ಹದಿಹರೆಯದಲ್ಲಿ ತುಂಬಾ ನೋಡಿದ್ದೆ ಮೇಡಂ; ತುಕಾಲಿ ಸಂತೋಷ್ ಮಾತಿಗೆ ಅನುಶ್ರೀ ಶಾಕ್

By Shriram Bhat  |  First Published Mar 1, 2024, 6:27 PM IST

ನಾನು ಕಾಲೇಜಿಗೆ ಹೋಗಿದ್ದು ಓದೋದಕ್ಕೆ ಆಗಿರ್ಲಿಲ್ಲ, ಹುಡುಗೀರ ನೋಡ್ಕೊಂಡು , ಆರಾಮಾಗಿ ಟೈಂ ಪಾಸ್ ಮಾಡೋಣ ಅಂತ.. ಆಮೇಲೆ ಗೊತ್ತಾಯ್ತು ನಂಗೆ ಓದ್ಬೇಕಾಗಿತ್ತು ಅಂತ.. ಫೇಲ್ ಆದ್ಮೇಲೆ, ನಮ್ಮ ಅಪ್ಪ ನಾಯಿಗೆ ಹೊಡ್ದಾಂಗೆ ಹೊಡೆದ್ಮೇಲೆ ನಂಗೆ ಅರ್ಥ ಆಗಿದ್ದು..


ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ (Tukali Santosh) ಹಾಗೂ ನಿರೂಪಕಿ ಅನುಶ್ರೀ (Anchor Anushree) ಮಾತಿಕ ಝಲಕ್ ಒಂದು ಇಲ್ಲಿದೆ ನೋಡಿ. ಮೊದಲೇ ತುಕಾಲಿ ಸಂತು ಹಾಸ್ಯಕ್ಕೆ ಹೆಸರಾದವರು. ಬಿಗ್ ಬಾಸ್ ಮನೆಯಲ್ಲಿ ಕೂಡ ಬಿಗ್ ಬಾಸ್ ಅವರನ್ನು ಗೌರವಪೂರ್ವಕವಾಗಿ 'ತುಕಾಲಿ ಅವ್ರೇ' ಎಂದೇ ಕರೆಯುತ್ತಿದ್ದರು. ತಮ್ಮ ಹೆಸರನ್ನು, ತಮ್ಮ ಪಾಲಿಗೆ ಬಂದ ಪ್ರಶ್ನೆಯನ್ನು ಎಲ್ಲವನ್ನೂ ಲೈಟ್ ಆಗಿ ತೆಗೆದುಕೊಂಡು ಎದುರಿಗೆ ಇರುವವರನ್ನು ನಗಿಸುವ ಪ್ರತಿಭೆ ತುಕಾಲಿ ಸಂತೋಷ್ ಅವರಿಗೆ ಕರಗತವಾಗಿದೆ. ಈ ಮಾತುಕತೆ ವೇಳೆ ಕೂಡ ನೀವು ಸಂತೋಷ್ ಮಾತಿನ ಧಾಟಿ, ಅದಕ್ಕೆ ಅನುಶ್ರೀ ಗಾಬರಿಯಾಗಿದ್ದು, ಎಲ್ಲವನ್ನೂ ನೋಡಬಹುದು. 

ತುಕಾಲಿ ಸಂತು 'ಹದಿಹರೆಯದ ವಯಸ್ಸಲ್ಲಿ ತುಂಬಾ ನೋಡಿದ್ದೆ ಮೇಡಮ್' ಎನ್ನಲು ಅನುಶ್ರೀ ಶಾಕ್ ಆಗಿ 'ಆಂ' ಎನ್ನಲು 'ಮಾತು ಮುಂದುವರೆಸಿದ ತುಕಾಲಿ ಸಂತೋಷ್ 'ಹುಡುಗಿಯರನ್ನೆಲ್ಲ ತುಂಬಾ ನೋಡಿದ್ದೆ ಮೇಡಂ..' ಓದೋ ವಯಸ್ಸಲ್ಲಿ ಓದೋದೇ ಸ್ವಲ್ಪ ಕಷ್ಟ ಆಗಿತ್ತು, ಲವ್ ಗಿವ್ ಏನೂ ಇರ್ಲಿಲ್ಲ. ನಾನು ಹೋಗೋ ಬಸ್ಸಲ್ಲಿ ಒಬ್ಳನ್ನ ತುಂಬಾ ನೋಡ್ತಾ ಇದ್ದೆ, ನಾನು ಬಸ್ಸಲ್ಲಿ ಸೀಟ್ ಹಾಕಿರುವೆ, ನಾನು ಸೀಟ್ ಹಾಕಿದಾಗ ಅವ್ಳು ಬಂದು ಕೂತ್ಕಾತಾ ಇದ್ಳು.. ಆದರೆ, ಪಕ್ಕದಲ್ಲಿ ನಾನು ಕೂತ್ಕೋಬೇಕು ಅನ್ನುವಷ್ಟ್ರಲ್ಲಿ ಇನ್ನೊಬ್ಬ ಬಂದು ಕೂತಿರೋನು.. ಒಬ್ರನ್ನ ಎಬ್ಸಿ ಇನ್ನೊಬ್ರನ್ನ ಕುಡ್ಸೋದು ಎಲ್ಲಾ ನಡಿತಾನೇ ಇತ್ತು.. 

