ಕೊನೆಗೂ ಧಾತ್ರಿವನ ಸೇರಿದ ರಾಮಾಚಾರಿ, ಯಮನಿಂದ ಚಾರಿಯನ್ನು ಪಾರು ಮಾಡೋ ಸಾವಿತ್ರಿ ಆಗ್ತಾಳಾ ಚಾರು?

Published : Mar 14, 2024, 12:15 PM IST
ಕೊನೆಗೂ ಧಾತ್ರಿವನ ಸೇರಿದ ರಾಮಾಚಾರಿ, ಯಮನಿಂದ ಚಾರಿಯನ್ನು ಪಾರು ಮಾಡೋ ಸಾವಿತ್ರಿ ಆಗ್ತಾಳಾ ಚಾರು?

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಲಾದ ರಾಮಾಚಾರಿಯನ್ನು ಚಾರು ಧಾತ್ರಿವನ ಸೇರಿಸಿದ್ದಾಳೆ. ಮುಂದ ಏನೆಲ್ಲ ಡ್ರಾಮಾ ನಡೀಬಹುದು.. ಚಾರು ಸತಿ ಸಾವಿತ್ರಿ ರೋಲ್ ಪ್ಲೇ ಮಾಡಬಹುದಾ?

ಒಂದು ಕಾಲದ ಮಹಾ ಸೊಕ್ಕಿನ ಅಪಾರ ಧಿಮಾಕಿನ ಹುಡುಗಿ ಚಾರು ಈಗ ಸತಿ ಸಾವಿತ್ರಿ ಥರ ಬದಲಾಗಿದ್ದಾಳೆ. ಮೋಸದಿಂದ ಜೈಲು ಸೇರಿದ್ದ ರಾಮಾಚಾರಿಯನ್ನ ಬಿಡಿಸಲು ಅವಳು ಮಾಡಿದ ಸಾಹಸ ರಾಮಾಚಾರಿಯ ಜೀವಕ್ಕೇ ಎರವಾಗಿದೆ. ಬಿದ್ದಿರೋ ಏಟಿಗೆ ಆತನ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಆದರೆ ಚಾರು ಪಾತ್ರವನ್ನು ಸಾವಿತ್ರಿ ಲೆವೆಲ್‌ಗೆ ತಂದು ನಿಲ್ಲಿಸೋಕೆ ಸಿಕ್ಕಿರೋ ಅವಕಾಶವನ್ನು ಸೀರಿಯಲ್ ಟೀಮ್ ಬಿಟ್ಬಿಡುತ್ತಾ? ಅವಳೀಗ ನರ್ಸ್ ವೇಷದಲ್ಲಿ ರಾಮಾಚಾರಿಯನ್ನು ಅಸ್ಪತ್ರೆಯಿಂದ ಆಚೆ ಕರೆತಂದಿದ್ದಾಳೆ. ಧಾತ್ರಿವನಕ್ಕೆ ಈತನನ್ನು ಸಾಗಿಸಿದರೆ ಹೇಗಾದರೂ ಅಲ್ಲಿನ ಗುರುಗಳು ರಾಮಾಚಾರಿಯನ್ನು ಉಳಿಸುತ್ತಾರೆ ಅನ್ನೋ ನಂಬಿಕೆ ಚಾರುವದು. ಸೋ ಆಸ್ಪತ್ರೆ ಟು ಧಾತ್ರಿ ವನ ಸಾಹಸಯಾತ್ರೆ ನಡೆದಿದೆ. ಚಾರು ಚಾರಿಯನ್ನು ಕರೆದೊಯ್ಯುತ್ತಿರುವ ವಿಚಾರ ವಿಲನ್‌ಗಳಿಗೆ ಗೊತ್ತಾಗಿ ಅವರು ಮಾರ್ಗ ಮಧ್ಯೆಯೇ ಚಾರಿ ಲೈಫ್ ಮುಗಿಸಿಬಿಡೋ ಪ್ಲಾನಲ್ಲಿದ್ದಾರೆ.

