ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡ್ತಿದೆ. ಈ ನಡುವೆ ಖ್ಯಾತ ಧಾರಾವಾಹಿ ನಟಿಯ ಖಾಸಗಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾ ಪ್ರಭಾವ ಜಾಸ್ತಿಯಾದಂತೆ ಎಷ್ಟು ಪ್ರಯೋಜನ ಆಗುತ್ತಿದೆಯೋ, ಅಷ್ಟೇ ಸಮಸ್ಯೆಯೂ ಎದುರಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ನಟಿ ಜ್ಯೋತಿ ರೈ ಸೇರಿದಂತೆ ಕೆಲ ನಟಿಯರ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದು ಹೇಳಲಾಗಿತ್ತು. ಅದಾದ ನಂತರದಲ್ಲಿ ಈಗ ತಮಿಳು ನಟಿ ಶ್ರುತಿ ನಾರಾಯಣನ್ ಅವರ ಖಾಸಗಿ ವಿಡಿಯೋ ವೈರಲ್ ಆಗುತ್ತಿದೆ.
ಇದು ಅಸಲಿ ವಿಡಿಯೋನಾ?
ತಮಿಳು ನಟಿ ಶ್ರುತಿ ನಾರಾಯಣನ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಇದೆ. ಹೀಗಿದ್ದಾಗ್ಯೂ ಲೀಕ್ ಆದ ವಿಡಿಯೋ ಬಗ್ಗೆ ನಾನಾ ಪ್ರಶ್ನೆ ಕೇಳಿ ಬರುತ್ತಿದೆ. ಕೆಲವರು ಇದು ಡೀಪ್‌ಫೇಕ್ ವೀಡಿಯೊ ಎಂದರೆ, ಇನ್ನು ಕೆಲವರು ಇದು ಸತ್ಯ ಆಗಿರಬಹುದು ಎಂದು ಹೇಳುತ್ತಿದ್ದಾರೆ.
ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಮಾಜಿ ಸೈನಿಕನ ಪತ್ನಿಯ ಸುಲಿಗೆ!
14 ನಿಮಿಷಗಳ ವಿಡಿಯೋ ಇದು!
ಶ್ರುತಿ ನಾರಾಯಣನ್ ಅವರ 14 ನಿಮಿಷಗಳ ವಿಡಿಯೋ ಇದಾಗಿದೆ. ಚಿತ್ರರಂಗದಲ್ಲಿ ನಡೆದ ಆಡಿಷನ್ ಪ್ರಕ್ರಿಯೆಯಲ್ಲಿ ಸೋರಿಕೆಯಾದ ಈ ಪರಿಶೀಲಿಸದ ತುಣುಕು ಟ್ವಿಟರ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಕೆಲವೇ ಗಂಟೆಗಳ ಹಿಂದೆ ಅಪ್‌ಲೋಡ್ ಆದ ಈ ತುಣುಕನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರು ಈ ವೈರಲ್ ತುಣುಕಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ಇತರರು ವಿಡಿಯೋ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋ ನಿಜವೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಟಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ವಿಡಿಯೋ!
#ShruthiNarayananLeaked ಟ್ರೆಂಡಿಂಗ್ ಆಗಿದೆ. ಡಿಜಿಟಲ್ ವೇದಿಕೆಗಳಲ್ಲಿ ಕಂಟೆಂಟ್ ಮಾಡರೇಶನ್ ಪ್ರಯತ್ನಗಳ ಹೊರತಾಗಿಯೂ, ಡೌನ್‌ಲೋಡ್ ಲಿಂಕ್‌ಗಳನ್ನು ವೇಗವಾಗಿ ಹಂಚಿಕೊಳ್ಳಲಾಗುತ್ತಿದೆ. ತಮಿಳು ಚಿತ್ರರಂಗವು ಈ ವೀಡಿಯೊವನ್ನು ಕಟ್ಟುಕಥೆ, ನಕಲಿ ಎಂದು ಹೇಳಿದೆ.
ಕೆಟ್ಟ ಕನಸಾಗಿ ಮುಗಿದು ಹೋಗಲಿ.. ಖಾಸಗಿ ವಿಡಿಯೋ ಲೀಕ್ ಬಗ್ಗೆ ನಟಿ ಪ್ರಜ್ಞಾ ನಾಗ್ರಾ ಭಾವುಕ ಪೋಸ್ಟ್!
ಶ್ರುತಿ ಎಲ್ಲಿಯವರು?
ಶ್ರುತಿ ನಾರಾಯಣನ್ ಯಾರು ಚೆನ್ನೈ ಮೂಲದವರು. 24 ವರ್ಷದ ನಟಿ ಶ್ರುತಿ ನಾರಾಯಣನ್ ಅವರು ಸಿನಿಮಾದಲ್ಲಿ ನಟಿಸುವ ಮುನ್ನ ʼಸಿರಾಗಡ್ಡಿಕ್ಕ ಆಸೈʼ ಎಂಬ ತಮಿಳು ಟಿವಿ ಧಾರಾವಾಹಿಯಲ್ಲಿ ನಟಿಸಿದ್ದರು. ಶ್ರುತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 420 ಫಾಲೋವರ್ಸ್ ಇದ್ದಾರೆ.