Tap to resize

Latest Videos

ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

ನಾನು ಕಾಲೇಜಿಗೆ ಹೋಗಿದ್ದು ಓದೋದಕ್ಕೆ ಆಗಿರ್ಲಿಲ್ಲ, ಹುಡುಗೀರ ನೋಡ್ಕೊಂಡು , ಆರಾಮಾಗಿ ಟೈಂ ಪಾಸ್ ಮಾಡೋಣ ಅಂತ.. ಆಮೇಲೆ ಗೊತ್ತಾಯ್ತು ನಂಗೆ ಓದ್ಬೇಕಾಗಿತ್ತು ಅಂತ.. ಫೇಲ್ ಆದ್ಮೇಲೆ, ನಮ್ಮ ಅಪ್ಪ ನಾಯಿಗೆ ಹೊಡ್ದಾಂಗೆ ಹೊಡೆದ್ಮೇಲೆ ನಂಗೆ ಅರ್ಥ ಆಗಿದ್ದು.. 'ನಾನು ನಿಂಬೆ ಹಣ್ಣು ಮಾರಿ ನಿನ್ನ ಓದ್ಲಿ ಅಂತ ಕಾಲೇಜಿಗೆ ಕಳಿಸಿದ್ರೆ ನೀನು ಫೇಲ್‌ ಆಗಿ ಬಂದಿದೀಯ..' ಅಂತ ನಮ್ಮಪ್ಪ ಹೊಡೆದಿದ್ರು.. ಆದ್ರೂ ಒಂದು ವಾರ ಮೆಂಟೇನ್ ಮಾಡಿದ್ದೆ, ನಾನು ಪಾಸು ಅಂತ.. ಊರವ್ರಿಗೆಲ್ಲಾ ಸ್ವೀಟ್ ಕೊಟ್ಬಿಟಿದ್ದೆ ..' ಎಂದಿದ್ದಾರೆ ತುಕಾಲಿ ಸಂತು. 

ಡಾಲಿ ಧನಂಜಯ್ ಸಿನಿಮಾ ಹೀರೋ 'ಪತಿ'ಯಾದ್ರು; ನಾಗಭೂಷಣ್‌ಗೆ ಜೋಡಿಯಾದ್ರು ಮಲೈಕಾ!

ತುಕಾಲಿ ಸಂತು ಮಾತು ಕೇಳಿ ಪಕ್ಕದಲ್ಲೇ ಇದ್ದ ಅವರ ಹೆಂಡತಿ ಮಾನಸ ಬಿದ್ದು ಬಿದ್ದು ನಗುತ್ತಿದ್ದರು. ನಿರೂಪಕಿ ಅನುಶ್ರೀಗೂ ನಗು ತಡೆಯಲು ಆಗುತ್ತಿರಲಿಲ್ಲ. ಹಾಗೆ ಇತ್ತು ತುಕಾಲಿ ಸಂತು ಮಾತಿನ ವರಸೆ. 'ಒಬ್ಬೊಬ್ಬರಿಗೆ ಒಂದೊಂದು ಕಲೆ ದೈವದತ್ತವಾಗಿ ಬಂದಿರುತ್ತೆ' ಅಂತಾರಲ್ಲ ಹಾಗೇ ತುಕಾಲಿ ಸಂತೋಷ್‌ ಅವರಿಗೆ ಎದುರಿಗೆ ಇದ್ದವರನ್ನು ನಗಿಸುವ ಕಲೆ ಕರಗತವಾಗಿದೆ ಎನ್ನಬಹುದು. ಒಟ್ಟಿನಲ್ಲಿ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಅನುಶ್ರೀಯವರನ್ನೇ ಸಂತು ದಂಗು ಬಡಿಸಿದ್ದಾರೆ ಎಂದು ಕಾಮೆಂಟ್ ಮಾಡಲಾಗಿದೆ. 

ನಟಿ ತನಿಷಾ ಬಳಿ ಅದೆಷ್ಟು ಆಸ್ತಿಯಿದೆ. ಏನೇನೆಲ್ಲಾ ಮಾಡ್ಕೊಂಡಿದಾರೆ; ಬಾಯ್ಬಿಟ್ಟು ಹೇಳ್ಕೊಂಡಿದಾರೆ ನೋಡ್ರೀ!

click me!