ಧಾರಾವಾಹಿ ನಟಿಯ ಬೆಡ್‌ರೂಮ್ ಕಬೋರ್ಡ್‌ನಲ್ಲಿ ಕಾಂಡೋಮ್ ಪತ್ತೆ; ಗಂಡನಿಗೆ ಬಿಗ್ ಶಾಕ್!

Published : Mar 14, 2024, 11:34 AM IST
ಧಾರಾವಾಹಿ ನಟಿಯ ಬೆಡ್‌ರೂಮ್ ಕಬೋರ್ಡ್‌ನಲ್ಲಿ ಕಾಂಡೋಮ್ ಪತ್ತೆ; ಗಂಡನಿಗೆ ಬಿಗ್ ಶಾಕ್!

ಸಾರಾಂಶ

ಮದುವೆಯಾಗಿ ಕೇವಲ ಒಂದು ತಿಂಗಳಲ್ಲಿ ಧಾರಾವಾಹಿ ಶೂಟಿಂಗ್‌ಗೆಂದು ಹೈದರಾಬಾದ್‌ಗೆ ಹೋದ ಖ್ಯಾತ ನಟಿಯ ಬೆಡ್‌ರೂಮ್‌ ಕಬೋರ್ಡ್‌ನಲ್ಲಿ ಕಾಂಡೋಮ್ಸ್‌ ನೋಡಿ ಗಂಡನೇ ಶಾಕ್ ಆಗಿದ್ದಾನೆ.

ಹೈದರಾಬಾದ್ (ಮಾ.14): ಸಿನಿಮಾ ಹಾಗೂ ಧಾರಾವಾಹಿಯನಲ್ಲಿ ನಟನೆ ಮಾಡುವ ಎಲ್ಲ ಕಲಾವಿದರ ಜೀವನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಆದರೆ, ಇಲ್ಲಿ ಖ್ಯಾತ ಧಾರಾವಾಹಿ ನಟಿಗೆ ಕೆಲವು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಕೆಯ ಬೆಡ್‌ರೂಮ್ ಕಬೋರ್ಡ್‌ನಲ್ಲಿ ಕಾಂಡೋಮ್ಸ್ ಪ್ಯಾಕೆಟ್ ಲಭ್ಯವಾಗಿದೆ. ಇದನ್ನು ನೋಡಿದ ಗಂಡ ಶಾಕ್‌ಗೆ ಒಳಗಾಗಿದ್ದು, ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸಿನಿಮಾ ಹಾಗೂ ಧಾರಾವಾಹಿ ಕಲಾವಿದರ ಜೀವನ ಸಾರ್ವಜನಿಕ ಜೀವನವಾಗಿರುತ್ತದೆ. ಇವರು ಪ್ರತಿ ಹೆಜ್ಜೆಯನ್ನೂ ಕೂಡ ಜಾಗರೂಕರಾಗಿಯೇ ಇಡಬೇಕು. ಆದರೂ, ಹಲವು ನಾಯಕಿಯರು ಪ್ರೀತಿ, ಮದುವೆ, ವಿವಾಹ ವಿಚ್ಛೇದನ ಹಾಗೂ ಅನೈತಿಕ ಸಂಬಂಧ ಹೀಗೆ ಹತ್ತು ಹಲವು ಕಾರಣಗಳಿಂದ ಜೀವನದಲ್ಲಿ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಇಲ್ಲಿಯೂ ಕೂಡ ತೆಲುಗು ಧಾರಾವಾಹಿಯ ಖ್ಯಾತ ನಟಿಯೂ ಕೂಡ ಇಂತಹದೇ ಕೌಟುಂಬಿಕ ಸಮಸ್ಯೆಗೆ ಸಿಲುಕಿದ್ದಾಳೆ. ಅದರಲ್ಲಿಯೂ ನಟಿಗೆ ಕೆಲವು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಕೆಯ ಕಬೋರ್ಡ್‌ನಲ್ಲಿದ್ದ ಕಾಂಡೋಮ್ಸ್‌ ನೋಡಿ ಗಂಡನೇ ಬೆಸ್ತು ಬಿದ್ದಿದ್ದಾನೆ.

