
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾಂಡವ್-ಶ್ರೇಷ್ಠ ಮದುವೆ ಆಗಿದೆ. ನನಗೆ ಕಟ್ಟಿದ ತಾಳಿಗೆ ಗಂಡ ಬೆಲೆ ಕೊಟ್ಟಿಲ್ಲ ಅಂತ ಭಾಗ್ಯ ಅವಳ ತಾಳಿಯನ್ನು ಕಿತ್ತು ಎಸೆದಿದ್ದಾಳೆ. ಭಾಗ್ಯಳ ಈ ನಡೆ ತಾಂಡವ್‌ಗೆ ಶಾಕ್ ತಂದಿದೆ. ಇನ್ಮುಂದೆ ನಾನು ನೀನು ಅತ್ತೆ-ಸೊಸೆ ಅಲ್ಲ, ತಾಯಿ-ಮಗಳು ಥರ ಇಡೋಣ ಅಂತ ಕುಸುಮಾ ಹೇಳಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು?
ಈಗ ಏನಾಯ್ತು?
ತಾಂಡವ್ ಹಾಗೂ ಶ್ರೇಷ್ಠ ಜೋಡಿಯನ್ನು ದೂರ ಮಾಡಬೇಕು ಅಂತ ಕುಸುಮಾ ತುಂಬ ಪ್ರಯತ್ನಪಟ್ಟಳು. ಮಗನಿಗೆ ಅವನ ತಪ್ಪು ಏನು ಅಂತ ಅವಳು ಯತ್ನ ಮಾಡಿದಳು. ಮಗನಿಗೆ ಇಷ್ಟ ಆಗೊ ಥರ ಅವಳು ಸೊಸೆಯನ್ನು ಬದಲಾಯಿಸುವ ಪ್ರಯತ್ನಪಟ್ಟಳು. ಆದರೂ ಕೂಡ ಏನೂ ಪ್ರಯೋಜನ ಆಗಲಿಲ್ಲ.
Bhagyalakshmi Serial: ಡಿವೋರ್ಸ್ ಆಗದೆ ಮತ್ತೊಂದು ಮದುವೆ ಆದ್ನಾ ತಾಂಡವ್? ಅಸಲಿ ಸತ್ಯ ಏನು?
ಅತ್ತೆಯಾಗಿ ನಾನು ಸೋತಿದ್ದೇನೆ ಎಂದು ಕುಸುಮಾ ಸತ್ಯ ಒಪ್ಪಿಕೊಂಡಿದ್ದಾಳೆ. ಈಗ ನಾನು ಸೊಸೆಯನ್ನು ಮಗಳ ಥರ ನೋಡ್ತೀನಿ ಎಂದು ಕುಸುಮಾ ಹೇಳಿಕೊಂಡಿದ್ದಾಳೆ. ಈ ಎಪಿಸೋಡ್ ವೀಕ್ಷಕರಿಗೆ ತುಂಬ ಇಷ್ಟ ಆಗಿದೆ. ಬಹುತೇಕರು ಭಾಗ್ಯ ನಿರ್ಧಾರವನ್ನು ಗೌರವಿಸಿದ್ದಾರೆ.
ವೀಕ್ಷಕರು ಏನು ಹೇಳ್ತಾರೆ?
ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದು, “ಬೇಡವಾದ ಗಂಡನಿಗೆ ಗುಲಾಮಳಾಗಿ ಇರೋದಕ್ಕಿಂತ ಒಬ್ಬಂಟಿಯಾಗಿ ಇರುವುದೇ ಉತ್ತಮ. ಅವನು ದುಡಿದು ತಂದು ಹಾಕದೆ ಇದ್ದರೂ ಪರ್ವಾಗಿಲ್ಲ. ಆದರೆ ಹೆಂಡತಿಯನ್ನು ಅವಮಾನಿಸುವ ಗಂಡ ಮಾತ್ರ ಬೇಡ. ಭಾಗ್ಯ, ನೀನು ಒಳ್ಳೆ ನಿರ್ಧಾರವನ್ನೇ ತಗೊಂಡಿದ್ಯ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ. ಭಾಗ್ಯ ನಿನ್ನನ್ನು ಬೇಡ ಅಂದವನ ಮುಂದೆ ಸಾಧಿಸು, ಧೈರ್ಯ ಕಳ್ಕೋಬೇಡ. ನಿನ್ನ ನೋಡಿ ಕಲಿತುಕೊಳ್ಳಬೇಕು ಭಾಗ್ಯ” ಎಂದು ಹೇಳಿದ್ದಾರೆ.
