BBK 11: ತ್ರಿವಿಕ್ರಮ್‌, ರಶ್ಮಿಕಾ ಮಂದಣ್ಣ ಜೊತೆಗಿರೋ ಫೋಟೋ ವೈರಲ್!‌ ಏನಪ್ಪಾ ಇದು ಹೊಸ ಕಥೆ?

Published : Feb 05, 2025, 09:24 AM ISTUpdated : Feb 05, 2025, 10:20 AM IST
BBK 11:  ತ್ರಿವಿಕ್ರಮ್‌, ರಶ್ಮಿಕಾ ಮಂದಣ್ಣ ಜೊತೆಗಿರೋ ಫೋಟೋ ವೈರಲ್!‌ ಏನಪ್ಪಾ ಇದು ಹೊಸ ಕಥೆ?

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ 11ʼ ಶೋ ತ್ರಿವಿಕ್ರಮ್‌ ಅವರು ರಶ್ಮಿಕಾ ಮಂದಣ್ಣ ಜೊತೆಗೆ ಇರುವ ಫೋಟೋವೊಂದು ವೈರಲ್‌ ಆಗ್ತಿದೆ.   

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ‌ ತ್ರಿವಿಕ್ರಮ್‌ ಅವರು ಟ್ರೋಫಿ ಗೆಲ್ಲುವ ಆಸೆ ಹೊಂದಿದ್ದರು. ಆದರೆ ರನ್ನರ್‌ ಅಪ್‌ ಸ್ಥಾನಕ್ಕೆ ಅವರು ತೃಪ್ತಿ ಪಡೆದರು. ಈ ಹಿಂದೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ತ್ರಿವಿಕ್ರಮ್‌ಗೆ ಸಾಕಷ್ಟು ನೋವು ಅವಮಾನ ಉಂಟಾಗಿತ್ತು. ಇಂದು ಬಹುಭಾಷೆಯಲ್ಲಿ ಸ್ಟಾರ್‌ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ಜೊತೆ ತ್ರಿವಿಕ್ರಮ್‌ ಸಿನಿಮಾ ಮಾಡಬೇಕಿತ್ತಂತೆ. 

ಸಿನಿಮಾ ಮಾಡಬೇಕಿತ್ತಾ? 
ಹೌದು, ರಶ್ಮಿಕಾ ಮಂದಣ್ಣ, ತ್ರಿವಿಕ್ರಮ್‌ ಅವರು ಇನ್ನೂ ಕೆಲ ಜನರ ಜೊತೆ ದೇವರಿಗೆ ಕೈ ಮುಗಿಯುವ ಫೋಟೋ ವೈರಲ್‌ ಆಗ್ತಿದೆ. ʼಕಿರಿಕ್‌ ಪಾರ್ಟಿʼ ಸಿನಿಮಾಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಅವರು ತ್ರಿವಿಕ್ರಮ್‌ ಜೊತೆಗೆ ಸಿನಿಮಾ ಮಾಡಬೇಕಿತ್ತು ಎನ್ನುವ ಟಾಕ್‌ ಹರಿದಾಡುತ್ತಿದೆ. ಈ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ತ್ರಿವಿಕ್ರಮ್‌ ಅಥವಾ ರಶ್ಮಿಕಾ ಮಂದಣ್ಣ ಅವರೇ ಉತ್ತರ ಕೊಡಬೇಕಿದೆ.

ತ್ರಿವಿಕ್ರಮ್ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ; ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್!

ಕ್ರಿಕೆಟ್‌ ಕನಸು ಕಮರಿ ಹೋಯ್ತು! 
ಲಾರಿ ಡ್ರೈವರ್‌ ಪುತ್ರ ಆಗಿರೋ ತ್ರಿವಿಕ್ರಮ್‌ ಅವರ್ ಕ್ರಿಕೆಟ್‌ಗೆ ಸಖತ್‌ ಇಷ್ಟ.‌ ʼಪದ್ಮಾವತಿʼ ಧಾರಾವಾಹಿಯಲ್ಲಿ ಸಾಮ್ರಾಟ್‌ ಪಾತ್ರದ ಮೂಲಕ ತ್ರಿವಿಕ್ರಮ್‌ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಅದಾದ ನಂತರ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಯಾವುವು ಕೂಡ ಯಶಸ್ಸು ತಂದುಕೊಡಲಿಲ್ಲ. ರಜಣಿ ಕ್ರಿಕೆಟ್‌ ಆಡುವ ಆಸೆ ಹೊಂದಿದ್ದ ತ್ರಿವಿಕ್ರಮ್‌ ಅವರು ಕಾಲಿಗೆ ಗಾಯ ಮಾಡಿಕೊಂಡರು, ಆಮೇಲೆ ಜಿಮ್‌ ಟ್ರೇನರ್‌ ಆದರು. ಇದಾದ ನಂತರದಲ್ಲಿ ಅವರಿಗೆ ನಟನಾ ಅವಕಾಶ ತಂದುಕೊಡ್ತು. 8.5 ವರ್ಷಗಳ ಕಾಲ ತ್ರಿವಿಕ್ರಮ್‌ ಅವರು ಕ್ರಿಕೆಟ್‌ಗೆ ಸಮಯ ಕೊಟ್ಟಿದ್ದರು. ಆದರೆ ಅದೊಂದು ಅಪಘಾತ ಕ್ರಿಕೆಟ್‌ ಕನಸನ್ನು ಹಾಳು ಮಾಡಿತು. 