ತುಕಾಲಿ ಸಂತೋಷ್ ಕಾರು ಅಪಘಾತ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ತೆಲುಗು ಖ್ಯಾತ ಧಾರಾವಾಹಿ ನಟಿ ಐಶ್ವರ್ಯಾ ಅಡ್ಡಾಳ ಹೆಸರು ಮುನ್ನೆಲೆಗೆ ಬಂದಿದೆ. ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಮತ್ತು ಡಿವೋರ್ಸ್ ಕೇಳುತ್ತಿದ್ದಾಳೆ ಎಂದು ಐಶ್ವರ್ಯಾ ಪತಿ ಶ್ಯಾಮ್ ಕುಮಾರ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ನಂತರ ಪತ್ನಿ ಐಶ್ವರ್ಯಾಳ ಬಗ್ಗೆ ಹಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಬಯಲಿಗೆಳೆಯುತ್ತಿದ್ದಾರೆ. ಪತ್ನಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ಯಾಮ್ ಕುಮಾರ್, ಐಶ್ವರ್ಯಾಗೆ ಬೇರೊಬ್ಬ ಗಂಡಸಿನ ಜೊತೆಗೆ ಅನೈತಿಕ ಸಂಬಂಧ ಇದೆ. ನನ್ನ ಬಳಿ 25 ಲಕ್ಷ ರೂ. ಪಡೆದುಕೊಂಡು ಈಗ ನಿನ್ನಿಂದ ಡಿವೋರ್ಸ್‌ ಬೇಕು ಎಂದು ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ತೆಲುಗಿನ ಪ್ರಸಿದ್ಧ ಧಾರಾವಾಹಿಗಳಾದ ತೇತಿಯ ಗಾರು, ಪಲುಕೆ ಬಂಗಾರಮಾಯೆನಾ, ಅಲ ವೈಕುಂಠಪುರಂ, ಅತ್ತಾರಿಂಟಿಕಿ ದಾರೇದಿ ಮುಂದಾದವುಗಳಿಂದ ನಟಿ ಐಶ್ವರ್ಯಾ ಅಡ್ಡಾಳ ಖ್ಯಾತಿ ಪಡೆದಿದ್ದಾಳೆ. ಕಳೆದ ವರ್ಷ ಸೆ.6ರಂದು (6/09/2024) ಶ್ಯಾಮ್ ಕುಮಾರ್ ಅವರನ್ನು ನಟಿ ಐಶ್ವರ್ಯಾ ವಿವಾಹವಾಗಿದ್ದರು. ಅವರ ದಾಂಪತ್ಯ 3 ತಿಂಗಳು ಸರಿಯಾಗಿ ನಡೆಯಲಿಲ್ಲ. ತನ್ನ ಪತ್ನಿಯೇ ತನಗೆ ಕಿರುಕುಳ ನೀಡುತ್ತಿದ್ದಾಳೆ, ನನ್ನಿಂದ ಹಣ ಪಡೆದು ವಿಚ್ಛೇದನ ಕೇಳುತ್ತಿದ್ದಾಳೆ ಎಂದು ಶ್ಯಾಮ್ ಕುಮಾರ್ ಮಾಧ್ಯಮಗಳ ಮುಂದೆ ಬಂದಿದ್ದಾರೆ. 

ಮದುವೆಗೂ ಮುಂಚೆ ಆಕೆಯ ಬಗ್ಗೆ ಹಿಂದೆ-ಮುಂದೆ ಯಾವುದನ್ನೂ ವಿಚಾರಿಸದೇ ಮದುವೆಯಾಗಿದ್ದಕ್ಕೆ ನನಗೆ ತಕ್ಕ ಶಿಕ್ಷೆಯೇ ಆಗುತ್ತಿದೆ. ಆಕೆ ಮದ್ಯಸೇವನೆ, ಧೂಮಪಾನ ಮಾಡುವುದನ್ನು ನಾನು ವಿಡಿಯೋ ಕಾಲ್‌ನಲ್ಲಿ ನೋಡಿದ್ದೇನೆ. ಮದುವೆಯಾದ ಆರಂಭದಲ್ಲಿ ಚೆನ್ನಾಗಿರುವಂತೆ ನಡೆದುಕೊಂಡಳು. ನಂತರ ಆಕೆಯ ನಿಜ ಬಣ್ಣ ಬಯಲಾಗಿದೆ. ಐಶ್ವರ್ಯಾ ಅಕ್ರಮ ಸಂಬಂಧದ ಕುರಿತ ವಿಡಿಯೋ ಮತ್ತು ಆಡಿಯೋ ದಾಖಲೆಗಳಿವೆ. ಹೈದರಾಬಾದಿಗೆ ಹೋದ ಬಳಿಕ ಆಕೆಯ ನಿಜ ಸ್ವರೂಪ ಹೊರಬಂತು. ಆಕೆಯಿಂದಲೇ ನನಗೆ ಮೋಸವಾಗುತ್ತಿದ್ದರೂ, ಗಂಡನಿಂದಲೇ ಮೋಸವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾಳೆ ಎಂದು ಶ್ಯಾಮ್‌ ಕುಮಾರ್ ಹೇಳಿದ್ದಾರೆ.

ಸೀರಿಯಲ್​ ಫ್ಯಾನ್ಸ್​ಗೆ ನಿರಾಸೆ: ಈ ವಾರದಲ್ಲೇ ಮುಗಿಯಲಿವೆ ಎರಡು ಪ್ರಸಿದ್ಧ ಧಾರಾವಾಹಿಗಳು!

ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಬಾಬು ಎಂಬುರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಆಕೆಯ, ಕಬೋರ್ಡ್‌ನಲ್ಲಿ ಉದ್ಯಮಿ ಜೊತೆಗಿರುವ ಫೋಟೋಗಳು ಮತ್ತು ಕಾಂಡೋಮ್ಸ್‌ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇನ್ನು ಐಶ್ವರ್ಯಾಳ ಒಡೆದುಹೋದ ಮೊಬೈಲ್‌ ಅನ್ನು ರಿಪೇರಿ ಮಾಡಿಸುವಾಗ ಅವರಿಬ್ಬರಿಗೂ ಸಂಬಂಧಿಸಿದ ಫೋಟೋಗಳು ಮತ್ತು ಸಂದೇಶಗಳು ಕೂಡ ಪತ್ತೆಯಾಗಿವೆ. ಜೊತೆಗೆ, ಅವರಿಬ್ಬರೂ ಬೆಡ್‌ರೂಮಿನಲ್ಲಿ ಒಟ್ಟಿಗೆ ಇರುವುದನ್ನು ನೋಡಿದ್ದೇನೆ. ಅವಳಿಂದ ನನಗೆ ತುಂಬಾ ಅನ್ಯಾಯವಾಗಿದ್ದು, ನೀವಾದರೂ ನ್ಯಾಯ ಕೊಡಿಸಿ ಎಂದು ಶ್ಯಾಮ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸಿಸ್)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bhargavi LLB Serial ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!