Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!

Published : Apr 10, 2025, 10:39 PM ISTUpdated : Apr 11, 2025, 09:56 AM IST
Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!

ಸಾರಾಂಶ

ತಾಂಡವ್‌ ಹಾಗೂ ಶ್ರೇಷ್ಠ ಮದುವೆ ಬಳಿಕ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಇನ್ನೊಂದು ಮದುವೆ ಆಗುವ ಥರ ಕಾಣ್ತಿದೆ. 

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೊನೆಗೂ ತಾಂಡವ್‌, ಶ್ರೇಷ್ಠ ಮದುವೆ ಆಗಿದೆ. ಈಗ ಇನ್ನೊಂದು ಮದುವೆ ಆಗೋ ಲಕ್ಷಣ ಕಾಣುತ್ತಿದೆ. ಹೌದು, ಈಗ ಪೂಜಾ ಸುತ್ತ ಕಥೆ ಸಾಗುತ್ತಿದೆ. ಪೂಜಾ ಮದುವೆ ಬಗ್ಗೆ ಕಥೆ ಸಾಗಬಹುದಾ? ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ. 

ಜಗಳದಿಂದಲೇ ಪ್ರೀತಿ ಶುರುವಾಗೋದು! 
ಪೂಜಾಗೆ ಕೆಲಸ ಸಿಕ್ಕಿದ್ದು, ಅವಳ ಬಗ್ಗೆಯೇ ಎಪಿಸೋಡ್‌ ಸಾಗುತ್ತಿದೆ. ಪೂಜಾಳ ಸೂಪರ್‌ ಸೀನಿಯರ್ ಜಿಮ್‌ನಲ್ಲಿ ಅವಳಿಗೆ ಕೆಲಸ ಸಿಕ್ಕಿದೆ. ಈ ಹಿಂದೆ ಇವರಿಬ್ಬರು ನಿತ್ಯವೂ ಕಿತ್ತಾಡುತ್ತಿದ್ದರು. ಕಿಶನ್‌ ಜಿಮ್‌ನಲ್ಲಿ ಪೂಜಾ ಈಗ ಉದ್ಯೋಗಿ. ಕಿಶನ್‌ನಿಂದ ಪೂಜಾಗೆ ಸಮಸ್ಯೆ ಆಗತ್ತಾ? ಅವಳು ಏನು ಮಾಡ್ತಾಳೆ? ಎಂದು ಕಾದು ನೋಡಬೇಕಿದೆ. ಎಷ್ಟೋ ಪ್ರೀತಿಗಳು ಜಗಳದಿಂದಲೇ ಶುರು ಆಗುವುದುಂಟು. ಹಾಗೆಯೇ ಪೂಜಾ-ಕಿಶನ್‌ ಕೂಡ ಜಗಳ ಮಾಡಿಕೊಂಡು ಪ್ರೀತಿಸುವ ಸಾಧ್ಯತೆ ಇದೆ.

ಶ್ರೇಷ್ಠಾಗೆ ಗಂಡನಿಂದಲೇ ಕಪಾಳಮೋಕ್ಷ… ವಾರೆ ವಾ ತಾಂಡವ್ ಇನ್ನೆರಡು ಬಾರಿಸು ಎಂದು ವೀಕ್ಷಕರು

ಕಿಶನ್-ಪೂಜಾ ಮದುವೆ ಆಗಲೂಬಹುದು! 
ಕಿಶನ್‌ ಅಷ್ಟು ಕೆಟ್ಟವನ ಥರ ಅಂತೂ ಕಾಣ್ತಿಲ್ಲ, ಒಂದು ಕಡೆ ಕಾಮಿಡಿಯನ್‌ ಥರ ಇದ್ದಾನೆ. ಹೀಗಾಗಿ ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ ಪ್ರೀತಿಗೆ ಟರ್ನ್‌ ಆದರೂ ಡೌಟ್‌ ಇಲ್ಲ. ಎಲ್ಲ ಒಳ್ಳೆಯವರು ಅಂತ ತಾಂಡವ್‌ಗೆ ಭಾಗ್ಯಳನ್ನು ಕೊಟ್ಟು ಮದುವೆ ಮಾಡಿ, ಅದೀಗ ಹಳ್ಳ ಹಿಡಿದಿದೆ. ಹೀಗಾಗಿ ಪೂಜಾ ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸಲು ಎಲ್ಲರೂ ಒಪ್ಪಬಹುದು. ಒಟ್ಟಿನಲ್ಲಿ ಪೂಜಾ ಜೀವನವಾದರೂ ಚೆನ್ನಾಗಿರಲಿ ಅಂತ ಎಲ್ಲರೂ ಬಯಸಬಹುದು. 

ಯಾರು ಗೆಲ್ತಾರೆ? 
“ನಾನು ಕಿಶನ್‌ಗೆ ಹೆದರಿ ಈ ಕೆಲಸ ಬಿಡೋದಿಲ್ಲ, ಇಲ್ಲೇ ಇದ್ದು ಕೆಲಸ ಮಾಡ್ತೀನಿ. ನನಗೆ ಯಾವ, ಯಾರ ಭಯವೂ ಇಲ್ಲ” ಎಂದು ಪೂಜಾ ಠಕ್ಕರ್‌ ಕೊಟ್ಟಿದ್ದಾಳೆ. ಇನ್ನೊಂದು ಕಡೆ ಕಿಶನ್‌, “ನಾನು ಈಗ ಪೂಜಾಗೆ ಚಕ್ರಬಡ್ಡಿ ಸಮೇತ ಎಲ್ಲವನ್ನು ವಾಪಸ್‌ ಕೊಡ್ತೀನಿ” ಎಂದು ಹೇಳುತ್ತಿದ್ದಾನೆ. ಒಟ್ಟಿನಲ್ಲಿ ಇವರಿಬ್ಬರ ಕಥೆ ಎಲ್ಲಿಗೆ ಹೋಗೋವುದೋ ಏನೋ! 

