ಸಪ್ತಸಾಗರದಾಚೆ ಎಲ್ಲೋ ಚಿತ್ರದ ಎ ಮತ್ತು ಬಿ ಸೈಡ್‌ ಒಂದೇ ನಿಮಿಷದಲ್ಲಿ ನೋಡಿ! ಇಲ್ಲಿದೆ ವಿಡಿಯೋ...

By Suvarna News  |  First Published Mar 1, 2024, 8:53 PM IST

ವಿಕ್ಕಿ ಮತ್ತು ಗ್ಯಾಂಗ್‌ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಎ ಮತ್ತು ಬಿ ಸೈಡ್‌ ಒಂದೇ ನಿಮಿಷದಲ್ಲಿ ಮಾಡಿ ಮುಗಿಸಿದೆ. ಇಲ್ಲಿದೆ ನೋಡಿ ವಿಡಿಯೋ... 
 


ಬ್ಲಾಕ್​ ಬಸ್ಟರ್​ ಎಂದೇ ಸಾಬೀತಾಗಿದ್ದ ಸಪ್ತಸಾಗರದಾಚೆ ಎಲ್ಲೋ ಸೈಡ್​ ಎ ಬಳಿಕ ಇದೀಗ ಪಾರ್ಟ್​ ಬಿ ಕೂಡ ಸಕತ್​ ಸೌಂಡ್​ ಮಾಡಿತ್ತು.  ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ನಟನೆಯ ಪ್ರೇಮಕಾವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಫ್ಯಾನ್ಸ್​ ಮೆಚ್ಚಿ ಕೊಂಡಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಹೇಮಂತ್​ ಎಂ. ರಾವ್​, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಅದ್ವೈತ್​ ಗುರುಮೂರ್ತಿ ಸೇರಿದಂತೆ ಹಲವು ಕಲಾವಿದರನ್ನು ಒಳಗೊಂಡಿರುವ ಈ ಚಿತ್ರವನ್ನು ಇದಾಗಲೇ ಹಲವರು ಹಾಡಿ ಹೊಗಳಿದ್ದಾರೆ. ರಕ್ಷಿತ್ ಶೆಟ್ಟಿ   ಈ ಸಿನಿಮಾದಲ್ಲಿ ಮನು ಎಂಬ ಪಾತ್ರ ಮಾಡಿದ್ದಾರೆ. ಪ್ರೀತಿಗಾಗಿ ಮತ್ತು ಪ್ರೀತಿಸಿದವಳಿಗಾಗಿ ಜೀವನದಲ್ಲಿ ಸಾಕಷ್ಟು ರಿಸ್ಕ್​ಗಳನ್ನು ತೆಗೆದುಕೊಳ್ಳುವ ಆ ಪಾತ್ರವನ್ನು ರಕ್ಷಿತ್​ ಶೆಟ್ಟಿ ಅವರು ಚೆನ್ನಾಗಿ ನಿಭಾಯಿಸಿದ್ದಾರೆ.  

2023ರ ನವೆಂಬರ್ 17ರಂದು ತೆರೆಕಂಡಿದ್ದ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಥಿಯೇಟರ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡುತ್ತಿದ್ದಾರೆ.  ಜನವರಿ 25ರ ರಾತ್ರಿಯಿಂದಲೇ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಬಿ’ ಸಿನಿಮಾ ಸ್ಟ್ರೀಮಿಂಗ್ ​ಆಗಿದೆ. ಸೈಡ್‌ ಎ ಮತ್ತು ಸೈಡ್‌ ಬಿ ಸೇರಿ, ಸುಮಾರು ಐದು ಗಂಟೆಯ ಚಿತ್ರವಿದು. ಇದನ್ನು ಒಂದೇ ನಿಮಿಷದಲ್ಲಿ ತೋರಿಸು ಎಂದರೆ ಸಾಧ್ಯನಾ? ಎಲ್ಲಾದ್ರೂ ಉಂಟೇ ಎಂದು ಕೇಳಬೇಡಿ. ಅದನ್ನು ಸಾಧ್ಯಮಾಡಿ ತೋರಿಸಿದ್ದಾರೆ ನಾನು ನಂದಿನಿ ಖ್ಯಾತಿಯ ವಿಕ್ರಮ್‌. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Vicky Pedia (@vickypedia_007)

