ಅಯ್ಯೋ ನಿನ್ನ ಸೊಸೆ ಈ ತರ ಬಟ್ಟೆ ಹಾಕ್ತಾಳಾ ಎಂದು ಕೊಂಕು ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ನೇಹಾ ಗೌಡ

Published : Feb 26, 2025, 03:18 PM ISTUpdated : Feb 26, 2025, 03:45 PM IST
ಅಯ್ಯೋ ನಿನ್ನ ಸೊಸೆ ಈ ತರ ಬಟ್ಟೆ ಹಾಕ್ತಾಳಾ ಎಂದು ಕೊಂಕು ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ನೇಹಾ ಗೌಡ

ಸಾರಾಂಶ

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ಖ್ಯಾತರಾದ ನೇಹಾ ಗೌಡ, ಬಾಲ್ಯದ ಗೆಳೆಯನನ್ನು ಮದುವೆಯಾಗಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಮದುವೆಯ ನಂತರದ ಜೀವನಶೈಲಿ ಬದಲಾವಣೆ ಮತ್ತು ಸಮಾಜದ ನಿರೀಕ್ಷೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಕುಟುಂಬದ ಗೌರವ ಮತ್ತು ಸಂಬಂಧಗಳ ಮೌಲ್ಯಗಳನ್ನು ಎತ್ತಿಹಿಡಿಯಲು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದಾಗಿ ನೇಹಾ ಹೇಳಿದ್ದಾರೆ. ಜೊತೆಗೆ, ಅತ್ತೆ-ಮಾವಂದಿರ ಕಾಳಜಿಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಗಳಾಗಿ ಗೊಂಬೆ ಎಂದು ಬಿರುದು ಪಡೆದ ಸುಂದರಿ ನೇಹಾ ಗೌಡ. ಬಾಲ್ಯ ಸ್ನೇಹಿತನನ್ನು ಪ್ರೀತಿ ಮದುವೆ ಮಾಡಿಕೊಂಡು ಈಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂಪೂರ್ಣವಾಗಿ ಲೈಫ್‌ಸ್ಟೈಲ್ ಬದಲಾಗಿದ್ರೂ ಜನರು ಮಾಡುವ ಕೆಟ್ಟ ಕಾಮೆಂಟ್‌ಗಳಿಗೆ ಉತ್ತರಿಸಿದ್ದಾರೆ. 

'ನಾನು ಸ್ವಲ್ಪ ಓಲ್ಡ್‌ ಸ್ಕೂಲ್ ಹೀಗಾಗಿ ಮದುವೆ ಆದ ಮೇಲೆ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸಿಕೊಳ್ಳಬೇಕು ಅನ್ನೋ ಯೋಚನೆ ಮಾಡುತ್ತೀನಿ. ನಮ್ಮ ಸೊಸೈಟಿ ಇರುವುದೇ ಹಾಗೆ.  ಮದುವೆ ಆದ ಮೇಲೆ ನಾವು ಒಂದಿಷ್ಟು ಬದಲಾವಣೆಗಳನ್ನು ಮಾಡಿಕಳ್ಳುತ್ತೀವಿ, ಆ ಬದಲಾವಣೆ ಬಂದು ಇರುವ ಸಂಬಂಧಕ್ಕೆ ಕೊಡುವ ಬೆಲೆ. ನಾವು ಇರುವ ರಿಲೇಷನ್‌ಶಿಪ್‌ಗೆ ಒಂದು ಗೌರವ ಕೊಡಬೇಕು. ಅತ್ತೆ ಮಾವ ಜೊತೆ ಮನೆಯಲ್ಲಿ ಇರುವವರು ಏನ್ ಇವಳು ಈ ರೀತಿ ರೆಡಿಯಾಗಿದ್ದಾಳೆ ಅಂದುಕೊಳ್ಳಬಹುದು. ಪರ್ಸನಲ್ ಆಯ್ಕೆ ಪರ್ಸನಲ್ ವ್ಯಕ್ತಿಗಳ ಜೊತೆ ಬದಲಾಗುತ್ತದೆ. ನಮ್ಮೊಟ್ಟಿಗೆ ಇರುವವರು ಹೇಗೆ ಯೋಚನೆ ಮಾಡುತ್ತಾರೆ ಅನ್ನೋದು ಮುಖ್ಯವಾಗುತ್ತದೆ. ಮದುವೆ ಮುನ್ನ ನಾನು ಎಲ್ಲಾದರೂ ಹೋಗಬೇಕಿದ್ದರೆ ಯಾರನ್ನೂ ಕೇಳುತ್ತಿರಲಿಲ್ಲ ನನ್ನ ಪಾಡಿಗೆ ಹೋಗಿ ಬರುತ್ತಿದ್ದೆ..ನಮ್ಮ ತಾಯಿಗೆ ಹೇಳುತ್ತಿದ್ದೆ...ಇಲ್ಲವಾದರೆ ಮನೆಗೆ ಬಂದ ಮೇಲೆ ಎಲ್ಲಿ ಹೋಗಿದ್ದೆ ಎಂದು ಹೇಳುತ್ತಿದ್ದೆ. ನನ್ನ ತಾಯಿಗೆ ಏನೋ ಒಂದು ನಂಬಿಕೆ ಹೀಗಾಗಿ ನಡೆಯುತ್ತಿತ್ತು. ಈಗ ಮದುವೆ ಆದ ಮೇಲೆ ನಾವು ಒಂದು ಕುಟುಂಬ ಸೇರುತ್ತೀವಿ..ಅವರಿಗೆ ನಮ್ಮ ಮೇಲೆ ನಂಬಿಕೆ ಇದ್ದರೂ ಕೂಡ ಏನೋ ಒಂದು ರೀತಿಯಲ್ಲಿ ಭಯ ಇರುತ್ತದೆ' ಎಂದು ಆರ್‌ಜೆ ರಾಜೇಶ್ ಸಂದರ್ಶನದಲ್ಲಿ ನೇಹಾ ಗೌಡ ಮಾತನಾಡಿದ್ದಾರೆ.

