ಬಿಗ್ ಬಾಸ್ ಮನೆ ಸೇರಿದ 18 ಸ್ಪರ್ಧಿಗಳ ಲಿಸ್ಟ್, ಮೊದಲ ಎಪಿಸೋಡ್‌ನಲ್ಲೇ ವಿನ್ನರ್ ಊಹಿಸಿದ ವೀಕ್ಷಕರು!

Published : Sep 24, 2022, 11:19 PM ISTUpdated : Sep 25, 2022, 12:05 AM IST
ಬಿಗ್ ಬಾಸ್ ಮನೆ ಸೇರಿದ 18 ಸ್ಪರ್ಧಿಗಳ ಲಿಸ್ಟ್, ಮೊದಲ ಎಪಿಸೋಡ್‌ನಲ್ಲೇ ವಿನ್ನರ್ ಊಹಿಸಿದ ವೀಕ್ಷಕರು!

ಸಾರಾಂಶ

ಕನ್ನಡ ಬಿಗ್‌ಬಾಸ್ 9ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರವೀಣರು ಹಾಗೂ ನವೀನರು ಅನ್ನೋ ಹೊಸ ಕಲ್ಪನೆಯೊಂದಿಗೆ ಈ ಸೀಸನ್ ಮೊದಲ ಎಪಿಸೋಡ್‌ನಲ್ಲೇ ತೀವ್ರ ಕುತೂಹಲಕ್ಕೆ ಕಾರಣಾಗಿದೆ. ಆದರೆ ಇದರ ಜೊತೆಗೆ ಈ ಬಾರಿಯ ವಿನ್ನರ್ ಯಾರೂ ಅನ್ನೋದನ್ನು ವೀಕ್ಷರು ಗ್ರಹಿಸಿದ್ದಾರೆ.  

ಬೆಂಗಳೂರು(ಸೆ.24):  ಕನ್ನಡ ಬಿಗ್ ಬಾಸ್ 9ನೇ ಸೀಸನ್ ಆರಂಭಗೊಂಡಿದೆ. ಒಟಿಟಿಯಿಂದ ಆಯ್ಕೆಯಾದ ನಾಲ್ವರು ಸ್ಪರ್ಧಿಗಳ ಜೊತೆಗೆ ಒಟ್ಟು 18 ಮಂದಿ ದೊಡ್ಮನೆ ಸೇರಿಕೊಂಡಿದ್ದಾರೆ. ಕಳೆದ 8 ಆವೃತ್ತಿಗಳಲ್ಲಿ ಕನ್ನಡಿಗರ ಮನರಂಜಿಸಿದ 9 ಬಿಗ್‌ಬಾಸ್ ಸ್ಪರ್ಧಿಗಳು ಹಾಗೂ ಹೊಸ 9 ಸ್ಪರ್ಧಿಗಳು ಮನೆಯೊಳಗೆ ಆಟ ಆರಂಭಿಸಿದ್ದಾರೆ. ಹಿರಿಯ ಕಲಾವಿದ, ಬಿಗ್ ಬಾಸ್ ಸೀಸನ್‌ನಲ್ಲಿ ಫೈನಲ್ ಸ್ಪರ್ಧಿಾಯಾಗಿದ್ದ ನಟ  ಅರುಣ್ ಸಾಗರ್ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಟ್ಟಿದ್ದಾರೆ. ಇನ್ನು ಕೊನೆಯ ಸ್ಪರ್ಧಿಯಾಗಿ ನಿರೂಪಕಿ, ನಟಿ ಅನುಪಮಾ ಗೌಡ ಲಗ್ಗೆ ಇಟ್ಟಿದ್ದಾರೆ. ವಿಶೇಷ ಅಂದರೆ ಈ ಬಾರಿಯ ವಿನ್ನರ್ ಯಾರಾಗಬಹುದು ಅನ್ನೋ ಚರ್ಚೆ ಈಗಲೇ ಆರಂಭಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾರಿಯ ವಿನ್ನರ್ ಕುರಿತು ಭವಿಷ್ಯ ನುಡಿದಿದ್ದಾರೆ. ಕೆಲವರು 18 ಸ್ಪರ್ಧಿಗಳ ಪೈಕಿ ಅರುಣ್ ಸಾಗರ್ ವಿನ್ನರ್ ಆಗಲಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ನವೀನರಲ್ಲಿ ಸಮರ್ಥ ಸ್ಪರ್ಧಿ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

9ನೇ ಆವೃತ್ತಿ ಬಿಗ್ ಬಾಸ್ ಕನ್ನಡದಲ್ಲಿ ಮನೆಯೊಳಗಿರುವ 18 ಸ್ಪರ್ಧಿಗಳು ಯಾರು? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ:

Bigg Boss Kannada Season 9: ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಅರುಣ್ ಸಾಗರ್

ಕನ್ನಡ ಬಿಗ್ ಬಾಸ್ 9ನೇ ಆವೃತ್ತಿಯ 18 ಸ್ಪರ್ಧಿಗಳು:
1. ಅರುಣ್ ಸಾಗರ್
2. ಮಯೂರಿ
3. ದೀಪಿಕಾ ದಾಸ್
4. ನವಾಜ್
5. ದಿವ್ಯ ಉರುಡುಗ
6. ದರ್ಶ್ ಚಂದ್ರಪ್ಪ
7. ಪ್ರಶಾಂತ್ ಸಂಬರ್ಗಿ
8. ಅಮೂಲ್ಯ ಗೌಡ
9. ಸನ್ಯಾ ಅಯ್ಯರ್
10. ರೂಪೇಶ್ ಶೆಟ್ಟಿ
11. ವಿನೋದ್ ಗೊಬ್ರಗಾಲ(ಕಾಮಿಡಿ ಕಿಲಾಡಿಗಳು)
12. ನೇಹಾ ಗೌಡ
13. ಆರ್ಯವರ್ಧನ್ ಗುರೂಜಿ
14. ರಾಕೇಶ್ ಅಡಿಗ
15. ಐಶ್ವರ್ಯ(ಬೈಕ್ ರೈಡರ್)
16. ರೂಪೇಶ್ ರಾಜಣ್ಣ
17. ಕಾವ್ಯಶ್ರೀ (ಮಂಗಳ ಗೌರಿ)
18. ಅನುಪಮಾ ಗೌಡ

ಇತ್ತೀಚೆಗೆ ಮುಕ್ತಾಯವಾದ ಬಿಗ್‌ಬಾಸ್ ಒಟಿಟಿಯಿಂದ ನಾಲ್ವರು ನೇರವಾಗಿ ಬಿಗ್ ಬಾಸ್ 9ನೇ ಆವೃತ್ತಿಗೆ ಆಯ್ಕೆಯಾಗಿದ್ದರು. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗೂರೂಜಿ ಮತ್ತು ಸಾನ್ಯ ಅಯ್ಯರ್ ಬಿಗ್ ಬಾಸ್ 9ನೇ ಆವೃತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ಬಿಗ್‌ಬಾಸ್ 8ನೇ ಆವೃತ್ತಿಯಿಂದ ದಿವ್ಯ ಉರುಡುಗ, ಪ್ರಶಾಂತ್ ಸಂಬರ್ಗಿ ಈ ಸೀಸನ್‌ಗೆ ಎಂಟ್ರಿಕೊಟ್ಟಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?