200 ಸಂಚಿಕೆ ಪೂರೈಸಿದ ಭೂಮಿಗೆ ಬಂದ ಭಗವಂತ: ಹೊರಗೆ ಹಾಕೊಳ್ಳೋ ರಾಜಾ ಚೆಡ್ಡಿ ಎಲ್ಲಿ ಸಿಗುತ್ತೆಂದು ಕೇಳಿದ ಅಭಿಮಾನಿ!

By Sathish Kumar KH  |  First Published Dec 27, 2023, 7:07 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭೂಮಿಗೆ ಬಂದ ಭಗವಂತ ಧಾರಾವಾಹಿ 200 ಸಂಚಿಕೆ ಪೂರ್ಣಗೊಳಿಸಿದ ಬೆನ್ನಲ್ಲಿಯೇ ಧಾರಾವಾಹಿ ತಂಡದ ಸದಸ್ಯರು  ಇನ್ಸ್‌ಸ್ಟಾಗ್ರಾಮ್‌ ಲೈವ್‌ಗೆ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು.


ಬೆಂಗಳೂರು (ಡಿ.27): ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ ಈಗ 200 ಸಂಚಿಕೆಗಳನ್ನು ಪೂರೈಸಿದೆ. ಇದರ ಬೆನ್ನಲ್ಲಿಯೇ ಇನ್ಸ್‌ಸ್ಟಾಗ್ರಾಮ್‌ ಲೈವ್‌ಗೆ ಬಂದ ಧಾರಾವಾಹಿ ತಂಡಕ್ಕೆ ನಟ ಶಿವಪ್ರಕಾಶ್‌ ಅವರು ಹೇಳುವ ರಾಜಾ ಚಡ್ಡಿ ಮತ್ತು ಬನಿಯನ್‌ಗಳು ಎಲ್ಲಿ ಸಿಗುತ್ತವೆ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ನವೀನ್‌ ಕೃಷ್ಣ ಅವರು ಇದೊಂದು ಕಾಲ್ಪನಿಕ ಕಂಪನಿಯಾಗಿದೆ. ಹೊರಗೆ ಹಾಕಿಕೊಳ್ಳುವ ಚಡ್ಡಿ ಇಲ್ಲ. ಪ್ರಶ್ನೆ ಕೇಳಿದ ಅಭಿಮಾನಿ ಅವರೇ ನೀವೇ ಇಂತಹ ಚಡ್ಡಿಯ ಕಂಪನಿ ಆರಂಭಿಸಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಪ್ರತಿದಿನ ರಾತ್ರಿ ಕ್ರೈಮ್‌ ಸುದ್ದಿಗಳನ್ನು ನೋಡಿ ಮಲಗುವಾಗ ಭಾರವಾದ ಮನಸ್ಸು ಇರುತ್ತಿತ್ತು. ಆದರೆ, ಈಗ ಜೀ ಕನ್ನಡ ವಾಹಿನಿಯಲ್ಲಿ ಭಗವಂತನ ತತ್ವಾದರ್ಶದ ಮಾತುಗಳನ್ನು ಕೇಳಿ ನೆಮ್ಮದಿಯಿಂದ ಮಲಗುತ್ತೇವೆ ಎಂದು ಹೇಳಿದ್ದಾರೆ. ಇನ್ನು ಜನರ ಅಚ್ಚುಮೆಚ್ಚಿನ ಧಾರಾವಾಹಿ ತಂಡ ಲೈವ್‌ಗೆ ಬಂದಿದ್ದರಿಂದ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.

Tap to resize

Latest Videos

ಬಿಗ್‌ಬಾಸ್‌ ಮನೆಯ ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್‌ ಕಾರ್ತಿಕ್‌ಗೆ ಅನ್ಯಾಯ? ಪಾಜ್ ಕೊಟ್ಟ ಕ್ಷಣದಲ್ಲಿ ಬಂದು ಹೋದ ಅಮ್ಮ

ಸರಿಯಾದ ದಾಂಪತ್ಯಕ್ಕೆ ಭಗವಂತನ ಸಲಹೆಯೇನು?
ಭಗವಂತ ಹೇಳಿದ ಹಲವು ಮಾತುಗಳಲ್ಲಿ ದಾಂಪತ್ಯಕ್ಕೆ ಕುರಿತ ಮಾತು ಕೂಡ ಬಹಳ ಅರ್ಥಗರ್ಭಿತವಾಗಿದೆ. ಇದನ್ನು ಇನ್ನೊಮ್ಮೆ ಹೇಳಿ ಎಂದು ಕೇಳಿದಾಗ ಭಗವಂತ ಪಾತ್ರಧಾರಿ ಕಾರ್ತಿಕ್ ಸಾಮಗ ಅವರು 'ಸರಿಯಾದ ದಾಂಪತ್ಯ ಸಿಗೋದು ಮುಖ್ಯವಲ್ಲ, ಸಿಕ್ಕಿರೋ ಜೋಡಿಯನ್ನು ಸರೊಯಾಗಿ ನಡೆಸಿಕೊಳ್ಳೋದು ದಾಂಪತ್ಯ' ಎಂದು ಹೇಳಿದರು. ಇಂತಹ ಹಲವು ಮಾತು ಹಾಗೂ ಹರಟೆಗಳನ್ನು ಕೇಳಿದ ಭೂಮಿಗೆ ಬಂದ ಭಗವಂತ ಟೀಮ್‌ಗೆ 200 ಎಪಿಸೋಡ್ ಮಾತ್ರವಲ್ಲ 1000 ಎಪಿಸೋಡ್ ಆಗಲೆಂದು ಕೆಲವು ಅಭಿಮಾನಿಗಳು ಹಾರೈಕೆ ಮಾಡಿದ್ದಾರೆ. 

