ಊರ ಹಬ್ಬದಲ್ಲಿ ಕೆಂಡ ತುಳಿಯುವ ಮೂಲಕ ಬಿಗ್ಬಾಸ್ ಖ್ಯಾತಿಯ ಅನುಷಾ ರೈ ಅವರು ಹರಕೆಯನ್ನು ತೀರಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಚಂದನವನದ ಬೆಡಗಿ ಅನುಷಾ ರೈ, ಬಿಗ್ ಬಾಸ್ ಸೀಸನ್ 11ರಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ನರಕದ ಮೂಲಕ ಇವರು ಪ್ರಯಾಣ ಆರಂಭಿಸಿದ್ದರು. ಕೊನೆಗೆ 50ನೇ ದಿನಕ್ಕೆ ಬಿಗ್ ಬಾಸ್ ಪಯಣ ಮುಗಿಸಿ ನಟಿ ಅನುಷಾ ರೈ ಹೊರಬಂದರು. ಈಚೆಗಷ್ಟೇ ಪ್ರಯಾಗ್ ರಾಜ್ನ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿ ಸದ್ದು ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದ ಅವರು, ಪ್ರಯಾಗ್ ರಾಜ್ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ, ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ, ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಂತರ ಭಕ್ತರ ಸಮಾಗಮ, ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ ಎಂದು ಬರೆದುಕೊಂಡಿದ್ದರು.
ಬಳಿಕ ನಟಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಈ ಪುಣ್ಯ ದರ್ಶನದ ಕುರಿತು ವಿಡಿಯೋ ಮಾಡಿದ್ದ ಅವರು, ಶ್ರೀರಾಮನ ದರ್ಶನ ಪದೆದ ನಾನೇ ಧನ್ಯಳು ಎಂದು ಸಹ ನಟಿ ಹೇಳಿಕೊಂಡಿದ್ದರು. ಇದೀಗ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಊರ ಹಬ್ಬದಲ್ಲಿ ನಿಗಿನಿಗಿ ಕೆಂಡವನ್ನು ತುಳಿಯುವ ಮೂಲಕ ಹರಕೆ ತೀರಿಸಿದ್ದಾರೆ. ಸಾಮಾನ್ಯವಾಗಿ ಯಾರೇ ಆಗಲಿ ಹರಕೆ ಹೊತ್ತುಕೊಂಡಿದ್ದರೆ, ಈ ರೀತಿ ಮಾಡುವುದು ಸಂಪ್ರದಾಯ. ಅನುಷಾ ಅವರು ಏನು ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಸದ್ಯ ಅವರ ಈ ವಿಡಿಯೋ ವೈರಲ್ ಆಗಿದ್ದು, ಕೆಂಡದ ಮೇಲಿನ ನಡಿಗೆಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದರ ವಿಡಿಯೋ ಅನ್ನು ಜಿಎಲ್ ನ್ಯೂಸ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಬಿಗ್ಬಾಸ್ನಲ್ಲಿ ಒಂದೂವರೆ ಲಕ್ಷದ ಬಟ್ಟೆ ತೋರಿಸುವಷ್ಟ್ರಲ್ಲಿ ಹೀಗಾಗೋಯ್ತು... ನಟಿ ಅನುಷಾ ರೈ ನೋವಿನ ನುಡಿ
ಇನ್ನು ನಟಿಯ ಕುರಿತು ಹೇಳುವುದಾದರೆ, ಇನ್ನು ನಟಿ 27 ವರ್ಷ ವಯಸ್ಸಿನ ಅನುಷಾ ರೈ ಕುರಿತು ಹೇಳುವುದಾದರೆ, ಇವರು ತುಮಕೂರಿನವರು. ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮಾಡೆಲಿಂಗ್ ಮಾಡಿ ಫೇಮಸ್ ಆದವರು. 2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಬಿರುದು ಕೂಡ ಸಿಕ್ಕಿದೆ.
ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ `ಮಹಾನುಭಾವರು' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ನಾಗಕನ್ನಿಕೆ' ಹಾಗೂ 'ರಾಜಕುಮಾರಿ' ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಇವರು ಹಾಟ್ ಫೋಟೋಶೂಟ್ಗಳಿಂದಲೇ ಫೇಮಸ್. ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಅನುಷಾ ರೈ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಅದಕ್ಕೂ ಮುನ್ನ ನಟಿ ಖರ್ಶನಂ, ಪೆಂಟಗಾನ್, ಗೋಸಿ ಗ್ಯಾಂಗ್, ದಮಯಂತಿ, ರೈಡರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ನಟಿಯ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕನ್ನಡ ಸಿನಿಮಾಗಳ ಬಗ್ಗೆ ಬೇಸರ ತೋಡಿಕೊಂಡ ನಟ ಯಶ್: ಗೋಳೋ ಅನ್ನೋ ಮೊದ್ಲು ಹೀಗೆ ಮಾಡಿ ಅಂದ ನಟ...