
1992ರಲ್ಲಿ ಬಿಡುಗೆಯಾಗಿ ದೊಡ್ಡ ಮಟ್ಟದ ಮನ್ನಣೆ ಪಡೆದುಕೊಂಡಿದ್ದ 'ನಗರದಲ್ಲಿ ನಾಯಕರು..' ಸಿನಿಮಾ ನೋಡಿರಬಹುದು. ತನ್ನ ಸಹೋದರನ ಕೊಲೆ ಮಾಡಿದ್ದು ಯಾರು ಅನ್ನೋದನ್ನು ತಿಳಿದುಕೊಳ್ಳಲು ಅಜ್ಜ-ಅಜ್ಜಿಯೊಂದಿಗೆ ಬೆಂಗಳೂರಿಗೆ ಬರುವ ಸುಂದರ ಹುಡುಗಿಯನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ನಾಲ್ವರು ಹುಡುಗರ ಕಥೆ ಹೊಂದಿದ್ದ ಸಿನಿಮಾ. ಈ ಸಿನಿಮಾದಲ್ಲಿ ಮಾಲಾಶ್ರೀ ಹೀರೋಯಿನ್ ಪಾತ್ರದಲ್ಲಿ ನಟಿಸಿದ್ದರೆ, ನಾಲ್ವರು ಹುಡುಗರ ಪಾತ್ರದ ಪೈಕಿ ರಾಮು ಪಾತ್ರದಲ್ಲಿ ಸುನೀಲ್, ಕಾಮು ಪಾತ್ರದಲ್ಲಿ ಗುರುದತ್, ಭೀಮು ಪಾತ್ರದಲ್ಲಿ ಬಾಲ್‌ರಾಜ್ ಹಾಗೂ ದಾಮು ಪಾತ್ರದಲ್ಲಿ ತೆಲುಗಿನ ಪ್ರಖ್ಯಾತ ನಟ ಬೇತಾ ಸುಧಾಕರ್ ನಟಿಸಿದ್ದರು.
33 ವರ್ಷಗಳ ಹಿಂದೆ ಬಂದ ಸಿನಿಮಾವನ್ನು ನೋಡಿ ನಗದವರೇ ಇಲ್ಲ. ಅಷ್ಟು ಎಂಟರ್‌ಟೇನಿಂಗ್ ಆಗಿ ಈ ಸಿನಿಮಾ ಮೂಡಿಬಂದಿತ್ತು. ಈ ಸಿನಿಮಾದ ನಾಲ್ವರು ಹುಡುಗರ ಪೈಕಿ ಮೂವರು ಕನ್ನಡದವರಾಗಿದ್ದರೆ, ದಾಮು ಪಾತ್ರದಲ್ಲಿ ನಟಿಸಿದ್ದ ಬೇತಾ ಸುಧಾಕರ್ ಮೂಲತಃ ಆಂಧ್ರ ಪ್ರದೇಶದವರು. ಈಗ ಅವರಿಗೆ 65 ವರ್ಷ. ಇತ್ತೀಚೆಗೆ ಅವರ ಸ್ಥಿತಿಯ ಬಗ್ಗೆ ತೆಲುಗಿನ ನ್ಯೂಸ್ ಚಾನೆಲ್‌ಗಳು ವರದಿ ಮಾಡುತ್ತಿವೆ.