Bhagyalakshmi Serial: ʼಕಾಲೆಳೆಯೋರನ್ನು ತುಳಿದು ಮೇಲೆ ಬರ್ತೀನಿʼ; ಮಹಾಹೆಜ್ಜೆ ಹಾಕಿದ ಭಾಗ್ಯ!

ಇನ್ನೊಂದು ಕಡೆ ಭಾಗ್ಯ ಏನೇ ಕೆಲಸ ಮಾಡಿದರೂ ಅವಳು ಹಾಳಾಗಬೇಕು, ಅವಳು ಗೆಲ್ಲಬಾರದು ಅಂತ ತಾಂಡವ್‌, ಶ್ರೇಷ್ಠ, ಕನ್ನಿಕಾ ಒಟ್ಟಾಗಿದ್ದಾರೆ. ಮನೆಯ ಸಾಲ ತೀರಿಸ್ತೀನಿ, ಮಕ್ಕಳನ್ನು ಸಾಕ್ತೀನಿ ಅಂತ ಭಾಗ್ಯ ಹೇಳಿದ್ದಾಳೆ. ನೀನು ಮಂಡಿಯೂರಿ ಕೂತು ಕ್ಷಮೆ ಕೇಳಿದರೆ ನಾನು ಎಲ್ಲವನ್ನು ನೋಡಿಕೊಳ್ತೀನಿ ಅಂತ ತಾಂಡವ್‌ ಹೇಳಿದ್ದಾನೆ. ಆದರೆ ಇದಕ್ಕೆ ಭಾಗ್ಯ ಒಪ್ಪುತ್ತಿಲ್ಲ. 

ಧಾರಾವಾಹಿ ಕಥೆ ಏನು?
ಭಾಗ್ಯ ಹಾಗೂ ತಾಂಡವ್‌ಗೆ ಮದುವೆಯಾಗಿ ಹದಿನಾರು ವರ್ಷಗಳು ಕಳೆದಿದ್ದು, ಇಬ್ಬರು ಮಕ್ಕಳಿದ್ದಾರೆ. ಇನ್ನು ಗಂಡ ತಾಂಡವ್‌ಗೆ ಭಾಗ್ಯ ಕಂಡರೆ ಇಷ್ಟವೇ ಇಲ್ಲ. ಯಾರ ಮಾತನ್ನೂ ಕೇಳದೆ ಅವನು ಶ್ರೇಷ್ಠ ಎನ್ನುವ ಹುಡುಗಿ ಜೊತೆ ಮದುವೆಯಾಗಿದ್ದಾನೆ. ಭಾಗ್ಯಳನ್ನು ಎಲ್ಲರೂ ಹೊಗಳಿದ್ರೆ ತಾಂಡವ್‌ಗೆ ಇಷ್ಟವಾಗೋದಿಲ್ಲ. ಭಾಗ್ಯ ಬೆಳೆದರೆ ತಾಂಡವ್ ಮಾತ್ರ ಸುಮ್ಮನೆ ಇರೋದಿಲ್ಲ. ಭಾಗ್ಯಳನ್ನು ಮಾತ್ರ ಸುಮ್ಮನೆ ಬಿಡಬಾರದು, ಸೊಕ್ಕು ಮುರಿಯಬೇಕು ಅಂತ ತಾಂಡವ್‌ ಪಣ ತೊಟ್ಟಿದ್ದಾನೆ. ಇನ್ನು ತನ್ವಿ ಶಾಲೆ ಹೆಡ್ ಕನ್ನಿಕಾಗೂ ಭಾಗ್ಯ ಕಂಡರೆ ಆಗೋದಿಲ್ಲ. ಶ್ರೇಷ್ಠ, ತಾಂಡವ್‌, ಕನ್ನಿಕಾರೇ ಭಾಗ್ಯಗೆ ಶತ್ರು ಆಗಿದ್ದಾರೆ. ಭಾಗ್ಯಗೆ ಮಾತ್ರ ಕಷ್ಟವೇ ಬರುತ್ತಿಲ್ಲ. ಅಕ್ಷಯ ಪಾತ್ರೆಯ ಥರ ಒಂದಾದ ಮೇಲೆ ಒಂದು ಕಷ್ಟಗಳು ಬರುತ್ತಿವೆ. 

ಪಾತ್ರಧಾರಿಗಳು
ಭಾಗ್ಯ ಪಾತ್ರದಲ್ಲಿ ನಟಿ ಸುಷ್ಮಾ ಕೆ ರಾವ್‌, ಶ್ರೇಷ್ಠ ಪಾತ್ರದಲ್ಲಿ ನಟಿ ಕಾವ್ಯಾ ಗೌಡ, ತಾಂಡವ್‌ ಪಾತ್ರದಲ್ಲಿ ನಟ ಸುದರ್ಶನ್‌ ರಂಗಪ್ರಸಾದ್‌ ಅವರು ನಟಿಸುತ್ತಿದ್ದಾರೆ. 
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?