ಭಗವಂತನಿಗೆ ಸಂಬಳ ಹೆಚ್ಚಿಗೆ ಮಾಡಿ:
ಭಗವಂತನಿಗೆ ನಿಮ್ಮ ಫ್ರೆಂಡ್‌ ಶಿವಪ್ರಸಾದ್‌ ಪ್ರತಿ ತಿಂಗಳು ಎಲ್ಲದಕ್ಕೂ ಬಜೆಟ್‌ ಹಾಕಿಕೊಂಡು ಮಧ್ಯಮ ವರ್ಗದ ಜೀವನ ಮಾಡುತ್ತಿದ್ದಾರೆ. ಅವರಿಗೆ ಸಂಬಳ ಹೆಚ್ಚಿಗೆ ಮಾಡಿ ಎಂದು ಕೇಳಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಅವರದ್ದೇ ಆದ ಶಕ್ತಿ ಇರುತ್ತದೆ. ಏನೇ ಸಮಸ್ಯೆ ಬಂದರೂ ನಿಮ್ಮ ಕೈಯಲ್ಲಿಯೇ ಪರಿಹಾರ ಇರುತ್ತದೆ. ನಿಮ್ಮ ಸಂಬಳ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶವೂ ನಿಮ್ಮ ಕೈಯಲ್ಲಿರುತ್ತದೆ ಎಂದು ಭಗವಂತ ಉತ್ತರ ನಿಡಿದ್ದಾರೆ. ಅವರು ಕೆಲಸ ಮಾಡಿದಷ್ಟೇ ಸಂಬಳ ಅವರಿಗೆ ಸಿಗುತ್ತದೆ ಎಂದಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ತಾಂಡವ ಪ್ರೊಡಕ್ಷನ್ ನಿರ್ಮಾಣದ, ಆರೂರು ಜಗದೀಶ್ ಪ್ರಧಾನ ನಿರ್ದೇಶನದ, ಕುಮಾರ್ ಕೆರಗೋಡು ಸಂಚಿಕೆ ನಿರ್ದೇಶನದ ಭೂಮಿಗೆ ಬಂದ ಭಗವಂತ ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜೀಕನ್ನಡ ವಾಹಿನಿಯಲ್ಲಿ ಈ ಸೀರಿಯಲ್‌ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಮಧ್ಯಮ ವರ್ಗದ ಜನರ ಬದುಕಿನ ಕಥೆಗಳನ್ನು ಹೇಳುತ್ತಲೇ ಜೀವನದ ಮೌಲ್ಯಗಳನ್ನು ಭಗವಂತನ ಮೂಲಕ ನೋಡುಗರಿಗೆ ತಿಳಿಸುತ್ತ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಟ ನವೀನ್ ಕೃಷ್ಣ , ನಟಿ ಕೃತ್ತಿಕಾ ರವೀಂದ್ರ , ಹಿರಿಯ ನಟ ಉಮೇಶ್ ಎಂ ಎಸ್ , ಭಗವಂತನ ಪಾತ್ರಧಾರಿಯಾಗಿ ಕಾರ್ತಿಕ್ ಸಾಮಗ , ಅಂಕಿತಾ ಜಯರಾಮ್ , ಅನುರಾಗ್ , ಶೋಧನ್ ಬಸ್ರೂರ್ , ಅಶ್ವಿನಿ ಸೇರಿದಂತೆ ಬಹುತಾರಾಗಣ ಈ ಧಾರಾವಾಹಿಯಲ್ಲಿದೆ.

ಬಿಎಸ್‌ವೈ ಅವಧಿಯಲ್ಲಿ 40,000 ಕೋಟಿ ರೂ. ಕೋವಿಡ್‌ ಹಗರಣ: ತನಿಖೆ ಮಾಡದೇ ಕೈತೊಳೆದುಕೊಂಡ್ರಾ ಆರೋಗ್ಯ ಸಚಿವರು!

ಅಭಿಮಾನಿ ದೇವರುಗಳ ಮುಂದೆ ಭಗವಂತನ ಕಥೆ: 
ವೀಕ್ಷಕರೇ ಅನ್ನದಾತರೇ ನಮ್ಮ ಧಾರಾವಾಹಿ 200 ಸಂಚಿಕೆ ಪೂರೈಸಿದೆ. ನಿಮ್ಮ ಅಭಿಮಾನ ಆಶೀರ್ವಾದ ಇದ್ದರೆ 1000ಕ್ಕಿಂತ ಹೆಚ್ಚು ಸಂಚಿಕೆಗಳನ್ನು ಕೂಡ ಕಾಣಬಹುದು. ಅಭಿಮಾನಿ ದೇವರುಗಳ ಮುಂದೆ ನಾವು ದೇವರ ಕಥೆ ಹೇಳುತ್ತಿರುವುದು ಸಂತಸವಾಗುತ್ತಿದೆ. 
- ಹಿರಿಯ ನಟ ಉಮೇಶ್

click me!