BBK9 ಒಳ್ಳೆ ಹುಡುಗ ಪ್ರಥಮ್‌ ಮೇಲೆ ಪ್ರತಿ ದಿನ ಕೋಪ ಬಂದಿದೆ, ಮೆಂಟಲಿ ಟಾರ್ಚರ್ ಕೊಡ್ತಾರೆ: ಅಮೂಲ್ಯ ಗೌಡ

By Vaishnavi Chandrashekar  |  First Published Sep 25, 2022, 9:39 AM IST

ಬಿಗ್ ಬಾಸ್ ಮನೆ ಪ್ರವೇಶಿಸಿದ ಕಿರುತೆರೆ ನಟಿ ಅಮೂಲ್ಯಗೆ ಈ ವ್ಯಕ್ತಿ ಅಂದ್ರೆ ಇಷ್ಟವಿಲ್ಲ. ಇದಕ್ಕೆ ಕಾರಣನೇ ಕೋಪ ಅಂತಾರೆ...


ಕನ್ನಡ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ಅಭಿನಯಿಸುತ್ತಿದ್ದ ಅಮೂಲ್ಯ ಗೌಡ ಇದೀಗ ಕಲರ್ಸ್‌ ಕನ್ನಡ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಕಿಚ್ಚ ಸುದೀಪ್‌ ಜೊತೆ ತಮ್ಮ ತಾವು ಪರಿಚಯಿಸಿಕೊಂಡಿದ್ದಾರೆ. 

'ನನಗೆ ಯಾವುದೇ ರೀತಿ ಟೆನ್ಶನ್ ಇರಲಿಲ್ಲ ಈಗ ಭಯ ಶುರುವಾಗಿದೆ. ಖುಷಿ ಇದೆ. ಫ್ಯಾಮಿಲಿನ ನೋಡಿದಾಗ ಬಿಟ್ಟು ಹೋಗಬೇಕು ಅನ್ನೋ ಭಯ ಶುರುವಾಗಿದೆ. ಬಿಗ್ ಬಾಸ್ ಮನೆಯೋಳಗೆ ಹೋಗಿ ಹೇಗಿರುತ್ತೀನಿ, ಯಾವ ರೀತಿ ಆಟವಾಡುತ್ತೀನಿ ಅನ್ನೋ ಭಯ ಇದೆ. ಈ ಸಲ ಬಂದಿರುವ ಸ್ಪರ್ಧಿಗಳು ಹೇಗಿರುತ್ತಾರೆ ಅನ್ನೋ ಯೋಚನೆ ಇದೆ. Numerologyನ ನಾನು ನಂಬುವುದಿಲ್ಲ ಅದನ್ನು ಹೇಳುವವರನ್ನು ಮೊದಲು ನಂಬುವುದಿಲ್ಲ. ಬಣ್ಣ ಇಷ್ಟ ಪಡ್ತೀನಿ ಆದ್ರೆ ನಂಬಲ್ಲ' ಎನ್ನುತ್ತಾ ಕಿಚ್ಚ ಸುದೀಪ್ ಜೊತೆ ಮೊದಲ ಸಲ ವೇದಿಕೆ ಹಂಚಿಕೊಂಡಿದ್ದಾರೆ. 

