ಕಂಠಿ ಜೊತೆ ಲವ್​ ಆಗ್ತಿದ್ದಂಗೇ 'ತನು ಕುಣಿದು ಕುಣಿದು ತನನ' ಎಂದು ಸ್ಟೆಪ್​ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ!

Published : Apr 10, 2025, 05:54 PM ISTUpdated : Apr 11, 2025, 10:08 AM IST
ಕಂಠಿ ಜೊತೆ ಲವ್​ ಆಗ್ತಿದ್ದಂಗೇ 'ತನು ಕುಣಿದು ಕುಣಿದು ತನನ' ಎಂದು ಸ್ಟೆಪ್​ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ!

ಸಾರಾಂಶ

"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ, ಸ್ನೇಹಾಳ ಹೃದಯವನ್ನು ಪಡೆದ ಹೊಸ ಸ್ನೇಹಾಳನ್ನು ಕಂಠಿ ಪ್ರೀತಿಸುತ್ತಿದ್ದಾನೆ. ಸ್ನೇಹಾಳಿಗೆ ಕಂಠಿಯ ಮೇಲೆ ಪ್ರೀತಿ ಮೂಡಿದೆ. ಇವರಿಬ್ಬರನ್ನು ಒಂದು ಮಾಡಲು ಪುಟ್ಟಕ್ಕ ಸಹಾಯ ಮಾಡುತ್ತಿದ್ದಾಳೆ. ನಟಿ ದೇವಿಕಾ ಭಟ್ (ಹೊಸ ಸ್ನೇಹಾ) ಮತ್ತು ಶಿಲ್ಪಾ ಸವಸೆರೆ (ಸುಮಾ) ರೀಲ್ಸ್ ಮಾಡಿದ್ದಾರೆ. ದೇವಿಕಾ ಕಥಕ್ ಡ್ಯಾನ್ಸರ್ ಮತ್ತು ಫ್ಯಾಷನ್ ಡಿಸೈನರ್. ಶಿಲ್ಪಾ ಫ್ಯಾಷನ್ ಡಿಸೈನಿಂಗ್ ಡಿಪ್ಲೊಮಾ ಪಡೆದಿದ್ದಾರೆ ಮತ್ತು ಈ ಹಿಂದೆ "ಗೀತಾ" ಧಾರಾವಾಹಿಯಲ್ಲಿ ನಟಿಸಿದ್ದಾರೆ.

ತನ್ನ ಪತ್ನಿ ಸ್ನೇಹಾಳ ಹೃದಯವನ್ನು ತಮ್ಮ ಮನೆಯಲ್ಲಿಯೇ ಇರುವ ಸ್ನೇಹಾಳಿಗೆ ಹಾಕಲಾಗಿದೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆಯೇ ಕಂಠಿಗೆ ಸ್ನೇಹಾಳ ಮೇಲೆ ಲವ್​ ಶುರುವಾಗಿದೆ. ಮೊದಲಿಗೆ ಈ ಹೊಸ ಸ್ನೇಹಾ ಎಂದರೆ ಗುರ್​ ಎನ್ನುತ್ತಿದ್ದ ಕಂಠಿ ಈಗ ಅವಳನ್ನು ಹೇಗಾದರೂ ಒಲಿಸಿಕೊಳ್ಳುವ ಪ್ಲ್ಯಾನ್​ ಮಾಡುತ್ತಿದ್ದಾನೆ. ತನ್ನ ಪ್ರೇಮದ ಕಥೆಯನ್ನು ಪುಟ್ಟಕ್ಕನ ಬಳಿಯೂ ಹೇಳಿಕೊಂಡಿದ್ದಾನೆ ಕಂಠಿ. ಆದರೆ ಈಮೊದಲು ತನ್ನನ್ನು ಕಂಡ್ರೆ ಕಂಠಿಗೆ ಆಗಿಬರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಾ ಇಲ್ಲಿಯವರೆಗೆ ಕಂಠಿಯ ಹತ್ತಿರ ಹೋಗುತ್ತಿರಲಿಲ್ಲ. ಈಗ ಹೇಗಾದರೂ ಮಾಡಿ ಇವರಿಬ್ಬರನ್ನು ಒಂದು ಮಾಡಲು ಪುಟ್ಟಕ್ಕ ಕಂಠಿಗೆ ಪ್ಲ್ಯಾನ್​ ಹೇಳಿಕೊಟ್ಟಿದ್ದಾಳೆ.

