ಸೀತಾರಾಮ ಲವ್​ ಸ್ಟೋರಿ ಶೂಟಿಂಗ್​ ಹೇಗಿತ್ತು? ಸುಂದರ ಕ್ಷಣಗಳ ವಿಡಿಯೋ ರಿಲೀಸ್​ ಮಾಡಿದ ವಾಹಿನಿ...

Published : Mar 01, 2024, 10:00 PM ISTUpdated : Mar 01, 2024, 10:01 PM IST
ಸೀತಾರಾಮ ಲವ್​ ಸ್ಟೋರಿ ಶೂಟಿಂಗ್​ ಹೇಗಿತ್ತು? ಸುಂದರ ಕ್ಷಣಗಳ ವಿಡಿಯೋ ರಿಲೀಸ್​ ಮಾಡಿದ ವಾಹಿನಿ...

ಸಾರಾಂಶ

ಸೀತಾರಾಮ ಸೀರಿಯಲ್​ನ ಶೂಟಿಂಗ್​ ಹೇಗಿತ್ತು ಎನ್ನುವ ಬಗ್ಗೆ ಸುಂದರ ಕ್ಷಣಗಳ ವಿಡಿಯೋ ರಿಲೀಸ್​ ಮಾಡಿದೆ ಜೀ ಕನ್ನಡ ವಾಹಿನಿ.   

ಸೀತಾ ರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಿದೆ. ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿದ್ದಾರೆ. ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾಳೆ. 

ರಾಮ್​ ಸೀತಾಳನ್ನು ಪ್ರೀತಿ ಮಾಡುವ ವಿಷ್ಯ ರಾಮ್​ ತಾತನಿಗೆ ತಿಳಿದಿದೆ. ಆದರೆ ಸೀತಾ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಾಮ್​ನನ್ನೇ ಸೀತಾಳಿಗೆ ಕೊಟ್ಟು ಮದುವೆ ಮಾಡಿಸುವ ಯೋಚನೆ ಮಾಡುತ್ತಿದ್ದಾನೆ. ರಾಮ್​ಗೆ ಅಪಘಾತ ಸಂಭವಿಸುವ ಪೂರ್ವದಲ್ಲಿ ಆತ ಸೀತಾಳ ಜೊತೆ ಮಾತನಾಡಿದ್ದು ಎನ್ನುವ ಸತ್ಯ ತಾತಾ ಸೂರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಆತ ಸೀತಾಳನ್ನು ಕರೆದು ರಾಮ್​ ಅಂದ್ರೆ ನಿನಗೆ ಏನು ಅನಿಸುತ್ತೆ ಎಂದು ಕೇಳಿದ್ದಾನೆ. ಸೀತಾ ಸ್ವಲ್ಪ ಶಾಕ್​ ಆದ್ರೂ ಅವ್ರು ತುಂಬಾ ಒಳ್ಳೆಯವರು ಎಂದಿದ್ದಾಳೆ. ನಂತರ ರಾಮ್​ ನಿನ್ನ ಹತ್ರನೇ ಕೊನೆಯದಾಗಿ ಮಾತನಾಡಿದ್ದ. ಆ ಬಳಿಕ ಅಪಘಾತವಾಗಿದೆ. ಹಾಗಿದ್ರೆ ಆತ ಏನು ಮಾತನಾಡಿದ ಎಂದು ಕೇಳಿದ್ದಾನೆ. ಇದನ್ನು ಕೇಳಿ ಸೀತಾ ಅರೆಕ್ಷಣ ವಿಚಲಿತಳಾಗಿದ್ದಾಳೆ.

ಕರಿಮಣಿ ಸೀರಿಯಲ್​ ಫೈಟಿಂಗ್​ ಸೀನ್​ ಶೂಟಿಂಗ್​ ಹೇಗಿತ್ತು ಗೊತ್ತಾ? ಮೈ ಝುಂ ಎನ್ನಿಸುವ ವಿಡಿಯೋ ರಿಲೀಸ್​

 
ಅದೇ ಇನ್ನೊಂದೆಡೆ, ರಾಮ್​ ಚಿಕ್ಕಮ್ಮ ಅಶೋಕನ ಬಳಿ ಬಂದು ರಾಮ್​ ಇಷ್ಟು ಬೇಗ ಚೇತರಿಸಿಕೊಳ್ಳುತ್ತಾನೆ ಎಂದು ತಿಳಿದಿರಲಿಲ್ಲ. ಇದಕ್ಕೆ ಆತನ ಮಾಜಿ ಪ್ರೇಯಸಿ ಚಾಂದನಿ ಕಾರಣ ಎಂದಿದ್ದಾಳೆ.  ಆದರೆ ರಾಮ್​ಗೆ ಚಿಕ್ಕಮ್ಮ ಹಾಗೂ ಚಾಂದನಿಯ ಕುತಂತ್ರ ಗೊತ್ತು. ಅದೇ ಕಾರಣಕ್ಕೆ ಆತ, ಚಾಂದನಿ ಅಲ್ಲ, ಸೀತಾ ಮತ್ತು ಸಿಹಿ ಕಾರಣ ಎಂದಿದ್ದಾನೆ. ಇದನ್ನು ಕೇಳಿ ಚಿಕ್ಕಮ್ಮನ ಸಿಟ್ಟು ನೆತ್ತಿಗೇರಿದೆ. ಚಾಂದನಿಯನ್ನು ಮತ್ತೆ ರಾಮ್​ನ ಬಾಳಲ್ಲಿ ತರುವಲ್ಲಿ ಚಿಕ್ಕಮ್ಮ ಯಶಸ್ವಿಯಾಗ್ತಾಳಾ? ಮುಂದೇನು ಎನ್ನುವುದು ಈಗಿರುವ ಕುತೂಹಲ.

 

ಇದರ ನಡುವೆಯೇ ಸೀತಾ-ರಾಮ ಸೀರಿಯಲ್​ನ ಶೂಟಿಂಗ್​ ಹೇಗೆ ನಡೆಯಿತು? ಇವರಿಬ್ಬರ ಲವ್​ ಸ್ಟೋರಿಯ ಕುತೂಹಲದ ವಿಡಿಯೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಇದರಲ್ಲಿ ಸೀತಾ ಮತ್ತು ರಾಮ್​ನ ಸಮುದ್ರ ತೀರದ ಪಯಣ, ಶೀರ್ಷಿಕೆಯಲ್ಲಿ ಸೀತಾರಾಮ ಎಂದು ತೋರಿಸುವಾಗ ಇರುವ ಸಮುದ್ರದ ಬಳಿಯ ಶೂಟಿಂಗ್​, ಶೂಟಿಂಗ್​ ಸಮಯದಲ್ಲಿ ಸಿಹಿಯನ್ನು ರಾಮ್​ ಮುದ್ದಾಡುವುದು, ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವುದು ಸಂಪೂರ್ಣ ವಿವರಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಸೀತಾರಾಮ ಸೀರಿಯಲ್​ ಹಿಂದಿನ ಸುಂದರ ಕ್ಷಣಗಳು ಎಂದು ಶೀರ್ಷಿಕೆ ಕೊಡಲಾಗಿದೆ. 
 

ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್​! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?