ಆಗ ಎಂಟ್ರಿಕೊಡೋದೇ ಗಂಡುಗಲಿ ಕೃಷ್ಣಾಚಾರಿ. ಇದು ಅವನಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿಕ್ಕಿರೋ ಅವಕಾಶ. ಒಂದು ಕಡೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಅಣ್ಣ ರಾಮಾಚಾರಿಯ ಪ್ರಾಣ ಉಳಿಸಲು ಮುಂದಾಗಿ ಕೃಷ್ಣ ಬಹುದೊಡ್ಡ ಉಪಕಾರ ಮಾಡಿದ್ದಾನೆ. ಸಾಲದಕ್ಕೆ, ರಾಮಾಚಾರಿಯನ್ನ ಕೊಲೆ ಮಾಡಿಸಲು ಮುಂದಾಗಿದ್ದ ಮಾನ್ಯತಾ, ವೈಶಾಖ ಹಾಗೂ ದೇವ್‌ರನ್ನೂ ಕೃಷ್ಣ ಗಲಿಬಿಲಿ ಮಾಡಿದ್ದಾನೆ. ಹೀಗೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಿದ್ದಾನೆ ಕೃಷ್ಣ.

'ಮುತ್ತಿನ ಸೆಲ್ಫಿ' ನೋಡಿ ಆನಂದ್​ನಿಂದ ಬ್ಲ್ಯಾಕ್​ಮೇಲ್​! ಭೂಮಿಕಾ ಮಲಗಿದಾಗ ಕಳ್ಳನಂತೆ ಬಂದ ಗೌತಮ್​...

ರಾಮಾಚಾರಿಯ ಪಾಲಿಗೆ ನಿಜವಾದ ಆಪತ್ಬಾಂಧವ ಕೃಷ್ಣ. ರಾಮಾಚಾರಿಯ ಮೆದುಳು ನಿಷ್ಕ್ರಿಯಗೊಂಡಿದೆ. ರಾಮಾಚಾರಿಯ ಜೀವ ಉಳಿಸಲು ಆಂಬ್ಯುಲೆನ್ಸ್‌ನಲ್ಲಿ ಧಾತ್ರಿವನಕ್ಕೆ ಚಾರುಲತಾ ಕರೆದುಕೊಂಡು ಹೋಗುತ್ತಿದ್ದಳು. ದಾರಿ ಮಧ್ಯೆ ದೇವ್ ಸೂಚಿಸಿದಂತೆ ಆಂಬ್ಯುಲೆನ್ಸ್ ಮೇಲೆ ರೌಡಿಗಳು ಅಟ್ಯಾಕ್ ಮಾಡ್ತಾರೆ. ರಾಮಾಚಾರಿಯನ್ನ ಕೊಲ್ಲಲು ಪ್ರಯತ್ನಿಸುತ್ತಾರೆ. ಆಗ ರೌಡಿಗಳನ್ನ ಒದ್ದು ಓಡಿಸೋದು ಕೃಷ್ಣ. ದಾರಿ ಮಧ್ಯೆ ಆಂಬ್ಯುಲೆನ್ಸ್ ಕೆಟ್ಟು ನಿಲ್ಲುತ್ತೆ. ಆಗ ಚಾರುಲತಾಗೆ ದಿಕ್ಕೇ ತೋಚದಂತಾಗುತ್ತೆ. ಈ ವೇಳೆ ಸ್ನೇಹಿತನ ಕಾರು ಕಳುಹಿಸಿ, ರಾಮಾಚಾರಿ ಹಾಗೂ ಚಾರುಲತಾ ಧಾತ್ರಿವನ ತಲುಪುವ ಹಾಗೆ ಮಾಡ್ತಾನೆ ಕೃಷ್ಣ. ಅಲ್ಲಿ, ಚಾರುಲತಾ ಹಾಗೂ ರಾಮಾಚಾರಿ ಧಾತ್ರಿವನ ತಲುಪಿದ್ರೆ, ಇತ್ತ ಆಂಬ್ಯುಲೆನ್ಸ್‌ನಲ್ಲಿ ರಾಮಾಚಾರಿಯಂತೆ ಮಲಗುತ್ತಾನೆ ಕೃಷ್ಣ. ರೌಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದಾಗ ದಿಢೀರನೆ ಎದ್ದು ಶಾಕ್ ಕೊಡ್ತಾನೆ ಕೃಷ್ಣ. ರೌಡಿಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡ್ತಾನೆ ಕೃಷ್ಣ.