ಅದೇ ಇನ್ನೊಂದೆಡೆ, ಸ್ನೇಹಾ ಅಡುಗೆಯ ಬಿಸಿ ಪಾತ್ರೆಯನ್ನು ಮುಟ್ಟಿ ಕೈಸುಟ್ಟುಕೊಂಡು ಕೂಗಿದಾಗ ಕಂಠಿ ಓಡಿ ಬಂದು ತಣ್ಣೀರಿನ ಬಟ್ಟೆ ಕಟ್ಟಿದ್ದಾನೆ. ಸ್ನೇಹಾಳಿಗೆ ಕಂಠಿ ಮೇಲೆ ಈಗ ಲವ್​ ಶುರುವಾಗಿದೆ. ಮುಂದೇನು ಎನ್ನುವ ಕುತೂಹಲ ಇದೆ. ನಿಜಕ್ಕೂ ಆ ಸ್ನೇಹಾಳ ಹೃದಯ ಈ ಸ್ನೇಹಾಳಿಗೆ ಅಳವಡಿಸಿದ್ದು ಹೌದಾ, ಅಥ್ವಾ ಅಲ್ಲೇನಾದ್ರು ಟ್ವಿಸ್ಟ್​ ಇದ್ಯಾ ಎನ್ನುವುದನ್ನು ನೋಡಬೇಕಿದೆ. ಸೀರಿಯಲ್​ ಕಥೆ ಏನೇ ಇರಲಿ.. ಸದ್ಯ ಹೊಸ ಸ್ನೇಹ ಪಾತ್ರಧಾರಿ, ರಾಮಾಚಾರಿ ಸೀರಿಯಲ್​ನಲ್ಲಿ ರುಕ್ಮಿಣಿ ಪಾತ್ರ ಮಾಡಿದ್ದ ನಟಿ ದೇವಿಕಾ ಭಟ್​ , ಪುಟ್ಟಕ್ಕನ ಚಿಕ್ಕ ಮಗಳು ಸುಮಾ ಅರ್ಥಾತ್​ ಶಿಲ್ಪಾ ಸವಸೆರೆ ಜೊತೆ ರೀಲ್ಸ್​ ಮಾಡಿದ್ದಾರೆ.

ಸೀರಿಯಲ್‌ ಸೆಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ವಿಡಿಯೋ ವೈರಲ್‌

ಚಿಗುರಿದ ಕನಸು ಸಿನಿಮಾದ 'ನಿನ್ನ ಕಂಡ ಕ್ಷಣ, ಆಹಾ ತುಂಬಿ ಮನ,  ತನು ಕುಣಿದು ಕುಣಿದು ತನನ'  ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಕಂಠಿಯ ಜೊತೆ  ಲವ್​ ಶುರುವಾಗ್ತಿದ್ದಂತೆಯೇ ತನು ಕುಣಿದು ಕುಣಿದು ತನನ ಆಯ್ತಾ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.  ದೇವಿಕಾ ಭಟ್​  ಕುರಿತು ಹೇಳುವುದಾದರೆ, ಬೆಂಗಳೂರಿನವರು. ಓದಿದ್ದು ಎಂಬಿಎ.  ಮೊದಲಿನಿಂದಲೂ  ಇವರಿಗೆ ಕಲೆ ಬಗ್ಗೆ ಆಸಕ್ತಿ. ಇವರು ಕಥಕ್​ ಡ್ಯಾನ್ಸರ್ ಕೂಡ ಹೌದು. 

ಇವರು ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನು ಶಿಲ್ಪ ಬಣ್ಣದ ಲೋಕದಲ್ಲಿ ಕಾಲಿಡಲು ಆಕೆಗೆ ತನ್ನ ಮನೆಯಲ್ಲಿ ಬಹಳ ಪ್ರೋತ್ಸಾಹ ಕೂಡ ಸಿಕ್ಕಿದೆ.  ಮೊದಲು ಇವರು ಗೀತಾ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಧಾರಾವಾಹಿಯಲ್ಲಿ ವಿಜಯ್ ತಂಗಿ ಶ್ರುತಿ ಪಾತ್ರದಲ್ಲಿ ಮಿಂಚಿದ್ದರು. ಆ ಬಳಿಕ ಇವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಾನ್ಸ್ ಸಿಕ್ಕಿದ್ದು, ಇಲ್ಲಿ ಸುಮಾ ಆಗಿ ನಟಿಸುತ್ತಿದ್ದಾರೆ.   ಹೈಸ್ಕೂಲ್ ಬಳಿಕ  ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡಿದ್ದಾರೆ ಶಿಲ್ಪಾ. ಇದನ್ನು ಸೀರಿಯಲ್​ ಸಮಾಚಾರದಲ್ಲಿ ಶೇರ್​ ಮಾಡಲಾಗಿದೆ. 

ರಿಯಲ್​ ಅಮ್ಮ ಕೊಟ್ಟ ಟಾರ್ಚರ್​ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್