್‌ಗೆ ಒಳಗಾಗಿದ್ದಾರೆ. ಆಗ ರಚಿತಾ ಬೆಂಬಲಕ್ಕೆ ನಿಂತ ಮತ್ತೊಬ್ಬ ಜಡ್ಜ್ ರವಿಚಂದ್ರನ್‌ ಅವರು ಕಂಟೆಸ್ಟಂಟ್‌ಗೆ ತರಾಟೆ ತೆಗೆದುಕೊಂಡಿದ್ದಾರೆ.

ಹೌದು, ಈ ಎಲ್ಲ ಘಟನೆ ನಡೆದಿರುವುದು ಬೇರಾವ ವೇದಿಕೆಯಲ್ಲೂ ಅಲ್ಲ, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನ ವೇದಿಕೆಯಲ್ಲಿ. ಡ್ರಾಮಾ ಸ್ಟೇಜ್‌ಗೆ ನಾನೇ ಒರಿಜಿನಲ್ ಗ್ಯಾಂಗ್‌ಸ್ಟರ್  ಬೆಂಗಳೂರಿನ ಆರ್ಯ ಸ್ವರೂಪ್ ಬಂದಿದ್ದಾನೆ. ಈತನಿಗೆ ಕಂಟೆಸ್ಟಂಟ್‌ ಆಗಿ ಆಡಿಷನ್ ಕೊಟ್ಟು ಸೆಲೆಕ್ಷನ್‌ ಆಗು ಎಂದರೆ ವೇದಿಕೆ ಮೇಲೆಯೇ ನಿಂತುಕೊಂಡು ರಚಿತಾ ರಾಮ್ ಅವರನ್ನು ಮದುವೆ ಆಗ್ತೀನಿ ಎಂದು ಪ್ರಪೋಸ್‌ ಮಾಡಿದ್ದಾನೆ. ಅದಕ್ಕೆ ವೇದಿಕೆ ಕೆಳಗಿದ್ದ ಸಾರ್ವಜನಿಕರು ಹಾಗೂ ವೇದಿಕೆಯ ಇನ್ನೊಂದು ಬದಿಯಲ್ಲಿದ್ದ ರಚಿತಾರಾಮ್, ವಿ. ರವಿಚಂದ್ರನ್ ಹಾಗೂ ಲಕ್ಷ್ಮೀ ಅವರು ಶಾಕ್‌ಗೆ ಒಳಗಾಗಿದ್ದಾರೆ. 

Tap to resize

Latest Videos

ನನ್ನನ್ನು ಅತಿ ಕೆಟ್ಟ ವಿಲನ್‌ ತರ ತೋರಿಸಿದ್ದಾರೆ, ಒಂದೂ ಅವಾರ್ಡ್‌ ಕೊಟ್ಟಿಲ್ಲ: ನಟಿ ರಚಿತಾ ರಾಮ್

ಮದುವೆ ಮಾಡ್ಕೋತೀನಿ ಅಂತ ಪ್ರಪೋಸ್‌ ಮಾಡಿದ್ದಕ್ಕೆ ರಚಿತಾ ರಾಮ್ ಶಾಕ್ ಆಗಿದ್ದು ನಿಜ, ಆದ್ರೆ, ಕ್ಷಣಾರ್ಧದಲ್ಲಿಯೇ ನಕ್ಕು ವೇದಿಕೆಯನ್ನೂ ನಗಿಸಿದ್ದಾರೆ. ಅಷ್ಟಕ್ಕೂ ಮದುವೆಯ ಪ್ರಪೋಸ್‌ ಮಾಡಿದ ಕಂಟೆಸ್ಟಂಟ್‌ ಬೆಂಗಳೂರಿನ ಆರ್ಯ ಸ್ವರೂಪ್ ಕೇವಲ 6 ವರ್ಷದ ಬಾಲಕನಾಗಿದ್ದಾನೆ. ಈತ ಧ್ರುವ ಸರ್ಜಾ ಅವರ ಸಿನಿಮಾದ ಡೈಲಾಗ್‌ ಹೊಡೆದು ಡ್ರಾಮಾ ಜ್ಯೂನಿಯರ್ಸ್‌ಗೆ ಆಯ್ಕೆಯಾಗಿದ್ದಾನೆ. ನಂತರ, ದುನಿಯಾ ವಿಜಯ್‌ ಅವರ ಈಗಿನ ಟ್ರೆಂಡಿಂಗ್‌ ಹಾಡು ಏ ಕೌನ್ ರೇ, ಉನೇ ಕುಷ್ಕಾ ತಿಂಕೋ ಮಗನೇ, ಸಾಸ್ತ ನಾಶ ನಾಕೋ, ಯಂತ್ರ ಲೇಕೇ ಮರ್ತ ತುಮ್ಹೇ, ಕೌನ್ ರೆ ಉನೆ ಆಯೆ ಮೈ ಇಚ್ ಮಾನೆ, ಸಾಸ್ತ ನಾಶ ನಾಕೋ, ಯಂತ್ರ ಲೇಕೇ ಮರ್ತಾ ತುಮ್ಹೇ ಎಂದು ಹಾಡು ಹೇಳಿದ್ದಾನೆ.

