ಸೀರಿಯಲ್​ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ​ ಖಡಕ್​ ವಾರ್ನಿಂಗ್​!

Published : Apr 10, 2025, 06:40 PM ISTUpdated : Apr 11, 2025, 10:07 AM IST
ಸೀರಿಯಲ್​ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ​ ಖಡಕ್​ ವಾರ್ನಿಂಗ್​!

ಸಾರಾಂಶ

ನಟಿ ಮೇಘನಾ ಶಂಕರಪ್ಪ, ನಟನೆಯ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವಕಾಶದ ಭರವಸೆ ನೀಡುವ ವಂಚಕರಿಂದ ಯುವತಿಯರು ಎಚ್ಚರವಾಗಿರಬೇಕು. ವಾಹಿನಿಗಳು ಅಥವಾ ಪ್ರೊಡಕ್ಷನ್ ಹೌಸ್‌ಗಳು ಆಡಿಷನ್‌ಗೆ ಹಣ ಕೇಳುವುದಿಲ್ಲ. ನಟನೆಯ ತರಬೇತಿ ಮುಖ್ಯ, ಆದರೆ ಮೂಲಭೂತ ನಟನೆ ಒಳಗಿನಿಂದ ಬರಬೇಕು. ವಾಹಿನಿಗಳು ಸಾಮಾಜಿಕ ಮಾಧ್ಯಮದಲ್ಲಿ ಆಡಿಷನ್‌ಗಳನ್ನು ಪ್ರಕಟಿಸುತ್ತವೆ, ಅರ್ಹರು ಭಾಗವಹಿಸಿ ಅವಕಾಶ ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ನಟಿ ಮೇಘನಾ ಶಂಕರಪ್ಪ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಸೀತಾರಾಮ ಸೀರಿಯಲ್​ ಪ್ರಿಯಾ ಇವರು. ಈಚೆಗಷ್ಟೇ ಮದುವೆಯಾಗಿರುವ ನಟಿ ಮೇಘನಾ, ಮದುವೆ, ಹನಿಮೂನ್ ಎಲ್ಲಾ ಮುಗಿಸಿ ಮತ್ತೆ ಶೂಟಿಂಗ್​ಗೆ ಬಂದಿದ್ದಾರೆ. ಇದೀಗ ಅವರು, ರೆಡ್​ಎಫ್​ಎಂ ಯೂಟ್ಯೂಬ್​ ಚಾನೆಲ್​ ಜೊತೆ  ಮಾತನಾಡುತ್ತಾ ಸೀರಿಯಲ್​ಗಳಲ್ಲಿ ನಟಿಸುವ ಆಸೆಯನ್ನು ಹೊತ್ತಿರುವ ಹಲವರಿಗೆ ಕಿವಿಮಾತಿನ ಜೊತೆ ಖಡಕ್​ ವಾರ್ನಿಂಗ್​ ಕೂಡ ಕೊಟ್ಟಿದ್ದಾರೆ. ಇಂದು ಅದೆಷ್ಟು ಮಂದಿ ನಟಿಯರಾಗುವ ಆಸೆ ಹೊತ್ತಿದ್ದಾರೆ ಎನ್ನುವುದು,  ವಾಹಿನಿಗಳಲ್ಲಿ ಆಡಿಷನ್​ಗೆ ಕರೆದಾಗ ಬರುವ ಯುವಕ-ಯುವತಿಯರ ಸಂಖ್ಯೆ ನೋಡಿದರೆ   ತಿಳಿಯುತ್ತದೆ. ಆದರೆ ಎಲ್ಲರಿಗೂ ಈ ಅದೃಷ್ಟ ಸಿಗುವುದಿಲ್ಲ. ಸಿನಿಮಾ ಆಗಲೀ, ಕಿರುತೆರೆ ಆಗಲೀ, ಅಲ್ಲಿಗೆ ಹೋಗುವ ಕನಸು ಹೊತ್ತವರ ಪೈಕಿ ಅದೃಷ್ಟ ಇದ್ದವರಿಗೆ ಮಾತ್ರ ಅವಕಾಶ ಸಿಗುವುದು. ಕೆಲವೊಮ್ಮೆ ಸ್ಟಾರ್​ ಕಿಡ್​ ಆಗಿದ್ದರೂ ಅವಕಾಶ ಸಿಗದ ಘಟನೆಗಳೂ ಸಾಕಷ್ಟಿವೆ. ಇನ್ನು ಗಾಡ್​ಫಾದರ್​ಗಳು ಬೇಕು ಎನ್ನುವುದು ನಿಜವಾದರೂ, ಇನ್​ಫ್ಲುಯೆನ್ಸ್ ಮಾಡಿ ಹೋದವರು ಒಂದೆರಡು ಸೀರಿಯಲ್​ ಅಥವಾ ಸಿನಿಮಾಗಳಲ್ಲಿ ನಟಿಸಿ ಕೊನೆಗೆ ಕೆಲಸ ಕಳೆದುಕೊಳ್ಳುವವರೂ ಇದ್ದಾರೆ.  ಮತ್ತೆ ಹಲವರಲ್ಲಿ ತುಂಬಾ ಟ್ಯಾಲೆಂಟ್​ ಇದ್ದರೂ ಅವರಿಗೆ ಕಿರುತೆರೆಗೆ ಹೋಗುವ ದಾರಿ ಗೊತ್ತಿರುವುದಿಲ್ಲ.