ಕೃಷ್ಣನನ್ನ ಅಲಿಯಾಸ್ ಕಿಲ್ಲರ್ ಕಿಟ್ಟಿಯನ್ನು ರಾಮಾಚಾರಿ ಅಂತಲೇ ರೌಡಿಗಳು ಭಾವಿಸುತ್ತಾರೆ. ಅದನ್ನೇ ದೇವ್‌ಗೆ ರಿಪೋರ್ಟ್ ಮಾಡ್ತಾರೆ. 'ರಾಮಾಚಾರಿಗೆ ಏನೂ ಆಗಿಲ್ಲ. ಮಲಗಿದಂತೆ ನಾಟಕ ಮಾಡಿದ್ದ. ನಮ್ಮನ್ನೆಲ್ಲಾ ಹೊಡೆದಿದ್ದಾನೆ' ಅಂತ ದೇವ್‌ಗೆ ರೌಡಿಗಳು ತಿಳಿಸುತ್ತಾರೆ. ಆಗ, ದೇವ್‌ ಫುಲ್ ಕನ್‌ಫ್ಯೂಸ್ ಆಗ್ತಾರೆ. ಹಾಗಾದ್ರೆ, ರಾಮಾಚಾರಿಯ ಬ್ರೇನ್ ಡೆಡ್‌ ಆಗಿಲ್ಲ. ಎಲ್ಲವೂ ಪ್ರೀ-ಪ್ಲಾನ್ಡ್‌ ಅಂತ ಮಾನ್ಯತಾ, ದೇವ್ ಹಾಗೂ ವೈಶಾಖ ಗಲಿಬಿಲಿಗೊಳ್ಳುತ್ತಾರೆ.

ಸೇರಿಗೆ ಸವಾಸೇರ್: ಒಂದೇ ತಾಯಿ ಹೊಟ್ಟೆ ಹುಟ್ಟಿದವರಲ್ಲಿ ಅದೆಷ್ಟು ವ್ಯತ್ಯಾಸ? ನಿಜ ಜೀವನದಲ್ಲೂ ಹೀಗೆ ಅಲ್ವಾ?

ರಾಮಾಚಾರಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಬ್ರೇನ್ ಡೆಡ್ ಆಗಿದೆ ಅಂತ ವೈದ್ಯರು ಘೋಷಿಸಿದ್ದಾರೆ. ಹೀಗಿರುವಾಗ, ರಾಮಾಚಾರಿಯನ್ನ ಧಾತ್ರಿವನದ ಗುರುಗಳು ಬದುಕಿಸುತ್ತಾರಾ? ಧಾತ್ರಿವನದಲ್ಲಿ ಪವಾಡ ನಡೆಯುತ್ತಾ?

ಅತ್ತ ರಾಮಾಚಾರಿಯನ್ನ ಕಾಪಾಡಿ, ಇತ್ತ ಏನೂ ಗೊತ್ತಿಲ್ಲದಂತೆ ಇದ್ದು ಮಾನ್ಯತಾ, ವೈಶಾಖ ಹಾಗೂ ದೇವ್‌ಗೆ ಕೃಷ್ಣ ಚಳ್ಳೆಹಣ್ಣು ತಿನ್ನಿಸುತ್ತಾನಾ? ತನ್ನ ಅಣ್ಣನಿಗೆ ತೊಂದರೆ ಕೊಡುತ್ತಿರುವ ಮಾನ್ಯತಾ ಹಾಗೂ ವೈಶಾಖಗೆ ಒಂದು ಗತಿ ಕಾಣಿಸುತ್ತೇನೆ ಅಂತ ಕೃಷ್ಣ ಮೊದಲೇ ಶಪಥ ಮಾಡಿದ್ದಾನೆ. ಮುಂದೇನಾಗುತ್ತೆ ಅನ್ನೋದು ತೆರೆ ಮೇಲೇ ನೋಡಿ.

ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಕಿಲ್ಲರ್ ಕಿಟ್ಟಿ ಪಾತ್ರದಲ್ಲಿ ರಿತ್ವಿಕ್ ಕೃಪಾಕರ್ ನಟಿಸಿದ್ದಾರೆ. ಚಾರು ಪಾತ್ರದಲ್ಲಿ ಮೌನಾ ಗುಡ್ಡೇಮನೆ ನಟಿಸಿದ್ದಾರೆ, ಮಾನ್ಯತಾ ಆಗಿ ಝಾನ್ಸಿ ಸುಬ್ಬಯ್ಯ, ವೈಶಾಖ ಆಗಿ ಐಶ್ವರ್ಯಾ ಸಾಲಿಮಠ ಅಭಿನಯಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!
Bigg Boss Kannada 12: ಏನೂ ಮಾಡಲ್ಲ, ವೇಸ್ಟ್ ಎಂದಿದ್ದ ಗಿಲ್ಲಿ ನಟ; ಠಕ್ಕರ್‌ ಕೊಡೋ ಕೆಲಸ ಮಾಡಿದ ಕಾವ್ಯ ಶೈವ!