“ಗಂಡ ಆದವನು, ಏನೇ ತಪ್ಪು ಮಾಡಿದರೂ ಅನುಸರಿಸಿಕೊಂಡು ಹೆಂಡತಿ ಹೋಗಬೇಕು ಅನ್ನೋ ಅತ್ತೆಯವರ ಮನಸ್ಥಿತಿ ಇವಾಗಲೇ ಮುಗಿದು ಹೋಗ್ಬೇಕು. ಭಾಗ್ಯಳ ಮುಂದಿನ ಜೀವನ ಈಗಿನ ಪೀಳಿಗೆ ಹುಡುಗ ಹುಡುಗಿಯರಿಗೆ ಅರ್ಥವಿಲ್ಲದ ಮದುವೆ ಮಾಡಿಕೊಂಡು ಅನುಭವಿಸುವ ಮೊದಲು ತಾಳ್ಮೆಯಿಂದ ಯೋಚಿಸಿ ಅಪ್ಪ ಅಮ್ಮಂದಿರು ಮಕ್ಕಳನ್ನು ಇಬ್ಬರು ಇಷ್ಟಪಟ್ಟ ಮೇಲೆ ಮದುವೆ ಮಾಡಿದರೆ ಮುಂದೆ ಈ ಥರ ತಪ್ಪುಗಳು ಆಗುವುದಿಲ್ಲ. ಎಲ್ಲ ಹೆಣ್ಣು ಮಕ್ಕಳ ಜೀವನಕ್ಕೆ ನಾಂದಿಯಾಯಿತು. ವೆರಿ ಗುಡ್ ಭಾಗ್ಯ, ಇವಾಗ್ಲಾದ್ರೂ ನಿನಗೋಸ್ಕರ ಮಕ್ಕಳಿಗೋಸ್ಕರ ಬದುಕೋದನ್ನ ಅಭ್ಯಾಸ ಮಾಡ್ಕೋ, ಮಗಳೇ ತಾಂಡವ್‌ನಂತಹ ಗಂಡ, ಯಾವ ಹೆಣ್ಣು ಮಕ್ಕಳಿಗೂ ಬೇಡ. ಅಪ್ಪ ಅಮ್ಮನಿಗೂ ನಿನ್ನಂತ ಮಗ ಹುಟ್ಟೋದು ಬೇಡ, ಮಕ್ಕಳು ಇಲ್ಲ ಅಂತ ಇರೋದು ಬೆಸ್ಟ್” ಎಂದು ಇನ್ನೋರ್ವರು ಕಾಮೆಂಟ್ ಮಾಡಿದ್ದಾರೆ.
ಮುಂದೆ ಏನಾಗುವುದು?
ಭಾಗ್ಯ ತನ್ನ ಜೀವನವನ್ನು ತಾನು ನೋಡಿಕೊಂಡು ಹೋಗ್ತಾಳೆ. ಶ್ರೇಷ್ಠಳ ಜೊತೆ ಬದುಕೋದು ಕಷ್ಟ ಅಂತ ತಾಂಡವ್‌ಗೆ ಅರ್ಥ ಆಗಿ ಅವನು ಭಾಗ್ಯ ಬಳಿ ಬರಬಹುದು.
ಪಾತ್ರಧಾರಿಗಳು
ತಾಂಡವ್- ಸುದರ್ಶನ್ ರಂಗಪ್ರಸಾದ್
ಭಾಗ್ಯ- ಸುಷ್ಮಾ ಕೆ ರಾವ್
ಶ್ರೇಷ್ಠ- ಕಾವ್ಯಾ ಗೌಡ
ಕುಸುಮಾ-ಪದ್ಮಜಾ ರಾವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.