ಇದನ್ನೇ ಬಳಸಿಕೊಂಡು, ನಟನೆಗೆ ಅವಕಾಶ ಕೊಡುವುದಾಗಿ ನಂಬಿಸುವ ದೊಡ್ಡ ವರ್ಗವೇ ಇದೆ. ಇದಕ್ಕೆ ಬಲಿಯಾಗುವುದು ಹೆಚ್ಚಾಗಿ ಯುವತಿಯರೇ. ಅದನ್ನೇ ಮೇಘನಾ ಶಂಕರಪ್ಪ ಈಗ ಹೇಳಿದ್ದಾರೆ.  ಪ್ರೊಡಕ್ಷನ್​ ಹೌಸ್​ಗಳು ಜಾಹೀರಾತು ಕೊಟ್ಟಾಗ ಮೈಯೆಲ್ಲಾ ಕಣ್ಣಾಗಿರಿ. ಎಷ್ಟೋ ಮಂದಿ ಮೋಸ ಮಾಡುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳು ಹಿಂದೆ ಮುಂದೆ ಯೋಚನೆ ಮಾಡದೇ ಅಲ್ಲಿ ಹೋಗಬೇಡಿ. ಸರಿಯಾದ ಜಾಹೀರಾತು ಹೌದೋ ಅಲ್ಲವೋ ನೋಡಿಕೊಳ್ಳಿ ಎಂದಿದ್ದಾರೆ. ವಾಹಿನಿಗಳಾಗಲೀ, ನಿಜವಾದ ಪ್ರೊಡಕ್ಷನ್​ ಹೌಸ್​ಗಳಾಗಲೀ ಆಡಿಷನ್​ಗೆ ಕರೆದಾಗ ದುಡ್ಡು ಕೇಳುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಯಾರಾದರೂ ನಟಿ ಮಾಡ್ತೇನೆ, ಇಷ್ಟು ದುಡ್ಡು ಕೊಡಿ ಎಂದು ಯಾವುದಾದರೂ ವಾಹಿನಿ ಅಥವಾ ಪ್ರೊಡಕ್ಷನ್​ ಹೌಸ್​ ಹೆಸರಿನಲ್ಲಿ ಜಾಹೀರಾತು ಕೊಟ್ಟರೆ ಅದನ್ನು ನಂಬಬೇಡಿ. ಅದರ ಸುಳಿಯಲ್ಲಿ ಸಿಲುಕಿ ಮೋಸ ಹೋಗಬೇಡಿ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ ಮೇಘನಾ. 