ಬೆಂಗಳೂರು ಕಂಬಳ ಆಯೋಜಕರಿಗೆ ಬಿಗ್ ಶಾಕ್‌ ಕೊಟ್ಟ ಬಿಬಿಎಂಪಿ

ಕಂಟೆಸ್ಟಂಟ್ ಆರ್ಯ ಸ್ವರೂಪ್‌ನ ಪ್ರದರ್ಶನದ ನಂತರ ವೇದಿಕೆ ಮೇಲೆ ಬಂದ ಮಾಸ್ಟರ್‌ ಆನಂದ್, ಆರ್ಯನ ಶೋ ಬಗ್ಗೆ ಜಡ್ಜಸ್ ಹತ್ತಿರ ಅಭಿಪ್ರಾಯ ಕೇಳಿದ್ದಾರೆ. ಆಗ, ಮೊದಲನೆಯದಾಗಿ ಮಾತನಾಡಲು ಆರಂಭಿಸಿದ ರಚಿತಾ ರಾಮ್ ಅವರಿಗೆ ತನ್ನನ್ನು ಸೆಲೆಕ್ಟ್‌ ಮಾಡಬೇಕು ಎಂದು ಹೇಳಿದ್ದಾನೆ. ಆಗ ನೀನು ದೊಡ್ಡವನಾದ ನಂತರ ಏನಾಗ್ತೀಯ ಎಂದು ಕೇಳಿದರೆ ನಾನು ರಚಿತಾ ರಾಮ್ ಮದುವೆ ಆಗ್ತೀನಿ ಎಂದು ಹೇಳಿಕೊಂಡಿದ್ದಾನೆ. ಅವನ ಮಾತಿನಿಂದ ಇಡೀ ಡ್ರಾಮಾ ಜ್ಯೂನಿಯರ್‌ ಸೆಟ್ ನಗೆ ಗಡಲಲ್ಲಿ ತೇಲಿತ್ತು. ಆಗ ರವಿಚಂದ್ರನ್‌ ಅವರು ನಿನ್ನ ವಯಸ್ಸಿಗೆ ತಕ್ಕಂತೆ ಯಾರಾದ್ರೂ ಜ್ಯೂನಿಯರ್‌ ಕಂಟೆಸ್ಟಂಟ್‌ ಮದ್ವೆ ಆಗ್ತೀನಿ ಅಂತ ಹೇಳೋದು ಬಿಟ್ಟು ರಚಿತಾ ಮದ್ವೆ ಆಗ್ತೀನಿ ಅಂತೀಯಲ್ಲಾ ಎಂದು ಹೇಳಿದ್ದಾರೆ. ಆದ್ರೂ ನಾನು ರಚಿತಾ ಮದ್ವೆ ಆಗ್ತೀನಿ ಎಂದು ಕ್ಯೂಟ್ ಬಾಯ್ ಆರ್ಯ ಹೇಳಿದ್ದಾನೆ.ಇನ್ನು ಒಬ್ಬೊಬ್ಬರಾಗಿ ಆರ್ಯ ಸ್ವರೂಪನನ್ನು ಡ್ರಾಮಾ ಜ್ಯೂನಿಯರ್‌ ಕಂಟೆಸ್ಟಂಟ್‌ ಆಗಿ ಆಯ್ಕೆ ಮಾಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!