ಈ ಚಿತ್ರ ವೀಕ್ಷಕರಿಗೆ ತಿಳಿದಿರುವಂತೆ ನಾಯಕಿಗೆ ಸಮುದ್ರದ ಬಳಿ ಮನೆ ಕಟ್ಟಬೇಕು ಎನ್ನುವ ಆಸೆ. ಕೊನೆಗೆ ನಾಯಕ ಹೇಗೆ ಜೈಲುಪಾಲಾಗುತ್ತಾನೆ, ಜೈಲಿನಲ್ಲಿ ಇದ್ದಾಗ ನಾಯಕಿಯ ಮದ್ವೆ ನಡೆಯುತ್ತದೆ ಎನ್ನುವುದು ಎ ಸೈಡ್‌, ಜೈಲಿನಿಂದ ಬಂದ ಮೇಲೆ ಏನು ಆಗುತ್ತದೆ ಎನ್ನುವುದು ಬಿ ಸೈಡ್‌ ಕಥೆ. ಅದನ್ನೇ ಒಂದು ನಿಮಿಷದಲ್ಲಿ ವಿಕ್ಕಿ ತಂಡ ತೋರಿಸಿದೆ. ಈ ವಿಡಿಯೋದಲ್ಲಿ ನಾಯಕಿ ನಾನು ಸಮುದ್ರದಲ್ಲಿ ಮನೆ ಮಾಡ್ತೀನಿ, ಏಕೆಂದ್ರೆ ನನಗೆ ಸಮುದ್ರ ಎಂದ್ರೆ ತುಂಬಾ ಇಷ್ಟ ಎನ್ನುತ್ತಾಳೆ. ನಂತರ ನಾಯಕ ಮನುವನ್ನು ಜೈಲಿಗೆ ಕಳುಹಿಸಿದ ಪಾತ್ರಧಾರಿ ಎಂಟ್ರಿ ಆಗುತ್ತದೆ. ನನಗೆ ನನ್ನ ಮಗ ಎಂದ್ರೆ ತುಂಬಾ ಇಷ್ಟ, ಅದಕ್ಕೇ ನೀವು ಜೈಲಿಗೆ ಹೋಗಬೇಕು ಎನ್ನುವುದು. ನಂತರ ನಾಯಕ, ನಾಯಕಿಗೆ ನಾನು ಜೈಲಿಗೆ ಹೋಗ್ತೇನೆ ಏಕೆಂದ್ರೆ ನನಗೆ ನೀನು ಅಂದ್ರೆ ಇಷ್ಟ ಎನ್ನುತ್ತಾನೆ. ಅಲ್ಲಿಗೆ ಎ ಸೈಡ್‌ ಮುಗಿಯುತ್ತದೆ.
 
ನಂತರ ನಾಯಕ ಜೈಲಿನಿಂದ ಬಂದು ನಾಯಕಿಯ ಮಗ, ಸಹೋದರ ಎಲ್ಲರ ಬಳಿಯೂ ನಾಯಕಿಯಾಗಿ ಕೋರಿಕೊಳ್ಳುವ ಸೀನ್‌ ಬರುತ್ತದೆ. ಮೊದಲಿಗೆ ಸುರಭಿ ನಾನು ಜೈಲಿನಿಂದ ಬಂದಿದ್ದೀನಿ. ನನಗೆ ಪ್ರಿಯಾ ಅಂದರೆ ತುಂಬಾ ಇಷ್ಟ ಅಂದೂ ನಂತರ  "ವಿನೋದ ನಾನು ಜೈಲಿನಿಂದ ಬಂದಿದ್ದೇನೆ. ನನಗೆ ನಿನ್ನ ಅಕ್ಕ ಅಂದರೆ ತುಂಬಾ ಇಷ್ಟ" ಅಂತಲೂ ಕೊನೆಗೆ  ಪುನೀತ ನಾನು ಜೈಲಿನಿಂದ ಬಂದಿದ್ದೇನೆ, ನನಗೆ ನಿನ್ನ ಅಮ್ಮ ಅಂದರೆ ತುಂಬಾ ಇಷ್ಟ ಅಂತಲೂ, ದೀಪಕ್‌ ನಾನು ಜೈಲಿನಿಂದ ಬಂದಿದ್ದೇನೆ. ನನಗೆ ನಿಮ್ಮ ಹೆಂಡತಿ ಅಂದರೆ ತುಂಬಾ ಇಷ್ಟ ಎಂದೂ ನಾಯಕ ಮನು ಹೇಳುತ್ತಾನೆ.  ಅದಾಗಲೇ ನಾಯಕಿಗೆ ಮದ್ವೆಯಾಗಿ ಮಗು ಆಗಿದ್ದರಿಂದ ಎಲ್ಲರ ಬಳಿಯೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ.  ಇಷ್ಟೇ ಆಗಿದ್ದರೆ ಪರವಾಗಿಲ್ಲ. ಕೊನೆಗೆ ಟ್ವಿಸ್ಟ್‌ ಮಾಡಲಾಗಿದೆ. ಜೈಲಿನಿಂದ ರೌಡಿ ಪಾತ್ರಧಾರಿಯ ಎಂಟ್ರಿ ಆಗುತ್ತದೆ, ಆತ  "ಮನು... ನಾನು ಜೈಲಿನಿಂದ ಬಂದಿದ್ದೇನೆ ಕಣೋ, ನನಗೂ ನೀನು ಅಂದ್ರೆ ತುಂಬಾ ಇಷ್ಟ. ಲವ್‌ ಯು ಮನು" ಎಂದಾಗ ಬಿ ಸೈಡ್‌ ಮುಗಿಯುತ್ತದೆ! ಚಿತ್ರ ನೋಡಿದವರಿಗೆ ಈ ಒಂದು ನಿಮಿಷದ ಸನ್ನಿವೇಶ ಚೆನ್ನಾಗಿ ಅರ್ಥವಾಗುತ್ತದೆ. ಚಿತ್ರ ನೋಡದೇ ಇರುವವರಿಗೆ ಚಿತ್ರ ನೋಡಬೇಕು ಎನ್ನುವ ಉತ್ಸಾಹ ಮೂಡುವುದಂತೂ ಸುಳ್ಳಲ್ಲ.

ಗುರುಗಳ ಮಾತನ್ನು ತಪ್ಪಾಗಿ ಅರ್ಥೈಸಿ ಮಗನಿಗೆ 'ಅಕಾಯ್' ಹೆಸರಿಟ್ರಾ ವಿರುಷ್ಕಾ? ವಿಕ್ಕಿಪಿಡಿಯಾ ಏನಂತಾರೆ ನೋಡಿ!

click me!