ಒಂದು ಕಾಲದಲ್ಲಿ ಹೀರೋ ಆಗಿ ನಂತರ ಕಾಮೆಡಿಯನ್ ಆಗಿ ಬಳಿಕ ಪೋಷಕ ಪಾತ್ರದಲ್ಲಿ ಮಿಂಚಿದ ನಟ ಬೇತಾ ಸುಧಾಕರ್. ಮೂರು ದಶಕಗಳ ಕಾಲ ಸಿನಿಮಾರಂಗದಲ್ಲಿ ಸ್ಟಾರ್ ಆಗಿ ನಿಂತವರು. ಆದರೆ, ಬ್ರೇನ್ ಸ್ಟ್ರೋಕ್ ಅವರ ಇಡೀ ಜೀವನವನ್ನೇ ಉಲ್ಟಾ ಮಾಡಿ ಬಿಟ್ಟಿದೆ. ಸಿನಿಮಾಗಳನ್ನುಮಾಡೋದು ಬಿಟ್ಟು 17 ವರ್ಷಗಳಾಗಿವೆ. ಹಾಗಿದ್ದರೂ, ತಮ್ಮ ಏಕೈಕ ಪುತ್ರ ಬೆನೆಡಿಕ್ಟ್ ಮೈಕೆಲ್‌ರನ್ನು ಟಾಲಿವುಡ್‌ಗೆ ಪರಿಚಯ ಮಾಡಿಕೊಡಬೇಕು ಎನ್ನುವ ಬಹಳ ಆಸೆಯಲ್ಲಿದ್ದರು. ತಮ್ಮ ಆತ್ಮೀಯ ಸ್ನೇಹಿತ ಚಿರಂಜೀವಿಯಿಂದಲೇ ಪುತ್ರ ಸಿನಿಮಾ ರಂಗಕ್ಕೆ ಬರಬೇಕು ಎನ್ನುವ ಆಸೆಯನ್ನೂ ಇಟ್ಟುಕೊಂಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಸುಧಾಕರ್ ತಮ್ಮ ಏಕೈಕ ಪುತ್ರನ ವಿವಾಹ ಮಾಡಿಸಿದ್ದಾರೆ. ಜಗಪತಿ ಬಾಬು, ಬ್ರಹ್ಮಾನಂದಂ, ಚಂದ್ರಬೋಸ್ ದಂಪತಿಗಳು, ನಟಿ ರೋಜಾ ಸೇರಿದಂತೆ ಕೆಲವೇ ಕೆಲವು ಸಿನಿಮಾರಂಗದ ಗಣ್ಯರು ಮಾತ್ರವೇ ಭಾಗವಹಿಸಿದ್ದರು.
ಬ್ರೇನ್ ಸ್ಟ್ರೋಕ್‌ನಿಂದ ಸುಧಾಕರ್‌ಗೆ ಈಗ ನಡೆಯಲು ಸಾಧ್ಯವಾಗುತ್ತಿಲ್ಲ. ಇಬ್ಬರು ಸ್ನೇಹಿತರ ಸಹಾಯದಿಂದ ಮದುವೆಯ ಸಮಯದಲ್ಲಿ ನವದಂಪತಿಗಳ ಜೊತೆಯಲ್ಲಿ ನಿಂತಿದ್ದರು. ಹೆಚ್ಚಿನವರಿಗೆ ಒಂದು ಕಾಲದಲ್ಲಿ ಎಲ್ಲರ ಮುಖದಲ್ಲಿ ನಗು ತರಿಸುತ್ತಿದ್ದ ಸುಧಾಕರ್ ಇವರೇನಾ ಎನ್ನುವಷ್ಟು ಬದಲಾಗಿದ್ದರು.
ದರ್ಶನ್ ಸಿನಿಮಾ ಕಾಪಿ ಮಾಡುವಾಗ ಎಡವಟ್ಟು! ರಜತ್, ವಿನಯ್ ಬಳಿಕ ಬುಲೆಟ್ ರಕ್ಷಕ್ಗೂ ಕಾನೂನು ಉರುಳು?
ಇನ್ನು ಬೇತಾ ಸುಧಾಕರ್ ಕನ್ನಡದಲ್ಲಿ ನಟಿಸಿದ್ದು ಎರಡೇ ಸಿನಿಮಾ.ಈ ಸಿನಿಮಾಗಳಿಂದಲೇ ಅವರನ್ನು ಕನ್ನಡಿಗರು ಗುರುತಿಸುತ್ತಿದ್ದಾರೆ. ನಗರದಲ್ಲಿ ನಾಯಕರು ಸಿನಿಮಾ ನಂತರ 11 ವರ್ಷಗಳ ಬಳಿಕ ರಕ್ತಕಣ್ಣೀರು ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರು ಮತ್ತೆ ಯಾವದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ.
Bigg Boss Kannada ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ದೂರು ದಾಖಲು! ಏನಾಯ್ತು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.