ಏನ್ ಬ್ಯೂಟಿ ಮೇಡಂ ನೀವು......; ಪ್ರಿಯಾಂಕಾ ಉಪೇಂದ್ರ ಹೊಸ ಫೋಟೋ ಪಡ್ಡೆ ಹುಡುಗರ ಕಣ್ಣು!

'ಮದುವೆ ಮಾಡ್ಕೊಂಡು ಮನೆ ಹೆಣ್ಣುಮಗುವನ್ನು ಕರೆದುಕೊಂಡು ಬಂದಿದ್ದೀವಿ ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದು ಅವರ ಜವಾಬ್ದಾರಿ ಮತ್ತು ಕಾಳಜಿ ಆಗಿರುತ್ತದೆ. ಏನು ನಿಮ್ಮ ಸೊಸೆ ಈ ರೀತಿ ಬಟ್ಟೆ ಹಾಕಿಕೊಂಡಿದ್ದಳು ಎಂದು ಯಾರಾದರೂ ಬಂದು ಹೇಳಿದಾಗ ಅತ್ತೆ ಮಾವ ಹೆದರಿಕೊಳ್ಳಬಾರದು ಹೌದು ನಮ್ಮ ಸೊಸೆ ಇರುವುದೇ ಹಾಗೆ ಏನ್ ಇವಾಗ ಮಕ್ಕಳು ಹಾಕಿಕೊಳ್ಳಿ ಬಿಡ ಅಂತ ಹೇಳಿದರೆ ಅದು ಓಕೆ. ಅಯ್ಯೋ ಅವರು ಹಾಗೆ ಹೇಳುತ್ತಿದ್ದಾರೆ ಇವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬೇರೆ ಅವರ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಅಂದ್ರೆ ಬದಲಾಗಬೇಕು. ನಾನು ಕೂಡ ಇರುವುದೇ ಹಾಗೆ...ನಮ್ಮದೊಂದು ದೊಡ್ಡ ಕುಟುಂಬ ನಮ್ಮನ್ನು ಚೆನ್ನಾಗಿ ಬೆಳೆಸಿದ್ದಾರೆ. ಎಲ್ಲಿಗೆ ಯಾವ ರೀತಿಯಲ್ಲಿ ಹೋಗಬೇಕು ಹಾಗೆ ಹೋಗಿದರೆ ಚೆನ್ನಾಗಿರುತ್ತದೆ. ಸ್ವಲ್ಪ ಕಾಂಪ್ರಮೈಸ್ ಮಾಡಿಕೊಂಡು ಅವರನ್ನು ಅರ್ಥ ಮಾಡಿಕೊಂಡು ನಡೆದರೆ ಸಂಬಂಧ ಚೆನ್ನಾಗಿರುತ್ತದೆ' ಎಂದು ನೇಹಾ ಗೌಡ ಹೇಳಿದ್ದಾರೆ. 

ಆ ಫೋಟೋನ 3 ಸಾವಿರ ಜನ ಸೇವ್ ಮಾಡ್ಕೊಂಡ್ರು; ಅಷ್ಟು ಸಾಚಾ ಆಗಿದ್ರೆ ಕಾಮೆಂಟ್ ಮಾಡ್ಬಾರ್ದು ಎಂದು ಚೈತ್ರಾ ಗರಂ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!