
ಬಿಗ್ ಬಾಸ್ ಕನ್ನಡ ಸೀಸನ್ 10 ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತಕ್ಕೆ ಈಡಾಗಿದೆ. ತುಮಕೂರಿನಿಂದ ಹೊಳೆನರಸಿಪುರಕ್ಕೆ ಹೊರಟಿದ್ದ ತುಕಾಲಿ ಸಂತೋಷ್ (Tukali Santhosh) ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಕುಣಿಗಲ್ ಬಳಿ ಅವರ ಕಾರು ಅಪಘಾತಕ್ಕೆ (Car Accident) ಈಡಾಗಿದೆ ಎನ್ನಲಾಗಿದೆ. ಸಂತು ಕುಟುಂಬಕ್ಕೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.
ಅಪಘಾತದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ದೊರಕಿರುವ ಮಾಹಿತಿ ಪ್ರಕಾರ, ಇಂದು ಸಂಜೆ (13 ಮಾರ್ಚ್ 2024) ಈ ಅಪಘಾತ ಸಂಭವಿಸಿದೆ. ತುಕಾಲಿ ಸಂತು ಅವರ ಕಾರು ಹಾಗೂ ಅಪಘಾತದ ಬಳಿಕ ನಡೆದ ಸಂಭಾಷಣೆಗಳ ವೀಡೀಯೋ ವೈರಲ್ ಆಗಿದೆ. ಅಪಘಾತ ನಡೆದ ಸ್ಥಳ ಕುಣಿಗಲ್ ಸಮೀಪದ ಕುರುಡಿ ಹಳ್ಳಿ ಎನ್ನಲಾಗಿದೆ.
ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ಮಾರುತ್ತೇನೆ ಅಂದ್ರು ರಶ್ಮಿಕಾ; ಫುಲ್ ಶಾಕ್ ಆಗಿದಾರೆ ಫ್ಯಾನ್ಸ್!
ತುಕಾಲಿ ಸಂತೋಷ್ ಕಾರು ಹಾಗು ಆಟೋ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಆಟೋ ಜಖಂ ಗೊಂಡಿದ್ದು, ಒಬ್ಬರಿಗೆ ಗಾಯವಾಗಿದೆ ಎಂಬ ಮಾಹಿತಿಯಿದೆ. ಇವಿಷ್ಟು ಸಂಗತಿ ಬಿಟ್ಟರೆ, ಹೇಗೆ ಅಪಘಾತ ಸಂಭವಿಸಿತು ಎಂಬ ವಿವರಗಳು ಮುಂದೆ ತಿಳಿದುಬರಲಿದೆ. ಇತ್ತೀಚೆಗಷ್ಟೇ ತುಕಾಲಿ ಸಂತೋಷ್ ಅವರು ಹೊಸ ಕಾರು ಖರೀದಿಸಿ ಸಂತೋಷ ಹಂಚಿಕೊಂಡಿದ್ದರು.
ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್
ಎರಡು ವಾರದ ಹಿಂದಷ್ಟೇ ತಾವು ಕಿಯಾ (Kia) ಕಾರು ಖರೀದಿಸಿದ್ದ ಸಂಗತಿಯನ್ನು ತುಕಾಲಿ ಸಂತೋಷ್ ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದರು. ತಮ್ಮ ಕನಸಿನ ಕಾರು ಬಂದಿದೆ, ತಾವು ಹಾಗು ತಮ್ಮ ಕುಟುಂಬ ತುಂಬಾ ಸಂತೋಷ ಅನುಭವಿಸುತ್ತಿದೆ ಎಮದು ತುಕಾಲಿ ಸಂತೋಷ್ ಸಂತಸ ಶೇರ್ ಮಾಡಿಕೊಂಡಿದ್ದರು. ಆದರೆ, ಕಾರು ಕೊಂಡ ಎರಡೇ ವಾರದಲ್ಲಿ ಅಪಘಾತ ಸಂಭವಿಸಿದೆ.
ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.