ಕಂಠಿ ಜೊತೆ ಲವ್​ ಆಗ್ತಿದ್ದಂಗೇ 'ತನು ಕುಣಿದು ಕುಣಿದು ತನನ' ಎಂದು ಸ್ಟೆಪ್​ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ!


 ರೆಡ್​ಎಫ್​ಎಂ ಯೂಟ್ಯೂಬ್​ ಚಾನೆಲ್​ ಜೊತೆ  ಮಾತನಾಡುತ್ತಾ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ ಮೇಘನಾ. ನಟಿಯರಾಗುವುದು ಹೇಗೆ ಎನ್ನುವ ಬಗ್ಗೆಯೂ ಅವರು ತಿಳಿಸಿದ್ದಾರೆ. ನಟನೆಯ ಬಗ್ಗೆ ತುಂಬಾ ಮಂದಿ ಕನಸು ಕಂಡಿರುತ್ತಾರೆ ನಿಜ. ಆದರೆ, ಕಿರುತೆರೆಗೆ ಪ್ರವೇಶಿಸುವ ಮೊದಲು ನಟನೆಯನ್ನು ಕಲಿತುಕೊಂಡು ಬನ್ನಿ, ಅಷ್ಟಕ್ಕೂ ನಟನೆ ಎನ್ನುವುದು ಒಳಗಿನಿಂದ ಬರಬೇಕು, ನಿಮಗೆ ಯಾರೂ ತರಬೇತಿ ಕೊಡುವುದು ಕಷ್ಟ. ಕ್ಯಾಮೆರಾ ಹೇಗೆ ಫೇಸ್​ ಮಾಡಬೇಕು ಎನ್ನುವ ಟ್ರೇನಿಂಗ್​  ಕೊಡಬಹುದು. ಆದರೆ ಬೇಸಿಕ್​ ನಟನೆಯೇ ಗೊತ್ತಿಲ್ಲದಿದ್ದರೆ ಕಲಿಸುವುದು ತುಂಬಾ ಕಷ್ಟವಾಗುತ್ತದೆ, ಅದು ಒಳಗಿನಿಂದ ಬರುವ ಫೀಲ್​ ಆಗಿರಬೇಕು ಎಂದಿದ್ದಾರೆ ಎಂದಿದ್ದಾರೆ.

ಕಿರುತೆರೆಗೆ ಪ್ರವೇಶ ಪಡೆಯುವುದು ಕಷ್ಟವಲ್ಲವಾದರೂ ಸುಲಭವಲ್ಲ. ಹೇಗೆ ಎಂಟ್ರಿ ಕೊಡಬೇಕು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ. ಆದರೆ ಈಗ ಹಿಂದಿನ ಹಾಗಲ್ಲ. ವಾಹಿನಿಗಳೇ ಇಲ್ಲವೇ ಪ್ರೊಡಕ್ಷನ್​ ಹೌಸ್​ಗಳವರೇ ಸೋಷಿಯಲ್​ ಮೀಡಿಯಾದಲ್ಲಿ ಜಾಹೀರಾತು ನೀಡುತ್ತಾರೆ. ಇದಾಗಲೇ ಕೆಲವು ವಾಹಿನಿಗಳು ಈ ರೀತಿ ಜಾಹೀರಾತು ನೀಡಿವೆ. ಆಡಿಷನ್​ಗೆ ಕರೆಯುತ್ತಾರೆ. ಆಗ ಬಂದು ಆಡಿಷನ್​ ಮಾಡಿದರೆ ಅರ್ಹರು ಕೆಲಸ ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ. 

ರಿಯಲ್​ ಅಮ್ಮ ಕೊಟ್ಟ ಟಾರ್ಚರ್​ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