ಆಟಿ ಕಳೆಂಜ ಜೊತೆಯಲ್ಲಿ ಕ್ರೈಂ, ಸಸ್ಪೆನ್ಸ್‌ ಥ್ರಿಲ್ಲರ್ ಕಥೆ ಹೇಳುವ ರೂಪೇಶ್‌ ಶೆಟ್ಟಿ, ಜಾನ್ವಿ ನಟನೆಯ 'ಅಧಿಪತ್ರ' ಸಿನಿಮಾ!

ʼಪದ್ಮಾವತಿʼ ಹೀರೋ! 
ಎಂಬಿಎ ಓದಿದ್ದ ತ್ರಿವಿಕ್ರಮ್‌ಗೆ ಕಾರ್ಪೋರೇಟ್‌ನಲ್ಲಿ ಕೆಲಸ ಮಾಡಲು ತಾಳ್ಮೆಯೂ ಇರಲಿಲ್ಲ, ಆಸಕ್ತಿಯೂ ಇರಲಿಲ್ಲ. ಸೆಲೆಬ್ರಿಟಿ ಆಗಲಿಲ್ಲ ಅಂದ್ರೂ ಕೂಡ ಸೆಲೆಬ್ರಿಟಿ ಟ್ರೇನರ್‌ ಆಗಬೇಕು ಅಂತ ತ್ರಿವಿಕ್ರಮ್‌ ಅಂದುಕೊಂಡಿದ್ದರು. ಈ ಹಿಂದೆ ಅವರು ʼಜೊತೆ ಜೊತೆಯಲಿʼ ಧಾರಾವಾಹಿಯ ಕೆಲ ಎಪಿಸೋಡ್‌ಗಳಲ್ಲಿ ನಟಿಸಿದ್ದ ಅವರು ʼಪದ್ಮಾವತಿʼ ಧಾರಾವಾಹಿಯ ಹೀರೋ ಆದರು. ಕಿರುತೆರೆಯಲ್ಲಿ ತ್ರಿವಿಕ್ರಮ್‌ಗೆ ಇದು ಒಳ್ಳೆಯ ಬ್ರೇಕ್‌ ಆಗಿತ್ತು. 

ಕುಂಭಮೇಳದಲ್ಲಿ ಸಾನ್ಯಾ ಅಯ್ಯರ್… ನಾಗ ಸಾಧುಗಳಿಂದ ಆಶೀರ್ವಾದ ಪಡೆದ ನಟಿ

ಸಿನಿಮಾಗಳಲ್ಲಿ ನಟನೆ! 
ಸಿನಿಮಾ ಹೀರೋ ಆಗಬೇಕು ಅಂದುಕೊಂಡಿದ್ದ ತ್ರಿವಿಕ್ರಮ್‌ಗೆ ಅನೇಕರು ಅವಮಾನ ಮಾಡಿದ್ದರಂತೆ. ಎಷ್ಟೋ ಡೈರೆಕ್ಟರ್‌, ಪ್ರೊಡ್ಯೂಸರ್‌ ತ್ರಿವಿಕ್ರಮ್‌ಗೆ ನಿಂದಿಸಿದ್ದರು. ನೀನು ಹೀರೋ ಆಗೋಕೆ ನಿನಗೆ ಮಾರ್ಕೆಟ್‌ ವ್ಯಾಲ್ಯು ಇಲ್ಲ ಅಂತ ಹೇಳಿದ್ದರಂತೆ. ಜನರ ಪ್ರೀತಿಗೆ ಪರಿತಪಿಸುತ್ತಿದ್ದ ತ್ರಿವಿಕ್ರಮ್‌ ಅವರು ʼಪ್ರೇಮ ಬರಹʼ, ʼರಂಗನಾಯಕಿʼ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇನ್ನು ‌ʼಬಿಗ್‌ ಬಾಸ್ ಮಿನಿ ಸೀಸನ್ʼ‌ ಶೋನಲ್ಲಿ ಅವರು ಭಾಗವಹಿಸಿದ್ದರು. ಕಳೆದ ಸೀಸನ್‌ಗೆ ತ್ರಿವಿಕ್ರಮ್‌ ಅವರು ಎಂಟ್ರಿ ಕೊಡಬೇಕಿತ್ತು. ಆದರೆ ಅವರು ಕಾರಣಾಂತರಗಳಿಂದ ಶೋನಲ್ಲಿ ಭಾಗವಹಿಸಿರಲಿಲ್ಲ. ಈಗ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ಭಾಗವಹಿಸಿದ್ದು, ರನ್ನರ್‌ ಅಪ್‌ ಆದರು. ತುಮಕೂರಿನ ಗುಬ್ಬಿ ಹುಡುಗ ತ್ರಿವಿಕ್ರಮ್‌ ಅವರು ಗೆಲ್ಲಬೇಕು ಅಂತ ಕೆಲವರು ಅಭಿಪ್ರಾಯಪಟ್ಟಿದ್ದರು. ಅಷ್ಟೇ ಅಲ್ಲದೆ ಮಾಸ್ಟರ್‌ಮೈಂಡ್‌ ಅಂತ ಕೂಡ ಹೇಳಿದ್ದರು. 

ʼಬಿಗ್‌ ಬಾಸ್ʼ‌ ಶೋ ಬಳಿಕ ತ್ರಿವಿಕ್ರಮ್‌ ಅವರು ಸಿಸಿಎಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಅವರು ಕಿಚ್ಚ ಸುದೀಪ್‌ ಜೊತೆಗೆ ಮತ್ತೆ ಆಟ ಆಡುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?