ನನಗೆ ಆರೋಗ್ಯ ಸರಿಯಾಗಿಲ್ಲ ಅಷ್ಟರಲ್ಲಿ ಶೋ ಶೂಟಿಂಗ್ ಆರಂಭಿಸಿ ಬಿಟ್ಟರು; ಸತ್ಯ ರಿವೀಲ್ ಮಾಡಿದ ಭವ್ಯಾ ಗೌಡ

Published : Feb 05, 2025, 09:25 AM IST
ನನಗೆ ಆರೋಗ್ಯ ಸರಿಯಾಗಿಲ್ಲ ಅಷ್ಟರಲ್ಲಿ ಶೋ ಶೂಟಿಂಗ್ ಆರಂಭಿಸಿ ಬಿಟ್ಟರು; ಸತ್ಯ ರಿವೀಲ್ ಮಾಡಿದ ಭವ್ಯಾ ಗೌಡ

ಸಾರಾಂಶ

ಬಿಗ್‌ಬಾಸ್‌ ನಂತರ 'ಬಾಯ್ಸ್‌ ವರ್ಸಸ್‌ ಗರ್ಲ್ಸ್‌' ರಿಯಾಲಿಟಿ ಶೋ ಆರಂಭವಾಗಿದ್ದು, ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಭವ್ಯಾ ಗೌಡ ಭಾಗವಹಿಸಲು ಸಾಧ್ಯವಾಗಲಿಲ್ಲ. ವಿನಯ್‌ ಗೌಡ, ಶುಭಾ ಪೂಂಜಾ ಸೇರಿದಂತೆ ಹಲವು ಬಿಗ್‌ಬಾಸ್‌ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಚೈತ್ರಾ ಕುಂದಾಪುರ ಭವ್ಯಾ ಬದಲಿಗೆ ಆಯ್ಕೆಯಾಗಿದ್ದಾರೆ.

ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ವೀಕೆಂಡ್‌ನಲ್ಲಿ ಅದೇ ಸಮಯಕ್ಕೆ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋ ಆರಂಭವಾಗಿದೆ. ನಟಿ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಹೊಸ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್‌ನಲ್ಲಿದ್ದ ವಿನಯ್ ಗೌಡ, ಶುಭಾ ಪೂಂಜಾ, ಮಂಜು ಪಾವಗಡ, ಐಶ್ವರ್ಯ ಶಿಂಧೋಗಿ, ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ, ರಜತ್ ಕಿಶನ್, ಹನುಮಂತು, ಧನರಾಜ್ ಆಚಾರ್ ಸೇರಿದಂತೆ ದೊಡ್ಡ ತಂಡವಿದೆ. ಭವ್ಯಾ ಗೌಡ ಬರದ ಕಾರಣ ಚೈತ್ರಾ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಭವ್ಯಾ ಯಾಕೆ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

'ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋ ಶೂಟಿಂಗ್ ಶುರುವಾಗುವ ಮುನ್ನವೇ ನನಗೆ ಆರೋಗ್ಯ ಸಮಸ್ಯೆ ಆಯ್ತು. ಹಾಗಾಗಿ ನಾನು ಹೋಗಲಿಲ್ಲ.  ನಾನು ಬಿಗ್ ಬಾಸ್ ಶೋನಿಂದ ನಮ್ಮ ಮನೆಗೆ ಬಂದ ಮೇಲೆ ನನಗೆ ತುಂಬಾ ಜ್ವರ, ಕೆಮ್ಮು ಮತ್ತು ಶೀತ ಶುರುವಾಗಿತ್ತು. ಆರೋಗ್ಯ ಸರಿಯಾಗಿರಲಿಲ್ಲ. ಇದೇ ಸಮಯಕ್ಕೆ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋ ಶೂಟಿಂಗ್ ಶುರು ಮಾಡಿಬಿಟ್ಟರು. ನನಗೆ ಹುಷಾರಿಲ್ಲದ ಕಾರಣ ನಾನು ಆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ' ಎಂದು ಖಾಸಗಿ ವೆಬ್‌ಸೈಟ್‌ ಸಂದರ್ಶನದಲ್ಲಿ ಭವ್ಯಾ ಗೌಡ ಮಾತನಾಡಿದ್ದಾರೆ. 

ಪ್ರೀತಿ ಎಲ್ಲರೂ ಮಾಡ್ತಾರೆ ನನಗೆ ಗೌರವ ಕೊಡುವವರು ಬೇಕು; ಮದುವೆ ಬಗ್ಗೆ ಧನ್ಯಾ ರಾಮ್‌ಕುಮಾರ್

'ನಾನು ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗದೇ ಇರುವುದಕ್ಕೆ ಆರೋಗ್ಯ ಸಮಸ್ಯೆ ಅಷ್ಟೇ ಕಾರಣ ಹೊರತು ಬೇರೇ ಏನೂ ಅಲ್ಲ. ಅಲ್ಲದೆ ನಾನು ಕೂಡ ಆ ಶೋನಲ್ಲಿ ಭಾಗಿಯಾಗಬೇಕು ಅಂತ ತುಂಬಾ ಟ್ರೈ ಮಾಡಿದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದಲ್ಲಿ ಇರುವಾಗಲೇ ಅಂತಹದ್ದೊಂದು ಅವಕಾಶ ಹುಡುಕಿ ಬಂದಾಗ ಯಾರು ಬೇಡ ಅಂತ ಹೇಳುತ್ತಾರೆ ಯಾರು ಮಿಸ್ ಮಾಡಿಕೊಳ್ಳುವುದ್ದಕ್ಕೆ ಇಷ್ಟ ಪಡುತ್ತಾರೆ? ಈಗ ಮಿಸ್ ಆಗಿದೆ. ಪರ್ವಾಗಿಲ್ಲ ಮುಂದೆ ಬೇರೆಯದ್ದು ಮಾಡೋಣ ಬಿಡು ಅಂತ ನಾನೇ ಸುಮ್ನಾದೆ' ಎಂದು ಭವ್ಯಾ ಗೌಡ ಹೇಳಿದ್ದಾರೆ. 

ಬಾಡಿ ನೇಚರ್, ಹಾರ್ಮೋನ್‌ ಇಂಬ್ಯಾಲೆನ್ಸ್‌.... ಮುಂದೆ ಏನೂ ಗೊತ್ತಿಲ್ಲ ಅವಳಿಗೆ ಒತ್ತಡ ಹಾಕಲ್ಲ: ಮಹಿತಾ ತಾಯಿ ಹೇಳಿಕೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!