Tap to resize

Latest Videos

'ಕೋಪ ಬಂದಾಗ ನಾನು ಬ್ಯಾಲೆನ್ಸ್‌ ತಪ್ಪುವೆ. ಅದಾದ ಮೇಲೆ ಕೋಪ ಬರುವುದು ಗೌರವ ಕೊಡದಿದ್ದಾಗ. ಪರ್ಸನಲ್ ವಿಚಾರಕ್ಕೆ ಕೈ ಹಾಕಿದಾಗ ತುಂಬಾ ಕೋಪ ಬರುತ್ತೆ' ಎಂದು ಕೋಪದ ವಿಚಾರ ಮಾತನಾಡುವಾಗ ಸುದೀಪ್ ಮರು ಪ್ರಶ್ನೆ ಮಾಡುತ್ತಾರೆ 'ಇಷ್ಟು ದಿನ ಪ್ರಸಾರವಾಗಿರುವ ಸೀಸನ್‌ಗಳಲ್ಲಿ ನಿಮಗೆ ಯಾವ ಸ್ಪರ್ಧಿ ಮೇಲೆ ಕೋಪ ಬರುತ್ತೆ?' ಎಂದು. 'ಸರ್ ನಿಜ ಹೇಳಬೇಕು ಅಂದ್ರೆ ನನಗೆ ಒಳ್ಳೆಯ ಹುಡುಗ ಪ್ರಥಮ್ ಮೇಲೆ ಪ್ರತಿ ದಿನ ಕೋಪ ಬರುತ್ತಿತ್ತು. ಅವರು ವರ್ತಿಸುತ್ತಿದ್ದ ರೀತಿ ನನಗೆ ಇಷ್ಟ ಆಗುತ್ತಿರಲಿಲ್ಲ. ಮೆಂಟಲಿ ಜನರನ್ನು ಟಾರ್ಚರ್ ಮಾಡುತ್ತಿದ್ದರು. ಮನೆಯಲ್ಲಿ ಕುಳಿತುಕೊಂಡು ನೋಡುತ್ತಿದ್ದರೂ ಟಾರ್ಚರ್ ಅನಿಸುತ್ತಿತ್ತು. ಇನ್ನೂ ತುಂಬಾ ಇಷ್ಟವಾದ ಸ್ಪರ್ಧಿ ಅಂದ್ರೆ ವೈಷ್ಣವಿ ಅದು ಬಿಟ್ರೆ ದೀಪಿಕಾ ದಾಸ್ ಇಷ್ಟ ಆಗಿದ್ರು' ಎಂದಿದ್ದಾರೆ. 

Bigg Boss Kannada Season 9: ಬಿಗ್‌ಬಾಸ್‌ ಮನೆಗೆ ಕಾಲಿಟ್ಟ ಒಟ್ಟು 18 ಸ್ಪರ್ಧಿಗಳ ಪಟ್ಟಿ ಇಲ್ಲಿದೆ

'ಇಂಡಸ್ಟ್ರಿಯಲ್ಲಿ ಇರ್ಬೇಕಿದ್ರೆ ನನಗೂ ಒಂದು ಆಸೆ ಇತ್ತು. ನೋಡಿದವರೆಲ್ಲರೂ ನನ್ನನ್ನು ಗುರುತಿಸಬೇಕು. ಅಪ್ಪ ಮತ್ತು ಅಣ್ಣ ಮೈಸೂರಿನಲ್ಲಿದ್ದಾರೆ ನಾನು ಬೆಂಗಳೂರಿನಲ್ಲಿ ಇರೋದು ಆಂಟಿ ಮನೆಯಲ್ಲಿ. ಎಲ್ಲರೂ ನನಗೆ ಸಪೋರ್ಟ್ ಮಾಡುತ್ತಾರೆ ಏನಾದರೂ ಸಾಧನೆ ಮಾಡು ಅದರೆ ಸರಿ ಧಾರಿಯಲ್ಲಿ ಇರಬೇಕು. ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಸಿಟ್ಟು ಮಾಡಿಕೊಳ್ಳುವ ರೀತಿ ಹೊರಗಡೆ ಮಾಡಿಕೊಳ್ಳುವುದಿಲ್ಲ ಮಾಡಿಕೊಂಡರೂ ಸರಿಯಾಗಿದ್ದೀನಿ ಅಂತ ಯೋಚನೆ ಮಾಡಿ ಮಾತನಾಡುತ್ತೀನಿ. ನನಗೆ ಸಂಬಂಧ ಅಂದ್ರೆ...ಓಲ್ಡ್‌ ಸ್ಕೂಲ್ ಇಷ್ಟ ಪಡುವ ಹುಡುಗಿ ನಾನು ಸಂಬಂಧದಲ್ಲಿ ಮೊದಲು ಪ್ರಾಮಾಣಿಕವಾಗಿರಬೇಕು. ಒಂದು ವಯಸ್ಸಿಗೆ ಬರ್ತಿದ್ದಂತೆ ಪ್ಯಾಷನ್ ಅನಿಸಿದ್ದು ಟ್ರಿಪ್. ನಾವು ನೋಡಿದರ ಲೈಫ್‌ ಒಂದು ಇದೆ ಅದು ಎಂಜಾಯ್ ಮಾಡಬೇಕು. ಕಮಲಿ ಸೀರಿಯಲ್ ಮಾಡುವ ಮುನ್ನ ಎಲ್ಲರೂ ನನ್ನನ್ನು ಜಡ್ಜ್‌ ಮಾಡುತ್ತಿದ್ದರು ಪಾಸಿಟಿವ್ ರೋಲ್ ಮಾಡುವುದಕ್ಕೆ ಸೂಟ್ ಆಗೋಲ್ಲ ಮಾಡ್ರನ್ ಕ್ಯಾರೆಕ್ಟ್‌ಗೆ ಸೂಟ್ ಆಗ್ತಾಳೆ ಅನ್ನೋರು. ಪರ್ಸನಲ್ ಜೀವನದಲ್ಲಿ ನಾವು ಹೇಗಿದ್ದೀವಿ ಅನ್ನೋದನ್ನು ತಿಳಿದುಕೊಳ್ಳದೆ ಜನರು ಕಾಮೆಂಟ್ ಮಾಡ್ತಾರೆ. ಈ ಕಾಮೆಂಟ್‌ಗಳನ್ನು ಸೈಡಿಟ್ಟರೆ ನಾವು ನೆಮ್ಮದಿಯಾಗಿರಬಹುದು. ನಿನ್ನ ವ್ಯಕ್ತಿತ್ವ ಏನು ಅಂದ್ರೆ ನನಗೆ ಗೊತ್ತಿಲ್ಲ. ಕೋಪ ಒಂದೇ ನೆಗೆಟಿವ್ ಆಗಬಹುದು' ಎಂದು ಪ್ರೋಮೋ ವಿಡಿಯೋದಲ್ಲಿ ಕಮಲಿ ಮಾತನಾಡಿದ್ದಾರೆ. 

ಒಲ್ಡ್‌ ಸ್ಕೂಲ್ ಲವ್ ಸ್ಟೋರಿ ಬಗ್ಗೆ ಸುದೀಪ್‌ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಸ್ಕೂಲಲ್ಲಿ ನನಗೆ ಬಾಯ್‌ಫ್ರೆಂಡ್‌ ಇರಲಿಲ್ಲ ಕಾಲೇಜ್‌ನಲ್ಲಿ ಇದ್ದರು ಎಂದು ಹೇಳುವಾಗ ತಂದೆ ಮುಖ ನೋಡಿ ನಕ್ಕಿದ್ದಾರೆ.

BBK9: ಇದನ್ನೆಲ್ಲ ನೋಡ್ತೀನಿ ಅಂತ ಯಾವತ್ತು ಅಂದುಕೊಂಡಿರ್ಲಿಲ್ಲ- ಕಿಚ್ಚ ಸುದೀಪ್

ಕುಟುಂಬಸ್ಥರ ಮಾತು:

'ಅಮೂಲ್ಯಗೆ ಕೋಪ ಜಾಸ್ತಿ ಅದೇ ಸಮಸ್ಯೆ ಆಗಬಹುದು' ಎಂದು ಸಹೋದರಿ ಹೇಳಿದ್ದಾರೆ. 'ಅಮೂಲ್ಯ ತುಂಬಾನೇ ಸಾಫ್ಟ್‌ ನಾನು ನೋಡಿರುವ ರೀತಿಯಲ್ಲಿ ಈ ಗುಣದಿಂದ ಆಕೆ ಮನೆಯಲ್ಲಿ ಉಳಿದುಕೊಳ್ಳಬಹುದು. ನನ್ನ ಪ್ರಕಾರ ಸಾಪ್ಟ್‌ ಅಂದ್ರೆ ಹೆಚ್ಚಿಗೆ ಮಾತನಾಡುವುದಿಲ್ಲ' ಎಂದು ಆಂಟಿ ಹೇಳಿದ್ದಾರೆ. 

click me!